ಗೂಗಲ್‌ ಮ್ಯಾಪ್‌ಗೆ ಸೆಡ್ಡು ಹೊಡೆದ ಹುವಾವೇ: ಹೊಸ ಮ್ಯಾಪ್ ತಯಾರಿ!

|

ಚೀನಾದ ತಂತ್ರಜ್ಞಾನ ದೈತ್ಯ ಕಂಪೆನಿ ಹುವಾವೇ ಮತ್ತು ಗೂಗಲ್ ಕಂಪೆನಿಗಳ ನಡುವಿನ ಪೈಪೋಟಿ ಮತ್ತಷ್ಟು ತಾರಕಕ್ಕೇರಿದೆ. ಹುವಾವೇ ಈಗ ತನ್ನದೇ ಆದ ಮ್ಯಾಪಿಂಗ್ ಸೇವೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮ ಚೀನಾ ಡೈಲಿ ವರದಿ ಮಾಡಿದ್ದು, ಇದನ್ನು ಮ್ಯಾಪ್ ಕಿಟ್ ಎಂದು ಹೇಳಲಾಗಿದೆ. 150 ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಾಗಲಿರುವ ಈ ಸೇವೆಯನ್ನು ಸ್ಥಳೀಯ ಮ್ಯಾಪಿಂಗ್ ಸೇವೆಗಳೊಂದಿಗೆ ಸಂಪರ್ಕಿಸಲಾಗುವುದು ಎಂದು ವರದಿಯಲ್ಲಿ ತಿಳಿಸಿದೆ.

ಗೂಗಲ್‌ ಮ್ಯಾಪ್‌ಗೆ ಸೆಡ್ಡು ಹೊಡೆದ ಹುವಾವೇ: ಹೊಸ ಮ್ಯಾಪ್ ತಯಾರಿ!

ಹೌದು, ಹಾರ್ಮನಿ ಓಎಸ್ ಎಂದು ಕರೆಯಲ್ಪಡುವ ಮೊಬೈಲ್ ಸಾಧನಗಳು, ಲ್ಯಾಪ್‌ಟಾಪ್‌ಗಳು, ಧರಿಸಬಹುದಾದ ವಸ್ತುಗಳು ಮತ್ತು ಟೆಲಿವಿಷನ್ಗಳಿಗಾಗಿ ತನ್ನದೇ ಆದ ಆಪರೇಟಿಂಗ್ ಸಿಸ್ಟಮ್ ಅನ್ನು ನಿರ್ಮಿಸುತ್ತಿದೆ ಎಂಬ ವದಂತಿಗಳನ್ನು ಹುವಾವೇ ದೃಢಪಡಿಸಿದ ಕೆಲವೇ ದಿನಗಳಲ್ಲಿ ಈ ಸುದ್ದಿ ಬಂದಿದೆ. ವರದಿಯ ಪ್ರಕಾರ, ಮ್ಯಾಪ್ ಕಿಟ್ ವೈಶಿಷ್ಟ್ಯಗಳು ನೈಜ-ಸಮಯದ ಸಂಚಾರ ಪರಿಸ್ಥಿತಿಗಳು, ಅತ್ಯಾಧುನಿಕ ನ್ಯಾವಿಗೇಷನ್ ಸಾಮರ್ಥ್ಯಗಳು ಮತ್ತು ವರ್ಧಿತ ರಿಯಾಲಿಟಿ ಮ್ಯಾಪಿಂಗ್ ಅನ್ನು ಒಳಗೊಂಡಿವೆ ಎಂದು ಹೇಳಲಾಗಿದೆ. .

ಕಳೆದ ಮೇ ತಿಂಗಳಲ್ಲಿ ಹುವಾವೇಗೆ ಆಂಡ್ರಾಯ್ಡ್ ಓಎಸ್ ಬಳಸುವುದನ್ನು ಗೂಗಲ್ ನಿಷೇಧಿಸಿತು. ಅಂದಿನಿಂದ, ಹುವಾವೇ ಕಂಪೆನಿಯು ಗೂಗಲ್ ಮತ್ತು ಅದರ ಸೇವೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಇದಕ್ಕಾಗಿ ಹಾರ್ಮನಿ ಎಂಬ ತನ್ನದೇ ಓಎಸ್ ಅನ್ನು ಪರಿಚಯಿಸಿದ್ದ ಕಂಪೆನಿ, ಇದೀಗ ಮ್ಯಾಪ್ ಕಿಟ್ ಅನ್ನು ಪರಿಚಯಿಸಿಸುತ್ತಿದೆ. ಆದರೆ, ಈ ಸೇವೆಯು ಗೂಗಲ್ ಮ್ಯಾಪ್‌ನಂತೆ ಗ್ರಾಹಕರಿಗೆ ನೇರವಾಗಿ ಉಪಯೋಗ ಆಗುವುದಿಲ್ಲ ಎನ್ನಲಾಗಿದೆ.

ಗೂಗಲ್‌ ಮ್ಯಾಪ್‌ಗೆ ಸೆಡ್ಡು ಹೊಡೆದ ಹುವಾವೇ: ಹೊಸ ಮ್ಯಾಪ್ ತಯಾರಿ!

ಸಹಜವಾಗಿ, ಹುವಾವೇ ತನ್ನದೇ ಆದ ಮ್ಯಾಪಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿರುವುದಕ್ಕೆ ಇನ್ನೊಂದು ಸ್ಪಷ್ಟ ಕಾರಣ ಒಂದಿದೆ. ಈ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಅಪ್ಲಿಕೇಶನ್‌ಗಳು ಸ್ಥಳ ಆಧಾರಿತ ಸೇವೆಗಳನ್ನು ಅವಲಂಬಿಸಿರುತ್ತದೆ. ಹುವಾವೇ ಕ್ಲೌಡ್ ಸೇವೆಗಳ ಮುಖ್ಯಸ್ಥ ಜಾಂಗ್ ಪಿಂಗನ್ ಇತ್ತೀಚೆಗೆ ಅಂದಾಜು ಮಾಡಿದ್ದು, ಸುಮಾರು 50 ಪ್ರತಿಶತದಷ್ಟು ಅಪ್ಲಿಕೇಶನ್‌ಗಳು ಸರಿಯಾಗಿ ಕಾರ್ಯನಿರ್ವಹಿಸಲು ಮ್ಯಾಪಿಂಗ್ ಸಾಮರ್ಥ್ಯಗಳು ಬೇಕಾಗುತ್ತವೆ. ಹಾಗಾಗಿ, ಮ್ಯಾಪ್ ಕಿಟ್ ಅಭಿವೃದ್ಧಿಯಾಗುತ್ತಿದೆ ಎನ್ನಲಾಗಿದೆ.

ವಿಶ್ವದ ಟಾಪ್ ನಾಯಕರು ಬಳಸುವ ಮೊಬೈಲ್ ಯಾವುವು ಗೊತ್ತಾ?..ಮೋದಿಯವರ ಮೊಬೈಲ್ ಇದು!!ವಿಶ್ವದ ಟಾಪ್ ನಾಯಕರು ಬಳಸುವ ಮೊಬೈಲ್ ಯಾವುವು ಗೊತ್ತಾ?..ಮೋದಿಯವರ ಮೊಬೈಲ್ ಇದು!!

ಒಟ್ಟಿನಲ್ಲಿ ಗೂಗಲ್‌ಗೆ ಸೆಡ್ಡು ಹೊಡೆಯಲು ಏನೆಲ್ಲಾ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂಬ ರೂಪುರೇಷೆಗಳನ್ನು ಹುವಾವೇ ತಯಾರಿಸಿಕೊಳ್ಳುತ್ತಿದೆ. ತಂತ್ರಜ್ಞಾನ ಕಂಪೆನಿಗಳಿಂದಾಗಿ ಅಮೆರಿಕಾದ ಮುಂದೆ ತಲೆಬಾಗುತ್ತಿರುವುದು ಹುವಾವೇಗೆ ಇರಿಸುಮುರಿಸಾಗುತ್ತಿದೆ( ವಾಸ್ತವವಾಗಿ ಇದು ಚೀನಾಗೆ ಆಗುತ್ತಿದೆ). ಹಾಗಾಗಿ, ಗೂಗಲ್‌ಗೆ ಸೆಡ್ಡು ಹೊಡೆಯಲು ಹುವಾವೇ ಕಂಪೆನಿಗೆ ಚೀನಾ ಸರ್ಕಾರವೇ ಬೆನ್ನೆಲುಬಾಗಿ ನಿಂತಿದೆ ಎಂಬ ವದಂತಿಗಳು ನಿಜವಾಗುತ್ತಿವೆ ಎನ್ನಬಹುದು.

Best Mobiles in India

English summary
The Chinese giant Huawei is developing its own mapping service called Map Kit, state-owned outlet China Daily reports.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X