ಗೂಗಲ್ ಕ್ರೋಮ್ ಮೂಲಕ ಮರೆತ ಪಾಸ್‌ವರ್ಡ್‌ಗಳನ್ನು ಹೊರತೆಗೆಯಿರಿ!

|

ನಾವು ಎಷ್ಟೇ ಬುದ್ದಿವಂತರಾದರೂ ಸಹ, ಹೆಚ್ಚೆಂದರೆ ನಾಲ್ಕರಿಂದ ಐದು ಪಾಸ್‌ವರ್ಡ್‌ಗಳನ್ನು ಮಾತ್ರ ಸರಿಯಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು ಎನ್ನುತ್ತವೆ ಹಲವು ವರದಿಗಳು. ಇದರಿಂದ ಸಕಾಲದಲ್ಲಿ ನಮ್ಮ ಅತ್ಯವಶ್ಯಕ ವೆಬ್‌ಸೈಟ್‌ಗೆ ಲಾಗಿನ್ ಆಗಲು ಸಾಧ್ಯವಾಗದೇ ಇರುವ ಪರಿಸ್ಥಿತಿ ಎದುರಾಗಬಹುದು. ಪ್ರತಿಯೊಂದು ವೆಬ್‌ಸೈಟ್‌ಗೂ ಹೊಸ ಹೊಸ ಪಾಸ್‌ವರ್ಡ್ ಇಡಬೇಕಾದ ಈ ಆನ್‌ಲೈನ್ ಯುಗದಲ್ಲಿ ಹತ್ತಾರು ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳಬೇಕಾದ ಇಂತಹ ಸಮಸ್ಯೆ ಪ್ರತಿಯೋರ್ವರಿಗೂ ಎದುರಾಗಿರುತ್ತದೆ ಅಲ್ಲವೇ?.

ಗೂಗಲ್ ಕ್ರೋಮ್ ಮೂಲಕ ಮರೆತ ಪಾಸ್‌ವರ್ಡ್‌ಗಳನ್ನು ಹೊರತೆಗೆಯಿರಿ!

ಆದರೆ, ಇಂತಹ ಪರಿಸ್ಥಿಯಲ್ಲಿ ಚಿಂತಿಸಬೇಡಿ. ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಕ್ರೋಮ್ ಮೂಲಕ ಆ ಪಾಸ್‌ವರ್ಡ್ ಅನ್ನು ಕ್ಷಣ ಮಾತ್ರದಲ್ಲಿ ತಿಳಿಯಬಹುದು. ಇದಕ್ಕಾಗಿ ನೀವು ಯಾವುದಾದರೂ ವೆಬ್‌ಸೈಟ್‌ಗೆ ಲಾಗಿನ್ ಆದಾಗ ನಿಮ್ಮ ಪಾಸ್‌ವರ್ಡ್ ಸೇವ್ ಮಾಡಬೇಕೆ? ಎಂದು ಕ್ರೋಮ್ ಬ್ರೌಸರ್ ಕೇಳಿದಾಗ 'ಯೆಸ್' ಎಂದು ಪಾಸ್‌ವರ್ಡ್ ಸೇವ್ ಮಾಡಿರುವುದು ಮುಖ್ಯ. ಹೀಗೆ ಮಾಡಿದ್ದರೆ, ನೀವು ಯಾವುದೇ ಪಾಸ್‌ವರ್ಡ್ ಅನ್ನು ಮರೆತರೂ ಸಹ ಅದನ್ನು ಕ್ರೋಮ್ ಮೂಲಕ ಕ್ಷಣಾರ್ಧದಲ್ಲಿ ಮತ್ತೆ ತೆಗೆದುಕೊಳ್ಳಬಹುದು.

ಗೂಗಲ್ ಕ್ರೋಮ್ ಮೂಲಕ ಮರೆತ ಪಾಸ್‌ವರ್ಡ್‌ಗಳನ್ನು ಹೊರತೆಗೆಯಿರಿ!

ಕ್ರೋಮ್ ಬೌಸರ್‌ನ ಬಲಭಾಗದಲ್ಲಿ ಮೆನು ಕ್ಲಿಕ್ ಮಾಡಿ ಸೆಟ್ಟಿಂಗ್ಸ್ ಆಯ್ಕೆ ಮಾಡಿದಾಗ ಅಲ್ಲಿ ನಿಮಗೆ ಪಾಸ್‌ವರ್ಡ್ಸ್ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಅಲ್ಲಿ ವೆಬ್‌ಸೈಟ್, ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಹೀಗೆ ನೀವು ಸೇವ್ ಮಾಡಿರುವಪಟ್ಟಿ ಅಲ್ಲಿ ಕಾಣಿಸಿಕೊಳ್ಳುತ್ತದೆ. ಈಗ ನೀವು ಯಾವ ವೆಬ್‌ಸೈಟ್ ಪಾಸ್‌ವರ್ಡ್ ಬೇಕೋ ಆ ವೆಬ್‌ಸೈಟ್ ಐಕಾನ್ ಕ್ಲಿಕ್ ಮಾಡಿ. ಅದು ಕಂಪ್ಯೂಟರ್ ಲಾಗಿನ್ ಪಾಸ್‌ವರ್ಡ್ ಕೇಳುತ್ತದೆ. ಲಾಗಿನ್ ಪಾಸ್‌ವರ್ಡ್ ನಮೂದಿಸಿದ ಕೂಡಲೇ ಸೇವ್ ಮಾಡಿರುವ ಪಾಸ್‌ವರ್ಡ್ ಡಿಸ್‌ಪ್ಲೇ ಆಗುತ್ತದೆ.

ಗೂಗಲ್ ಕ್ರೋಮ್ ಮೂಲಕ ಮರೆತ ಪಾಸ್‌ವರ್ಡ್‌ಗಳನ್ನು ಹೊರತೆಗೆಯಿರಿ!

ಇಷ್ಟು ಸುಲಭವಾಗಿ ಮರೆತ ಪಾಸ್‌ವರ್ಡ್ ಅನ್ನು ವಾಪಸ್‌ ತೆಗೆದುಕೊಳ್ಳಬಹುದಾದ ಸೇವೆಯಿಂದ ಅಪಾಯ ಕೂಡ ಹೆಚ್ಚಿದೆ. ನಿಮ್ಮದೇ ಕಂಪ್ಯೂಟರ್ ಆಗಿದ್ದರೆ ಮಾತ್ರ ಕ್ರೋಮ್ ಬ್ರೌಸರ್‌ನಲ್ಲಿ (ಕ್ರೋಮ್ ಬ್ರೌಸರ್ ಕೇಳಿದಾಗ) ಈ ರೀತಿ ಪಾಸ್‌ವರ್ಡ್ ಸೇವ್ ಮಾಡುವುದಾದರೆ ಸಮಸ್ಯೆ ಇಲ್ಲ. ಆದರೆ ಇನ್ನೊಬ್ಬರ ಕಂಪ್ಯೂಟರ್ ಬಳಸುವುದಾದರೆ ಯಾವತ್ತೂ ಪಾಸ್‌ವರ್ಡ್ ಸೇವ್ ಮಾಡಲು ಹೋಗಬೇಡಿ. ಏಕೆಂದರೆ, ನಿಮ್ಮ ಪಾಸ್‌ವರ್ಡ್ ಅನ್ನು ಅವರೂ ಸಹ ಸುಲಭವಾಗಿ ನೋಡಬಹುದಾದ ಆಯ್ಕೆಯು ಈ ಕ್ರೋಮ್‌ನಲ್ಲಿರುವುದು ಸಮಸ್ಯೆಯಾಗಬಹುದು.

ಗೂಗಲ್ ಕ್ರೋಮ್ ಮೂಲಕ ಮರೆತ ಪಾಸ್‌ವರ್ಡ್‌ಗಳನ್ನು ಹೊರತೆಗೆಯಿರಿ!

ಇನ್ನು ಕ್ರೋಮ್ ಬ್ರೌಸರ್‌ನಲ್ಲಿ ಸೇವ್ ಮಾಡಿದ ಪಾಸ್‌ವರ್ಡ್‌ಗಳು ಯಾವುದು ಎಂದು ನೋಡಿ ಅವುಗಳನ್ನು ಡಿಲೀಟ್ ಮಾಡಬಹುದಾದ ಆಯ್ಕೆ ಕೂಡ ಸುಲಭವಿದೆ. ಸೆಟ್ಟಿಂಗ್ಸ್ ಆಯ್ಕೆ ಮಾಡಿದಾಗ ಅಲ್ಲಿ ನಿಮಗೆ ಪಾಸ್‌ವರ್ಡ್ಸ್ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಅಲ್ಲಿ ವೆಬ್‌ಸೈಟ್, ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಹೀಗೆ ನೀವು ಸೇವ್ ಮಾಡಿರುವ ಪಟ್ಟಿಯಬಲಭಾಗದಲ್ಲಿ ಮೆನು (ಮೂರು ಚುಕ್ಕಿ) ಕ್ಲಿಕ್ ಮಾಡಿ ಸೇವ್ ಆಗಿರುವ ಪಾಸ್‌ವರ್ಡ್ ರಿಮೂವ್ ಸಹ ಮಾಡಬಹುದು. ಇದು ಅತ್ಯಗತ್ಯ ಕೂಡ ಎಂಬುದನ್ನು ಮರೆಯಬೇಡಿ.

ಶಿಯೋಮಿಯ 20000mAh ಪವರ್‌ಬ್ಯಾಂಕ್ ನೋಡಿ ಮಾರುಕಟ್ಟೆ ಸುಸ್ತು!ಶಿಯೋಮಿಯ 20000mAh ಪವರ್‌ಬ್ಯಾಂಕ್ ನೋಡಿ ಮಾರುಕಟ್ಟೆ ಸುಸ್ತು!

Best Mobiles in India

English summary
Click on the Chrome menu button, represented by three vertically-aligned dots and located in the upper right-hand corner of the screen. Chrome's Settings interface should now be displayed. Click on passwords, found within the People section. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X