ಇನ್ಮುಂದೆ ಸ್ಮಾರ್ಟ್‌ಫೋನ್ ಇಲ್ಲದಿದ್ದರೂ ವಾಟ್ಸಾಪ್‌ ವೆಬ್‌ ಬಳಸಬಹುದು ಹೇಗೆ ಗೊತ್ತಾ?

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿರುವ ವಾಟ್ಸಾಪ್‌ ದೀಪಾವಳಿ ಸಂಭ್ರಮದಲ್ಲಿ ಗುಡ್‌ ನ್ಯೂಸ್‌ ನೀಡಿದೆ. ವಾಟ್ಸಾಪ್‌ ಬಳಕೆದಾರರು ಬಹಳ ದಿನಗಳಿಂದ ಕಾಯುತ್ತಿರುವ ಬಹು ನಿರೀಕ್ಷಿತ ಫೀಚರ್ಸ್‌ ಅನ್ನು ಪರಿಚಯಿಸಿದೆ. ಹಲವಾರು ತಿಂಗಳುಗಳಿಂದ ಮಲ್ಟಿ ಡಿವೈಸ್‌ ಕನೆಕ್ಟ್‌ ಫೀಚರ್ಸ್‌ ಬಗ್ಗೆ ಸಾಕಷ್ಟು ವರದಿಗಳಾಗಿವೆ. ಸ್ಮಾರ್ಟ್‌ಫೋನ್‌ ಇಲ್ಲದೆ ಹೋದರು ಲಿಂಕ್ ಕನೆಕ್ಟ್‌ ಡಿವೈಸ್‌ ಮೂಲಕ ವಾಟ್ಸಾಪ್‌ ಬಳಸುವುದಕ್ಕೆ ಅವಕಾಶ ನೀಡಬೇಕು ಅನ್ನೊದು ವಾಟ್ಸಾಪ್‌ನ ಗುರಿಯಾಗಿದೆ. ಅದರಂತೆ ತನ್ನ ಮಲ್ಟಿ ಡಿವೈಸ್‌ ಕನೆಕ್ಟ್‌ ಫೀಚರ್ಸ್‌ ಅನ್ನು ಇದೀಗ ಆಂಡ್ರಾಯ್ಡ್‌ ಮತ್ತು iOS ಎರಡೂ ಆವೃತ್ತಿಗಳಲ್ಲಿಯೂ ಕೂಡ ಅಪ್ಡೇಟ್‌ ಮಾಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಮಲ್ಟಿ ಡಿವೈಸ್‌ ಫೀಚರ್ಸ್‌ ಅನ್ನು ಅಧಿಕೃತಗೊಳಿಸಿದೆ. ಪ್ರಸ್ತುತ ಮಲ್ಟಿ-ಡಿವೈಸ್‌ ಫೀಚರ್ಸ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಸಾಧನಗಳಲ್ಲಿ ಬೀಟಾ ಪ್ರೋಗ್ರಾಂ ನಲ್ಲಿ ಲಭ್ಯವಿದೆ. ಇದರ ಮೂಲಕ ಬಳಕೆದಾರರು ವೆಬ್, ಡೆಸ್ಕ್‌ಟಾಪ್ ಮತ್ತು ಪೋರ್ಟಲ್‌ ನಲ್ಲಿ ವಾಟ್ಸಾಪ್‌ನ ಹೊಸ ಅಪ್ಡೇಟ್‌ ಅನ್ನು ಬಳಸಬಹುದಾಗೊದೆ. ಇದು ವಾಟ್ಸಾಪ್‌ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ ಅಗತ್ಯವಿಲ್ಲದೇ ಲಿಂಕ್ ಮಾಡಲಾದ ಡಿವೈಸ್‌ನಲ್ಲಿಯೇ ವಾಟ್ಸಾಪ್‌ ಬಳಸಲು ಅವಕಾಶ ನೀಡಿದೆ. ಹಾಗಾದ್ರೆ ಮಲ್ಟಿ ಡಿವೈಸ್‌ ಫೀಚರ್ಸ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಪರಿಚಯಿಸಿರುವ ಮಲ್ಟಿ ಡಿವೈಸ್‌ ಮೂಲಕ ಒಬ್ಬರು ಒಂದೇ ಸಮಯದಲ್ಲಿ ತಮ್ಮ ವಾಟ್ಸಾಪ್‌ ಅಕೌಂಟ್‌ ಅನ್ನು ನಾಲ್ಕು ಡಿವೈಸ್‌ಗಳಿಗೆ ಲಿಂಕ್‌ ಮಾಡಲು ಅವಕಾಶ ನೀಡಲಿದೆ. ಇದರಲ್ಲಿ ಬ್ರೌಸರ್‌ ಮತ್ತು ಇತರ ಡಿವೈಸ್‌ಗಳು ಕೂಡ ಸಾಧನಗಳು ಸೇರಿವೆ. ಇನ್ನು ಈ ಫೀಚರ್ಸ್‌ ಕೂಡ ಎಂಡ್‌ ಎಂಡ್‌ ಎನ್‌ಕ್ರಿಪ್ಶನ್ ಅನ್ನು ಬೆಂಬಲಿಸಲಿದೆ. ಇದರಿಂದ ನೀವು ಯಾವುದೇ ಡಿವೈಸ್‌ಗೆ ಕನೆಕ್ಟ್‌ ಮಾಡಿ ಚಾಟ್‌ ಮಾಡಿದರೂ ಸಹ ನಿಮ್ಮ ಚಾಟ್‌ ಸುರಕ್ಷಿತವಾಗಿರಲಿದೆ ಎಂದು ವಾಟ್ಸಾಪ್‌ ದೃಢಪಡಿಸಿದೆ.

ವಾಟ್ಸಾಪ್‌

ನಿಮ್ಮ ವಾಟ್ಸಾಪ್‌ ಖಾತೆಯನ್ನು ಬೇರೆ ಡಿವೈಸ್‌ಗೆ ಕನೆಕ್ಟ್‌ ಮಾಡಿದ ನಂತರ ಫೋನ್‌ ಇಂಟರ್‌ನೆಟ್‌ ಇಲ್ಲದೆ ಹೋದರು ವಾಟ್ಸಾಪ್‌ ವೆಬ್, ಡೆಸ್ಕ್‌ಟಾಪ್ ಮತ್ತು ಪೋರ್ಟಲ್ ಅನ್ನು ಬಳಸಲು ಸಾಧ್ಯವಾಗಲಿದೆ. ಆದರೆ ನೀವು ಕನೆಕ್ಟ್‌ ಮಾಡಿದ ಫೋನ್‌ 14 ದಿನಗಳವರೆಗೂ ಕೂಡ ಕನೆಕ್ಷನ್‌ ಇಲ್ಲದೆ ಹೋದರೆ ಲಿಂಕ್ ಮಾಡಲಾದ ಡಿವೈಸ್‌ಗಳು ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತವೆ. ಅಂದರೆ ನೀವು 14 ದಿನಗಳ ತನಕ ನಿಮ್ಮ ಫೋನ್‌ ಇಲ್ಲದೆ ಹೋದರೂ ವಾಟ್ಸಾಪ್‌ ಬಳಸುವುದಕ್ಕೆ ಅವಕಾಶ ನೀಡಲಿದೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕ ವಾಟ್ಸಾಪ್‌ ಅಕೌಂಟ್‌ ಅನ್ನು ವೆಬ್, ಡೆಸ್ಕ್‌ಟಾಪ್ ಅಥವಾ ಪೋರ್ಟಲ್‌ಗೆ ನೀವು ಲಿಂಕ್ ಮಾಡಬೇಕಾಗುತ್ತದೆ. ಒಮ್ಮೆ ಲಿಂಕ್‌ ಮಾಡಿದ ನಂತರ ನಿಮ್ಮ ಪೋನ್‌ ಇಲ್ಲದೆ ಹೋದರೂ ಕೂಡ ನೀವು ವಾಟ್ಸಾಪ್‌ ಅನ್ನು ಬಳಸಬಹುದಾಗಿದೆ. ಇದಕ್ಕಾಗಿ ನೀವು ಏನು ಮಾಡಬೇಕು ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ನಿಮ್ಮ ಸ್ಮಾರ್ಟ್‌ಫೋನ್ ಇಲ್ಲದೆ ಹೋದರೂ ವಾಟ್ಸಾಪ್‌ ಬಳಸುವುದು ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್ ಇಲ್ಲದೆ ಹೋದರೂ ವಾಟ್ಸಾಪ್‌ ಬಳಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಫೋನ್‌ನಲ್ಲಿ ವಾಟ್ಸಾಪ್‌ ತೆರೆಯಿರಿ, ನಂತರ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:2 "Linked devices" ಮೇಲೆ ಟ್ಯಾಪ್ ಮಾಡಿ.
ಹಂತ:3 ನಂತರ "ಮಲ್ಟಿ-ಡಿವೈಸ್ ಬೀಟಾ" ಮೇಲೆ ಟ್ಯಾಪ್ ಮಾಡಿ. ಇದರಲ್ಲಿ ವಾಟ್ಸಾಪ್‌ ನಿಮಗೆ ಒಂದು ಪೇಜ್‌ ಅನ್ನು ಡಿಸ್‌ಪ್ಲೇ ಮಾಡಲಿದೆ.
ಹಂತ:4 ಇದೀಗ "ಜಾಯಿನ್‌ ಬೀಟಾ" ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು "ಕಂಟಿನ್ಯೂ" ಬಟನ್ ಒತ್ತಿರಿ.
ಹಂತ:5 ಇದಾದ ನಂತರ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ವಾಟ್ಸಾಪ್‌ವೆಬ್‌ಗೆ ಲಿಂಕ್ ಮಾಡಿರಿ.

ಈಗ ನಿಮ್ಮ ವಾಟ್ಸಾಪ್‌ ಅಕೌಂಟ್‌ ಅನ್ನು ಬೇರೆ ಡಿವೈಸ್‌ನಲ್ಲೂ ಉಪಯೋಗಿಸಬಹುದು. ಅಷ್ಟೇ ಅಲ್ಲ ಕನೆಕ್ಟ್‌ ಮಾಡಿದ ಮುಖ್ಯ ಫೋನ್‌ ಇಂಟರ್‌ನೆಟ್‌ ಇಲ್ಲದೆ ಹೋದರೂ ಕೂಡ ನಿಮ್ಮ ವಾಟ್ಸಾಪ್‌ ಅನ್ನು ನೀವು ಬಳಸುತ್ತಿರಬಹುದು.

ಈ ಫೀಚರ್ಸ್‌ ಬಳಸುವ ಮನ್ನ ಇದನ್ನು ಗಮನಿಸಿ

ಈ ಫೀಚರ್ಸ್‌ ಬಳಸುವ ಮನ್ನ ಇದನ್ನು ಗಮನಿಸಿ

ನೀವು ಮಲ್ಟಿ ಡಿವೈಸ್‌ ಫಿಚರ್ಸ್‌ ಬಳಸುವ ಮುನ್ನ ಅನೇಕ ವಿಚಾರಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಏಕೆಮದರೆ ಮಲ್ಟಿ ಡಿವೈಸ್‌ ಸದ್ಯ ಪ್ರಾರಂಬಿಕ ಹಂತದಲ್ಲಿರುವುದರಿಂದ ಇದು ಅನೇಕ ಫೀಚರ್ಸ್‌ಗಳನ್ನು ಬೆಂಬಲಿಸುವುದಿಲ್ಲ ಎನ್ನಲಾಗಿದೆ. ಇದರಲ್ಲಿ ನೀವು iPhone ಹೊಂದಿದ್ದರೆ ನೀವು ಕನೆಕ್ಟ್‌ ಮಾಡಿದ ಡಿವೈಸ್‌ಗಳಲ್ಲಿ ಚಾಟ್‌ಗಳನ್ನು ಯಾರಾದರೂ ತೆರವುಗೊಳಿಸಿದರೆ ಅಥವಾ ಡಿಲೀಟ್‌ ಮಾಡಿದರೆ ಈ ವೈಶಿಷ್ಟ್ಯವು ಕಾರ್ಯನಿರ್ವಹಿಸುವುದಿಲ್ಲ ಎಂದು ಕಂಪನಿಯು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.
ಇದಲ್ಲದೆ ಕನೆಕ್ಟ್‌ ಆಗಿರುವ ಡಿವೈಸ್‌ಗಳಲ್ಲಿ ಲೈವ್ ಲೊಕೇಶನ್‌ ವೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ವಾಟ್ಸಾಪ್‌ ಹೇಳಿದೆ. ಹಾಗೆಯೇ ಮಲ್ಟಿ ಡಿವೈಸ್‌ ಬೀಟಾ ಫೀಚರ್ಸ್‌ ವಾಟ್ಸಾಪ್‌ ವೆಬ್‌ನಿಂದ ಲಿಂಕ್ ಪೂರ್ವ ವೀಕ್ಷಣೆಗಳೊಂದಿಗೆ ಸಂದೇಶಗಳನ್ನು ಬೆಂಬಲಿಸುವುದಿಲ್ಲ.

Best Mobiles in India

English summary
The good thing is you will be able to use WhatsApp Web, Desktop, and Portal even when the main phone didn’t have an active internet connection.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X