ಹೆಚ್‌ಪಿ ಕಂಪೆನಿಯಿಂದ ಎರಡು ಹೊಸ ಲ್ಯಾಪ್‌ಟಾಪ್‌ ಅನಾವರಣ! ಬೆಲೆ ಎಷ್ಟು ಗೊತ್ತಾ?

|

ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಹೆಚ್‌ಪಿ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ. ತನ್ನ ಆಕರ್ಷಕ ಲ್ಯಾಪ್‌ಟಾಪ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಈಗಾಗಲೇ ಹಲವು ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ಸ್ಪೆಕ್ಟರ್ 16 x360 ಮತ್ತು ಸ್ಪೆಕ್ಟರ್ 13.5 x360 ಲ್ಯಾಪ್‌ಟಾಪ್‌ಗಳನ್ನು ಲಾಂಚ್‌ ಮಾಡಿದೆ. ಈ ಎರಡೂ ಲ್ಯಾಪ್‌ಟಾಪ್‌ಗಳು 3:2 ರಚನೆಯ ಅನುಪಾತವನ್ನು ಹೊಂದಿವೆ.

ಹೆಚ್‌ಪಿ

ಹೌದು, ಹೆಚ್‌ಪಿ ಕಂಪೆನಿ ಭಾರತದಲ್ಲಿ ಹೆಚ್‌ಪಿ ಸ್ಪೆಕ್ಟರ್ 360 16 ಇಂಚು ಮತ್ತು ಸ್ಪೆಕ್ಟರ್ x360 ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು 91% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು ಅಡಾಪ್ಟಿವ್ ಇಂಟೆಲಿಜೆನ್ಸ್ ಹೊಂದಿರುವ ಸ್ಕ್ರೀನ್‌ಗಳನ್ನು ಹೊಂದಿವೆ. HP ಸ್ಪೆಕ್ಟರ್ ಲ್ಯಾಪ್‌ಟಾಪ್‌ಗಳ ಈ ಸರಣಿಯು ಪರಿಸರ ಸ್ನೇಹಿಯಾಗಿದ್ದು, ಅಲ್ಯೂಮಿನಿಯಂ ಮತ್ತು ಒಶಿಯನ್‌-ಬೌಂಡ್ ಪ್ಲಾಸ್ಟಿಕ್ ಅನ್ನು ಬಳಸುತ್ತವೆ. ಇನ್ನುಳಿದಂತೆ ಈ ಎರಡು ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೀಚರ್ಸ್‌ ಹೇಗಿದೆ?

ಫೀಚರ್ಸ್‌ ಹೇಗಿದೆ?

HP ಸ್ಪೆಕ್ಟರ್ 16 ಲ್ಯಾಪ್‌ಟಾಪ್‌ 16 ಇಂಚಿನ 4K OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ ಅನ್ನು ನೀಡಲಿದೆ. ಆದರೆ HP ಸ್ಪೆಕ್ಟರ್ x360 13.5 ಲ್ಯಾಪ್‌ಟಾಪ್‌ 13.5 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 1080p ವೀಡಿಯೊ ರೆಕಾರ್ಡಿಂಗ್‌ಗೆ ಬೆಂಬಲಿಸುವ 5MP ವೆಬ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ ಇಂಟೆಲ್ ಇವೊ ಪ್ರಮಾಣೀಕರಣವನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ 13.45 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡಲಿದೆ.

ಲ್ಯಾಪ್‌ಟಾಪ್‌

ಇನ್ನು ಈ ಎರಡೂ ಲ್ಯಾಪ್‌ಟಾಪ್‌ಗಳನ್ನು 30 ನಿಮಿಷಗಳಲ್ಲಿ 50% ಚಾರ್ಜ್‌ ಮಾಡಬಹುದು ಎಂದು ಹೆಚ್‌ಪಿ ಕಂಪೆನಿ ಹೇಳಿದೆ. ಇವುಗಳು "ಇನ್-ಬ್ಯಾಗ್ ಡಿಟೆಕ್ಷನ್" ಒಳಗೊಂಡಿದ್ದು, ಲ್ಯಾಪ್‌ಟಾಪ್‌ಗಳನ್ನು ಬ್ಯಾಗ್‌ಗಳೊಳಗೆ ಇರಿಸಿದಾಗ ಅತಿಯಾಗಿ ಬಿಸಿಯಾಗುವುದನ್ನು ತಪ್ಪಿಸಲಿವೆ. ಜೊತೆಗೆ ಈ ಲ್ಯಾಪ್‌ಟಾಪ್‌ಗಳು "ಅಡಾಪ್ಟಿವ್ ಬ್ಯಾಟರಿ ಆಪ್ಟಿಮೈಜರ್" ನೊಂದಿಗೆ ಬರುತ್ತವೆ, ಇದು ಬ್ಯಾಟರಿ ತಾಪಮಾನ, ಬ್ಯಾಟರಿ-ಚಾರ್ಜಿಂಗ್ ಸ್ಟೇಟಸ್‌ ಮತ್ತು ಬ್ಯಾಟರಿ ಹೆಲ್ತ್‌ ಅನ್ನು ಕಾಪಾಡಲು ಬಳಕೆಯ ಸಮಯವನ್ನು ಮೇಲ್ವಿಚಾರಣೆ ಮಾಡಲಿದೆ.

ಲ್ಯಾಪ್‌ಟಾಪ್‌

ಇದಲ್ಲದೆ HP x360 ಲ್ಯಾಪ್‌ಟಾಪ್‌ "HP ಆಟೋ ಫ್ರೇಮ್" ಕ್ಯಾಮೆರಾ ಹೊಂದಿದೆ. ಇದು ಬಳಕೆದಾರರನ್ನು ಯಾವುದೇ ಫ್ರೇಮ್‌ನಲ್ಲಿದ್ದರೂ ಗುರುತಿಸಲಿದೆ. ಅಲ್ಲದೆ ಬಳಕೆದಾರರಿಗೆ AI- ಆಧಾರಿತ ಗೌಪ್ಯತೆ ಎಚ್ಚರಿಕೆಗಳನ್ನು ಸಹ ನೀಡಲಿದೆ. ಇದರಿಂದ ಯಾರಾದರೂ ನಿಮ್ಮ ಹಿಂದೆ ನಿಂತಾಗ ಲ್ಯಾಪ್‌ಟಾಪ್ ಸ್ಕ್ರೀನ್‌ ಬ್ಲರ್‌ ಮಾಡಲಿದೆ. ಹಾಗೆಯೇ ಈ ಲ್ಯಾಪ್‌ಟಾಪ್‌ಗಳು ನೀವು ದೂರ ಹೋಗುವಾಗ ಲಾಕ್ ಆಗುವ ಮತ್ತು ನೀವು ಸಮೀಪಿಸಿದಾಗ ಎಚ್ಚರಗೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೆಚ್‌ಪಿ ಸ್ಪೆಕ್ಟರ್ 13.5 x360 ಲ್ಯಾಪ್‌ಟಾಪ್‌ 1,29,999ರೂ ಬೆಲೆಯನ್ನು ಹೊಂದಿದೆ. ಇನ್ನು HP ಸ್ಪೆಕ್ಟರ್ 16 x360 ಲ್ಯಾಪ್‌ಟಾಪ್‌ 1,39,999ರೂ ಬೆಲೆಯಲ್ಲಿ ಬರಲಿದೆ. ಈ ಎರಡು ಲ್ಯಾಪ್‌ಟಾಪ್‌ಗಳು ಪ್ರಸ್ತುತ HP ವೆಬ್‌ಸೈಟ್, ಆಯ್ದ HP ವರ್ಲ್ಡ್ ಸ್ಟೋರ್‌ಗಳು, ಕ್ರೋಮಾ ಮತ್ತು ರಿಲಯನ್ಸ್ ಸ್ಟೋರ್‌ಗಳ ಮೂಲಕ ಮುಂಗಡ ಬುಕಿಂಗ್‌ಗಳಿಗೆ ಲಭ್ಯವಿದೆ.

Best Mobiles in India

Read more about:
English summary
HP Spectre 13.5 x360 and Spectre 16 laptops launched in Indian market

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X