ಅಮಾಜ್‌ಫಿಟ್‌ ಸ್ಮಾರ್ಟ್‌ವಾಚ್‌ಗಳಿಗೆ ಭಾರೀ ಕೊಡುಗೆ: ಬೆಲೆ, ಫೀಚರ್ಸ್‌ ವಿವರ

|

ದೀಪಾವಳಿ ಹಿನ್ನೆಲೆ ಭಾರತೀಯರ ಸಂಭ್ರಮವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಮುಖ ಇ-ಕಾಮರ್ಸ್‌ ತಾಣಗಳಾದ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಹಾಗೂ ಇನ್ನಿತರೆ ಸೈಟ್‌ಗಳು ಗ್ಯಾಜೆಟ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡಿವೆ. ಅದರಂತೆ ಗ್ರಾಹಕರು ಸಹ ತಮಗೆ ಇಷ್ಟವಾದ ಡಿವೈಸ್‌ಗಳನ್ನು ರಿಯಾಯಿತಿ ದರದ ಮೇಲೆ ಖರೀದಿಸುತ್ತಿದ್ದಾರೆ. ಇದರ ನಡುವೆ ಅಮಾಜ್‌ಫಿಟ್ ಸ್ಮಾರ್ಟ್‌ವಾಚ್‌ಗಳ ಮೇಲೆ ಇ-ಕಾಮರ್ಸ್‌ ತಾಣಗಳು ಭಾರೀ ಕೊಡುಗೆ ಘೋಷಿಸಲಾಗಿದೆ.

ಅಮಾಜ್‌ಫಿಟ್

ಹೌದು, ಅಮಾಜ್‌ಫಿಟ್ ಕಂಪೆನಿಯ ಈ ಆಫರ್‌ ಇದೇ ತಿಂಗಳ 30ರ ವರೆಗೆ ಇರಲಿದ್ದು, ಅಮಾಜ್‌ಫಿಟ್ GTS 2 ಮಿನಿ (ಹೊಸ ಆವೃತ್ತಿ), GTS 4 ಮಿನಿ, ಅಮಾಜ್‌ಫಿಟ್ ಬಿಪ್ 3, ಮತ್ತು ಅಮಾಜ್‌ಫಿಟ್ ಬಿಪ್ 3 ಪ್ರೊ ನಂತಹ ಸ್ಮಾರ್ಟ್‌ವಾಚ್‌ಗಳು ನಿಮಗೆ ಆಕರ್ಷಕ ರಿಯಾಯಿತಿಯಲ್ಲಿ ಲಭ್ಯವಾಗಲಿವೆ. ನೀವೇನಾದರೂ ಗಟ್ಟಿಮುಟ್ಟಾದ ಹಾಗೂ ದೀರ್ಘ ಬಾಳಿಕೆ ಬರುವ, ವಿವಿಧ ಫೀಚರ್ಸ್‌ ಇರುವ ಸ್ಮಾರ್ಟ್‌ವಾಚ್‌ಗಳನ್ನು ಕೊಂಡುಕೊಳ್ಳಬೇಕು ಎಂದು ನಿರ್ಧರಿಸಿದ್ದರೆ ಈ ಲೇಖನದಲ್ಲಿ ವಾಚ್‌ಗಳ ಆಫರ್‌ ಹಾಗೂ ಪ್ರಮುಖ ಫೀಚರ್ಸ್‌ ನೀಡಲಾಗಿದೆ ಓದಿರಿ.

ಕ್ರೊಮಾ

ಈ ಸ್ಮಾರ್ಟ್‌ವಾಚ್‌ಗಳನ್ನು ಕ್ರೋಮಾ , ಅಮಾಜ್‌ಫಿಟ್, ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದ್ದು, ಈ ಕಂಪೆನಿಯ ಎಲ್ಲಾ ಸ್ಮಾರ್ಟ್‌ವಾಚ್‌ಗಳಿಗೂ ರಿಯಾಯಿತಿ ಜೊತೆಗೆ ಬ್ಯಾಂಕ್‌ ಆಫರ್‌ ಸಹ ಲಭ್ಯವಿದೆ. ಇವುಗಳ ಮೂಲಕವೂ ತ್ವರಿತ ಡಿಸ್ಕೌಂಟ್‌ ಪಡೆಯಬಹುದಾಗಿದೆ.

ಅಮಾಜ್‌ಫಿಟ್ GTS 4 ಮಿನಿ

ಅಮಾಜ್‌ಫಿಟ್ GTS 4 ಮಿನಿ

ಅಮಾಜ್‌ಫಿಟ್ GTS 4 ಮಿನಿ ಸ್ಮಾರ್ಟ್‌ವಾಚ್ ಫ್ಲಿಪ್‌ಕಾರ್ಟ್‌ನಲ್ಲಿ 6,499ರೂ. ಗಳಿಗೆ ಖರೀದಿ ಮಾಡಬಹುದು. ಇದರ ಮೂಲ ಬೆಲೆ 10,999ರೂ. ಗಳಾಗಿದೆ. ಈ ವಾಚ್‌ 1.65 ಇಂಚಿನ ಹೆಚ್‌ಡಿ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 24 ಗಂಟೆಗಳ ಹೃದಯ ಬಡಿತದ ಮೇಲ್ವಿಚಾರಣೆ, SpO2 ಮಾನಿಟರಿಂಗ್ ಮಾಡಲಿದೆ .

ಅಮಾಜ್‌ಫಿಟ್ ಬಿಪ್ 3

ಅಮಾಜ್‌ಫಿಟ್ ಬಿಪ್ 3

ಅಮಾಜ್‌ಫಿಟ್ ಬಿಪ್ 3 ಸ್ಮಾರ್ಟ್‌ವಾಚ್‌ ಕ್ರೋಮಾ ಸೈಟ್‌ನಲ್ಲಿ ಹೆಚ್ಚಿನ ರಿಯಾಯಿತಿ ಪಡೆದುಕೊಂಡಿದೆ. ಇದು 2,799ರೂ. ಗಳಲ್ಲಿ ಲಭ್ಯವಾಗಲಿದ್ದು, ಇದರ ಸಾಮಾನ್ಯ ದರ 4,999ರೂ. ಗಳಾಗಿದೆ. ಈ ವಾಚ್ ವಿವಿಧ ಆರೋಗ್ಯ ಮಾನಿಟರಿಂಗ್‌ನೊಂದಿಗೆ ವಾಟರ್ ರೆಸಿಸ್ಟೆಂಟ್ ಫೀಚರ್ಸ್‌ ಪಡೆದಿದೆ.

ಅಮಾಜ್‌ಫಿಟ್ ಬಿಪ್ 3 ಪ್ರೊ

ಅಮಾಜ್‌ಫಿಟ್ ಬಿಪ್ 3 ಪ್ರೊ

ಅಮಾಜ್‌ಫಿಟ್ ಬಿಪ್ 3 ಪ್ರೊ ಸ್ಮಾರ್ಟ್‌ವಾಚ್‌ ಅನ್ನು ಕ್ರೋಮಾ ಸೈಟ್‌ ಮೂಲಕ 3,799ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ವಾಚ್‌ನ ಮೂಲ ಬೆಲೆ 5,999ರೂ. ಗಳಾಗಿದೆ. ಇನ್ನು 1.69 ಇಂದಿನ TFT ಡಿಸ್‌ಪ್ಲೇ ಹೊಂದಿದ್ದು, 50 ಕ್ಕೂ ಹೆಚ್ಚಿನ ವಾಚ್ ಫೇಸ್‌ಗಳು ಇದರಲ್ಲಿವೆ. ಹಾಗೆಯೇ 60 ಕ್ಕೂ ಹೆಚ್ಚಿನ ಸ್ಪೋರ್ಟ್ಸ್ ಮೋಡ್ ಫೀಚರ್ಸ್‌ ಜೊತೆಗೆ ಒಂದು ಪೂರ್ಣ ಚಾರ್ಜ್‌ ನಲ್ಲಿ 14 ದಿನಗಳ ಬಳಕೆ ಮಾಡಬಹುದಾಗಿದೆ.

ಅಮಾಜ್‌ಫಿಟ್ T-ರೆಕ್ಸ್ ಪ್ರೊ

ಅಮಾಜ್‌ಫಿಟ್ T-ರೆಕ್ಸ್ ಪ್ರೊ

ಅಮಾಜ್‌ಫಿಟ್ T-ರೆಕ್ಸ್ ಪ್ರೊ 3,000ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, 9,999ರೂ. ಗಳಿಗೆ ಖರೀದಿ ಮಾಡಬಹುದು. ಈ ವಾಚ್ ಅನ್ನು ಮಿಲಿಟರಿ ಸರ್ಟಿಫೈಡ್‌ ಔಟ್‌ಡೋರ್ ಸ್ಮಾರ್ಟ್‌ವಾಚ್ ಎಂದು ಪರಿಗಣಿಸಲಾಗಿದೆ. ತಾಪಮಾನ 70C ಶಾಖದಿಂದ -40 ಶೀತದವರೆಗಿನ ಪರಿಸ್ಥಿತಿಗಳಲ್ಲೂ ಈ ವಾಚ್‌ ಕೆಲಸ ಮಾಡಲಿದೆ.

ಅಮಾಜ್‌ಫಿಟ್ T-ರೆಕ್ಸ್ 2

ಅಮಾಜ್‌ಫಿಟ್ T-ರೆಕ್ಸ್ 2

ಅಮಾಜ್‌ಫಿಟ್ T-ರೆಕ್ಸ್ 2 ಸ್ಮಾ್ಟ್‌ವಾಚ್‌ ಇ-ಕಾಮರ್ಸ್‌ ಅಮೆಜಾನ್‌ನಲ್ಲಿ 14,999ರೂ. ಗಳಿಗೆ ಲಭ್ಯವಿದೆ. ಇದರ ಸಾಮಾನ್ಯ ದರ 21,999ರೂ. ಗಳಾಗಿದೆ. ಈ ವಾಚ್ 150ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳು, ಹೃದಯ ಬಡಿತದ ಮೇಲ್ವಿಚಾರಣೆ, SpO2 ಮಾನಿಟರಿಂಗ್ ಸೇರಿದಂತೆ ವಿವಿಧ ಫೀಚರ್ಸ್‌ ಹೊಂದಿದೆ.

ಅಮಾಜ್‌ಫಿಟ್ GTS 2 ಮಿನಿ

ಅಮಾಜ್‌ಫಿಟ್ GTS 2 ಮಿನಿ

ಅಮಾಜ್‌ಫಿಟ್ GTS 2 ಮಿನಿ ಸಾಮಾನ್ಯ ದರ 7,999ರೂ. ಗಳಾಗಿದ್ದು, ನೀವು 4,499ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ವಾಚ್ 1.55 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 68ಕ್ಕೂ ಹೆಚ್ಚಿನ ಸ್ಪೋರ್ಟ್ಸ್ ಮೋಡ್‌ಗಳ ಫೀಚರ್ಸ್‌ ಪಡೆದಿದೆ.

ಅಮಾಜ್‌ಫಿಟ್ GTR 3 ಪ್ರೊ

ಅಮಾಜ್‌ಫಿಟ್ GTR 3 ಪ್ರೊ

ಅಮಾಜ್‌ಫಿಟ್ GTR 3 ಪ್ರೊ ಸ್ಮಾರ್ಟ್‌ವಾಚ್ ಸಾಮಾನ್ಯ ದರ 18,999ರೂ. ಗಳಾಗಿದ್ದು, ನೀವು 17,999ರೂ. ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಈ ವಾಚ್‌ 1.45 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ ಹಾಗೆಯೇ GPS, ವೈ-ಫೈ ಸೇರಿದಂತೆ 150 ಸ್ಪೋರ್ಟ್ಸ್‌ ಮೋಡ್‌ ಫೀಚರ್ಸ್‌ಗಳನ್ನು ಇದು ಪಡೆದಿದೆ.

ಅಮಾಜ್‌ಫಿಟ್ ಬಿಪ್ U ಪ್ರೊ

ಅಮಾಜ್‌ಫಿಟ್ ಬಿಪ್ U ಪ್ರೊ

ಅಮಾಜ್‌ಫಿಟ್ ಬಿಪ್ U ಪ್ರೊ ಸ್ಮಾರ್ಟ್‌ವಾಚ್‌ ಮೂಲ ಬೆಲೆ 4,999ರೂ. ಗಳಾಗಿದ್ದು, ಆಫರ್‌ ದರವಾಗಿ 2,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ವಾಚ್ 1.43 ಇಂಚಿನ ಡಿಸ್‌ಪ್ಲೇ ಹೊಂದಿದ್ದು, SpO2, ಜಿಪಿಎಸ್, ಅಲೆಕ್ಸಾ ಸೇರಿದಂತೆ 60ಕ್ಕೂ ಹೆಚ್ಚಿನ ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ.

ಅಮಾಜ್‌ಫಿಟ್ ಜೆಪ್ E

ಅಮಾಜ್‌ಫಿಟ್ ಜೆಪ್ E

ಅಮಾಜ್‌ಫಿಟ್ ಜೆಪ್ E ಸ್ಮಾರ್ಟ್‌ವಾಚ್‌ 8,999ರೂ. ಗಳ ಸಾಮಾನ್ಯ ದರ ಹೊಂದಿದ್ದು, ನೀವು 7,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ವಾಚ್ 416×416 ಪಿಕ್ಸೆಲ್‌ ರೆಸಲ್ಯೂಶನ್‌ನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಫಿಟ್ನೆಸ್ ಟ್ರ್ಯಾಕಿಂಗ್, SpO2 ಸೇರಿದಂತೆ ವಿವಿಧ ರೀತಿಯ ಆರೋಗ್ಯ ಸಂಬಂಧಿತ ಮಾಹಿತಿಯನ್ನು ನೀಡುತ್ತದೆ.

ಅಮಾಜ್‌ಫಿಟ್ GTS 2

ಅಮಾಜ್‌ಫಿಟ್ GTS 2

ಅಮಾಜ್‌ಫಿಟ್ GTS 2 ಸ್ಮಾರ್ಟ್‌ವಾಚ್ 12,999ರೂ. ಗಳ ಸಾಮಾನ್ಯ ದರ ಹೊಂದಿದ್ದು, ನೀವು ಇದನ್ನು ಇ -ಕಾಮರ್ಸ್‌ ಸೈಟ್‌ಗಳಲ್ಲಿ 8,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ವಾಚ್‌ ಅಲ್ಟ್ರಾ ಹೆಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಜಿಪಿಎಸ್, SpO2, ಬ್ಲೂಟೂತ್ ಫೋನ್ ಕಾಲ್‌ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.

Best Mobiles in India

English summary
E-commerce sites such as Flipkart, Amazon and others have offered huge discounts on Amazfit smartwatches.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X