ಮೈ ಜಿಯೋ ಆಪ್‌ನಲ್ಲಿರುವ ಈ ಆಯ್ಕೆಯನ್ನು ನೀವು ಬಳಕೆ ಮಾಡಿದ್ದೀರಾ?

|

ರಿಲಯನ್ಸ್ ಜಿಯೋ ಸಂಸ್ಥೆಯು ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಅತ್ಯುತ್ತಮ ಪ್ರೀಪೇಯ್ಡ್‌ ಯೋಜನಗಳು, ಜಿಯೋಫೋನ್ ಹಾಗೂ ಜಿಯೋ ಆಪ್‌ ಸೇರಿವೆ. ಆ ಪೈಕಿ ಜಿಯೋ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸಹಯೋಗದೊಂದಿಗೆ ಯುಪಿಐ ಆಟೋಪೇ ಫೀಚರ್ ಎಂಬ ಫೀಚರ್‌ ಅನ್ನು ಇತ್ತೀಚಿಗೆ ತಂದಿದೆ. ಈ ಆಯ್ಕೆ ಬಳಸಿಕೊಂಡು ಬಳಕೆದಾರರು ತಮ್ಮ ಯುಪಿಐ ಪಿನ್‌ನಲ್ಲಿ ಪಂಚ್ ಮಾಡದೆಯೇ ರೀಚಾರ್ಜ್ ಮಾಡಬಹುದು.

ರೀಚಾರ್ಜ್

ಹೌದು, ರಿಲಯನ್ಸ್‌ ಜಿಯೋ ಯುಪಿಐ ಆಟೋಪೇ ಫೀಚರ್ (Jio UPI Autopay) ಹೊಂದಿದೆ. ಈ ಆಯ್ಕೆ ಬಳಸಿ ಬಳಕೆದಾರರು ಜಿಯೋ ಸಂಖ್ಯೆಯನ್ನು ಸ್ವಯಂಚಾಲಿತವಾಗಿ ರೀಚಾರ್ಜ್ ಮಾಡಬಹುದು. ಇದಲ್ಲದೆ, ಜಿಯೋ ಯುಪಿಐ ಆಟೋಪೇ ಫೀಚರ್‌ ಮೂಲಕ ಯೋಜನೆಗಳ ರಚನೆ, ಮಾರ್ಪಾಡು ಮತ್ತು ತೆಗೆದುಹಾಕುವಿಕೆಯನ್ನು ಸಹ ಮಾಡಬಹುದು. ಈ ಆಯ್ಕೆಯು 5,000 ರೂ.ಗಳ ವರೆಗೆ ಪಾವತಿಗಳನ್ನು ಅನುಮತಿಸುತ್ತದೆ. ಹಾಗಾದರೇ ಜಿಯೋ ಯುಪಿಐ ಆಟೋಪೇ ಫೀಚರ್ ಅನ್ನು ಸಕ್ರಿಯ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಯುಪಿಐ ಆಟೋಪೇ ಆಯ್ಕೆ ಸೆಟ್ ಮಾಡಲು ಈ ಕ್ರಮ ಅನುಸರಿಸಿ:

ಜಿಯೋ ಯುಪಿಐ ಆಟೋಪೇ ಆಯ್ಕೆ ಸೆಟ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ಮೈ ಜಿಯೋ (MyJio) ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್/ ಆಪ್‌ ಸ್ಟೋರ್ ಇನ್‌ಸ್ಟಾಲ್ ಮಾಡಿರಿ.
ಹಂತ 2: ಮೇಲ್ಭಾಗದಲ್ಲಿ ಇರುವ ‘ಮೊಬೈಲ್' ವಿಭಾಗದ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ, 'ಸೆಟಪ್ ಜಿಯೋ ಆಟೋಪೇ' ಮೇಲೆ ಟ್ಯಾಪ್ ಮಾಡಿ.
ಹಂತ 4: ಮುಂದೆ, ಆಯ್ಕೆಯ ಪ್ರಯೋಜನಗಳನ್ನು ತಿಳಿಸುವ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ. ಕೆಳಭಾಗದಲ್ಲಿರುವ 'Get Started' ಮೇಲೆ ಕ್ಲಿಕ್ ಮಾಡಿ.

ಪಾವತಿಯ

ಹಂತ 5: ಈಗ, ನಿಮ್ಮ ಪ್ರಸ್ತುತ ಯೋಜನೆ ಅವಧಿ ಮುಗಿದ ನಂತರ ನಿಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಲು ನೀವು ಬಯಸುವ ಯೋಜನೆಯನ್ನು ಆಯ್ಕೆಮಾಡಿ.
ಹಂತ 6: ಪಾವತಿಯ ಆದ್ಯತೆಯ ವಿಧಾನವನ್ನು ಆಯ್ಕೆಮಾಡಿ. ನೀವು ಯುಪಿಐ ಮತ್ತು ಬ್ಯಾಂಕ್ ಖಾತೆಯ ನಡುವೆ ಆಯ್ಕೆ ಮಾಡಬಹುದು. ಯುಪಿಐ ಮೇಲೆ ಕ್ಲಿಕ್ ಮಾಡಿ.
ಹಂತ 7: ನಿಮ್ಮ ಯುಪಿಐ ಅನ್ನು ನಮೂದಿಸಿ ಮತ್ತು ಪರಿಶೀಲಿಸು ಕ್ಲಿಕ್ ಮಾಡಿ. ನೀವು ಬಳಸಬಹುದಾದ ಒಟ್ಟು ಆರು ಯುಪಿಐ ಹ್ಯಾಂಡಲ್‌ಗಳನ್ನು ಅಪ್ಲಿಕೇಶನ್ ಬೆಂಬಲಿಸುತ್ತದೆ.

ಹೊಂದಿಸುವ

ನೀವು ಪರಿಶೀಲಿಸಿದ ನಂತರ, ಅಪ್ಲಿಕೇಶನ್ ನಿಮ್ಮ ಮೊಬೈಲ್ ಸಂಖ್ಯೆಗೆ ಜಿಯೋ ಯುಪಿಐ ಆಟೋಪೇ ಫೀಚರ್‌ ಅನ್ನು ಸಕ್ರಿಯಗೊಳಿಸುತ್ತದೆ. ಈಗ, ನಿಮ್ಮ ಪ್ರಸ್ತುತ ಯೋಜನೆ ಅವಧಿ ಮುಗಿದ ನಂತರ, ಫೀಚರ್‌ ಅನ್ನು ಹೊಂದಿಸುವ ಸಮಯದಲ್ಲಿ ನೀವು ಆಯ್ಕೆ ಮಾಡಿದ ಯೋಜನೆಯೊಂದಿಗೆ ಜಿಯೋ ಸ್ವಯಂಚಾಲಿತವಾಗಿ ನಿಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡುತ್ತದೆ. ಜಿಯೋದ ಇತರೆ ಕೆಲವು ಆಪ್ಸ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮೈ ಜಿಯೋ ಅಪ್ಲಿಕೇಶನ್

ಮೈ ಜಿಯೋ ಅಪ್ಲಿಕೇಶನ್

ಕಂಪನಿಯ 'ಜಿಯೋ ಆಪ್‌' ಗ್ರಾಹಕ ಸೆಲ್ಫ ಸರ್ವಿಸ್‌ ಕೇರ್ ಇದ್ದಂತೆ. ಯಾವುದೇ ಟೈಮ್‌ನಲ್ಲಿ ಬೇಕಾದರೂ ಈ ಆಪ್‌ನಲ್ಲಿ ರೀಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ರೀಚಾರ್ಜ್‌ಗಾಗಿ ಹಲವಾರು ಪೇಮೆಂಟ್ ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಸುಲಭವಾಗಿ ರೀಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ರೀಚಾರ್ಜ್ ಪ್ಲ್ಯಾನ್‌ಗಳ ಕಂಪ್ಲಿಟ್‌ ಮಾಹಿತಿ ಸಹ ಸೀಗಲಿದ್ದು, ರೀಚಾರ್ಜ್‌ ನಂತರ ಕ್ಯಾಶ್‌ಬ್ಯಾಕ್ ಸಹ ದೊರೆಯುವ ಸಾಧ್ಯತೆಗಳಿವೆ.

ಜಿಯೋ ಸಿನಿಮಾ ಅಪ್ಲಿಕೇಶನ್

ಜಿಯೋ ಸಿನಿಮಾ ಅಪ್ಲಿಕೇಶನ್

ಬಳಕೆದಾರರು ಹಲವಾರು ಟಿವಿ ಶೋಗಳನ್ನು ಮತ್ತು ಸಿನಿಮಾಗಳನ್ನು ವೀಕ್ಷಿಸಲು ಅನುಕೂವಿದ್ದು, ಬೇಡಿಕೆ ಆಧಾರದ ಮೇಲೆ ಸಿನಿಮಾ ವೀಕ್ಷಿಸುವ ಸೌಲಭ್ಯವು ಸಹ ಇದೆ. ವಾಚ್‌ಲಿಸ್ಟ್‌, ಡಾಕ್ ಪ್ಲೇಯರ್, ವಾಯಿಸ್‌ ಸರ್ಚ್‌, ಬಿಟ್ರೆಟ್‌ ಸೆಲೆಕ್ಷನ್ ಮತ್ತು ಇನ್ನಿತರೆ ಫೀಚರ್ಸ್‌ಗಳನ್ನು ಸಹ ಕಾಣಬಹುದಾಗಿದೆ. ಜಿಯೋ ಟಿವಿಯೊಂದಿಗೆ ಈ ಸೌಲಭ್ಯಗಳನ್ನು ಬಳಕೆದಾರರಿಗೆ ದೊರಕಿಸಿವೆ.

ಜಿಯೋ ಸಾವನ್ ಅಪ್ಲಿಕೇಶನ್

ಜಿಯೋ ಸಾವನ್ ಅಪ್ಲಿಕೇಶನ್

ಜಿಯೋ ಸಾವನ್ ಒಂದು ಮ್ಯೂಸಿಕ್ ಸ್ಟ್ರಿಮಿಂಗ್ ಅಪ್ಲಿಕೇಶನ್ ಆಗಿದ್ದು, ಬಳಕೆದಾರರು ಅವರಿಗಿಷ್ಟವಾದ ಹಾಡುಗಳನ್ನು ಕೇಳಬಹುದಾಗಿದೆ. ಕನ್ನಡ ಸೇರಿದಂತೆ ಮಲ್ಟಿಪಲ್ ಲಾಗ್ವೇಜ್‌ ಆಯ್ಕೆಗಳಲ್ಲಿ ಲಭ್ಯ ಇರುವ ಈ ಆಪ್‌ನಲ್ಲಿ ಹಾಡುಗಳು, ಲಿರಿಕ್ಸ್, ಪ್ಲೇಲಿಸ್ಟ್‌ ಮತ್ತು ಆರ್ಟಿಸ್ಟ್‌ ಕ್ಯಾಟಗರಿ ಆಯ್ಕೆಗಳು ಇವೆ. ಜಾಹಿರಾತು ಮುಕ್ತವಾದ ಮತ್ತು ಆಫ್‌ಲೈನ್‌ ಮೋಡ್‌ನಲ್ಲಿಯೂ ಸಹ ಆಪ್‌ ಬಳಸಬಹುದಾಗಿದೆ.

ಜಿಯೋ ಟಿವಿ ಅಪ್ಲಿಕೇಶನ್

ಜಿಯೋ ಟಿವಿ ಅಪ್ಲಿಕೇಶನ್

ಜಿಯೋ ಕಂಪನಿಯು ತನ್ನ ಬಳಕೆದಾರರಿಗಾಗಿ ಜಿಯೋ ಟಿವಿ ಆಪ್ ಆಯ್ಕೆಯನ್ನು ನೀಡಿದ್ದು, ಸ್ಮಾರ್ಟ್‌ಫೋನ್‌ನಲ್ಲಿ ಜನಪ್ರಿಯ ಟಿವಿ ಶೋಗಳನ್ನು, ಸ್ಪೋರ್ಟ್ಸ್‌, ನ್ಯೂಸ್‌ಗಳನ್ನು ಮತ್ತು ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಿಸಬಹುದಾದಿದೆ. ಪ್ರಾದೇಶಿಕ ಭಾಷೆಗಳ ಆಯ್ಕೆಗಳು ಸಹ ಲಭ್ಯವಿದ್ದು, ಹಾಗೆಯೇ ಜನಪ್ರಿಯ ಚಾನಲ್‌ಗಳು ಸಹ ಬಳಕೆದಾರರಿಗೆ ದೊರೆಯಲಿವೆ.

ಜಿಯೋ ಸಿಮ್ (ವಾಯಿಸ್‌ ಮತ್ತು ಡೇಟಾ ಸೇವೆ) ಅನ್ನು ಸಕ್ರಿಯಗೊಳಿಸಲು ಹೀಗೆ ಮಾಡಿ:

ಜಿಯೋ ಸಿಮ್ (ವಾಯಿಸ್‌ ಮತ್ತು ಡೇಟಾ ಸೇವೆ) ಅನ್ನು ಸಕ್ರಿಯಗೊಳಿಸಲು ಹೀಗೆ ಮಾಡಿ:

* ನಿಮ್ಮ ಜಿಯೋ ಸಿಮ್ ಹೊಂದಿರುವ ಫೋನ್ ಬಳಸಿ, 1977 ಗೆ ಕರೆ ಮಾಡಿ.
* ಟೆಲಿ-ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಐದು-ಅಂಕಿಯ ಟಿ-ಪಿನ್ (ಟೆಲಿ-ವೆರಿಫಿಕೇಶನ್ ಪಿನ್) ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ಪರ್ಯಾಯ ಸಂಖ್ಯೆಗೆ ಕಳುಹಿಸಲಾದ SMS ನಲ್ಲಿ ಈ ಪಿನ್ ಇರಬೇಕು.

ಆಧಾರ್

* ನಿಮ್ಮ ಪರ್ಯಾಯ ಸಂಖ್ಯೆಯಲ್ಲಿ ನೀವು ಟಿ-ಪಿನ್ ಸ್ವೀಕರಿಸದಿದ್ದರೆ, ಟಿ-ಪಿನ್ ಅನ್ನು ಮತ್ತೆ ಕಳುಹಿಸಲು 1977 ಅಥವಾ 1800-890-1977 ಗೆ ಕರೆ ಮಾಡಿ. ಐದು ಅಂಕಿಯ ಟಿ-ಪಿನ್ ನಮೂದಿಸಿ.
* ಪರ್ಯಾಯವಾಗಿ, ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ನೀವು ನಮೂದಿಸಬಹುದು.
* ನೀವು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ನಿಮ್ಮ ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಬೇಕು.

ಸಕ್ರಿಯಗೊಳ್ಳದಿದ್ದರೆ

ನಿಮ್ಮ ಸಿಮ್ ಅನ್ನು ಸಕ್ರಿಯಗೊಳಿಸದಿದ್ದಲ್ಲಿ, ಕೆಲವು ಗಂಟೆಗಳ ಕಾಲ ಕಾಯಿರಿ. ಇದು ಇನ್ನೂ ಸಕ್ರಿಯಗೊಳ್ಳದಿದ್ದರೆ, ಜಿಯೋ ಗ್ರಾಹಕ ಬೆಂಬಲವನ್ನು ಸಂಪರ್ಕಿಸಿ. ಹೊಸ ಸಿಮ್‌ಗಾಗಿ ಆದೇಶವನ್ನು ನೀಡಿದ 30 ದಿನಗಳಲ್ಲಿ ಟೆಲಿ-ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಗಮನಿಸಬೇಕು. ಇದನ್ನು ಮಾಡದಿದ್ದರೆ, ಆದೇಶವನ್ನು ರದ್ದುಗೊಳಿಸಲಾಗುತ್ತದೆ.

Best Mobiles in India

English summary
How to use Jio UPI AutoPay feature: Follow These Easy Steps: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X