ಹುವಾವೇ ಕಂಪೆನಿಗೆ ಮೊದಲ ಬಿಗ್ ಶಾಕ್!..ಆನಂದದಲ್ಲಿ ತೇಲಾಡಿದ ಸ್ಯಾಮ್‌ಸಂಗ್!!

|

ಗೂಗಲ್ ಸೇರಿದಂತೆ ಬಹುತೇಕ ತಂತ್ರಜ್ಞಾನ ದೈತ್ಯ ಕಂಪೆನಿಗಳಿಂದ ನಿರ್ಬಂಧಿತವಾಗಿರುವ ಹುವಾವೇ ಕಂಪೆನಿಗೆ ಮೊದಲ ಬಿಗ್ ಶಾಕ್ ಎದುರಾಗಿದೆ. ಗೂಗಲ್ ನಿರ್ಬಂಧದ ನಂತರ ಹುವಾವೇ ಡಿವೈಸ್‌ಗಳ ಬೇಡಿಕೆ ತೀವ್ರ ಕುಸಿತವಾಗಿದೆ ಎಂದು ವರದಿಯಾಗಿದ್ದು, ಅಮೆರಿಕಾ ಮತ್ತು ಯೂರೋಪ್ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನಾದ ಹುವಾವೇ ಮೊಬೈಲ್ ಕಂಪೆನಿಗೆ ಭಾರೀ ಪಟ್ಟುಬಿದ್ದಿದೆ. ಈ ಮೂಲಕ ವಿಶ್ವದ ನಂಬರ್ 1 ಮೊಬೈಲ್ ಮಾರಾಟಗಾರನಾಗುವ ಹುವಾವೇ ಕಂಪೆನಿ ಆಸೆಗೆ ತಣ್ಣೀರೆರಚಿದಂತಾಗಿದೆ.

ಹೌದು, ಬಜೆಟ್ ದರದಲ್ಲಿ ಅಧಿಕ ಫೀಚರ್ ಫೋನ್‌ ಪರಿಚಯಿಸುತ್ತಿದ್ದ ಹುವಾವೇ ಸ್ಮಾರ್ಟ್‌ಫೋನ್‌ಗಳ ಖರೀದಿ ಶೇ. 70 ರಷ್ಟು( ಚೀನಾ ಹೊರತುಪಡಿಸಿ) ಇಳಿಕೆಯಾಗಿದೆ. ಗೂಗಲ್ ತನ್ನೆಲ್ಲಾ ಸೇವೆಗಳನ್ನು ಹುವಾವೇ ಕಂಪೆನಿಗೆ ನಿರ್ಬಂಧ ಹೇರಿದ ಪರಿಣಾಮ ಮೊಬೈಲ್ ಗ್ರಾಹಕರು ಹುವಾವೇ ಫೋನ್‌ಗಳನ್ನು ಖರೀದಿಸಲು ಮನಸ್ಸು ಮಾಡುತ್ತಿಲ್ಲ. ಆನ್‌ಲೈನ್‌ ಮೂಲಕವೂ ಕೂಡ ಹುವಾವೇ ಖರೀದಿ ತೀವ್ರ ಕುಸಿತವಾಗಿದ್ದು, ಜನರು ಹುವಾವೇ ಹೊರತುಪಡಿಸಿ ಇತರ ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಬಗ್ಗೆ ಹೆಚ್ಚು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಹುವಾವೇ ಕಂಪೆನಿಗೆ ಮೊದಲ ಬಿಗ್ ಶಾಕ್!..ಆನಂದದಲ್ಲಿ ತೇಲಾಡಿದ ಸ್ಯಾಮ್‌ಸಂಗ್!!

ಅಮೆರಿಕ, ಫಿನ್ಲೆಂಡ್, ಫ್ರಾನ್ಸ್, ಇಟಲಿ, ಇಂಗ್ಲೆಂಡ್, ಸ್ವೀಡನ್, ನಾರ್ವೆ ಸಹಿತ ಹಲವು ದೇಶಗಳಲ್ಲಿ ಹುವಾವೇ ಫೋನ್‌ಗಳ ಮಾರಾಟ ತೀರ್ವಗತಿಯಲ್ಲಿ ಕುಸಿತವಾಗಿದ್ದು, ಭಾರತದಲ್ಲೂ ಕೂಡ ಹುವಾವೇ ಫೋನ್‌ಗಳ ಮಾರಾಟ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಈ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ವಿಶ್ವದಲ್ಲೇ ಎರಡನೇ ದೊಡ್ಡ ಮೊಬೈಲ್ ಮಾರಾಟಗಾರನಾಗಿದ್ದ ಹುವಾವೇಗೆ ಇದು ದೊಡ್ಡ ಏಟಾಗಿದೆ. ಹಾಗಾದರೆ, ಈ ಸುದ್ದಿ ಕೇಳಿ ಸ್ಯಾಮ್‌ಸಂಗ್ ಕಂಪೆನಿ ಖುಷಿಯಾಗಿರುವುದು ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹುವಾವೇ ವೇಗಕ್ಕೆ ಕಡಿವಾಣ!

ಹುವಾವೇ ವೇಗಕ್ಕೆ ಕಡಿವಾಣ!

ವರ್ಷದ ಮೊದಲ ತ್ರೈ ಮಾಸಿಕದ ಮೊಬೈಲ್‌ ಫೋನ್‌ ಉದ್ಯಮದ ಸಮೀಕ್ಷಾ ರಿಪೋರ್ಟ್ ನೀಡಿರುವ ಐಡಿಸಿ, ಈ ಬಾರಿ ಸ್ಮಾರ್ಟ್‌ಫೋನ್‌ ಮಾರಾಟ ಶೇ. 6.6 ರಷ್ಟು ಕುಸಿತ ಕಂಡಿದೆ. ಮತ್ತು ಚೀನಾದ ಹುವಾವೇ ಮೊಬೈಲ್ ಕಂಪೆನಿ ಶೇ. 50ರಷ್ಟು ಪ್ರಗತಿ ಸಾಧಿಸುವ ಮೂಲಕ ಮೊದಲ ಸ್ಥಾನದಲ್ಲಿರುವ ಸ್ಯಾಮ್‌ಸಂಗ್‌ನ ಸನಿಹಕ್ಕೆ ಬಂದು ನಿಂತಿದೆ. ಜನಪ್ರಿಯ ಸ್ಯಾಮ್ಸಂಗ್ ಕಂಪೆನಿ ಶೇ. 8.1ರಷ್ಟು ಕುಸಿತ ಕಂಡಿದ್ದರೂ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ಸಫಲವಾಗಿದೆ ಎಂದು ತಿಳಿಸಿತ್ತು.

ನಿಟ್ಟುಸಿರು ಬಿಟ್ಟ ಸ್ಯಾಮ್‌ಸಂಗ್!

ನಿಟ್ಟುಸಿರು ಬಿಟ್ಟ ಸ್ಯಾಮ್‌ಸಂಗ್!

2019ರ ಪ್ರಥಮ ತ್ತೈಮಾಸಿಕದಲ್ಲೂ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಸ್ಯಾಮ್‌ಸಂಗ್‌ ಮೊದಲ ಸ್ಥಾನದಲ್ಲಿದ್ದು, ಈ ಮೂರು ತಿಂಗಳಲ್ಲಿ ಸ್ಯಾಮ್‌ಸಂಗ್‌ 71.9 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿದೆ. ಆದರೆ, ಅದರ ಮಾರಾಟ ಶೇ. 8.1ರಷ್ಟು ಕುಸಿತ ಕಂಡಿದೆ. ಅಮೆರಿಕಾದಲ್ಲಿನ ನಿಷೇಧದ ನಡುವೆಯೂ 59.1 ದಶಲಕ್ಷ ಫೋನ್‌ಗಳನ್ನು ಮಾರಿ 2ನೇ ಸ್ಥಾನದಲ್ಲಿರುವ ಹುವಾವೇ ಈ ವರ್ಷ ಸ್ಯಾಮ್‌ಸಂಗ್ ಅನ್ನು ಮೀರಿಸಿ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಹೇಳಲಾಗಿತ್ತು. ಹಾಗಾಗಿ, ಈ ಘಟನೆ ನಂತರ ಸ್ಯಾಮ್‌ಸಂಗ್ ನಿಟ್ಟುಸಿರು ಬಿಟ್ಟಿದೆ.

ಹೇಗಿದೆ ಈ ವರ್ಷದ ರಿಪೋರ್ಟ್!

ಹೇಗಿದೆ ಈ ವರ್ಷದ ರಿಪೋರ್ಟ್!

ಮೊಬೈಲ್‌ ಫೋನ್‌ ಉದ್ಯಮದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ವಿವಿಧ ಕಂಪೆನಿಗಳಲ್ಲಿ ಆಗುವ ಮಾರಾಟ ಪ್ರಮಾಣವನ್ನು ಅಳೆದು ಯಾವ ಕಂಪೆನಿ ಎಷ್ಟು ಪ್ರಮಾಣದ ಬೆಳವಣಿಗೆ ಸಾಧಿಸಿದೆ ಎಂಬುದೆಲ್ಲವನ್ನು ತಿಳಿಸುವ ಐಡಿಸಿ ರಿಪೋರ್ಟ್ ಇತ್ತೀಚಿಗೆ ಹೊರ ಬಿದ್ದಿದೆ. 2019ರ ಪ್ರಥಮ ತ್ತೈಮಾಸಿಕದಲ್ಲಿ ವಿಶ್ವ ಮೊಬೈಲ್ ಮಾರುಕಟ್ಟೆ ಹೇಗಿದೆ ಎಂಬುದರ ಬಗ್ಗೆ ಅಮೆರಿಕಾದ ಇಂಟರ್ ನ್ಯಾಷನಲ್‌ ಡಾಟಾ ಕಾರ್ಪೊರೇಷನ್ (ಐಡಿಸಿ) ಸಂಸ್ಥೆ ರಿಪೋರ್ಟ್ ನೀಡಿದ್ದು, ಈ ಬಾರಿ ಒಟ್ಟಾರೆ ಸ್ಮಾರ್ಟ್‌ಫೋನ್‌ ಮಾರಾಟ ಶೇ. 6.6 ರಷ್ಟು ಕುಸಿತ ಕಂಡಿದೆ ಎಂದು ತಿಳಿಸಿದೆ.

ಸ್ಮಾರ್ಟ್‌ಫೋನ್‌ ಮಾರಾಟ ಇಳಿಕೆ!

ಸ್ಮಾರ್ಟ್‌ಫೋನ್‌ ಮಾರಾಟ ಇಳಿಕೆ!

2018ರ ಪ್ರಥಮ ತ್ತೈಮಾಸಿಕಕ್ಕೆ ಹೋಲಿಸಿದರೆ 2019ನೇ ವರ್ಷದ ಪ್ರಥಮ ತ್ತೈಮಾಸಿಕದಲ್ಲಿ ವಿಶ್ವದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮಾರಾಟ ಇಳಿಕೆಯಾಗಿದೆ. 2018ರ ಪ್ರಥಮ ತ್ತೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಮಾರುಕಟ್ಟೆಯಲ್ಲಿ ಶೇ. 6.6 ರಷ್ಟು ಕುಸಿತ ಕಂಡಿದೆ. ವಿಶ್ವದ ನಾಲ್ಕು ಪ್ರಮುಖ ಕಂಪೆನಿಗಳ ಮಾರಾಟ ಸಹ ಕುಸಿತ ಕಂಡಿದ್ದು, ಆದರೆ, ಚೀನಾದ ಹುವಾವೇ ಕಂಪೆನಿ ಮಾತ್ರ ಶೇ. 50ರಷ್ಟು ಗಣನೀಯ ಪ್ರಗತಿ ಸಾಧಿಸಿದೆ ಎಂದು ರಿಪೋರ್ಟ್ ಹೇಳಿದೆ.!

 ಈಗಲೂ ಸ್ಯಾಮ್‌ಸಂಗ್ ನಂಬರ್ 1!

ಈಗಲೂ ಸ್ಯಾಮ್‌ಸಂಗ್ ನಂಬರ್ 1!

ಐಡಿಸಿಯ ವರದಿ ಪ್ರಕಾರ, 2019ರ ಪ್ರಥಮ ತ್ತೈಮಾಸಿಕದಲ್ಲೂ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಸ್ಯಾಮ್‌ಸಂಗ್‌ ಮೊದಲ ಸ್ಥಾನದಲ್ಲಿದೆ. ಈ ಮೂರು ತಿಂಗಳಲ್ಲಿ ಸ್ಯಾಮ್‌ಸಂಗ್‌ 71.9 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿದ್ದು, ಶೇ. 23.1 ರಷ್ಟು ಮಾರುಕಟ್ಟೆ ಹೊಂದಿದೆ. ಆದರೆ, ಅದರ ಮಾರಾಟ ಶೇ. 8.1ರಷ್ಟು ಕುಸಿತ ಕಂಡಿದೆ. ಕಳೆದ 2018ರ ಪ್ರಥಮ ತ್ತೈಮಾಸಿಕದಲ್ಲಿ ಸ್ಯಾಮ್‌ಸಂಗ್‌ 78.2 ದಶಲಕ್ಷ ಸ್ಮಾರ್ಟ್‌ ಫೋನ್‌ಗಳನ್ನು ಮಾರಾಟ ಮಾಡಿದ್ದ ಸ್ಯಾಮ್‌ಸಂಗ್ ಈ ಬಾರಿ ಚೀನಾ ಕಂಪೆನಿಯ ಫೈಟ್ ಎದುರಿಸುತ್ತಿವೆ.

ಎರಡನೇ ಸ್ಥಾನಕ್ಕೇರಿದ ಹುವಾವೇ!

ಎರಡನೇ ಸ್ಥಾನಕ್ಕೇರಿದ ಹುವಾವೇ!

ಕಳೆದ ವರ್ಷ ಮೊಬೈಲ್‌ ಮಾರಾಟದಲ್ಲಿ ಆಪಲ್‌ ಕಂಪೆನಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಚೀನಾ ಮೂಲದ ಹುವಾವೇ 2ನೇ ಸ್ಥಾನವನ್ನು ಕಾಯ್ದುಕೊಳ್ಳು­ವುದರ ಜೊತೆಗೆ ಶೇ. 50ರಷ್ಟು ಪ್ರಗತಿ ಸಾಧಿಸಿದೆ. ಈ ವರ್ಷದ ಪ್ರಥಮ ಮೂರು ತಿಂಗಳಲ್ಲಿ ಅದು 59.1 ದಶಲಕ್ಷ ಫೋನ್‌ಗಳನ್ನು ಪ್ರಪಂಚಾದ್ಯಂತ ಮಾರಾಟ ಮಾಡಿದೆ. ಅಮೆರಿಕಾದಲ್ಲಿನ ನಿಷೇಧದ ನಡುವೆಯೂ 59.1 ದಶಲಕ್ಷ ಫೋನ್‌ಗಳನ್ನು ಮಾರಿ 2ನೇ ಸ್ಥಾನದಲ್ಲಿ ಹುವಾವೇ ಮುಂದಿನ ವರ್ಷ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಬಹುದು ಎನ್ನಲಾಗಿದೆ.!

ಮೂರನೇ ಸ್ಥಾನ ಕಾಯ್ದುಕೊಂಡ ಆಪಲ್!

ಮೂರನೇ ಸ್ಥಾನ ಕಾಯ್ದುಕೊಂಡ ಆಪಲ್!

ಶ್ರೀಮಂತರ ಮೊಬೈಲ್ ಕಂಪೆನಿ ಎಂದೇ ಹೆಸರಾಗಿರುವ ಅಮೆರಿಕಾದ ಆಪಲ್‌ ಕಂಪೆನಿ ಈ ಬಾರಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. ಆಪಲ್ ಸಂಸ್ಥೆ ಈ ವರ್ಷದ ಪ್ರಥಮ ತ್ತೈಮಾಸಿಕದಲ್ಲಿ 36.4 ದಶಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ. ಅದರ ಈಗಿನ ಮಾರುಕಟ್ಟೆ ಪಾಲು ಶೇ. 11.7 ಆಗಿದೆ. 2018ರ ಪ್ರಥಮ ತ್ತೈಮಾಸಿಕದಲ್ಲಿ ಅದು 52.2 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿತ್ತು. ಅಂದರೆ, ಆಪಲ್‌ ಫೋನ್‌ಗಳ ಮಾರಾಟ ಶೇ.30.2 ರಷ್ಟು ಕುಸಿತ ಕಂಡಿದೆ.

ಶಿಯೋಮಿ ಮಾರಾಟದಲ್ಲಿ ಭಾರೀ ಕುಸಿತ!

ಶಿಯೋಮಿ ಮಾರಾಟದಲ್ಲಿ ಭಾರೀ ಕುಸಿತ!

ಭಾರತದಲ್ಲಿ ಮೊದಲ ಸ್ಥಾನಕ್ಕೇರುವ ಮೂಲಕ ವಿಶ್ವದಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಶಿಯೋಮಿ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಸಮಸ್ಯೆ ಎದುರಿಸುತ್ತಿದೆ. ಈ ವರ್ಷದ ತ್ತೈಮಾಸಿಕದಲ್ಲಿ ಶಿಯೋಮಿ ಒಟ್ಟು 25 ದಶಲಕ್ಷ ಫೋನ್‌ಗಳನ್ನು ಜಗತ್ತಿನಾದ್ಯಂತ ಮಾರಿದೆ. ಕಳೆದ ವರ್ಷದ ಪ್ರಥಮ ತ್ತೈಮಾಸಿಕದಲ್ಲಿ ಅದು 27.8 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿ, ಶೇ. 8.4 ಮಾರುಕಟ್ಟೆ ಪಾಲು ಹೊಂದಿತ್ತು. ಶಿಯೋಮಿ ಸಹ ಮಾರಾಟದಲ್ಲಿ ಶೇ. 10.2ರಷ್ಟು ಕುಸಿತ ಕಂಡಿದೆ.

ವಿಶ್ವದಲ್ಲಿ ವಿವೋ ಮತ್ತು ಒಪ್ಪೊ ಕಂಪೆನಿಗಳ ಪಾಲು?

ವಿಶ್ವದಲ್ಲಿ ವಿವೋ ಮತ್ತು ಒಪ್ಪೊ ಕಂಪೆನಿಗಳ ಪಾಲು?

ಚೀನಾದ ವಿವೋ ಕಂಪೆನಿ ಈ ವರ್ಷದ ಪ್ರಥಮ ಮೂರು ತಿಂಗಳಲ್ಲಿ 23.2 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿದೆ, ಇದರ ಮಾರುಕಟ್ಟೆ ಪಾಲು ಶೇ. 7.5 ರಷ್ಟಿದೆ. ವಿವೋ ಸಹ ಉತ್ತಮ ಪ್ರಗತಿ ಸಾಧಿಸಿದೆ. ವಿವೋ ಈ ವರ್ಷ ಶೇ. 24ರಷ್ಟು ಪ್ರಗತಿ ದಾಖಲಿಸಿದೆ. ಇನ್ನು ವಿವೋದ ಸಹೋದರ ಕಂಪೆನಿ ಒಪ್ಪೋ ಶೇ. 6ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ. ಅದು ಈ ವರ್ಷದ ಮೂರು ತಿಂಗಳಲ್ಲಿ 23.1 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿದೆ.

ಇನ್ನುಳಿದ ಕಂಪೆನಿಗಳ ಪಾಲು ಶೇ. 23ರಷ್ಟು ಮಾತ್ರ!

ಇನ್ನುಳಿದ ಕಂಪೆನಿಗಳ ಪಾಲು ಶೇ. 23ರಷ್ಟು ಮಾತ್ರ!

ಸಜನಪ್ರಿಯ ಮೊಬೈಲ್ ಕಂಪೆನಿಗಳ ಪಾಲು ಇಷ್ಟಾದರೆ, ಇನ್ನುಳಿದ ಎಲ್ಲ ಕಂಪೆನಿಗಳೂ ಸೇರಿ ಈ ವರ್ಷದ ಪ್ರಥಮ ಮೂರು ತಿಂಗಳಲ್ಲಿ 72.1 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿ ಶೇ. 23ರಷ್ಟು ಮಾರುಕಟ್ಟೆ ಪಾಲು ಹೊಂದಿವೆ ಎಂದು ರಿಪೋರ್ಟ್ ಹೇಳಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 91.9 ದಶಲಕ್ಷ ಫೋನ್‌ಗಳನ್ನು ಮಾರಿದ್ದ ಇತೆರೆ ಮೊಬೈಲ್ ಕಂಪೆನಿಗಳು. ಶೇ. 27.6ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದವು. ಆ ಇತರೆ ಕಂಪೆನಿಗಳು ಶೇ. 21.5ರಷ್ಟು ಕುಸಿತ ಕಂಡಿವೆ ಎಂದು ರಿಪೋರ್ಟ್ ತಿಳಿಸಿದೆ.

Best Mobiles in India

English summary
They're unsure how Android phones will keep working as Google and other ... Europe, the Middle East and Africa into Huawei's second biggest after China. ... The drop in demand for Huawei phones could also hurt European. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X