ಹೆಚ್ ಪಿಯಿಂದ ಪಾಕೆಟ್ ಫೋಟೋ ಪ್ರಿಂಟರ್ ಲಾಂಚ್

ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ ಪಿ ತನ್ನ ಸ್ಪೋರ್ಕೆಟ್ ಎನ್ನುವ ಪಾಕೆಟ್ ಸೈಜ್ ಫೋಟೊ ಪ್ರಿಂಟರ್ ಅನ್ನು ಲಾಂಚ್ ಮಾಡಿದ್ದು, ರೂ. 8,999ಕ್ಕೆ ಇದು ಲಭ್ಯವಿದೆ.

By Lekhaka
|

ಇಂದಿನ ದಿನದಲ್ಲಿ 1ಸ್ಮಾರ್ಟ್ ಫೋನ್ ಎನ್ನುವುದು ಅವಶ್ಯಕ ಮತ್ತು ಪ್ರಮುಖವಾದ ವಸ್ತುಗಳಲ್ಲಿ ಒಂದಾಗಿದೆ. ಇಡೀ ವಿಶ್ವವೇ ಇಂದು ಸ್ಮಾರ್ಟ್ ಫೋನ್ ಬಳಕೆಗೆ ಮುಂದಾಗಿದೆ. ಜಾಗತೀಕವಾಗಿ ಪಿಸಿ ಮತ್ತು ಪ್ರಿಂಟರ್ ಸೇರಿದಂತೆ ಹಾರ್ಡ್ ವೇರ್ ಗಳನ್ನು ನಿರ್ಮಿಸುವ ಹೆಚ್ ಪಿ ಕಂಪನಿಯೂ ಸ್ಮಾರ್ಟ್ ಫೋನಿನೊಂದಿಗೆ ಜೋಡಿಸಿ ಪ್ರಿಂಟ್ ತೆಗೆಯುವ ಪ್ರಿಂಟರ್ ಅನ್ನು ಲಾಂಚ್ ಮಾಡಿದೆ.

ಹೆಚ್ ಪಿಯಿಂದ ಪಾಕೆಟ್ ಫೋಟೋ ಪ್ರಿಂಟರ್ ಲಾಂಚ್

ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ ಪಿ ತನ್ನ ಸ್ಪೋರ್ಕೆಟ್ ಎನ್ನುವ ಪಾಕೆಟ್ ಸೈಜ್ ಫೋಟೊ ಪ್ರಿಂಟರ್ ಅನ್ನು ಲಾಂಚ್ ಮಾಡಿದ್ದು, ರೂ. 8,999ಕ್ಕೆ ಇದು ಲಭ್ಯವಿದೆ. ಇದು ಬಳಕೆದಾರಿಗೆ ತಮ್ಮ ಸ್ಮಾರ್ಟ್ ಫೋನಿನಂದ ಫೋಟೊಗಳನ್ನು ಕ್ಲಿಕಿಸಿ ಅಲ್ಲೇಯೆ ಪ್ರಿಂಟ್ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಿದೆ.

ಬ್ಲೂಟೂತ್ ಸಹಾಯದಿಂದ ಈ ಪಾಕೆಟ್ ಪ್ರಿಂಟರ್ ಕನೆಕ್ಟ್ ಆಗಲಿದ್ದು, ಇದಕ್ಕಾಗಿ ಸ್ಮಾರ್ಟ್ ಫೋನ್ ನಲ್ಲಿ ಆಪ್ ಒಂದನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದು ಗೂಗಲ್ ಪ್ಲೇ ಸ್ಟೋರಿನಲ್ಲಿ ಮತ್ತು ಆಪಲ್ ಆಪ್ ಸ್ಟೋರಿನಲ್ಲಿ ಲಭ್ಯವಿದೆ. ಅಲ್ಲದೇ ಇದರಲ್ಲಿ ಸೋಶಿಯಲ್ ಮೀಡಿಯಾದ ಫೋಟೋಗಳನ್ನು ನೇರಾವಾಗಿ ಡೌನ್ ಲೋಡ್ ಮಾಡಬಹುದು.

ಇದಕ್ಕಾಗಿಯೇ ಹೆಚ್ ಪಿ ಜಿಕ್ ಪೇಪರ್ ಗಳನ್ನು ಬಿಡುಗಡೆ ಮಾಡಿದ್ದು, ಇದು ಈ ಪ್ರಿಂಟರ್ ನೊಂದಿಗೆ ಸೇರಿ ಕಾರ್ಯನಿರ್ವಹಿಸಲಿದೆ. ನೀವು ತೆಗದ ಚಿತ್ರಗಳನ್ನು ಅಲ್ಲಿಯೇ ಪ್ರಿಂಟ್ ಮಾಡಿ ನೆನಪಿನ ಪುಟದಲ್ಲಿ ಸೇರಿಸಬಹುದಾಗಿದೆ.

ಯುವ ಸಮೂಹವನ್ನು ಗಮನದಲ್ಲಿ ಇಟ್ಟುಕೊಂಡು ಈ ಪ್ರಿಂಟರ್ ಅನ್ನು ನಿರ್ಮಿಸಲಾಗಿದ್ದು, ಸುಲಭವಾಗಿ ಕನೆಕ್ಟ್ ಮಾಡಿಕೊಳ್ಳುವುದಲ್ಲದೇ ಸರಳವಾಗಿ ಪ್ರಿಂಟ್ ತೆಗೆಯಬಹುದಾಗಿದೆ. ಇದು ಡಿಜಿಟಲ್ ರೂಪದ ಫೋಟೋಗಳಿಗೆ ಫಿಜಿಕಲ್ ಟಚ್ ನೀಡಲಿದೆ.

ಭಾನುವಾರದಿಂದ 6 ದಶಲಕ್ಷ ಜಿಯೋ ಫೋನ್ ವಿತರಣೆ!!.ಗ್ರಾಮೀಣ ಪ್ರದೇಶಗಳಿಗೆ ಮೊದಲು!!ಭಾನುವಾರದಿಂದ 6 ದಶಲಕ್ಷ ಜಿಯೋ ಫೋನ್ ವಿತರಣೆ!!.ಗ್ರಾಮೀಣ ಪ್ರದೇಶಗಳಿಗೆ ಮೊದಲು!!

ಈ ಪ್ರಿಂಟರ ನೊಂದಿಗೆ ಕಾರ್ಯ ನಿರ್ವಹಿಸುವ ಹೆಚ್ ಪಿ ಜಿಕ್ ಪೇಪರ್ 20 ಶಿಟ್ ಗೆ ರೂ. 539 ಆಗಲಿದ್ದು, ಇದೇ ಮಾದರಿಯಲ್ಲಿ 50 ಶಿಟ್ ರೂ. 1249ಕ್ಕೆ ದೊರೆಯಲಿದೆ. ಇದಲ್ಲದೇ ಪ್ರಿಂಟರ್ ತೆದುಕೊಂಡ ಸಂದರ್ಭದಲ್ಲಿ ಕಂಪನಿಯೂ 10 ಜಿಕ್ ಪೇಪರ್ ಗಳನ್ನು ಉಚಿತವಾಗಿ ನೀಡಲಿದೆ. ಇದು ಮೂರು ಬಣ್ಣದಲ್ಲಿ ದೊರೆಯಲಿದೆ. ಬ್ಲಾಕ್, ರೆಡ್ ಮತ್ತು ವೈಟ್ ಬಣ್ಣದಲ್ಲಿ ಕಾಣಿಸಿಕೊಂಡಿದೆ.

Best Mobiles in India

English summary
Global PC and printing hardware solutions provider HP has just launched an interesting product for consumers as well smartphone enthusiasts in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X