ಹುವಾವೆ ಪಿ10 ಪ್ಲಸ್ ಬಂದಿದೆ ಬ್ರೈಟ್ ಬ್ಲ್ಯಾಕ್ ಬಣ್ಣದಲ್ಲಿ!!

By Tejaswini P G

  ಈಗಾಗಲೇ ಜನ ಮನ ಗೆದ್ದಿರುವ ಹುವಾವೆ ಪಿ10 ಪ್ಲಸ್ ಮತ್ತೆ ಬಂದಿದೆ ಹೊಸ ಬಣ್ಣದಲ್ಲಿ. 'ಬ್ರೈಟ್ ಬ್ಲ್ಯಾಕ್' ಎಂಬ ಹೊಸ ಬಣ್ಣ ಈ ಸ್ಮಾರ್ಟ್ಫೋನ್ ಗೆ ನೀಡಿದೆ ಹೊಸ ಮೆರುಗು ಹೊಸ ಥಳಕು.

  ಹುವಾವೆ ಪಿ10 ಪ್ಲಸ್ ಬಂದಿದೆ ಬ್ರೈಟ್ ಬ್ಲ್ಯಾಕ್ ಬಣ್ಣದಲ್ಲಿ!!

  ಹುವಾವೆ ಯ ಪಿ10 ಪ್ಲಸ್ ಬಿಡುಗಡೆಯಾದ ಮೊದಲಲ್ಲಿ ಆರ್ಕ್ಟಿಕ್ ವೈಟ್,ಪ್ರೆಸ್ಟೀಜ್ ಗೋಲ್ಡ್,ಗ್ರೀನರಿ,ಡ್ಯಾಝ್ಲಿಂಗ್ ಬ್ಲೂ,ಗ್ರಾಫೈಟ್ ಬ್ಲ್ಯಾಕ್, ಡ್ಯಾಝ್ಲಿಂಗ್ ಗೋಲ್ಡ್ , ರೋಸ್ ಗೋಲ್ಡ್ ಮತ್ತು ಮೂನ್ಲೈಟ್ ಸಿಲ್ವರ್ ಬಣ್ಣಗಳಲ್ಲಿ ಬರಲಿದೆ ಎಂದು ಹೇಳಲಾಗಿತ್ತು.ಈಗ ಬಂದಿರುವ ಬ್ರೈಟ್ ಬ್ಲ್ಯಾಕ್, ಗ್ರಾಫೈಟ್ ಬ್ಲ್ಯಾಕ್ ನಂತೆ ಕಪ್ಪು ಬಣ್ಣದ್ದೇ ಆದರೂ ಬ್ರೈಟ್ ಬ್ಲ್ಯಾಕ್ ಗೆ ಇದೆ ಹೊಸ ಥಳಕು. ಗ್ರಾಫೈಟ್ ಬ್ಲ್ಯಾಕ್ ಮೊಬೈಲ್ಗೆ "ಮ್ಯಾಟ್ ಫಿನಿಷ್" ನೀಡಿದರೆ ಬ್ರೈಟ್ ಬ್ಲ್ಯಾಕ್ "ಗ್ಲಾಸಿ ಫಿನಿಷ್" ನೀಡುತ್ತದೆ.

  ಹುವಾವೆ ಪಿ10 ಪ್ಲಸ್ ಅನ್ನು ಕಳೆದ ಫೆಬ್ರವರಿಯಲ್ಲಿ ನಡೆದ ಎಮ್ ಡಬ್ಲ್ಯೂ ಸಿ 2017 ರಲ್ಲಿ ಜಗತ್ತಿಗೆ ಪರಿಚಯಿಸಲಾಗಿತ್ತು.ಹುವಾವೆಯ ಈ ಸ್ಮಾರ್ಟ್ಫೋನ್ 5.5 ಇಂಚ್ QHD ಡಿಸ್ಪ್ಲೇ ಹೊಂದಿದ್ದು 1440p ಪಿಕ್ಸೆಲ್ ಡೆನ್ಸಿಟಿ ಹೊಂದಿದೆ. ಮೊಬೈಲ್ ಸ್ಕ್ರೀನ್ ಮೇಲಿರುವ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ನ ರಕ್ಷಣಾ ಕವಚ ಅದಕ್ಕೆ ನೀಡುತ್ತದೆ ಉತ್ತಮ ರಕ್ಷಣೆ.

  ಈ ಆಪ್‌ ಇದ್ದರೆ ಒಂದು ಸುಂದರ ಸೆಲ್ಫಿಗಾಗಿ ನೂರು ಸೆಲ್ಫಿ ತೆಗೆಯಬೇಕಿಲ್ಲ!!

  ಹುವಾವೆ ಪಿ10 ಪ್ಲಸ್ 2.3GHz ಒಕ್ಟಾ ಕೋರ್ ಹೈಸಿಲಿಕಾನ್ ಕಿರಿನ್ 960 ಪ್ರಾಸೆಸರ್ ಜೊತೆಗೆ ಮಾಲಿ-G71 MP8 GPU ಕೂಡ ಹೊಂದಿದೆ. ಹುವಾವೆ ಪಿ10 ಪ್ಲಸ್ ಎರಡು ಮೆಮೋರಿ ಆವೃತ್ತಿಗಳಲ್ಲಿ ಲಭ್ಯವಾಗುತ್ತಿದೆ.

  ಮೊದಲನೆಯ ಆವೃತ್ತಿ 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಹೊಂದಿದ್ದರೆ ಎರಡನೆಯ ಆವೃತ್ತಿ 6GB RAM ಮತ್ತು 128GB ಆಂತರಿಕ ಸ್ಟೋರೇಜ್ ಹೊಂದಿದೆ. ಈ ಎರಡೂ ಆವೃತ್ತಿಗಳಲ್ಲಿ ಮೈಕ್ರೋSD ಕಾರ್ಡ್ ಬಳಸಿ 256GB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

  ಆಂಡ್ರಾಯ್ಡ್ 7.0 ನುಗಾಟ್ ಮೇಲೆ ಓಡುವ ಈ ಸ್ಮಾರ್ಟ್ಫೋನ್ ಇಮೋಶನ್ ಯುಐ 5.0 ಕೂಡ ಹೊಂದಿದೆ.ಇನ್ನು ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಹುವಾವೆ ಪಿ10 ಪ್ಲಸ್ ಹೊಂದಿದೆ 20MP ಮತ್ತು 12MPಯ ಡ್ಯುಯಲ್ ಲೆನ್ಸ್ Leica ರೇರ್ ಕ್ಯಾಮೆರಾ ಡ್ಯುಯಲ್-LED ಫ್ಲ್ಯಾಶ್ ,PDAF,HDR ಮತ್ತ 4K ವೀಡಿಯೋ ರೆಕಾರ್ಡಿಂಗ್ ಜೊತೆಗೆ.

  ಅಲ್ಲದೆ ಇದರ 8MP Leica ಸೆಲ್ಫೀ ಕ್ಯಾಮೆರಾ FHD 1080p ವೀಡಿಯೋ ರೆಕಾರ್ಡಿಂಗ್ ಸಾಮರ್ಥ್ಯವನ್ನೂ ಹೊಂದಿದೆ.

  3750mAH ಬ್ಯಾಟರಿ ಹೊಂದಿರುವ ಹುವಾವೆ ಪಿ10 ಪ್ಲಸ್ ಉತ್ತಮ ಪರ್ಫಾರ್ಮೆನಸ್ ನೀಡುತ್ತಿದೆ.ಜಗತ್ತಿನ ಮೊದಲ 4.5G LTE ಸ್ಮಾರ್ಟ್ಫೋನ್ ಎನಿಸಿರುವ ಹುವಾವೆ ಪಿ10 ಪ್ಲಸ್ ಉತ್ತಮ ಗುಣಮಟ್ಟದ ಕನೆಕ್ಟಿವಿಟಿ ಹೊಂದಿದೆ.

  ಹುವಾವೆ ಪಿ10 ಪ್ಲಸ್ ನ ಹೊಸ ಬ್ರೈಟ್ ಬ್ಲ್ಯಾಕ್ ಆವೃತ್ತಿ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದ್ದು ಬೆಲೆ 4888 ಯುವಾನ್(ಅಂದಾಜು ರೂ 47,000) ಆಗಿದೆ. ಈ ಆವೃತ್ತಿಯ ಜಾಗತಿಕ ಲಭ್ಯತೆ ಕುರಿತು ಯಾವುದೇ ಮಾಹಿತಿ ಸಧ್ಯಕ್ಕೆ ಲಭ್ಯವಿಲ್ಲ.

  Read more about:
  English summary
  The Huawei P10 Plus is powered by an in-house Octa-core Hisilicon Kirin 960 processor running at 2.3GHz and topped with Mali-G71 MP8 GPU.
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more