ಏರ್‌ಟೆಲ್‌ನ 'ಸ್ಮಾರ್ಟ್ ಮಿಸ್ಡ್ ಕಾಲ್ ಅಲರ್ಟ್' ಫೀಚರ್ಸ್‌ ಹೇಗೆ ಬಳಸುವುದು!?

|

ಏರ್‌ಟೆಲ್‌ ನವದೆಹಲಿ ಮೂಲದ ಭಾರತೀಯ ಬಹುರಾಷ್ಟ್ರೀಯ ದೂರಸಂಪರ್ಕ ಸೇವೆಗಳ ಕಂಪೆನಿಯಾಗಿದ್ದು, ಗ್ರಾಹಕರಿಗೆ ನೆಟ್‌ವರ್ಕ್‌ ಹಾಗೂ ಇನ್ನಿತರೆ ಸೇವೆಗಳನ್ನು ನೀಡುತ್ತಾ ಬರುತ್ತಿದೆ. ಅದರಂತೆ ಭಾರತದ ಬಹುಪಾಲು ಜನರು ಏರ್‌ಟೆಲ್‌ ಸಿಮ್ ಮೂಲಕ ಅದರ ಸೇವೆ ಪಡೆಯುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಭಾರತದ ಪ್ರತಿ ಮೂಲೆಯಲ್ಲೂ ಏರ್‌ಟೆಲ್‌ ನೆಟ್‌ವರ್ಕ್‌ ಉತ್ತಮವಾಗಿ ಲಭ್ಯವಾಗುವುದರಿಂದ ಹೆಚ್ಚಿನ ಜನಮನ್ನಣೆ ಏರ್‌ಟೆಲ್‌ಗೆ ಇದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಉನ್ನತ ನೆಟ್‌ವರ್ಕ್ ಕವರೇಜ್ ಸೇವೆಯನ್ನು ನೀಡುತ್ತಿದ್ದು, ಯಾವುದೇ ಅಡೆತಡೆ ಇಲ್ಲದೆ ಎಲ್ಲರ ಜೊತೆಗೆ ಸಂಪರ್ಕದಿಂದ ಇರಬಹುದಾಗಿದೆ. ಅದಾಗ್ಯೂ ಏನಾದರೂ ಫೋನ್ ಸ್ವಿಚ್‌ ಆಫ್‌ ಆಗಿದ್ದಾಗ ಅಥವಾ ಫೋನ್‌ನಲ್ಲಿ ಏನಾದರೂ ನೆಟ್‌ವರ್ಕ್ ಸಮಸ್ಯೆ ಇದ್ದ ಸಂದರ್ಭದಲ್ಲಿ ಯಾರಾದರೂ ಕರೆ ಮಾಡಿದ್ದರೆ ಆ ಕರೆ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹೇಗೆ ಎಂಬುದು ನಿಮಗೆ ಗೊತ್ತಿಲ್ಲ ಎಂದರೆ ಈ ಲೇಖನ ಉಪಯೋಗ ಆಗಲಿದೆ ಓದಿರಿ.

ಆಪ್‌ ಇನ್‌ಸ್ಟಾಲ್‌ ಮಾಡಿ

ಆಪ್‌ ಇನ್‌ಸ್ಟಾಲ್‌ ಮಾಡಿ

ನಿಮ್ಮ ಫೋನ್ ನೆಟ್‌ವರ್ಕ್‌ ಕವರೇಜ್ ಪ್ರದೇಶದ ಹೊರಗಿದ್ದಾಗ ಅಥವಾ ಅಥವಾ ಸ್ವಿಚ್ ಆಫ್ ಆಗಿದ್ದಾಗ ನೀವು ಪ್ರಮುಖ ಕರೆಗಳನ್ನು ಮಿಸ್‌ ಮಾಡಿಕೊಳ್ಳುವ ಸಂಭವ ಹೆಚ್ಚಿರುತ್ತದೆ. ಈ ವೇಳೆ ನೀವು ಏರ್‌ಟೆಲ್ ಸಿಮ್ ಅನ್ನು ಬಳಕೆ ಮಾಡುತ್ತಿದ್ದೀರಾ ಎಂದಾದರೆ 'ಸ್ಮಾರ್ಟ್ ಮಿಸ್ಡ್ ಕಾಲ್ ಅಲರ್ಟ್' ಎಂಬ ಫೀಚರ್ಸ್‌ ಮೂಲಕ ಯಾರು ಯಾವಾಗ ಕರೆ ಮಾಡಿದ್ದರು ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಈ ಫೀಚರ್ಸ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಕ್ರಿಯಗೊಳಿಸಿದ್ದರೆ ನಿಮ್ಮ ಫೋನ್‌ ಸ್ವಿಚ್‌ ಆಫ್‌ ಆಗಿದ್ದಾಗ ಅಥವಾ ವ್ಯಾಪ್ತಿ ಪ್ರದೇಶದ ಹೊರಗಿದ್ದ ಸಂದರ್ಭದಲ್ಲಿ ಬಂದಿದ್ದ ಕರೆಗಳ ವಿವರ ತಿಳಿಯಲಿದೆ. ಆದರೆ ಇದಕ್ಕೆ ನೀವು ಆಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕಿರುತ್ತದೆ.

ಮಿಸ್ಡ್ ಕಾಲ್‌

ಎಲ್ಲಾ ಮಿಸ್ಡ್ ಕಾಲ್‌ಗಳ ಸಂಪೂರ್ಣ ಪಟ್ಟಿಯನ್ನು ಪಡೆಯಲು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರು ಐಓಎಸ್ ಹಾಗೂ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ 'ಏರ್‌ಟೆಲ್ ಥ್ಯಾಂಕ್ಸ್' ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕಿದೆ. ಹಾಗಿದ್ರೆ ಈ ಆಪ್‌ ಮೂಲಕ ಯಾವ ರೀತಿಯಲ್ಲಿ ಮಿಸ್ಡ್ ಕಾಲ್‌ ವಿವರ ಪಡೆಯಬಹುದು ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ ನೋಡಿ.

ಹಂತ  1

ಹಂತ 1

ನಿಮ್ಮ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳಲ್ಲಿ 'ಏರ್‌ಟೆಲ್ ಥ್ಯಾಂಕ್ಸ್' ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿ. ಇದಾದ ನಂತರ ನಿಮ್ಮ ಫೋನ್‌ ನಂಬರ್‌ ಹಾಗೂ ನಿಮ್ಮ ಹೆಸರಿನ ಮೂಲಕ ಸೈನ್‌ ಅಪ್ ಮಾಡಿ.

ಹಂತ 2

ಹಂತ 2

ಸೈನ್ ಆಪ್‌ ಆದ ನಂತರ ಆಪ್‌ ಬಳಕೆಗೆ ಸಿದ್ಧವಾಗುತ್ತದೆ, ಆಗ ನೀವು 'ಸ್ಮಾರ್ಟ್ ಮಿಸ್ಡ್ ಕಾಲ್ ಅಲರ್ಟ್' ಎಂಬ ಐಕಾನ್ ಮೇಲೆ ಟ್ಯಾಪ್ ಮಾಡಿ. ಅದರಲ್ಲಿ 'ಆನ್‌' ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

ಮಿಸ್ಡ್‌ಕಾಲ್‌

ಇದನ್ನು ಸಕ್ರಿಯಗೊಳಿಸಿದ ನಂತರ ಒಂದೇ ಬಾರಿಗೆ ಎಲ್ಲಾ ಮಿಸ್ಡ್‌ಕಾಲ್‌ ವಿವರವನ್ನು ವೀಕ್ಷಣೆ ಮಾಡಬಹುದು, ಹಾಗೆಯೇ ಯಾವ ನಂಬರ್‌ನಿಂದ ಬಂದ ಕರೆ ಅಮೂಲ್ಯ ಎನಿಸುತ್ತದೋ ಆ ನಂಬರ್‌ ಮೇಲೆ ಟ್ಯಾಪ್‌ ಮಾಡುವ ಮೂಲಕ ನೇರವಾಗಿ ಕರೆ ಮಾಡಬಹುದು ಅಥವಾ ಮೆಸೆಜ್‌ ಕಳುಹಿಸಬಹುದು.

ಏರ್‌ಟೆಲ್

ಇನ್ನು ಏರ್‌ಟೆಲ್ ಗ್ರಾಹಕರು ತಮ್ಮ ಮಿಸ್ಡ್‌ ಕಾಲ್‌ ವಿವರವನ್ನು ಉಚಿತವಾಗಿ ವೀಕ್ಷಿಸಲು ಏರ್‌ಟೆಲ್ ಥ್ಯಾಂಕ್ಸ್ ಆಪ್‌ ಅನ್ನು ಡೌನ್‌ಲೋಡ್ ಮಾಡಲೇಬೇಕಿದೆ. ಯಾಕೆಂದರೆ ಇದು ಮೆಸೆಜ್‌ ಮೂಲಕ ಯವುದೇ ಮಾಹಿತಿಯನ್ನು ನೀಡುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಮಿಸ್ಡ್‌ಕಾಲ್‌ ಬಗ್ಗೆ ಮೆಸೆಜ್‌ಗಳ ಮೂಲಕವೇ ಮಾಹಿತಿ ನೀಡುತ್ತದೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಇದಕ್ಕೆ ಪೈಪೋಟಿಯಾಗಿರುವ ಜಿಯೋ ಒಂದು ಹೆಜ್ಜೆ ಮುಂದೆ ಹೋಗಿದ್ದು, ಯಾವುದೇ ಮಿಸ್ಡ್‌ಕಾಲ್‌ ವಿವರವನ್ನು ಮೆಸೆಜ್‌ ಮೂಲಕ ನೀಡುತ್ತದೆ. ಹಾಗಾಗಿ ಇದಕ್ಕೆ ಯಾವುದೇ ಆಪ್‌ನ ಅವಶ್ಯಕತೆ ಇಲ್ಲದಿರುವುದು ಗ್ರಾಹಕರನ್ನು ಸೆಳೆಯುವಲ್ಲಿ ಒಂದು ಪ್ರಮುಖ ಕಾರಣವಾಗಿದೆ.

Best Mobiles in India

English summary
Airtel is an Indian multinational telecommunication services company based in New Delhi. Airtel, which is already providing services in several ways, has a feature called Smart Missed Call Alert.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X