ವಾಟ್ಸಾಪ್‌ನ ಈ 15 ಸಲಹೆಗಳ ಮಹತ್ವವೇನು?
ವಾಟ್ಸಾಪ್ ಅನ್ನು ನಿಮ್ಮ ಫೋನ್‌ನಲ್ಲಿ ಬಳಸುವಂತೆಯೇ ಕಂಪ್ಯೂಟರ್‌ನಲ್ಲೂ ಬಳಸಬಹುದು ಎಂಬ ಸಂಗತಿ ಎಲ್ಲರಿಗೂ ತಿಳಿದಿರುವಂಥಾದ್ದೇ!! ವಾಟ್ಸಾಪ್‌ನ ವೆಬ್ ಫೀಚರ್ ಕಂಪ್ಯೂಟರ್‌ನಲ್ಲೂ ತನ್ನ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಕ್ರಿಯಾತ್ಮಕತೆಯನ್ನು ಪಡೆದುಕೊಂಡಿದೆ. ಹಾಗಿದ್ದರೆ ಕಂಪ್ಯೂಟರ್‌ನಲ್ಲೂ ವಾಟ್ಸಾಪ್ ಬಳಸಬೇಕೆಂಬ ನಿಮ್ಮ ಆಸೆಯನ್ನು ಈಡೇರಿಸಲೆಂದೇ ಇಂದಿನ ಈ ಲೇಖನ.
ಓದಿರಿ: ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?
ಹೌದು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್ ಅನ್ನು ಕಾರ್ಯನಿರ್ವಹಿಸುವಂತೆ ಮಾಡುವ ಸರಳ 10 ಟಿಪ್ಸ್‌ಗಳೊಂದಿಗೆ ನಾವು ಬಂದಿದ್ದು ಈ ಟಿಪ್ಸ್‌ಗಳು ಯಾವುದೇ ತೊಡಕಿಲ್ಲದೆ ನಿಮ್ ವಾಟ್ಸಾಪ್ ಆವೃತ್ತಿಯನ್ನು ಡೆಸ್ಕ್‌ಟಾಪ್‌ನಲ್ಲಿ ಪ್ರದರ್ಶನಗೊಳ್ಳುವಂತೆ ಮಾಡುತ್ತದೆ. ಹಾಗಿದ್ದರೆ ತಡ ಮಾಡದೇ ಕೆಳಗಿನ ಸ್ಲೈಡರ್‌ಗಳಲ್ಲಿ ಇದನ್ನು ಕುರಿತ ಸಂಪೂರ್ಣ ಮಾಹಿತಿಯನ್ನು ಅರಿತುಕೊಳ್ಳಿ.

ಸಲಹೆ: 1
ವಾಟ್ಸಾಪ್ ಖಾತೆಯನ್ನು ಪರಿಶೀಲಿಸಲು ಮೊಬೈಲ್ ಫೋನ್ ನಿಮ್ಮ ಬಳಿ ಬೇಕು. ಆಂಡ್ರಾಯ್ಡ್ ಎಮ್ಯುಲೇಟರ್ ಅಪ್ಲಿಕೇಶನ್ ಅನ್ನು ನೀವು ಹೊಂದಿರಬೇಕು.

ಸಲಹೆ: 2
ಕಂಪ್ಯೂಟರ್‌ನಲ್ಲಿ ಬ್ಲ್ಯೂಸ್ಟಾಕ್ಸ್ ಆಪ್ ಪ್ಲೇಯರ್ ಡೌನ್‌ಲೋಡ್ ಮಾಡಿ

ಸಲಹೆ: 3
ಸೆಟಪ್ ಫೈಲ್ ಬಳಸಿ ಅದನ್ನು ಇನ್‌ಸ್ಟಾಲ್ ಮಾಡಿ. ಅಪ್ಲಿಕೇಶನ್ ಸ್ಟೋರ್ ಪ್ರವೇಶ ಮತ್ತು ಅಪ್ಲಿಕೇಶನ್ ಅಧಿಸೂಚನೆಗಳನ್ನು ಕುರಿತು ಬ್ಲ್ಯೂಸ್ಟಾಕ್ಸ್ ಕೇಳುತ್ತದೆ.

ಸಲಹೆ: 4
ಪೂರ್ಣಗೊಳ್ಳಲು ಇನ್‌ಸ್ಟಾಲೇಶನ್‌ಗಾಗಿ ಕಾಯಿರಿ. ಕೊನೆಯ ಹಂತದಲ್ಲಿ ಬ್ಲ್ಯೂಸ್ಟಾಕ್ಸ್ ಪೂರ್ಣ ಪರದೆ ಮೋಡ್‌ನಲ್ಲಿ ಚಾಲನೆಗೊಳ್ಳುತ್ತದೆ.

ಸಲಹೆ: 5
ಬ್ಲ್ಯೂಸ್ಟಾಕ್ಸ್ ಅಪ್ಲಿಕೇಶನ್ ಪ್ಲೇಯರ್ ರನ್ ಆಗಲು ಬಿಡಿ. ನಿಮ್ಮ ಬ್ರೌಸರ್‌ಗೆ ಹೋಗಿ ಮತ್ತು ವಾಟ್ಸಾಪ್ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿ.

ಸಲಹೆ: 6
ನಿಮ್ಮ ಪಿಸಿಯಲ್ಲಿ ಸೇವ್ ಆಗಿರುವ ವಾಟ್ಸಾಪ್.ಎಪಿಕೆ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ. ಬ್ಲ್ಯೂಸ್ಟಾಕ್ ಆಪ್ ಪ್ಲೇಯರ್ ನ್ನು ತನ್ನಷ್ಟಕ್ಕೆ ಇದು ಇನ್‌ಸ್ಟಾಲ್ ಮಾಡಿಕೊಳ್ಳುತ್ತದೆ.

ಸಲಹೆ: 7
ಬ್ಲ್ಯೂಸ್ಟಾಕ್ಸ್‌ನಲ್ಲಿ, ನೀವು ಇನ್‌ಸ್ಟಾಲ್ ಮಾಡಿರುವ ಅಪ್ಲಿಕೇಶನ್‌ಗಳನ್ನು ಕಾಣುತ್ತೀರಿ. ವಾಟ್ಸಾಪ್ ಹುಡುಕಿ ಮತ್ತು ಲಾಂಚ್ ಮಾಡಿ.

ಸಲಹೆ: 8
ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು ಪರಿಶೀಲಿಸಿ ಕ್ಲಿಕ್ ಮಾಡಿ.

ಸಲಹೆ: 9
5 ನಿಮಿಷ ಕಾಯಿರಿ ಮತ್ತು ಸ್ವಯಂಚಾಲಿತವಾಗಿ ನಿಮ್ಮ ಎಸ್‌ಎಮ್‌ಎಸ್ ಬಳಸಿಕೊಂಡು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ.

ಸಲಹೆ: 10
5 ನಿಮಿಷಗಳ ನಂತರ, ಧ್ವನಿ ಪರಿಶೀಲನೆಗಾಗಿ ವಾಟ್ಸಾಪ್ ನಿಮಗೆ ಆಯ್ಕೆಯನ್ನು ಒದಗಿಸುತ್ತದೆ. ಕಾಲ್ ಮಿ ಕ್ಲಿಕ್ ಮಾಡಿ.

ಸಲಹೆ: 11
ನಿಮಗೆ ಫೋನ್ ಕರೆ ಬರುತ್ತದೆ. ಇದಕ್ಕೆ ಉತ್ತರಿಸಿ ಪರಿಶೀಲನೆ ಕೋಡ್ ಅನ್ನು ನಿಮಗಿಲ್ಲಿ ಪಡೆಯಬಹುದು.

ಸಲಹೆ: 12
ವಾಟ್ಸಾಪ್‌ನಲ್ಲಿ ಪರಿಶೀಲನೆ ನಮೂದಿಸಿ ನಿಮಗೆ ಮುಂದುವರಿಯಬಹುದು.

ಸಲಹೆ: 13
ಈ ವಿಧಾನವನ್ನು ನೀವು ಅನುಸರಿಸುತ್ತಿದ್ದಲ್ಲಿ ನಿಮ್ಮೆಲ್ಲಾ ಸಂಪರ್ಕಗಳು ವಾಟ್ಸಾಪ್‌ನಲ್ಲಿ ಕಂಡುಬರುತ್ತದೆ. ನೀವು ಸ್ವೀಕರಿಸಿದ ಯಾವುದೇ ಸಂದೇಶಕ್ಕೆ ಉತ್ತರಿಸಬಹುದು.

ಸಲಹೆ: 14
ಸಂಪರ್ಕಗಳ ಬಲ ಮೇಲ್ಭಾಗದಲ್ಲಿ ಬರುವ ಮೂರು ಡಾಟ್ ಐಕಾನ್‌ಗಳನ್ನು ಕ್ಲಿಕ್ ಮಾಡುವ ಮೂಲಕ ಸಂಪರ್ಕಗಳನ್ನು ವೈಯಕ್ತಿಕವಾಗಿ ನಿಮಗೆ ಸೇರಿಸಬಹುದು.

ಸಲಹೆ: 15
ಯಾವುದೇ ಗುಂಪಿನಲ್ಲಿ ನೀವಿದ್ದರೆ ಪಿಸಿಯಲ್ಲಿರುವ ವಾಟ್ಸಾಪ್‌ನಲ್ಲಿ ನೀವು ಕಂಡುಬರುವುದಿಲ್ಲ. ನಿಮ್ಮನ್ನು ಗುಂಪಿಗೆ ಪುನಃ ಸೇರಿಸಲು ಗ್ರೂಪ್ ಅಡ್ಮಿನ್ ಅನ್ನು ನೀವು ಕೇಳಬೇಕಾಗುತ್ತದೆ.


Click it and Unblock the Notifications








