ಹುವಾವೇ ವಾಚ್‌ ಕಿಡ್ಸ್‌ 5X ಅನಾವರಣ; ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿ!

|

ಸ್ಮಾರ್ಟ್‌ ಗ್ಯಾಜೆಟ್‌ಗಳ ವಿಭಾಗದಲ್ಲಿ ಹುವಾವೇ ಕಂಪೆನಿ ಸಹ ಪ್ರಮುಖ ಎನಿಸಿಕೊಂಡಿದೆ. ಇದರ ನಡುವೆ ಇತರೆ ಸ್ಮಾರ್ಟ್‌ ಗ್ಯಾಜೆಟ್‌ ತಯಾರಿಕಾ ಕಂಪೆನಿಗಳಿಗೆ ಪೈಪೋಟಿ ನೀಡಲು ವಿಭಿನ್ನ ಹಾಗೂ ಆಕರ್ಷಕ ಡಿವೈಸ್‌ಗಳನ್ನು ಲಾಂಚ್‌ ಮಾಡಿ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ. ಇದರ ಭಾಗವಾಗಿಯೇ ಕಳೆದ ತಿಂಗಳ ಆರಂಭದಲ್ಲಿ ಪಾಕೆಟ್‌ ಗಾತ್ರದ ಪಾಕೆಟ್‌ ಎಸ್‌ ಎಂಬ ಸ್ಮಾರ್ಟ್‌ಫೋನ್‌ ಅನಾವರಣ ಮಾಡಿತ್ತು. ಇದೀಗ ಮತ್ತೊಂದು ರೀತಿಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ. ಅದೂ ಸಹ ಮಕ್ಕಳಿಗೆ ವಿಶೇಷ ವಾಚ್‌ ಪರಿಚಯಿಸುವ ಮೂಲಕ.

ಸ್ಮಾರ್ಟ್‌ಫೋನ್‌

ಹೌದು, ಈಗಾಗಲೇ ಹಲವಾರು ರೀತಿಯ ಸ್ಮಾರ್ಟ್‌ಫೋನ್‌ ಹಾಗೂ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿರುವ ಹುವಾವೇ ಈಗ ಹುವಾವೇ ವಾಚ್‌ ಕಿಡ್ಸ್‌ 5X ( Huawei Watch Kids 5X ) ಎಂಬ ವಾಚ್‌ ಅನ್ನು ಅನಾವರಣ ಮಾಡಿದೆ. ಈ ವಾಚ್‌ ಡಿಟ್ಯಾಚೇಬಲ್ ಡ್ಯುಯಲ್ ಸೈಡೆಡ್ ಡಿಸ್‌ಪ್ಲೇ ಆಯ್ಕೆಯನ್ನು ಹೊಂದಿದ್ದು, ಮಕ್ಕಳಿಗೆ ಖಂಡಿತಾ ಇಷ್ಟವಾಗುತ್ತದೆ. ಹಾಗಿದ್ರೆ ಇದರ ಪ್ರಮುಖ ಫೀಚರ್ಸ್‌ ಏನು? ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ.

ಪ್ರಮುಖ ಫೀಚರ್‌

ಪ್ರಮುಖ ಫೀಚರ್‌

ಈ ಸ್ಮಾರ್ಟ್‌ವಾಚ್‌ ಡ್ಯುಯಲ್ ಡಿಸ್‌ಪ್ಲೇ ಆಯ್ಕೆಯನ್ನು ಪಡೆದುಕೊಂಡಿದ್ದು, ಇದರಲ್ಲಿ ಒಂದು ಬ್ಲಾಕ್‌ ಆಂಡ್ ವೈಟ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದರೆ ಮತ್ತೊಂದು ಕಲರ್‌ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಹೀಗಾಗಿ ಮಕ್ಕಳು ತಮಗೆ ಯಾವುದು ಅನುಕೂಲವೋ ಆ ಡಿಸ್‌ಪ್ಲೇಯನ್ನು ಬಳಕೆ ಮಾಡಬಹುದು.

ಹೆಚ್ಚಿನ ಭದ್ರತಾ ಫೀಚರ್ಸ್

ಹೆಚ್ಚಿನ ಭದ್ರತಾ ಫೀಚರ್ಸ್

ಇನ್ನು ಈ ವಾಚ್‌ ಅನ್ನು ಮಕ್ಕಳಿಗಾಗಿಯೇ ತಯಾರಿಸಿರುವುದರಿಂದ ಹೆಚ್ಚಿನ ಭದ್ರತಾ ಫೀಚರ್ಸ್‌ಗಳನ್ನು ನೀಡಲಾಗಿದೆ. ಹಾಗೆಯೇ ಈ ವಾಚ್‌ನ ಎರಡೂ ಬದಿಯಲ್ಲೂ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಈ ಮೂಲಕ ಮಕ್ಕಳು ವಿಡಿಯೋ ಕರೆಗಳನ್ನೂ ಸಹ ಮಾಡಬಹುದಾಗಿದೆ. ಹಾಗೆಯೇ ಈ ಕರೆ ಸೌಲಭ್ಯದಲ್ಲಿ ಯಾರು ಯಾರಿಗೆ ಕರೆ ಮಾಡಬಹುದು ಎಂಬ ಆಯ್ಕೆಯನ್ನು ಪೋಷಕರು ಸೆಟ್‌ ಮಾಡಬಹುದು. ಇದರಿಂದ ಇತರರು ಆ ವಾಚ್‌ಗೆ ಕರೆ ಮಾಡುವುದನ್ನು ನಿಯಂತ್ರಿಸಬಹುದಾಗಿದೆ.

ಸ್ಥಳೀಯ ಜಿಪಿಎಸ್‌ ಆಯ್ಕೆ

ಸ್ಥಳೀಯ ಜಿಪಿಎಸ್‌ ಆಯ್ಕೆ

ಇದಿಷ್ಟೇ ಅಲ್ಲದೆ ಇದರಲ್ಲಿ ಜಿಪಿಎಸ್‌ ಫೀಚರ್ಸ್‌ ನೀಡಲಾಗಿದ್ದು, ಈ ವಾಚ್‌ ಧರಿಸಿದಾಗ ಮಕ್ಕಳು ಏನಾದರೂ ಕಾಣೆಯಾದರೆ ಅಥವಾ ಜನಸಂದಣಿ ಪ್ರದೇಶದಲ್ಲಿ ಪೋಚಕರು ಮಕ್ಕಳನ್ನು ಕಳೆದುಕೊಂಡರೆ ಈ ಫೀಚರ್ಸ್‌ ಮೂಲಕ ಸುಲಭವಾಗಿ ಹುಡುಕಬಹುದಾಗಿದೆ.

ಶೈಕ್ಷಣಿಕ ಆಪ್‌ಗಳಿಗೆ ಪ್ರವೇಶ

ಶೈಕ್ಷಣಿಕ ಆಪ್‌ಗಳಿಗೆ ಪ್ರವೇಶ

ಇದರೊಂದಿಗೆ ಹುವಾವೇ ತನ್ನದೇ ಆದ ಆಪರೇಟಿಂಗ್‌ ಸಿಸ್ಟಂ ಅನ್ನು ಈ ವಾಚ್‌ನಲ್ಲಿ ಇರಿಸಲಾಗಿದ್ದು, ಈ ಮೂಲಕ ಮಕ್ಕಳು ತಮಗೆ ಬೇಕಾದ ಶೈಕ್ಷಣಿಕ ಸಂಬಂಧದ ಆಪ್‌ಗಳನ್ನು ತೆರೆಯಬಹುದಾಗಿದೆ. ಹಾಗೂ ತಮ್ಮ ಶಿಕ್ಷಣಕ್ಕೆ ಬೆಂಬಲ ನೀಡುವ ಮಾಹಿತಿಗಳನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.

ಮಕ್ಕಳ ಆರೋಗ್ಯ ಮೇಲ್ವಿಚಾರಣೆ

ಮಕ್ಕಳ ಆರೋಗ್ಯ ಮೇಲ್ವಿಚಾರಣೆ

ಇದೆಲ್ಲದರ ಜೊತೆಗೆ ಈ ವಾಚ್‌ ಚಿಕ್ಕಮಕ್ಕಳ ಆರೋಗ್ಯ ಮೇಲ್ವಿಚಾರಣೆ ಕೆಲಸವನ್ನೂ ಮಾಡುತ್ತದೆ. ಮಕ್ಕಳ ಚಲನವಲದ ಹಾಗೂ ಅವರಿಗೆ ಏನಾದರೂ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣವೇ ಮಾಹಿತಿ ನೀಡುತ್ತದೆ. ಇದರಿಂದ ಪೋಷಕರು ಎಚ್ಚೆತ್ತುಕೊಳ್ಳಬಹುದು. ಇನ್ನು ಈ ವಾಚ್ ಕಿಡ್ಸ್ 5X ಎಕ್ಸ್ ಕಳೆದ ವರ್ಷ ಹುವಾವೇ ಬಿಡುಗಡೆ ಮಾಡಿದ ವಾಚ್ ಕಿಡ್ಸ್ 4 ಪ್ರೊಗೆ ಉತ್ತರಾಧಿಕಾರಿಯಾಗಿದೆ ಎನ್ನಲಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಮಕ್ಕಳ ಸ್ಮಾರ್ಟ್‌ವಾಚ್‌ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಾಂಚ್‌ ಆಗಿದೆ. ಆದರೆ ಚೀನಾವೂ ಸೇರಿದಂತೆ ಜಾಗತಿಕವಾಗಿ ಯಾವಾಗ ಈ ವಾಚ್‌ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಹಾಗೂ ಬೆಲೆ ಎಷ್ಟ ಎಂಬಿತ್ಯಾದಿ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಅದರಲ್ಲೂ ಚೀನಾದಲ್ಲಿ ಇಂದಿನಿಂದ ಮುಂಗಡ ಬುಕ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ.

Best Mobiles in India

Read more about:
English summary
Huawei Watch Kids 5X launched with detachable dual sided display.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X