Subscribe to Gizbot

ಅಂತೂ ಇಂತೂ ವಾಟ್ಸಾಪ್ ಕಂಪ್ಯೂಟರ್‌ಗೂ ಬಂತು ಕಣ್ರೀ!

Posted By:

ಕೊನೆಗೂ ವಾಟ್ಸಾಪ್ ಹೆಚ್ಚು ನಿರೀಕ್ಷಿತ ಫೀಚರ್ ಆದ ವಾಟ್ಸಾಪ್ ವೆಬ್ ಅನ್ನು ಪ್ರಸ್ತುತಪಡಿಸಿದೆ. ಇದರಿಂದ ನೇರವಾಗಿ ನಿಮ್ಮ ಪಿಸಿ/ಮ್ಯಾಕ್‌ಗೆ ವಾಟ್ಸಾಪ್ ಸಂದೇಶಗಳನ್ನು ನೇರವಾಗಿ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು

ಇದನ್ನೂ ಓದಿ: ಐಫೋನ್ 6 ಕ್ಯಾಮೆರಾ ಇಷ್ಟವಾಗುವುದು ಇದಕ್ಕೆ ಅಲ್ಲವೇ?

ಇನ್ನು ಸ್ಮಾರ್ಟ್‌ಫೋನ್‌ಗಿಂತಲೂ ಕಂಪ್ಯೂಟರ್ ಅನ್ನೇ ಹೆಚ್ಚು ಬಳಸುವವರಿಗೆ ಈ ಸೌಲಭ್ಯ ವರದಾಯಕವಾಗಿ ಪರಿಣಮಿಸಿದೆ. ನಿಮ್ಮ ಕಂಪ್ಯೂಟರ್‌ನಿಂದ ಹೆಚ್ಚು ಚಿತ್ರಗಳನ್ನು ವಾಟ್ಸಾಪ್‌ನಲ್ಲಿ ಈ ಫೀಚರ್ ಬಳಸಿ ಕಳುಹಿಸಬಹುದಾಗಿದೆ ಇದನ್ನು ಪುನಃ ಸ್ಮಾರ್ಟ್‌ಫೋನ್‌ಗೆ ಇಂಪೋರ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ.

ಇದನ್ನು ಹೇಗೆ ಬಳಸುವುದು ಎಂಬುದನ್ನು ಕೆಳಗಿನ ಸ್ಲೈಡರ್‌ನಿಂದ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಲಹೆ: 1

ವಾಟ್ಸಾಪ್ ಅನ್ನು ಕಂಪ್ಯೂಟರ್‌ಗೆ ಬಳಸುವುದು

ನಿಮ್ಮ ಮ್ಯಾಕ್/ಪಿಸಿಯಲ್ಲಿ ಕ್ರೋಮ್ ಬ್ರೌಸರ್‌ನಿಂದ https://web.whatsapp.com/ ಗೆ ಹೋಗಿ. ಈ ವೆಬ್ ಪುಟ ಕ್ಯುಆರ್ ಕೋಡ್ ಅನ್ನು ಲೋಡ್ ಮಾಡುತ್ತದೆ. ಕ್ಯುಆರ್ ಕೋಡ್ ಲೋಡ್ ಆಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬುದು ಗಮನಿಸಿ

ಸಲಹೆ: 2

ವಾಟ್ಸಾಪ್ ಅನ್ನು ಕಂಪ್ಯೂಟರ್‌ಗೆ ಬಳಸುವುದು

ವಾಟ್ಸಾಪ್ ಚಾಲನೆಯಾಗುತ್ತಿರುವ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಡಿವೈಸ್ ಓಎಸ್ ಆಧರಿಸಿ, ವೆಬ್ ಪುಟದ ಕೆಳಭಾಗದಲ್ಲಿ ನೀಡಿರುವ ಸೂಚನೆಗಳನ್ನು ಅನುಸರಿಸಿ

ಸಲಹೆ: 3

ವಾಟ್ಸಾಪ್ ಅನ್ನು ಕಂಪ್ಯೂಟರ್‌ಗೆ ಬಳಸುವುದು

ನಿಮ್ಮ ವಾಟ್ಸಾಪ್‌ನಲ್ಲಿ ಈ ಆಯ್ಕೆ ನಿಮಗೆ ದೊರಕಿಲ್ಲ ಎಂದಾದಲ್ಲಿ ನಿಮ್ಮ ಸ್ಟೋರ್‌ನಿಂದ ವಾಟ್ಸಾಪ್ ಇದನ್ನು ಅಪ್‌ಡೇಟ್ ಮಾಡುತ್ತದೆ ಅಥವಾ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಆಧುನಿಕ ಆವೃತ್ತಿಯನ್ನು ಡೌನ್‌ಲೋಡ್ ಮಾಡುತ್ತದೆ.

ಸಲಹೆ: 4

ವಾಟ್ಸಾಪ್ ಅನ್ನು ಕಂಪ್ಯೂಟರ್‌ಗೆ ಬಳಸುವುದು

ಬಿಲ್ಟ್ ಇನ್ ಕ್ಯುಆರ್ ರೀಡರ್ ಅನ್ನು ನೀವು ಲಾಂಚ್ ಮಾಡಿದ ನಂತರ, ಪರದೆಯಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಮತ್ತು ನಿಮ್ಮ ವಾಟ್ಸಾಪ್ ಸಂವಾದ ಬ್ರೌಸರ್‌ನಲ್ಲಿ ಸ್ವಯಂಚಾಲಿತವಾಗಿ ಗೋಚರವಾಗುತ್ತದೆ.

ಸಲಹೆ: 5

ವಾಟ್ಸಾಪ್ ಅನ್ನು ಕಂಪ್ಯೂಟರ್‌ಗೆ ಬಳಸುವುದು

ವಾಟ್ಸಾಪ್ ಫಾರ್ ವೆಬ್‌ ಸ್ಮಾರ್ಟ್‌ಫೋನ್‌ನಂತೆಯೇ ವಾಟ್ಸಾಪ್ ಬಳಸಲು ಸಹಕಾರಿ

ಸಲಹೆ: 6

ವಾಟ್ಸಾಪ್ ಅನ್ನು ಕಂಪ್ಯೂಟರ್‌ಗೆ ಬಳಸುವುದು

ಇದನ್ನು ಬಳಸಿ ನಿಮ್ಮ ಸಂಪರ್ಕಗಳುನ್ನು ಪ್ರವೇಶಿಸಬಹುದು, ಅವರ ಸಂಪರ್ಕ ಮಾಹಿತಿಗಳನ್ನು ವೀಕ್ಷಿಸಬಹುದು ಮತ್ತು ನಿಮ್ಮ ಕಂಪ್ಯೂಟರ್‌ನಿಂದ ಚಿತ್ರಗಳನ್ನು ಕೂಡ ಕಳುಹಿಸಬಹುದು.

ಸಲಹೆ: 7

ವಾಟ್ಸಾಪ್ ಅನ್ನು ಕಂಪ್ಯೂಟರ್‌ಗೆ ಬಳಸುವುದು

ಆಡಿಯೊ ಫೈಲ್‌ಗಳು ಮತ್ತು ವೀಡಿಯೊ ಫೈಲ್‌ಗಳನ್ನು ಬೆಂಬಲಿಸುವ ಫೀಚರ್ ಅನ್ನು ಇದು ಇದುವರೆಗೂ ಬೆಂಬಲಿಸುತ್ತಿಲ್ಲ.

ಸಲಹೆ: 8

ವಾಟ್ಸಾಪ್ ಅನ್ನು ಕಂಪ್ಯೂಟರ್‌ಗೆ ಬಳಸುವುದು

ಮೂರು ಲಂಬ ಡಾಟ್‌ಗಳಲ್ಲಿ ಅಧಿಸೂಚನೆ ಕ್ಲಿಕ್ ಅನ್ನು ಪಡೆದುಕೊಳ್ಳಲು ಡೆಸ್ಕ್‌ ಟಾಪ್ ಅಲರ್ಟ್ ಆನ್ ಮಾಡಿ.

ಸಲಹೆ: 9

ವಾಟ್ಸಾಪ್ ಅನ್ನು ಕಂಪ್ಯೂಟರ್‌ಗೆ ಬಳಸುವುದು

ಇದು ಗೂಗಲ್ ಕ್ರೋಮ್ ಬ್ರೌಸರ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ

ಸಲಹೆ: 10

ವಾಟ್ಸಾಪ್ ಅನ್ನು ಕಂಪ್ಯೂಟರ್‌ಗೆ ಬಳಸುವುದು

ಆಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್‌ಬೆರ್ರಿ, ನೋಕಿಯಾ ಓಎಸ್‌ನಲ್ಲಿ ವಾಟ್ಸಾಪ್ ಫಾರ್ ವೆಬ್ ಕಾರ್ಯನಿರ್ವಹಿಸುತ್ತದೆ ಐಫೋನ್‌ಗೆ ಇದುವರೆಗೆ ಇದು ಬೆಂಬಲವನ್ನು ನೀಡುತ್ತಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Finally WhatsApp has announced the most awaited feature – WhatsApp web. This enable you to send and receive WhatsApp messages directly from your PC/MAC.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot