ರಾಜ್ಯಕ್ಕೂ ಬಂತು ವಿಶ್ವದ ವೇಗದ ಸಾರಿಗೆ ಹೈಪರ್‌ಲೂಪ್!..30 ನಿಮಿಷದಲ್ಲಿ ಬೆಂಗಳೂರು ಟು ಹುಬ್ಬಳ್ಳಿ!!

ಜಗತ್ತಿನಲ್ಲೇ ಅತ್ಯಂತ ವೇಗದ ಸಂಚಾರ ವ್ಯವಸ್ಥೆ ಎನ್ನುವ ಪಟ್ಟ ಹೊಂದಲಿರುವ ಹೈಪರ್‌ಲೂಪ್ ಸಾರಿಗೆ ಹರಿಕಾರ ಹೈಪರ್‌ಲೂಪ್‌ ಕಂಪನಿ ಜೊತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಂದ ಮಾಡಿಕೊಂಡಿದೆ.!!

|

ಕ್ಯಾಪ್ಸೂಲ್ ರೀತಿಯ ಭವಿಷ್ಯದ ಹೈಪರ್‌ಲೂಪ್ ಪ್ರಯಾಣಕ್ಕೆ ಕರ್ನಾಟಕ ಸಿದ್ದವಾಗಿದೆ.! ಹೌದು, ಜಗತ್ತಿನಲ್ಲೇ ಅತ್ಯಂತ ವೇಗದ ಸಂಚಾರ ವ್ಯವಸ್ಥೆ ಎನ್ನುವ ಪಟ್ಟ ಹೊಂದಲಿರುವ ಹೈಪರ್‌ಲೂಪ್ ಸಾರಿಗೆ ಹರಿಕಾರ ಹೈಪರ್‌ಲೂಪ್‌ ಕಂಪನಿ ಜೊತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಂದ ಮಾಡಿಕೊಂಡಿದೆ.!!

ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಟೆಕ್‌ ಸಮ್ಮಿಟ್‌ನಲ್ಲಿ ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ವರ್ಜಿನ್‌ ಹೈಪರ್‌ಲೂಪ್‌ ಒನ್‌ ಜತೆ ಒಡಂಬಡಿಕೆಗೆ ಸಹಿ ಮಾಡಿದ್ದು, ಎಲ್ಲವೂ ಅಂದುಕೊಂಡಂತೆಯೇ ಆದರೆ, ಕೇವಲ ಮೂರು ವರ್ಷಗಳಲ್ಲಿ ಕರ್ನಾಟಕ ಕೇವಲ ಅರ್ಧಗಂಟೆಯ ದಾರಿಯಾಗಲಿದೆ.!!

ವಿಶೇಷ ನಿರ್ವಾತವಿರುವ ಕೊಳವೆಯಲ್ಲಿ ಅಯಸ್ಕಾಂತೀಯ ಶಕ್ತಿಯೊಂದಿಗೆ ಗಂಟೆಗೆ ಒಂದು ಸಾವಿರ ಕಿ.ಮೀ. ವೇಗವಾಗಿ ಚಲಿಸುವ ಪಾಡ್‌ಗಳು ಹೈಪರ್‌ಲೂಪ್ ಪ್ರಯಾಣದ ಮುಖ್ಯ ತಂತ್ರಾಶವಾಗಿದ್ದು, ಹಾಗಾದರೆ, ಏನಿದು ಹೈಪರ್‌ಲೂಪ್ ಪ್ರಯಾಣ? ಯೋಜನೆ ಎಲ್ಲೆಲ್ಲಿ ಜಾರಿಯಾಗಲಿದೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ಹೈಪರ್‌ಲೂಪ್ ಪ್ರಯಾಣ?

ಏನಿದು ಹೈಪರ್‌ಲೂಪ್ ಪ್ರಯಾಣ?

ಮೊದಲೇ ಹೇಳಿದಂತೆ ವಿಶೇಷ ನಿರ್ವಾತವಿರುವ ಕೊಳವೆಯಲ್ಲಿ ಅಯಸ್ಕಾಂತೀಯ ಶಕ್ತಿಯೊಂದಿಗೆ ಗಂಟೆಗೆ ಒಂದು ಸಾವಿರ ಕಿ.ಮೀ. ವೇಗವಾಗಿ ಚಲಿಸುವ ಪಾಡ್‌ಗಳು ಇರುತ್ತವೆ. ಕ್ಯಾಪ್ಸೂಲ್ ರೀತಿಯಲ್ಲಿರುವ ಈ ಪಾಡ್‌ಗಳಲ್ಲಿ ಪೈಪ್ ಒಳಗೆ ಪ್ರಯಾಣ ಮಾಡುವ ಭವಿಷ್ಯದ ಸಾರಿಗೆ ಈ ಹೈಪರ್‌ಲೂಪ್.!!

ಬೆಂಗಳೂರು ಟು ಹುಬ್ಬಳಿ!!

ಬೆಂಗಳೂರು ಟು ಹುಬ್ಬಳಿ!!

ಹೈಪರ್‌ಲೂಪ್‌ ಕಂಪನಿ ಜೊತೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಂದ ಮಾಡಿಕೊಂಡಿದ್ದು, ಒಪ್ಪಂದದ ಪ್ರಕಾರ, ಬೆಂಗಳೂರು, ತುಮಕೂರು, ಹುಬ್ಬಳ್ಳಿ-ಧಾರವಾಡಗಳಲ್ಲಿ ಈ ಯೋಜನೆಯ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಆರ್ಥಿಕವಾಗಿಯೂ ಪ್ರಯೋಜನವಿದ್ದರೆ ಯೋಜನೆ ಮುಂದುವರೆಯುತ್ತದೆ.!!

ಪರೀಕ್ಷೆಯಲ್ಲಿ ಯಶಸ್ವಿ!!

ಪರೀಕ್ಷೆಯಲ್ಲಿ ಯಶಸ್ವಿ!!

ಈಗಾಗಲೇ ಹೈಪರ್‌ಲೂಪ್‌ 2013ರಲ್ಲಿ ನಾವಡಾ ಮರುಭೂಮಿಯಲ್ಲಿ ಯಶಸ್ವಿ ಪರೀಕ್ಷೆ ನಡೆದಿದೆ. ಭಾರತದಲ್ಲಿಯೂ ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಈ ಯೋಜನಯನ್ನು ತರಲು ಮುಂದಾಗಿವೆ. ಇದೀಗ ಕರ್ನಾಟಕದಲ್ಲಿಯೂ ಯೋಜನೆಗೆ ಚಾಲನೆ ಸಿಗಲಿದ್ದು, ಎಲ್ಲವೂ ಅಂದುಕೊಂಡಂತಾದರೆ 2021ಕ್ಕೆ ಯೋಜನೆ ಆರಂಭವಾಗಬಹುದು.!!

ವರ್ಜಿನ್‌ ಸಹಭಾಗಿತ್ವ!!

ವರ್ಜಿನ್‌ ಸಹಭಾಗಿತ್ವ!!

ಎಲಾನ್ ಮಾಸ್ಕ್ ಕನಸಿನ ಕೂಸಾದ ಹೈಪರ್‌ಲೂಪ್‌ ಯೋಜನೆಗೆ ವರ್ಜಿನ್‌ ಏರ್‌ಲೈನ್ಸ್ ಮಾಲಿ ರಿಚರ್ಡ್ ಬ್ರಾನ್ಸನ್ ಅವರು ಹೂಡಿಕೆ ಮಾಡುವುದಾಗಿ ಘೋಷಿಸಿ, ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ಇದೀಗ ಭಾರತದಲ್ಲೂ ವರ್ಜಿನ್‌ ಸಹಭಾಗಿತ್ವದಲ್ಲೇ ಹೈಪರ್‌ಲೂಪ್‌ ಯೋಜನೆ ನಡೆಸಲಿದ ಎಂದು ತಿಳಿದುಬಂದಿದೆ.!!

ಪ್ರಿಯಾಂಕ ಖರ್ಗೆ ಹೇಳಿದ್ದೇನು?

ಪ್ರಿಯಾಂಕ ಖರ್ಗೆ ಹೇಳಿದ್ದೇನು?

ರಾಜ್ಯ ಸರ್ಕಾರದ ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಟಿ ಹಬ್ ಬೆಂಗಳೂರಿನಲ್ಲಿ ಮತ್ತು ರಾಜ್ಯದಲ್ಲಿ ಹೈಪರ್‌ಲೂಪ್‌ನಂಥಹ ನವ ತಂತ್ರಜ್ಞಾನವನ್ನು ಅಳವಡಿಸಿದ್ದೇ ಆದರೆ, ರಾಜ್ಯದ ಪ್ರಗತಿಯ ವೇಗ ಮತ್ತಷ್ಟು ಹೆಚ್ಚಲಿದೆ ಎಂದಿದ್ದಾರೆ.!!

ಮಾರುಕಟ್ಟೆಯನ್ನೇ ದಂಗಾಗಿಸಿದ ಹಾಂಕಾಂಗ್ ಮೂಲದ ಹೊಸ ಸ್ಮಾರ್ಟ್‌ಫೋನ್!..ರೆಡ್‌ಮಿ ನೋಟ್ 4 ವೇಸ್ಟ್!!ಮಾರುಕಟ್ಟೆಯನ್ನೇ ದಂಗಾಗಿಸಿದ ಹಾಂಕಾಂಗ್ ಮೂಲದ ಹೊಸ ಸ್ಮಾರ್ಟ್‌ಫೋನ್!..ರೆಡ್‌ಮಿ ನೋಟ್ 4 ವೇಸ್ಟ್!!

Best Mobiles in India

English summary
Karnataka government signs MoU to bring new high-speed technology to state. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X