ಟ್ವೀಟ್ಟರ್‌ನಲ್ಲಿ ಕಂಟಿನ್ಯೂ ಥ್ರೆಡ್‌ ಫೀಚರ್ಸ್‌ ಬಳಸುವುದು ಹೇಗೆ!

|

ಇದು ಸೊಶೀಯಲ್‌ ಮೀಡಿಯಾಗಳು ಜಮಾನ, ಎಲ್ಲಿ ಏನೇ ನಡೆದ್ರೂ ಸೊಶೀಯಲ್‌ ಮೀಡಿಯಾದಲ್ಲಿ ಸುದ್ದಿ ಆಗುತ್ತೆ. ಅದರಲ್ಲೂ ಸೊಶೀಯಲ್‌ ಮೀಡಿಯಾ ಆಪ್ಲಿಕೇಶನ್‌ಗಳಾದ ಫೇಸ್‌ಬುಕ್‌, ವಾಟ್ಸಾಪ್‌, ಟ್ವಿಟ್ಟರ್‌ ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಿವೆ. ಸದ್ಯ ಟ್ವಿಟ್ಟರ್‌ ಆಪ್ಲಿಕೇಶನ್‌ ಕೂಡ ಪ್ರಮುಖ ಸೊಶೀಯಲ್‌ ಮೀಡಿಯಾ ಆಪ್‌ ಆಗಿ ಗುರ್ತಿಸಿಕೊಂಡಿದ್ದು, ಈಗಾಗ್ಲೆ ತನ್ನ ಬಳಕೆದಾರರಿಗೆ ಹಲವಾರು ಫೀಚರ್ಸ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಹೊಸ ಫೀಚರ್ಸ್‌ ಅನ್ನ ಪರಿಚಯಿಸಿದ್ದು, ಈ ಫೀಚರ್ಸ್‌ನಿಂದ ಬಳಕೆದಾರರಿಗೆ ಇನ್ನಷ್ಟು ಅನುಕೂಲವಾಗಲಿದೆ.

ಹೌದು

ಹೌದು, ಜನಪ್ರಿಯ ಸೊಶೀಯಲ್‌ ಮೀಡಿಯಾ ಆಪ್ಲಿಕೇಶನ್‌ಗಳ್ಳಲ್ಲಿ ಒಂದಾದ ಟ್ವಿಟ್ಟರ್‌ ಆಪ್ಲಿಕೇಶನ್‌ ತನ್ನ ಬಳಕೆದಾರರಿಗೆ ಕಂಟಿನ್ಯೂ ಥ್ರೆಡ್‌ ಆಯ್ಕೆಯನ್ನ ಪರಿಚಯಿಸಿದೆ. ಈ ಮೂಲಕ ಈ ಹಿಂದೆ ಇದ್ದ ಅಕ್ಷರ ಮಿತಿಯನ್ನ ದಾ೨ಟಿ ಬರೆಯಲು ಇದು ಅನುಕೂಲ ನೀಡಲಿದೆ ಎಂದು ಹೇಳಲಾಗ್ತಿದೆ. ಹಾಗೇ ನೋಡಿದ್ರೆ 2006 ರಲ್ಲಿ ಟ್ವಿಟರ್ 140 ರ ಅಕ್ಷರ ಮಿತಿಯನ್ನ ಬಳಕೆದಾರರಿಗೆ ನೀಡಿತ್ತು, ನಂತರ ಅದನ್ನು 280 ಕ್ಕೆ ಹೆಚ್ಚಿಸಲಾಗಿತ್ತು ಆದರೆ ಬಳಕೆದಾರು ಕೆಲ ಸಂದರ್ಭಗಳಲ್ಲಿ ಹೆಚ್ಚಿನ ವಿಚಾರವನ್ನು ಬರೆಯಲು ಬಯಸುತ್ತಾರೆ, ಇದಕ್ಕೆ ಅನುಕೂಲಕರವಾಗಿ ಇದೀಗ ಕಂಟಿನ್ಯೂ ಥ್ರೆಡ್ ಅನ್ನು ಪರಿಚಯಿಸಲಾಗಿದೆ.

ಟ್ವೀಟರ್

ಟ್ವೀಟರ್ ನಲ್ಲಿ ನೀವು ತಿಳಿಸಬೇಕಿರುವ ವಿಚಾರ ಇನ್ನಷ್ಟು ಇದ್ದು, ಅಕ್ಷರ ಮಿತಿಗಳನ್ನ ನೀವು ಮೀರಿದ್ದರೆ, ಹಲವು ಟ್ವೀಟ್‌ಗಳನ್ನು ಸಂಪರ್ಕಿಸುವ ಅಥವಾ ಲಿಂಕ್ ಮಾಡುವ ಮೂಲಕ ಹೆಚ್ಚುವರಿ ಅಕ್ಷರಗಳು, ಆಪ್ಡೇಟ್‌ ಮಾಹಿತಿಯನ್ನು ನೀವು ತಿಳಿಸಲು ಈ ಫೀಚರ್ಸ್‌ ನಿಮಗೆ ಅನುವು ಮಾಡಿಕೊಡುತ್ತದೆ. ಅಷ್ಟಕ್ಕೂ ನೀವಿನ್ನೂ ಈ ಫೀಚರ್ಸ್‌ ಅನ್ನು ಬಳಸಲು ನಪ್ರಯತ್ನಿಸದೆ ಇದ್ದರೆ ಅದನ್ನು ಹೇಗೆ ಬಳಸುವುದು ಅನ್ನೊದನ್ನ ಈ ಕೆಳಗಿನ ಹಂತಗಳ ಮೂಲಕ ತಿಳಿಯಿರಿ.

ಟ್ವೀಟ್ ಥ್ರೆಡ್ ರಚನೆ ಹೇಗೆ

ಟ್ವೀಟ್ ಥ್ರೆಡ್ ರಚನೆ ಹೇಗೆ

ಮೊದಲಿಗೆ ಟ್ವೀಟ್ಟರ್‌ನಲ್ಲಿ ಟ್ವೀಟ್‌ ಬಟನ್ ಕ್ಲಿಕ್ ಮಾಡುವ ಮೂಲಕ ಹೊಸ ಟ್ವೀಟ್ ಅನ್ನು ರಚಿಸಿ, ನಂತರ ಮತ್ತೊಂದು ಟ್ವೀಟ್ ಅನ್ನು ನಿಮ್ಮ ಟ್ವೀಟ್‌ಗೆ ಸೇರಿಸಲು, ಟ್ವೀಟ್ ಬಟನ್‌ನ ಪಕ್ಕದಲ್ಲಿಯೇ ಹೈಲೈಟ್ ಮಾಡಿದ ಪ್ಲಸ್ ಐಕಾನ್ ಕ್ಲಿಕ್ ಮಾಡಿ, ಅಲ್ಲಿ ಪೋಸ್ಟ್‌ ಬಟನ್‌ಅನ್ನು ನೀವು ಒತ್ತಿ. ಆಗ ನೀವು ಅಕ್ಷರ ಮಿತಿಯನ್ನು ಮೀರಿದರೆ, ಹೆಚ್ಚುವರಿ ಪಠ್ಯವನ್ನು ಹೈಲೈಟ್ ಮಾಡಲಾಗುತ್ತದೆ, ಇದು ನಿಮ್ಮ ಪೋಸ್ಟ್ ಅನ್ನು ಪೋಸ್ಟ್‌ ಮಾಡಲು ಅನುವು ಮಾಡಿಕೊಡುತ್ತದೆ. ನಂತರ ನೀವು ಟ್ವೀಟ್‌ನಲ್ಲಿನ ಪ್ಲಸ್ ಐಕಾನ್ ಹೈಲೈಟ್ ಆಗುತ್ತದೆ.

ನಂತರ

ಇದಾದ ನಂತರ ನೀವು ಟ್ವೀಟ್ ಆಲ್ ಬಟನ್ ಕ್ಲಿಕ್ ಮಾಡುವ ಮೂಲಕ ಒಂದೇ ಸಮಯದಲ್ಲಿ ಸಂಪೂರ್ಣ ಟ್ವೀಟ್‌ಥ್ರೆಡ್ ಅನ್ನು ಪ್ರಕಟಿಸಬಹುದಾಗಿದೆ. ಮುಂದಿನ ಹಂತದಲ್ಲಿ ಥ್ರೆಡ್ ವಿವರ ಪುಟದಿಂದ ನಿಮ್ಮ ಟ್ವೀಟ್ ಥ್ರೆಡ್‌ಗೆ ಹೆಚ್ಚಿನ ಮಾಹಿತಿಯನ್ನು ಸೇರಿಸಲು ನೀವು ಬಯಸಿದರೆ, ನೀವು ಮಾಡಬೇಕಾಗಿರುವ ಮತ್ತೊಂದು ಟ್ವೀಟ್ ಅನ್ನು ಕ್ಲಿಕ್ ಮಾಡಿ. ಟ್ವೀಟ್ ಥ್ರೆಡ್ ಸೇರಿಸಿ, ನಂತರ ಕಂಪೋಸ್ ಐಕಾನ್ ಕ್ಲಿಕ್ ಮಾಡಿ, ಹಾಗೂ ಇದನ್ನು ನೀವು ನಿಮ್ಮ ಕೊನೆಯ ಟ್ವೀಟ್‌ಗೆ ಸೇರಿಸಲು ಬಯಸಿದರೆ ನಿಮ್ಮ ಡಿವೈಸ್‌ನ ವಿಂಡೋದಿಂದ ಕೆಳಗೆ ಎಳೆಯಿರಿ ಮತ್ತು ಥ್ರೆಡ್ ಕಂಟಿನ್ಯೂ ಬಟನ್‌ ಕ್ಲಿಕ್‌ ಮಾಡಿರಿ.

ಕಂಟೆಂಟ್‌

ಇದಲ್ಲದೆ ಕಂಟೆಂಟ್‌ ವಿಷಯವನ್ನು ಕಂಟಿನ್ಯೂ ಥ್ರೆಡ್‌ಗೆ ಸೇರಿಸಲು ಟ್ವೀಟ್ ಟ್ಯಾಪ್ ಮಾಡಿ, ಈಗ ಮತ್ತೊಂದು ಟ್ವೀಟ್ ಆಯ್ಕೆ ಮಾಡಲು ಮೂರು ಅಡ್ಡ ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ
ಆಗ ನೀವು ಫಾಲೋ ಮಾಡುತ್ತಿರುವ ಟ್ವೀಟ್ಟರ್‌ ಫಾಲೋವರ್‌ ಯಾರಾದರೂ ಟ್ವೀಟ್ ಥ್ರೆಡ್ ಅನ್ನು ಪೋಸ್ಟ್ ಮಾಡುತ್ತಿದ್ದರೆ, ಅದು ನಿಮ್ಮ ಟೈಮ್‌ಲೈನ್‌ನಲ್ಲಿ ಒಂದು ಸಾಲಿನ ಮೂಲಕ ಸಂಪರ್ಕಗೊಂಡು ಅವುಗಳನ್ನು ಬಂಡಲ್ ಎಂದು ಗುರುತಿಸುತ್ತದೆ. ಇದಾದ ನಂತರ ಲಿಂಕ್ ಮಾಡಿದ ಟ್ವೀಟ್ ಅನ್ನು ಥ್ರೆಡ್ ಕಂಟಿನ್ಯೂ ಆಗಿ ನಿಮ್ಮ ಟ್ವೀಟ್ ತೋರಿಸುತ್ತದೆ.

Best Mobiles in India

English summary
Twitter’s continue thread feature lets users provide additional context, an update, or an extended point by connecting or linking multiple tweets.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X