ಐಡಿಯಾ ಗ್ರಾಹಕರಿಗೆ ಬಿಟ್ಟರೇ ಬೇರೆಯಾರಿಗೂ ಇಲ್ಲ ಈ ಮಾದರಿಯ ಆಫರ್..!
ಮಾರುಕಟ್ಟೆಯಲ್ಲಿ ದಿನವೊಂದಕ್ಕೆ 1 GB ಡೇಟಾವನ್ನು ಬಳಕೆಗೆ ನೀಡುವ ಆಫರ್‌ಗಳನ್ನು ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ನೀಡುತ್ತಿವೆ. ಆದರೆ ಬಳಕೆದಾರರಿಗೆ ಇಂದಿನ ದಿನದಲ್ಲಿ ಪ್ರತಿ ನಿತ್ಯ 1GB ಡೇಟಾ ಬಳಕೆಗೆ ಸಾಲುತ್ತಿಲ್ಲ, ಇದರಿಂದಾಗಿ ನಿತ್ಯ 2GB ಡೇಟಾ ನೀಡುವ ಪ್ಲಾನ್‌ಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಐಡಿಯಾ ಸಹ ಹೊಸದೊಂದು ಆಫರ್ ಬಿಡುಗಡೆ ಮಾಡಿದ್ದು, ಈ ಮೂಲಕ ಗ್ರಾಹಕರಿಗೆ ಹತ್ತಿರವಾಗಲು ಮುಂದಾಗಿದೆ.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಇನ್ನು ಮುಂದೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇರಲ್ಲ..! ಬದಲಾಗಲಿದೆ.!
ತನ್ನ ಗ್ರಾಹಕರ ನಿತ್ಯದ ಡೇಟಾ ಬಳಕೆಯನ್ನು ಗಮನದಲ್ಲಿ ಇಟ್ಟುಕೊಂಡು ಐಡಿಯಾ ಈ ಬಾರಿ ಹೊಸದೊಂದು ಆಫರ್ ಲಾಂಚ್ ಮಾಡಿದ್ದು, ಪ್ರತಿ ನಿತ್ಯ ಗ್ರಾಹಕರಿಗೆ 2GB ಡೇಟಾವನ್ನು ಹೈ ಸ್ಪೀಡ್‌ನಲ್ಲಿ ನೀಡುವ ಆಫರ್ ವೊಂದನ್ನು ಘೋಷಣೆ ಮಾಡಿದೆ. ಈ ಮೂಲಕ ಗ್ರಾಹಕರ ಡೇಟಾ ಹಸಿವನ್ನು ನೀಗಿಸುವ ಪ್ರಯತ್ನಕ್ಕೆ ಕೈ ಹಾಕಿದೆ.

ರೂ. 357ಕ್ಕೆ 56GB ಡೇಟಾ..!
ಐಡಿಯಾ ತನ್ನ ಬಳಕೆದಾರರಿಗೆ 28 ದಿನಗಳ ಅವಧಿಗೆ ಪ್ರತಿ ನಿತ್ಯವೂ 2 GB ಡೇಟಾವನ್ನು ಬಳಕೆಗೆ ನೀಡಲಿದೆ. ಗ್ರಾಹಕರು ಒಟ್ಟು ಈ ಪ್ಲಾನ್‌ನಲ್ಲಿ 56GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಅದವೇ ಅತೀ ವೇಗದ ಇಂಟರ್ನೆಟ್ ಸೇವೆಯಾಗಲಿದೆ.

ಉಚಿತ ಕರೆ ಮಾಡುವ ಅವಕಾಶ:
ಇದಲ್ಲದೇ ಈ ಆಪರ್‌ನಲ್ಲಿ ಗ್ರಾಹಕರಿಗೆ ಐಡಿಯಾ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ನ್ಯಾಷಿನಲ್ ರೋಮಿಂಗ್ ಕರೆಗಳು ಸಹ ಉಚಿತವಾಗಿದ್ದು, ಅಲ್ಲದೇ ಪ್ರತಿ ನಿತ್ಯ 100 SMS ಅನ್ನು ಉಚಿತವಾಗಿ ಕಳುಹಿಸಬಹುದಾಗಿದೆ.

ಹೊಸ ಗ್ರಾಹಕರಿಗೆ ಗಾಳ:
ಐಡಿಯಾ ಮಾರುಕಟ್ಟೆಯಲ್ಲಿ ತನ್ನ ಬ್ರಾಂಡ್ ವ್ಯಾಲ್ಯೂವನ್ನು ಏರಿಕೆ ಮಾಡಿಕೊಳ್ಳಲು ಮತ್ತು ಈಗಾಗಲೇ ಕಳೆದುಕೊಂಡಿರುವ ಗ್ರಾಹಕರನ್ನು ಮರಳಿ ಪಡೆಯುವ ಸಲುವಾಗಿ ಮತ್ತು ಹೊಸ ಗ್ರಾಹಕರಿಗೆ ಗಾಳ ಹಾಕಲು ಈ ಮಾದರಿಯ ಹೊಸ ಆಫರ್ ಅನ್ನು ಲಾಂಚ್ ಮಾಡಿದೆ ಎನ್ನಲಾಗಿದೆ.


Click it and Unblock the Notifications








