ಭಾರತದ ಹುವಾವೆ ಮತ್ತು ಹಾನರ್ ಫೋನ್ ಬಳಕೆದಾರರ ಕಥೆ ಅಷ್ಟೇ!

|

ನೀವು ದೈತ್ಯ ಹುವಾವೆ ಕಂಪೆನಿ ಒಡೆತನದ ಹುವಾವೆ ಅಥವಾ ಹಾನರ್ ಸ್ಮಾರ್ಟ್‌ಪೋನ್‌ ಬಳಕೆದಾರರಾಗಿದ್ದಲ್ಲಿ ಇಂದಿನ ಸುದ್ದಿ ನಿಮಗೆ ಆತಂಕ ಮೂಡಿಸಬಹುದು. ಏಕೆಂದರೆ, ಗೂಗಲ್‌ ಕಂಪನಿಯು ಹುವಾವೆ ಜತೆಗಿನ ಒಪ್ಪಂದ ಮುಂದುವರಿಸುವ ಆಸಕ್ತಿ ತೋರಿಸುತ್ತಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದ ಆಗಸ್ಟ್‌ 19ಕ್ಕೆ ಕೊನೆಗೊಂಡಿದ್ದು, ಹೊಸದಾಗಿ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಿದೆ. ಆದರೆ, ಸದ್ಯದ ಮಟ್ಟಿಗೆ ಅಪ್‌ಡೇಟ್‌ ಮತ್ತು ಪ್ಯಾಚ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದೆ.

ಭಾರತದ ಹುವಾವೆ ಮತ್ತು ಹಾನರ್ ಫೋನ್ ಬಳಕೆದಾರರ ಕಥೆ ಅಷ್ಟೇ!

ಹೌದು, ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ಸಮರ ನಡೆಯುತ್ತಿರುವುದರಿಂದ ಟ್ರಂಪ್ ಆಡಳಿತವು ಚೀನಾದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಹುವಾವೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿರುವುದು ನಿಮಗೆಲ್ಲಾ ತಿಳಿದಿದೆ. ಹೀಗಾಗಿ ಹುವಾವೆ ಹ್ಯಾಂಡ್‌ಸೆಟ್‌ಗಳಿಗೆ ಆಂಡ್ರಾಯ್ಡ್ ಒಎಸ್ ಬಳಸುವುದಕ್ಕೆ ಅಮೆರಿಕ ನಿಷೇಧ ಹೇರುವ ಸಾಧ್ಯತೆ ಇದೆ. ಹೀಗಾದರೆ, ಗೂಗಲ್ ಪ್ಲೇ ಸ್ಟೋರ್‌ ಸಹ ಬಳಸಲು ಆಗುವುದಿಲ್ಲ. ಇದು ಹುವಾವೇ ಕಂಪೆನಿ ಒಡೆತನದ ಸ್ಮಾರ್ಟ್‌ಪೋನ್‌ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಲಿದೆ.

ಆಪಲ್‌ ಕಂಪನಿಯನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಗೂಗಲ್ ಒಡೆತನದ ಆಂಡ್ರಾಯ್ಡ್ ಇದರಿಂದಲೇ ಕಾರ್ಯಾಚರಿಸುತ್ತಿವೆ. ಇದರಲ್ಲಿ ಚೀನಾದ ಅತಿದೊಡ್ಡ ಸ್ಮಾರ್ಟ್‌ಫೋನ್‌ ಮಾರಾಟ ಕಂಪನಿ ಹುವಾವೆ ಸಹ ಸೇರಿಕೊಂಡಿದೆ. ಇದರಿಂದಾಗಿ ಚೀನಾದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಹುವಾವೆ ಇದರ ನೇರ ಪರಿಣಾಮಗಳನ್ನು ಎದುರಿಸುತ್ತಿದೆ. ಇದು ಕಂಪೆನಿಗೆ ಮಾತ್ರವಲ್ಲದೇ ಕಂಪೆನಿಯ ಸ್ಮಾರ್ಟ್‌ಪೋನ್‌ ಬಳಕೆದಾರರಿಗೂ ಸಹ ಸಮಸ್ಯೆ ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ.

ಭಾರತದ ಹುವಾವೆ ಮತ್ತು ಹಾನರ್ ಫೋನ್ ಬಳಕೆದಾರರ ಕಥೆ ಅಷ್ಟೇ!

ಇತ್ತೀಚೆಗೆ ನಡೆದ ಚೀನಾದ ಡೆವಲಪರ್‌ ಕಾನ್ಫರೆನ್ಸ್‌ನಲ್ಲಿ ಆಂಡ್ರಾಯ್ಡ್ 10 ಆಧಾರಿತ ಇಎಂಯುಐ 10 ಸಾಫ್ಟ್‌ವೇರ್‌ ಅನ್ನು ಹುವಾವೆ ಕಂಪನಿ ಬಿಡುಗಡೆ ಮಾಡಿತ್ತು. ಅದೇ ಸಂದರ್ಭದಲ್ಲಿ ಸಂಪೂರ್ಣವಾಗಿ ಹೊಸದಾದ ತನ್ನದೇ ಕಾರ್ಯಾಚರಣೆ ವ್ಯವಸ್ಥೆ ಹಾರ್ಮನಿ ಒಎಸ್ ಅನ್ನು ಸಹ ಪರಿಚಯಿಸಿತ್ತು. ಗೂಗಲ್‌ ಸಾಫ್ಟ್‌ವೇರ್‌ ಬಳಸಲು ಸಾಧ್ಯವಾಗದೇ ಇದ್ದಲ್ಲಿ ಇದನ್ನು ಬಳಸುವುದಾಗಿ ಕಂಪನಿ ಘೋಷಿಸಿದೆ. ಆದರೆ, ಹಾರ್ಮನಿ ಒಎಸ್‌ನಲ್ಲಿ ಬಳಕೆದಾರರಿಗೆ ಆಂಡ್ರಾಯ್ಡ್ ಸೇವೆಗಳು ಸಿಗಲು ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ.

ಓದಿರಿ: ಶಿಯೋಮಿ, ಒಪ್ಪೊ ಬಿಟ್ಟು 'ಹುವಾವೇ' ಮಾತ್ರ ಬ್ಯಾನ್ ಆಗಲು ಶಾಕಿಂಗ್ ಕಾರಣವಿದೆ!!

ಈಗಾಗಲೇ ಹುವಾವೆ ಆಪರೇಟಿಂಗ್ ಸಿಸ್ಟಮ್ ಅನ್ನು ಚೀನಾದ ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ. ಇದನ್ನು ಭಾರತ ಸೇರಿದಂತೆ ಜಾಗತೀಕವಾಗಿ ಪರಿಚಯಿಸಲು ಕಂಪೆನಿ ಮುಂದಾಗಿದೆ. ಚೀನಾದಲ್ಲಿ ಗೂಗಲ್ ಸೇವೆಗಳು ಸಾಮಾನ್ಯವಾಗಿ ಲಭ್ಯವಿರುವುದಿಲ್ಲ. ಆದರೆ, ಭಾರತದಂತಹ ಹಲವು ರಾಷ್ಟ್ರಗಳಲ್ಲಿ ಹುವಾವೆ ಕಂಪೆನಿಗಳ ಸ್ಮಾರ್ಟ್‌ಫೋನ್ ಹೆಚ್ಚು ಬಳಕೆಯಲ್ಲಿವೆ. ಪ್ಲೇ ಸ್ಟೋರ್ ಇಲ್ಲದೆ ತನ್ನ ತಾಯ್ನಾಡಿನಲ್ಲಿ ಹುವಾವೇ ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ಆದರೆ, ಭಾರತದಂತಹ ರಾಷ್ಟ್ರಗಳಲ್ಲಿ ಹುವಾವೆ ಹೆಚ್ಚು ಸಮಸ್ಯೆಯನ್ನು ಎದುರಿಸಲಿದೆ.

Best Mobiles in India

English summary
Huawei can’t survive outside of China as a brand without Google apps and services. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X