ಭಾರತದಲ್ಲಿ 'ಹುವಾವೆ ವಾಚ್ GT ಆಕ್ಟಿವ್' ಸ್ಮಾರ್ಟ್‌ವಾಚ್ ಬಿಡುಗಡೆ!..ಬೆಲೆ?

|

ಹುವಾವೆ ಕಂಪನಿಯು ಕಳೆದ ಮಾರ್ಚ್‌ ತಿಂಗಳಲ್ಲಿ ಹುವಾವೆ ಪಿ30 ಸರಣಿಯೊಂದಿಗೆ 'ಹುವಾವೆ ವಾಚ್ GT ಆಕ್ಟಿವ್' ಹೆಸರಿನ ಸ್ಮಾರ್ಟ್‌ವಾಚ್‌ ಅನ್ನು ವಿಶ್ವ ಮಟ್ಟದಲ್ಲಿ ಲಾಂಚ್‌ ಮಾಡಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಹುವಾವೆ ಸ್ಮಾರ್ಟ್‌ವಾಚ್‌ಗಳಿಗೆ ಬೇಡಿಕೆ ಹೆಚ್ಚಾಗಿರುವುದನ್ನು ಮನದಟ್ಟು ಮಾಡಿಕೊಂಡಿರುವ ಕಂಪನಿಯು ಇದೀಗ ದೇಶಿಯ ಮಾರುಕಟ್ಟೆಗೆ 'ಹುವಾವೆ ವಾಚ್ GT ಆಕ್ಟಿವ್' ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ 'ಹುವಾವೆ ವಾಚ್ GT ಆಕ್ಟಿವ್' ಸ್ಮಾರ್ಟ್‌ವಾಚ್ ಬಿಡುಗಡೆ!..ಬೆಲೆ?

ಹೌದು, ಹುವಾವೆ ಸಂಸ್ಥೆಯು ತನ್ನ ಜನಪ್ರಿಯ 'ಹುವಾವೆ ವಾಚ್ GT ಆಕ್ಟಿವ್' ಸ್ಮಾರ್ಟ್‌ವಾಚ್‌ ಅನ್ನು ರೀಲಿಸ್‌ ಮಾಡಿದೆ. ಈ ಸ್ಮಾರ್ಟ್‌ವಾಚ್ ಲೈಟ್‌ವೇಟ್‌ ಡಿಸೈನ್‌ನೊಂದಿಗೆ ಸುಮಾರು ಎರಡು ವಾರಗಳ ಬ್ಯಾಟರಿ ಬಾಳಿಕೆ ಸಾಮರ್ಥ್ಯವನ್ನು ಹೊಂದಿರುವುದು ಪ್ರಮುಖ ಹೈಲೈಟ್ ಆಗಿದೆ. ಹಾಗೆಯೇ ಆಂಡ್ರಾಯ್ಡ್ ಮತ್ತು ಐಫೋನ್ ಎರಡು ಓಎಸ್‌ಗಳಿಗೂ ಕನೆಕ್ಟ್‌ ಆಗಲಿದೆ. ಹಾಗಾದರೇ ಹುವಾವೆ ವಾಚ್ GT ಆಕ್ಟಿವ್' ಸ್ಮಾರ್ಟ್‌ವಾಚ್‌ನ ಇನ್ನಿತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಓದಿರಿ : ವಾಟ್ಸಪ್‌ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರ ವಹಿಸಿ! ಓದಿರಿ : ವಾಟ್ಸಪ್‌ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರ ವಹಿಸಿ!

ಡಿಸೈನ್ ಮತ್ತು ಡಿಸ್‌ಪ್ಲೇ

ಡಿಸೈನ್ ಮತ್ತು ಡಿಸ್‌ಪ್ಲೇ

ಹುವಾವೆ ಈ ಸ್ಮಾರ್ಟ್‌ವಾಚ್ ಅತೀ ಹಗುರವಾದ ರಚನೆಯಲ್ಲಿದ್ದು, ನೋಡಲು ಸಹ ಆಕರ್ಷಕವಾಗಿದೆ. ವೃತ್ತಾಕಾರ ಮಾದರಿಯಲ್ಲಿ ಡಿಸ್‌ಪ್ಲೇ ಇದ್ದು, 46mm ಗಾತ್ರ ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್ 1.39 ಇಂಚಿನ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯು 454x454 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಪ್ರೊಸೆಸರ್ ಹೇಗಿದೆ

ಪ್ರೊಸೆಸರ್ ಹೇಗಿದೆ

ಈ ಸ್ಮಾರ್ಟ್‌ವಾಚ್ ಸಂಸ್ಥೆಯ ಲೈಟ್‌ OS ಇದರಲ್ಲಿ ಕಾರ್ಯನಿರ್ವಹಿಸಲಿದ್ದು, ಹಾಗೆಯೇ ಡ್ಯುಯಲ್ ಚೀಪ್‌ಸೆಟ್‌ ಅನ್ನು ಒಳಗೊಂಡಿದೆ. TruSleep 2.0 ಮತ್ತು TruSeen 3.0. ಫೀಚರ್ಸ್‌ಗಳಿದ್ದು, ಇವುಗಳು ಬಳಕೆದಾರರ ಆರೋಗ್ಯದ ಮೇಲೆ ನಿಗಾ ಇಡಲಿವೆ. ನಿದ್ದೆ ಮತ್ತು ಹೃದಯ ಬಡಿತಗಳ ಏರಿಳಿತಗಳನ್ನು ನಿಗದಿತವಾಗಿ ಮಾನೀಟರ್‌ ಮಾಡಲು ನೆರವಾಗಿವೆ.

ಓದಿರಿ : ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ!ಓದಿರಿ : ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ!

ವಿಶೇಷ ಫೀಚರ್ಸ್

ವಿಶೇಷ ಫೀಚರ್ಸ್

ಈ ಸ್ಮಾರ್ಟ್‌ವಾಚ್ ಬಳಕೆದಾರರ ದೈನಂದಿನ ಆಕ್ಟಿವಿಟಿಗಳ ಟ್ರಾಕಿಂಗ್ ಆಯ್ಕೆಯನ್ನು ಒಳಗೊಂಡಿದೆ. ಇದರೊಂದಿಗೆ ಟ್ರೈಥ್ಲಾನ್ ಮೋಡ್ ನೀಡಲಾಗಿದ್ದು, ಈ ಫೀಚರ್‌ ಬಳಕೆದಾರರ ಸೈಕ್ಲಿಂಗ್, ಸ್ವಿಮ್ಮಿಂಗ್ ಮತ್ತು ರನ್ನಿಂಗ್ ಆಕ್ಟಿವಿಟಿಗಳನ್ನು ಟ್ರಾಕಿಂಗ್ ಮಾಡಲಿದೆ. ಆಟೋಮ್ಯಾಟಿಕ್ ಆಗಿ ಟ್ರಾಕ್ ಮಾಡುವ ತಂತ್ರಾಂಶವಿದ್ದು, ಹಾಗೆಯೇ ಉತ್ತಮ ನಿದ್ದೆ ಮಾಡಲು ಸುಮಾರು 200 ಸಲಹೆಗಳನ್ನು ಸಹ ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಪ್ರಸ್ತುತ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಿರುವ 'ಹುವಾವೆ ವಾಚ್ GT ಆಕ್ಟಿವ್' ಸ್ಮಾರ್ಟ್‌ವಾಚ್ ಆರೇಂಜ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆಯನ್ನು ಹೊಂದಿದ್ದು, ಬೆಲೆಯು 15,990ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿದೆ. ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿಗೆ ಲಭ್ಯವಿದ್ದು, ಹಾಗೆಯೇ ಒಂದು ವರ್ಷದ ವಾರಂಟಿ ಮತ್ತು 10 ದಿನಗಳ ರಿಪ್ಲೇಸ್‌ಮೆಂಟ್ ಪಾಲಿಸಿ ಸಹ ನೀಡಲಾಗುತ್ತದೆ.

ಓದಿರಿ : ಕಡಿಮೆ ಬೆಲೆಗೆ 'ರಿಯಲ್ ಮಿ' ಸ್ಮಾರ್ಟ್‌ಫೋನ್‌ ಆಕ್ಸಸರಿಸ್‌ ಬಿಡುಗಡೆ! ಓದಿರಿ : ಕಡಿಮೆ ಬೆಲೆಗೆ 'ರಿಯಲ್ ಮಿ' ಸ್ಮಾರ್ಟ್‌ಫೋನ್‌ ಆಕ್ಸಸರಿಸ್‌ ಬಿಡುಗಡೆ!

Best Mobiles in India

English summary
The Huawei Watch GT Active has been priced at Rs 15,990 in India and is being sold exclusively on Flipkart. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X