ಯೂಟ್ಯೂಬ್‌ನಲ್ಲಿ ಆಂಬಿಯೆಂಟ್ ಮೋಡ್ ಬಳಕೆ ಹೇಗೆ; ಇದರಿಂದ ಆಗುವ ಪ್ರಯೋಜನ ಏನು?

|

ಗೂಗಲ್ ತನ್ನ ಒಡೆತನದ ಎಲ್ಲಾ ಆಪ್‌ಗಳನ್ನು ಕಾಲಕಾಲಕ್ಕೆ ತಕ್ಕಂತೆ ನವೀಕರಣ ಮಾಡಿಕೊಂಡು ಬರುತ್ತಿದೆ. ಅದರಂತೆ ಯೂಟ್ಯೂಬ್‌ ಆಪ್‌ನಲ್ಲೂ ಇತ್ತೀಚೆಗೆ ಕೆಲವು ಅಪ್‌ಗ್ರೇಡ್‌ ಆಯ್ಕೆಯನ್ನು ನೀಡಲಾಗಿದ್ದು, ಬಳಕೆದಾರರಿಗೆ ಮತ್ತಷ್ಟು ನವೀನ ಅನುಭವ ನೀಡಲಿದೆ. ಯೂಟ್ಯೂಬ್‌ ನಲ್ಲಿ ಆಂಬಿಯೆಂಟ್ ಮೋಡ್ ಫೀಚರ್ಸ್‌ ಆಯ್ಕೆ ಇದ್ದು, ಎಲ್ಲಾ ಬಳಕೆದಾರರಿಗೂ ಇದು ಲಭ್ಯವಾಗಲಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ಆಂಬಿಯೆಂಟ್ ಮೋಡ್ ಫೀಚರ್ಸ್‌ ಅನ್ನು ಅನಾವರಣಗೊಳಿಸಿದ್ದು, ಈ ಫೀಚರ್ಸ್‌ ಯೂಟ್ಯೂಬ್‌ನ ನೋಟವನ್ನು ಬದಲು ಮಾಡಲಿದೆ. ಹಾಗೆಯೇ ಈ ಮೂಲಕ ಯೂಟ್ಯೂಬ್ ಮತ್ತಷ್ಟು ಬಳಕೆದಾರರನ್ನು ಸೆಳೆಯುವಲ್ಲಿ ಮುಂದಾಗಿದೆ. ಈ ಫೀಚರ್ಸ್‌ನಲ್ಲಿ ಇಂಟರ್ಫೇಸ್‌ನ ಬ್ಯಾಗ್ರೌಂಡ್ ಬಣ್ಣ ಬದಲಾಗಲಿದ್ದು, ಇದು ತಲ್ಲೀನಗೊಳಿಸುವ ಅನುಭವ ನೀಡಲಿದೆ.

ಫೀಚರ್ಸ್‌ ಆಂಡ್ರಾಯ್ಡ್‌

ಇನ್ನು ಈ ಫೀಚರ್ಸ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಸ್ಮಾರ್ಟ್ ಟಿವಿಗಳು ಮತ್ತು ವೆಬ್ ಬ್ರೌಸರ್‌ಗಳಿಗೂ ಬೆಂಬಲ ನೀಡಲಿದ್ದು, ಇದನ್ನು ಬಳಕೆ ಮಾಡುವುದು ಹೇಗೆ? ಇದರಿಂದ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುತ್ತದೆಯೇ?, ಇದನ್ನು ಆಫ್‌ ಮಾಡುವುದು ಹೇಗೆ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನ ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಆಂಬಿಯೆಂಟ್ ಮೋಡ್ ಸಕ್ರಿಯಗೊಳಿಸುವುದೇಗೆ?

ಆಂಬಿಯೆಂಟ್ ಮೋಡ್ ಸಕ್ರಿಯಗೊಳಿಸುವುದೇಗೆ?

ನೀವು ಈ ಹೊಸ ಫೀಚರ್ಸ್ ಅನ್ನು ಬಳಕೆ ಮಾಡಬೇಕು ಎಂದುಕೊಂಡರೆ ಯೂಟ್ಯೂಬ್‌ ತೆರೆದು ಡಾರ್ಕ್ ಥೀಮ್ ಅನ್ನು ಆನ್ ಮಾಡಿದರೆ ಸಾಕು. ತಕ್ಷಣವೇ ಈ ಆಂಬಿಯೆಂಟ್ ಮೋಡ್‌‌ ಆಟೋಮ್ಯಾಟಿಕ್‌ ಅಗಿ ಅನ್‌ ಆಗುತ್ತದೆ. ಈ ಡಾರ್ಕ್‌ ಥೀಮ್‌ ಆನ್‌ ಮಾಡಲು ಈ ಹಂತಗಳನ್ನು ಅನುಸರಿಸಿ.

ಯೂಟ್ಯೂಬ್

ಯೂಟ್ಯೂಬ್ ಅನ್ನು ತೆರೆದ ನಂತರ ಅಲ್ಲಿ ಕಾಣಿಸುವ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ, ಬಳಿಕ 'Appearances' ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ ನಂತರ 'ಡಾರ್ಕ್ ಥೀಮ್' ಆಯ್ಕೆ ಮಾಡಿ.

ಆಂಬಿಯೆಂಟ್ ಮೋಡ್ ಆಫ್ ಮಾಡುವುದು ಹೇಗೆ?

ಆಂಬಿಯೆಂಟ್ ಮೋಡ್ ಆಫ್ ಮಾಡುವುದು ಹೇಗೆ?

ಎಲ್ಲಾ ಸಮಯದಲ್ಲೂ ಆಂಬಿಯೆಂಟ್ ಮೋಡ್‌ನಲ್ಲಿಯೇ ವಿಡಿಯೋ ವೀಕ್ಷಣೆ ಮಾಡಿದರೆ ನಿಮಗೆ ಬೇಸರ ಆಗಬಹುದು. ಆ ವೇಳೆ ನಿಮಗೆ ಆಂಬಿಯೆಂಟ್ ಮೋಡ್‌ ಆಯ್ಕೆ ಬೇಡ ಎಂದರೆ ಅದನ್ನು ಆಫ್‌ ಮಾಡಲು ಕೂಡ ಆಯ್ಕೆ ನೀಡಲಾಗಿದೆ. ಯೂಟ್ಯೂಬ್‌ ತೆರೆದ ನಂತರ ಸೆಟ್ಟಿಂಗ್‌ ಆಯ್ಕೆಗೆ ಹೋಗಿ, ನಂತರ ಅಲ್ಲಿಯೇ ಕಾಣಿಸಿಕೊಳ್ಳುವ 'ಆಂಬಿಯೆಂಟ್ ಮೋಡ್' ಅನ್ನು ಟ್ಯಾಪ್ ಮಾಡಿ ಬಳಿಕ ಅದನ್ನು ನಿಸ್ಕ್ರಿಯಗೊಳಿಸಿ.

ಡಾರ್ಕ್ ಮೋಡ್ ಬ್ಯಾಟರಿ ಅವಧಿ ಹೆಚ್ಚಿಸುತ್ತದೆಯೇ?

ಡಾರ್ಕ್ ಮೋಡ್ ಬ್ಯಾಟರಿ ಅವಧಿ ಹೆಚ್ಚಿಸುತ್ತದೆಯೇ?

ಹೌದು, ಈ ಡಾರ್ಕ್ ಮೋಡ್ ಆಯ್ಕೆ ನಿಮ್ಮ ಡಿವೈಸ್‌ಗಳ ಬ್ಯಾಟರಿ ಶಕ್ತಿಯನ್ನು ಉಳಿಸಿಕೊಳ್ಳಲು ಖಂಡಿತಾ ಸಹಾಯ ಮಾಡುತ್ತದೆ. ಅಂತೆಯೇ ಬ್ಯಾಟರಿಯ ಸರಿಸುಮಾರು 30% ರಿಂದ 50% ರಷ್ಟು ಉಳಿಸಲು ಇದು ಸಹಾಯಕವಾಗಿದೆ ಎಂದು ಯೂಟ್ಯೂಬ್‌ ಸ್ಪಷ್ಟನೆ ನೀಡಿದೆ.

ಆಂಬಿಯೆಂಟ್ ಮೋಡ್‌ನಲ್ಲಿ ವಿಡಿಯೋ ರನ್ ಆಗುತ್ತಿದೆ ಎಂದು ತಿಳಿಯುವುದೇಗೆ?

ಆಂಬಿಯೆಂಟ್ ಮೋಡ್‌ನಲ್ಲಿ ವಿಡಿಯೋ ರನ್ ಆಗುತ್ತಿದೆ ಎಂದು ತಿಳಿಯುವುದೇಗೆ?

ಸಾಮಾನ್ಯವಾಗಿ ನೀವು ಈ ಡಾರ್ಕ್‌ಮೋಡ್‌ ಆಯ್ಕೆಯಲ್ಲಿ ಆಂಬಿಯಟ್‌ ಫೀಚರ್ಸ್‌ ಬಳಕೆ ಮಾಡಲು ಮುಂದಾದರೆ ಅರಂಭದಲ್ಲಿ ಖಂಡಿತಾ ಸ್ವಲ್ಪ ಸಮಯ ಗೊಂದಲಕ್ಕೆ ಒಳಗಾಗುತ್ತೀರ. ಯಾಕೆಂದರೆ ಇದರಲ್ಲಿ ವಿಡಿಯೋ ಮೇಲೇ ಕ್ಲಿಕ್‌ ಮಾಡಿದ ತಕ್ಷಣ ಡಾರ್ಕ್‌ ಮೋಡ್‌ ಆವರಿಸಿಕೊಳ್ಳುತ್ತದೆ.

ವಿಡಿಯೋ

ಇನ್ನು ಯಾವ ವಿಡಿಯೋ ನೋಡಬೇಕು ಎಂದುಕೊಂಡಿದ್ದೀರೋ ಅದರ ಮೇಲೆ ಕ್ಲಿಕ್‌ ಮಾಡಿದ ನಂತರ ವಿಡಿಯೋ ಸುತ್ತಲೂ ಡಾರ್ಕ್‌ ಥೀಮ್‌ ಮೊದಲು ಕಾಣಿಸಿಕೊಳ್ಳುತ್ತದೆ. ಇದಾದ ನಂತರ ನೀವು ವಿಡಿಯೋ ಪ್ಲೇ ಆಗಲು ಮುಂದಾಗುತ್ತಿದ್ದಂತೆ ಮಾಡಲು ಮುಂದಾಗುವಿರೋ ಅ ವಿಡಿಯೋಗೆ ತಕ್ಕ ಬಣ್ಣ ಅಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ವಿಡಿಯೋ ಯೂಟ್ಯೂಬ್‌ನಲ್ಲಿ ಪ್ಲೇ ಆಗುತ್ತಿದೆ ಎಂಬುದನ್ನು ಕಂಡುಕೊಳ್ಳಬಹುದು. ಅದರಂತೆ ಈ ಆಯ್ಕೆಯಲ್ಲಿ ಲೈಟ್ ಥೀಮ್ ಫೀಚರ್ಸ್‌ ಇರುವುದಿಲ್ಲ.

Best Mobiles in India

English summary
Google is updating all its owned apps from time to time. Now that YouTube has introduced Ambient Mode, here's how to use it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X