ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕ್ರಿಕೆಟ್ ಮ್ಯಾಚ್ ಲೈವ್ ಆಗಿ ನೋಡಿ

Posted By:

ಯುಸಿ ವೆಬ್ ಬ್ರೌಸರ್ ತನ್ನ ಆಲ್ ಇನ್ ಕ್ರಿಕೆಟ್ ಅಪ್ಲಿಕೇಶನ್ "ಯುಸಿ ಕ್ರಿಕೆಟ್" ಅನ್ನು ಅಭಿವೃದ್ಧಿಪಡಿಸಿದೆ. ಆಂಡ್ರಾಯ್ಡ್‌ಗಾಗಿ ಯುಸಿ ಬ್ರೌಸರ್‌ನ ಹೋಮ್ ಪೇಜ್‌ನಲ್ಲಿ ಅಪ್ಲಿಕೇಶನ್ ಲಭ್ಯವಿದೆ.

ಯಸಿ ಕ್ರಿಕೆಟ್ ಹೊಸ ಬಳಕೆದಾರ ಇಂಟರ್ಫೇಸ್ ಅನ್ನು ಪರಿಚಯಿಸಿದ್ದು ಇದು ಕ್ರಿಕೆಟ್ ಅಭಿಮಾನಿಗಳಿಗೆ ನಿರಂತರ ಕ್ರಿಕೆಟ್ ಸುದ್ದಿಯನ್ನು ಬಿತ್ತರಿಸಲಿದೆ. ತನ್ನ ಆರಂಭ ಇಂಟರ್ಫೇಸ್ ಮತ್ತು ಆಕರ್ಷಕ ವಿನ್ಯಾಸಗಳಿಂದ ಯುಸಿ ಕ್ರಿಕೆಟ್ ಯುವ ಜನಾಂಗದಲ್ಲಿ ಹೆಚ್ಚು ಜನಪ್ರಿಯ ಎಂದೆನಿಸಿದೆ. ಲೈವ್ ಸ್ಕೋರ್‌ಗಳು, ಪ್ರಿವ್ಯೂಗಳು, ಕಮೆಂಟ್ರಿಗಳು, ಸಂದರ್ಶನಗಳು, ಸ್ಟೇಟಸ್, ಫೋಟೋಸ್, ವೀಡಿಯೊಗಳನ್ನು ಇದು ಒಳಗೊಂಡಿದೆ.

ಯುಸಿ ಬ್ರೌಸರ್ ಭಾರತದ ಹೆಚ್ಚು ಜನಪ್ರಿಯ ಮೊಬೈಲ್ ಬ್ರೌಸರ್ ಆಗಿದ್ದು, ಯುಸಿ ಕ್ರಿಕೆಟ್ ಅನ್ನು ಅಪ್‌ಡೇಟ್ ಮಾಡಿದೆ. ರಿಯಲ್ ಟೈಮ್ ನೋಟಿಫಿಕೇಶನ್ ಫೀಚರ್ ಅನ್ನು ಇದು ಹೊಂದಿದ್ದು, ಇದು ಹಿನ್ನಲೆಯಲ್ಲಿ ಚಾಲನೆಯಲ್ಲಿರುತ್ತದೆ ಮತ್ತು ಇತ್ತೀಚಿನ ಸ್ಕೋರ್‌ಗಳನ್ನು ಅಪ್‌ಡೇಟ್ ಮಾಡುತ್ತದೆ.

ಇನ್ನು ರಿಮೈಂಡರ್ ಫೀಚರ್ ಅನ್ನು ಒಳಗೊಂಡು ಈ ಅಪ್ಲಿಕೇಶನ್ ಬಂದಿದ್ದು ಪ್ರತೀ ಪಂದ್ಯಕ್ಕೂ ಮುನ್ನ ಅಧಿಸೂಚನೆಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ಇದು ಕಳುಹಿಸುತ್ತದೆ. ಈ ಅಧಿಸೂಚನೆ ಹಿನ್ನಲೆಯಲ್ಲಿ ಚಾಲನೆಯಾಗುತ್ತಿದ್ದು ಯಾವುದೇ ಕ್ಷಣವನ್ನು ನೀವು ಮಿಸ್ ಮಾಡಲು ಇನ್ನು ಸಾಧ್ಯವಿಲ್ಲ. ಇನ್ನು ಯುಸಿ ಕ್ರಿಕೆಟ್ ಹೊಸ ಸೇವೆಯಾದ 'ಕ್ರಿಕೆಟ್ ಗೆಸ್ಸಿಂಗ್ ಗೇಮ್' ಅನ್ನು ಒಳಗೊಂಡಿದ್ದು ಇದು ಮ್ಯಾಚ್‌ನ ಪ್ರತೀ ವಿಜಯಿಗಳನ್ನು ಆರಿಸಲು ಸಹಾಯ ಮಾಡುತ್ತದೆ ಮತ್ತು ಆಕರ್ಷಕ ಬಹುಮಾನಗಳನ್ನು ಗೆಲ್ಲಲು ಪಾಯಿಂಟ್‌ಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಯುಸಿ ಬ್ರೌಸರ್ ಅನ್ನು ಡೌನ್‌ಲೋಡ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯುವರಾಜ್ ಸಿಂಗ್

ಯುಸಿ ಬ್ರೌಸರ್ ಅಂಬಾಸಿಡರ್

ಯುವರಾಜ್ ಸಿಂಗ್ ಯುಸಿ ಬ್ರೌಸರ್ ಅಂಬಾಸಿಡರ್ ಆಗಿ ಯುವರಾಜ್ ಸಿಂಗ್ ಮಿಂಚಿದ್ದಾರೆ. ಯುಸಿ ಕ್ರಿಕೆಟ್‌ನ ನಿಯಮಿತ ಬಳಕೆದಾರರಾಗಿರುವ ಯುವರಾಜ್ ಸಾಮಾಜಿಕ ಮಾಧ್ಯಮಗಳಲ್ಲಿ ಸಲಹೆಗಳನ್ನು ನೀಡುತ್ತಿರುತ್ತಾರೆ.

ಸಂಪೂರ್ಣ ಮಾಹಿತಿ

ಸಂಪೂರ್ಣ ಮಾಹಿತಿ

ಸಂಪೂರ್ಣ ಮಾಹಿತಿ ಲೈವ್ ಸ್ಕೋರ್ಸ್, ಪ್ರಿವ್ಯೂಗಳು, ಮುಂಬರಲಿರುವ ಪಂದ್ಯಗಳು, ಕಮೆಂಟ್ರಿಗಳು, ಸಂದರ್ಶನಗಳು ಹೀಗೆ ಕ್ರಿಕೆಟ್ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ ಮತ್ತು ಬಳಕೆದಾರರು ಇದನ್ನು ಆರಾಮವಾಗಿ ಬಳಸಬಹುದಾಗಿದೆ.

ನಿಮಗೆ ಸಾಥ್ ನೀಡುತ್ತದೆ

ನಿಮಗೆ ಸಾಥ್ ನೀಡುತ್ತದೆ

ಕ್ರಿಕೆಟ್ ಪಂದ್ಯವನ್ನು ಮಿಸ್ ಮಾಡದೇ ನೋಡಬೇಕೆಂಬ ಹೆಚ್ಚು ತುಮುಲ ನಿಮ್ಮಲ್ಲಿ ಇದೆ ಎಂದಾದಲ್ಲಿ ಯುಸಿ ಬ್ರೌಸರ್ ನಿಮಗೆ ಸಾಥ್ ನೀಡುತ್ತದೆ. ಹಿನ್ನಲೆಯಲ್ಲಿ ಅಧಿಸೂಚನೆ ಫೀಚರ್ ಚಾಲನೆಯಾಗುತ್ತಿದ್ದು ಸ್ಕೋರ್ ಮತ್ತು ಫಲಿತಾಂಶಗಳನ್ನು ಕುರಿತು ಇದು ಅಪ್‌ಡೇಟ್ ಮಾಡುತ್ತಿರುತ್ತದೆ.

ಕ್ರಿಕೆಟ್ ಥೀಮ್ ಉಳ್ಳ ಎಮೋಟಿಕಾನ್‌

ಕ್ರಿಕೆಟ್ ಥೀಮ್ ಉಳ್ಳ ಎಮೋಟಿಕಾನ್‌

ಕ್ರಿಕೆಟ್ ಥೀಮ್ ಉಳ್ಳ ಎಮೋಟಿಕಾನ್‌ಗಳ ಮೂಲಕ ಜಗತ್ತಿನಾದ್ಯಂತ ಪರಸ್ಪರ ಸಂವಹನವನ್ನು ಮಾಡಿಕೊಳ್ಳಬಹುದಾಗಿದೆ.

ಕ್ರಿಕೆಟ್ ಗೆಸ್ಸಿಂಗ್ ಗೇಮ್

ಕ್ರಿಕೆಟ್ ಗೆಸ್ಸಿಂಗ್ ಗೇಮ್

ಕ್ರಿಕೆಟ್ ಗೆಸ್ಸಿಂಗ್ ಗೇಮ್ ಮೂಲಕ ಬಳಕೆದಾರರು ಪಾಯಿಂಟ್‌ಗಳನ್ನು ಗಳಿಸಬಹುದು ಮತ್ತು ಆಕರ್ಷಕ ಬಹುಮಾನಗಳನ್ನು ಗಳಿಸುವ ಅವಕಾಶ ಕೂಡ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The excitement for South Africa touring India, UCWeb browser has updated its all-in-one cricket application "UC-Cricket". The application will be avilable on the homepage of UC Browser for Android.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot