ಕ್ಲಬ್‌ಹೌಸ್‌ನಲ್ಲಿ ಮ್ಯೂಸಿಕ್‌ ಮೋಡ್ ಫೀಚರ್ಸ್‌ ಬಳಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿವೆ. ಅದರಲ್ಲೂ ಕಳೆದ ಕೆಲವು ತಿಂಗಳುಗಳಿಂದ ಆಡಿಯೋ ಚಾಟ್‌ ಪ್ಲಾಟ್‌ಫಾರ್ಮ್‌ ಕ್ಲಬ್‌ಹೌಸ್‌ ಸಿಕ್ಕಾಪಟ್ಟೆ ಟ್ರೆಂಡ್‌ ಸೃಷ್ಟಿ ಮಾಡಿದೆ. ಆಂಡ್ರಾಯ್ಡ್‌ ಆವೃತ್ತಿಯಲ್ಲಿ ಪರಿಚಯಿಸಿದ ನಂತರ ಎಲ್ಲಾ ಕಡೆ ಕ್ಲಬ್‌ಹೌಸ್‌ನದ್ದೆ ಸದ್ದು. ಅಷ್ಟರ ಮಟ್ಟಿಗೆ ಕ್ಲಬ್‌ಹೌಸ್‌ ಇಂದು ಹೊಸ ಜಮಾನದ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ಎಲ್ಲಾ ವಲಯದವರು ಕೂಡ ಇಂದು ಕ್ಲಬ್‌ಹೌಸ್‌ ಸಂವಾದಗಳು ಏರ್ಪಡಿಸುವ ಮೂಲಕ ಕ್ಲಬ್‌ಹೌಸ್‌ ಪ್ರಖ್ಯಾತಿಯನ್ನು ಹೆಚ್ಚಿಸಿದ್ದಾರೆ.

ಕ್ಲಬ್‌ಹೌಸ್‌

ಹೌದು, ಆಡಿಯೋ ಚಾಟ್‌ ಅಪ್ಲಿಕೇಶನ್‌ ಕ್ಲಬ್‌ಹೌಸ್‌ ಇಂದು ಎಲ್ಲಾ ವಯೋಮಾನದವರನ್ನು ಸೆಳೆದಿದೆ. ಮುಕ್ತ ಸಂವಾದ ನಡೆಸುವವರಿಗೆ ಹೊಸ ವ್ಯಾಖ್ಯಾನವನ್ನು ಕ್ಲಬ್‌ಹೌಸ್‌ ನೀಡಿದೆ. ಸದ್ಯ ಬಳಕೆದಾರರಿಗೆ ಹಲವು ಅನುಕೂಲಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸಂಗೀತಗಾರರು ಮತ್ತು ಕಲಾವಿದರು ಲೈವ್ ಶೋಗಳನ್ನು ಆಯೋಜಿಸಲು ಅವಕಾಶ ನೀಡಲಿದೆ. ಇದಕ್ಕಾಗಿ ಮ್ಯೂಸಿಕ್‌ ಮೋಡ್‌ ಅನ್ನು ಪರಿಚಯಿಸಿದೆ. ಹಾಗಾದ್ರೆ ಕ್ಲಬ್‌ಹೌಸ್‌ ಅಪ್ಲಿಕೇಶನ್‌ನಲ್ಲಿ ಮ್ಯೂಸಿಕ್‌ ಮೋಡ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ಲಬ್ ಹೌಸ್

ಕ್ಲಬ್ ಹೌಸ್ ಪರಿಚಯಿಸಿರುವ ಮ್ಯೂಸಿಕ್ ಮೋಡ್ "ಉತ್ತಮ ಗುಣಮಟ್ಟದ ಮತ್ತು ಉತ್ತಮ ಸ್ಟಿರಿಯೊ ಸೌಂಡ್" ನೊಂದಿಗೆ ಮ್ಯೂಸಿಕ್‌ ಅನ್ನು ಪ್ರಸಾರ ಮಾಡಲು ಅವಕಾಸ ನೀಡಲಿದೆ. ಬಳಕೆದಾರರು ಈಗಾಗಲೇ ಕಡಿಮೆ, ಮಧ್ಯಮ ಮತ್ತು ಉತ್ತಮ ಗುಣಮಟ್ಟದ ಸೆಟ್ಟಿಂಗ್ ಅನ್ನು ಹೊಂದಿದೆ. ಆದರೂ ಕೂಡ ನೀವು ಲೈವ್ ಸಂಗೀತವನ್ನು ಕೇಳುತ್ತಿದ್ದರೆ ಈ ಹೊಸ ಮ್ಯೂಸಿಕ್‌ ಮೋಡ್‌ ಇನ್ನಷ್ಟು ಸಹಾಯಕವಾಗುತ್ತದೆ. ಇದು ಯುಎಸ್‌ಬಿ ಮೈಕ್ರೊಫೋನ್‌ಗಳು ಮತ್ತು ಮಿಕ್ಸಿಂಗ್ ಬೋರ್ಡ್‌ಗಳಂತಹ ವೃತ್ತಿಪರ ಆಡಿಯೋ ಡಿವೈಸ್‌ಗಳಿಗೆ ಬೆಂಬಲವನ್ನು ನೀಡಲಿದೆ.

ಕ್ಲಬ್‌ಹೌಸ್‌ನಲ್ಲಿ ಮ್ಯೂಸಿಕ್‌ ಮೋಡ್ ಆಕ್ಟಿವ್‌ ಮಾಡುವುದು ಹೇಗೆ?

ಕ್ಲಬ್‌ಹೌಸ್‌ನಲ್ಲಿ ಮ್ಯೂಸಿಕ್‌ ಮೋಡ್ ಆಕ್ಟಿವ್‌ ಮಾಡುವುದು ಹೇಗೆ?

ಕ್ಲಬ್‌ಹೌಸ್‌ನಲ್ಲಿ ಮ್ಯೂಸಿಕ್‌ ಮೋಡ್‌ ಅನ್ನು ಆಕ್ಟಿವ್‌ ಮಾಡಲು ಕ್ಲಬ್‌ಹೌಸ್ ಅಪ್ಲಿಕೇಶನ್‌ ಅನ್ನು ತೆರೆಯಬೇಕು. ಒಮ್ಮೆ ಅವರು ಕ್ಲಬ್‌ಹೌಸ್‌ ರೂಮ್ಸ್‌ನಲ್ಲಿದ್ದರೆ, ಮೇಲಿನ ಬಲಭಾಗದಲ್ಲಿರುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡುವ ಮೂಲಕ ಅವರು ಆಯ್ಕೆಗಳಿಗೆ ನ್ಯಾವಿಗೇಟ್ ಮಾಡಬೇಕಾಗುತ್ತದೆ. ನಂತರ ಅವರಿಗೆ ಬೇಕಾಗುವಂತಹ 'ಆಡಿಯೋ ಕ್ವಾಲಿಟಿ' ಆಯ್ಕೆಯನ್ನು ಟ್ಯಾಪ್‌ ಮಾಡಬಹುದು.

ಮ್ಯೂಸಿಕ್

ಇನ್ನು ಸ್ಟಿರಿಯೊ ಬೆಂಬಲವನ್ನು ಕ್ಲಿಪ್‌ಗಳಿಗೆ ವಿಸ್ತರಿಸಲಾಗಿದೆ. ಆದ್ದರಿಂದ, ಮ್ಯೂಸಿಕ್ ಮೋಡ್ ಬಳಸಿ ವಿವಿಧ ಪ್ರದರ್ಶಕರಿಂದ ತುಣುಕುಗಳನ್ನು ಹಂಚಿಕೊಳ್ಳುವ ಬಳಕೆದಾರರು ಸಹ ಉತ್ತಮವಾಗಿ ಧ್ವನಿಸುತ್ತಾರೆ ಎಂದು ಕ್ಲಬ್‌ಹೌಸ್‌ ಹೇಳಿಕೊಂಡಿದೆ. ಸದ್ಯ ಮ್ಯೂಸಿಕ್ ಮೋಡ್ ಐಒಎಸ್ ಆಧಾರಿತ ಡಿವೈಸ್‌ಗಳಿಗೆ ಲಭ್ಯವಾಗಲಿದೆ. ಶೀಘ್ರದಲ್ಲೇ ಆಂಡ್ರಾಯ್ಡ್ ಫೋನ್‌ಗಳಿಗೂ ಬರುತ್ತದೆ ಎಂದು ಹೇಳಲಾಗಿದೆ.

ಕ್ಲಬ್‌ಹೌಸ್‌

ಇದಲ್ಲದೆ ಇತ್ತೀಚಿಗಷ್ಟೇ ಕ್ಲಬ್‌ಹೌಸ್‌ ಕ್ಲಿಪ್ಸ್‌ ಫೀಚರ್ಸ್‌ ಪರಿಚಯಿಸಿದೆ. ಇದು ಪಬ್ಲಿಕ್‌ ರೂಮ್ಸ್‌ನಲ್ಲಿ 30 ಸೆಕೆಂಡುಗಳ ಕ್ಲಿಪ್‌ಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡಲಿದೆ. ಇದರಿಂದ ಇಂಟರ್‌ನೆಟ್‌ನಲ್ಲಿ ಹೆಚ್ಚಿನ ಜನರನ್ನು ಪತ್ತೆಹಚ್ಚಲು ಮತ್ತು ಕ್ಲಬ್‌ಗೆ ಸೇರಲು ಸಾಧ್ಯವಾಗುತ್ತದೆ. ಇನ್ನು ನೀವು ರೂಮ್ಸ್‌ ಅನ್ನು ಪ್ರಾರಂಭಿಸಿದಾಗ, ನೀವು ಕ್ಲಿಪ್‌ಗಳನ್ನು ಸಕ್ರಿಯಗೊಳಿಸಬೇಕೆ ಎಂದು ಆಯ್ಕೆ ಸಿಗಲಿದೆ. ಇದು ಪಬ್ಲಿಕ್‌ ರೂಮ್ಸ್‌ಗಳಿಗೆ ಮಾತ್ರ ಲಭ್ಯವಿದ್ದು ನೀವು ಯಾವಾಗ ಬೇಕಾದರೂ ಇದನ್ನು ಟಾಗಲ್ ಮಾಡಬಹುದು. ಈ ಆಯ್ಕೆಯನ್ನು ಖಾಸಗಿ, ಸಾಮಾಜಿಕ ಅಥವಾ ಕ್ಲಬ್ ರೂಮ್ಸ್‌ಗಳಿಗೆ ನೀಡಿಲ್ಲ. ಇದರಲ್ಲಿ ಹೋಸ್ಟ್ ಕ್ಲಿಪ್‌ಗಳನ್ನು ಸಕ್ರಿಯಗೊಳಿಸಿದ ನಂತರ, ಪಬ್ಲಿಕ್‌ ರೂಮ್ಸ್‌ ಗಳಲ್ಲಿ ಲೈವ್ ಕೇಳುಗರು ಹೊಸ ಕತ್ತರಿ ಐಕಾನ್ ಲಭ್ಯವಾಗಲಿದೆ. ಇದರಿಂದ 30 ಸೆಕೆಂಡುಗಳ ಕ್ಲಿಪ್ ಅನ್ನು ರೆಕಾರ್ಡ್ ಮಾಡಲು ಯಾವಾಗ ಬೇಕಾದರೂ ಟ್ಯಾಪ್ ಮಾಡಬಹುದು.

ಫೀಚರ್ಸ್‌

ಇನ್ನು ಈ ಹೊಸ ಅಪ್ಡೇಟ್‌ನಲ್ಲಿ "ಯುನಿವರ್ಸಲ್ ಸರ್ಚ್" ಫೀಚರ್ಸ್‌ ಅನ್ನು ಸಹ ಪರಿಚಯಿಸಲಾಗಿದೆ. ಇದು ಬಳಕೆದಾರರಿಗೆ ಜನರು, ಕ್ಲಬ್‌ಗಳು, ಲೈವ್ ರೂಮ್‌ಗಳು ಮತ್ತು ಭವಿಷ್ಯದ ಈವೆಂಟ್‌ಗಳನ್ನು ಹೆಚ್ಚು ವೇಗವಾಗಿ ಸರ್ಚ್‌ ಮಾಡಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್‌ ಮೂಲಕ ಮುಂದಿನ ದಿನಗಳಲ್ಲಿ ನಿರ್ದಿಷ್ಟ ವಿಷಯಗಳ ಬಗ್ಗೆ ಯಾವಾಗಾ ಎಲ್ಲಿ ಈವೆಂಟ್‌ಗಳು ನಡೆಯಲಿವೆ ಅನ್ನೊದನ್ನ ತಿಳಿಯಲು ಸಹಾಯ ಮಾಡಲಿದೆ. ಈ ಫೀಚರ್ಸ್‌ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ.

Best Mobiles in India

Read more about:
English summary
Here’s everything you need to know about the new Clubhouse Music Mode feature and how you can use it.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X