Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಂಗಳೂರಿನ ತಾಲ್ ಡಿಜಿಟಲ್ ಸ್ಟೆತೊಸ್ಕೋಪ್‌ಗೆ ಭಾರೀ ಬೇಡಿಕೆ; ಇದು ಅಂತಿಂಥ ಡಿವೈಸ್ ಅಲ್ಲ!
ಸ್ಟೆತೊಸ್ಕೋಪ್ ಅನ್ನು ಕೊರಳಿನಲ್ಲಿ ನೇತು ಹಾಕಿಕೊಂಡಿದ್ದರೆ ಅವರಿಗೆ ಸಿಗುವ ಗೌರವವೇ ಬೇರೆ. ಯಾಕೆಂದರೆ ಅವರು ನಮ್ಮ ನಿಮ್ಮೆಲ್ಲರ ಆರೋಗ್ಯವನ್ನು ರಕ್ಷಣೆ ಮಾಡುವವರು ಎಂದು. ಅಂತೆಯೇ 150 ವರ್ಷಗಳಿಂದಲೂ ಡಾಕ್ಟರ್‌ಗಳು ಸ್ಟೆತೊಸ್ಕೋಪ್ ಅನ್ನು ಕೊರಳಿಗೆ ನೇತು ಹಾಕಿಕೊಂಡಿರುವ ಶೈಲಿಯಲ್ಲಿಯೇ ತಮ್ಮ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಇದಕ್ಕೆ ಪರ್ಯಾಯವಾಗಿ ಬೇರೆ ಡಿವೈಸ್ ತಯಾರು ಮಾಡಿಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹದು. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಯಾಕೆಂದರೆ ಡಾಕ್ಟರ್ ಇನ್ಮುಂದೆ ಕೊರಳಿಗೆ ಹಾಕಿಕೊಳ್ಳುವ ಸಾಂಪ್ರದಾಯಿಕ ಸ್ಟೆತೊಸ್ಕೋಪ್ ಗೆ (stethoscope) ಗುಡ್‌ಬೈ ಹೇಳಬಹುದು.

ಹೌದು, ತಂತ್ರಜ್ಞಾನ ಬೆಳವಣಿಗೆ ಹೆಚ್ಚಾದಂತೆ ನಾವು ಬಳಕೆ ಮಾಡುವ ಗ್ಯಾಜೆಟ್‌ಗಳ ರೂಪ ಸಹ ಬದಲಾಗುತ್ತಿದೆ. ಅಂದರೆ, ನಾವು ಆರಂಭದಲ್ಲಿ ಬಳಕೆ ಮಾಡುತ್ತಿದ್ದ ಫೋನ್‌ಗೂ ಈಗ ಬಳಕೆ ಮಾಡುತ್ತಿರುವ ಸ್ಮಾರ್ಟ್‌ಫೋನ್‌ಗೂ ಹೋಲಿಕೆ ಮಾಡಿಕೊಂಡರೆ ವ್ಯತ್ಯಾಸ ಸ್ಪಷ್ಟವಾಗಿ ತಿಳಿದುಬರುತ್ತದೆ. ಸ್ಟೆತೊಸ್ಕೋಪ್ ವಿಚಾರದಲ್ಲೂ ಈ ಬೆಳವಣಿಗೆ ಕಂಡುಬಂದಿದೆ. ಪ್ರಮುಖ ಸ್ಟಾರ್ಟ್ ಅಪ್ ಕಂಪೆನಿಯಾದ 'ತಾಲ್' ಡಿಜಿಟಲ್ ಸ್ಟೆತೊಸ್ಕೋಪ್ (Taal Digital Stethoscope) ಒಂದನ್ನು ಪರಿಚಯಿಸಿದೆ. ಇದು ಹೃದಯ ಮತ್ತು ಶ್ವಾಸಕೋಶವನ್ನು ಸುಲಭವಾಗಿ ಪರೀಕ್ಷಿಸುತ್ತದೆ.

ಏನಿದು ಡಿಜಿಟಲ್ ಸ್ಟೆತೊಸ್ಕೋಪ್?
ಸಾಂಪ್ರದಾಯಿಕ ಸ್ಟೆತೊಸ್ಕೋಪ್‌ಗಿಂತ ಭಿನ್ನವಾಗಿ ರೂಪುಕೊಂಡಿರುವ ಈ ಸ್ಟೆತೊಸ್ಕೋಪ್ ಹಳೆಯ ಸ್ಟೆತೊಸ್ಕೋಪ್‌ಗಿಂತ ಹೆಚ್ಚಿನ ಕಾರ್ಯಕ್ಷಮತೆ ಪಡೆದುಕೊಂಡಿದೆ. ಇದು ದೇಹದ ಧ್ವನಿಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ. ಹಾಗೆಯೇ ಇತರೆ ಡಿವೈಸ್‌ಗಳ ಜೊತೆಗೆ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳುತ್ತದೆ. ಅದರಲ್ಲೂ ಸಾಮಾನ್ಯವಾಗಿ ನಿಮ್ಮ ಶ್ವಾಸಕೋಶದಲ್ಲಿ ನೀರಿದ್ದರೆ ಅಥವಾ ಶ್ವಾಸನಾಳದ ಕ್ಯಾಕಲ್ ಸಮಸ್ಯೆ ಇದ್ದರೆ ಸಾಂಪ್ರದಾಯಿಕ ಸ್ಟೆತೊಸ್ಕೋಪ್ ನಲ್ಲಿ ಯಾವುದೇ ಮಾಹಿತಿ ತಿಳಿದುಬರುವುದಿಲ್ಲ. ಆದರೆ, ಇದರಲ್ಲಿ ಎಲ್ಲವೂ ಸಾಧ್ಯವಾಗಿದೆ.

ಡಿಜಿಟಲ್ ಸ್ಟೆತೊಸ್ಕೋಪ್‌ಗಳು ದುಬಾರಿ
ಇನ್ನು ಈ ಡಿಜಿಟಲ್ ಸ್ಟೆತೊಸ್ಕೋಪ್‌ಗಳು ಸಾಕಷ್ಟು ಸಮಯದಿಂದ ಬಳಕೆಯಲ್ಲಿವೆಯಾದರೂ, ಅವು ದುಬಾರಿಯಾಗಿವೆ ಜೊತೆಗೆ ಸಾಫ್ಟ್‌ವೇರ್ ದೃಷ್ಟಿಕೋನದಿಂದ ಬಳಸಲು ಸ್ವಲ್ಪ ಕಷ್ಟವಾಗುತ್ತದೆ. ಈ ಕಾರಣಕ್ಕೆ ಈ ರೀತಿಯ ಹೊಸ ಸ್ಟೆತೊಸ್ಕೋಪ್ ತಯಾರು ಮಾಡಲಾಗಿದೆ ಎನ್ನುತ್ತಾರೆ ತಾಲ್‌ನ ಬದರಿನಾರಾಯಣನ್ ರವರು.

ರಚನೆ ಹಾಗೂ ಫೀಚರ್ಸ್
ಈ ಡಿವೈಸ್ ಅಂಗೈನಲ್ಲಿ ಕೂರುವಷ್ಟ ಚಿಕ್ಕದಾಗಿದೆ. ಹಾಗೆಯೆ ಯುಎಸ್‌ಬಿ-ಸಿ ಹಾಗೂ 3.5mm ಆಕ್ಸ್ ಇನ್‌ಪುಟ್ ಪೋರ್ಟ್‌ಗಳ ಆಯ್ಕೆ ಪಡೆದುಕೊಂಡಿದ್ದು, ಫೋನ್ ಮತ್ತು ಪಿಸಿಗೆ ಈ ಮಾಹಿತಿ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಯಾವುದೇ ಶಬ್ಧವನ್ನು ರೆಕಾರ್ಡ್ ಮಾಡಿಕೊಳ್ಳುವ ಆಯ್ಕೆ ಹೊಂದಿದೆ.

ಆಪ್ ಮೂಲಕ ನಿಯಂತ್ರಣ
ಈ ಡಿವೈಸ್ ಅನ್ನು ಸುರ್ರ್ (Surr) ಎಂಬ ಮೊಬೈಲ್ ಆಪ್ ಮೂಲಕವೂ ಬಳಕೆ ಮಾಡಬಹುದಾಗಿದೆ. ಸಾಮಾನ್ಯವಾಗಿ ಈ ಆಪ್ ಮ್ಯೂಸಿಕ್ ಸಾಫ್ಟ್‌ವೇರ್ ನಂತೆ ಇದ್ದು, ಇದು ಡೇಟಾವನ್ನು ರೆಕಾರ್ಡ್ ಮಾಡಿಕೊಳ್ಳುವುದರ ಜೊತೆಗೆ ಡೇಟಾವನ್ನು ಸಂಗ್ರಹಿಸುವ ಕೆಲಸ ಮಾಡುತ್ತದೆ. ಹಾಗೆಯೇ ಬೇಕಾದ ವೈದ್ಯರಿಗೆ ಅಥವಾ ಇತರರಿಗೆ ಡೇಟಾವನ್ನು ವರ್ಗಾವಣೆ ಮಾಡುತ್ತದೆ.

ವೈದ್ಯರ ಬಳಿಗೆ ರೋಗಿಗಳು ಬರಬೇಕೆಂದೇನಿಲ್ಲ
ಈ ಡಿವೈಸ್‌ನ ಪ್ರಮುಖ ಫೀಚರ್ಸ್ ಎಂದರೆ ಗ್ರಾಮೀಣ ಪ್ರದೇಶದಲ್ಲಿ ವಯಸ್ಸಾದವರು ಹಾಗೂ ನಡೆಯಲಾಗದವರು ಇರುತ್ತಾರೆ. ಇಂತಹವರ ಆರೋಗ್ಯ ಮೇಲ್ವಿಚಾರಣೆಯನ್ನು ಅಲ್ಲಿನ ದಾದಿಯರು ಮಾಡುತ್ತಿರುತ್ತಾರೆ. ಆ ವೇಳೆ ಈ ಡಿವೈಸ್ ಮೂಲಕ ಅವರನ್ನು ಪರೀಕ್ಷಿಸಿ ಡೇಟಾವನ್ನು ವೈದ್ಯರಿಗೆ ಕಳುಹಿಸಬಹುದಾಗಿದೆ. ಪರಿಣಾಮ ವೈದ್ಯರು ತಾವಿರುವಲ್ಲಿಯೇ ಇದ್ದುಕೊಂಡು ಔಷಧಗಳನ್ನು ನೀಡಬಹುದಾಗಿದೆ. ಆದರೆ ಈ ಪ್ರಕ್ರಿಯೆಗೆ ಸರ್ಕಾರ ಮನಸ್ಸು ಮಾಡಬೇಕಿದೆ.

ಬೆಲೆ ಎಷ್ಟು?
ಈ ಡಿಜಿಟಲ್ ಸ್ಟೆತೊಸ್ಕೋಪ್ ಬೆಲೆ 8,800ರೂ. ಗಳಾಗಿದೆ. ಹಾಗೆಯೇ ಇದನ್ನು ಟೆಲಿಮೆಡಿಸಿನ್ ಕಂಪೆನಿಗಳು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಅದರಲ್ಲೂ ಪ್ರಮುಖವಾಗಿ ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು ಮತ್ತು ಶಿಕ್ಷಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ತಯಾರಕರು ತಿಳಿಸಿದ್ದಾರೆ.

1,000 ಯೂನಿಟ್ ಮಾರಾಟ
ಈಗಗಾಲೇ 1,000 ಯೂನಿಟ್ಗಳನ್ನು ಮಾರಾಟ ಮಾಡಲಾಗಿದೆಯಂತೆ. ಪ್ರಮುಖವಾಗಿ ಬಿಹಾರ, ಒಡಿಶಾ, ಪಂಜಾಬ್ ಮತ್ತು ಜಾರ್ಖಂಡ್‌ನ ಕೆಲವು ಪ್ರದೇಶಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಹಕರು ಇವುಗಳನ್ನು ಹೆಚ್ಚಾಗಿ ಖರೀದಿ ಮಾಡಲು ಮುಂದಾಗಿದ್ದಾರೆ. ಇದರ ಹೊರತಾಗಿ ಮೈಸೂರು, ಬೆಂಗಳೂರು ಮತ್ತು ಹೈದರಾಬಾದ್‌ನ ನಗರ ಪ್ರದೇಶಗಳಲ್ಲಿ ಇದರ ಬಳಕೆ ಹೆಚ್ಚಳವಾಗಿದೆ.

ಇದರ ನಿರ್ಮಾತೃಗಳಾರು?
ತಾಲ್ ಡಿಜಿಟಲ್ ಸ್ಟೆತೊಸ್ಕೋಪ್‌ನ ಹಿಂದಿರುವ ಜೋಡಿ ಎಂದರೆ ಅವರೇ ಸುಮುಖ್ ಮೈಸೂರು ಹಾಗೂ ಅರವಿಂದ್ ಬದರಿನಾರಾಯಣನ್. ಸುಮುಖ್ ಅವರು ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಬದರಿನಾರಾಯಣನ್ ಅವರು ಪಶುವೈದ್ಯರಾಗಿದ್ದಾರೆ. ಇವರಿಬ್ಬರೂ ಸೇರಿಕೊಂಡು ಈ ಡಿವೈಸ್ ಅನ್ನು 2016 ರಿಂದ ತಯಾರಿಸಲು ಮುಂದಾಗಿದ್ದರು. ಕೊನೆಗೂ ಈಗ ಸೇವೆಗೆ ಲಭ್ಯವಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470