ಐಡಿಯಾ ಸೆಲ್ಯುಲರ್ ನಿಂದ “ ಪ್ರಿಪೇಯ್ಡ್ ಐಡಿಯಾ ಸೆಲೆಕ್ಟ್ ಪ್ರಿವಿಲೇಜ್ ಪ್ರೊಗ್ರಾಮ್” – ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಸಂಗತಿಗಳು

By Gizbot Bureau
|

ಟೆಲಿಕಾಂ ಆಪರೇಟರ್ ಗಳು ಹೊಸ ಹೊಸ ಪ್ಲಾನ್ ಗಳನ್ನು ಮತ್ತು ಸೇವೆಗಳನ್ನು ಬಿಡುಗಡೆಗೊಳಿಸುವುದರಲ್ಲಿ ಬ್ಯುಸಿಯಾಗಿದ್ದು ತಮ್ಮ ಚಂದಾದಾರರನ್ನು ಆಕರ್ಷಿಸುವುದಕ್ಕೆ ಮುಂದಾಗುತ್ತಿದ್ದಾರೆ.ಇತ್ತೀಚೆಗೆ ದೇಶದ ಪ್ರಮುಖ ಟೆಲಿಕಾಂ ಆಪರೇಟರ್ ಆಗಿರುವ ಏರ್ ಟೆಲ್ ಹೊಸ ಸ್ಕ್ರೀಮ್ ನ್ನು ಬಿಡುಗಡೆಗೊಳಿಸಿತ್ತು. ಅದನ್ನು ಏರ್ ಟೆಲ್ ಥ್ಯಾಂಕ್ಸ್ ಕಾರ್ಯಕ್ರಮವೆನ್ನಲಾಗಿತ್ತು ಮತ್ತು ಯಾವ ಗ್ರಾಹಕರು ರೀಚಾರ್ಜ್ ಪ್ಲಾನ್ ಮೂಲಕ ಉಚಿತ ನೆಟ್ ಫ್ಲಿಕ್ಸ್, ಝೀ5 ಮತ್ತು ಅಮೇಜಾನ್ ಪ್ರೈಮ್ ಚಂದಾದಾರಿಕೆಯನ್ನು ಪಡೆದಿದ್ದರೋ ಅವರಿಗೆ ಧನ್ಯವಾದ ಸಮರ್ಪಿಸುವ ಕಾರ್ಯಕ್ರಮ ಇದು ಎಂದು ಏರ್ ಟೆಲ್ ಹೇಳಿಕೊಂಡಿತ್ತು.

ಐಡಿಯಾ ಸಲ್ಯೂಲರ್ ನಲ್ಲೂ ವಿಶೇಷ ಕಾರ್ಯಕ್ರಮ:

ಐಡಿಯಾ ಸಲ್ಯೂಲರ್ ನಲ್ಲೂ ವಿಶೇಷ ಕಾರ್ಯಕ್ರಮ:

ಐಡಿಯಾ ಸೆಲ್ಯೂಲರ್ ಕೂಡ ಇದೇ ರೀತಿಯ ಕಾರ್ಯಕ್ರಮವನ್ನು ಇದೀಗ ಹಮ್ಮಿಕೊಂಡಿದೆ.ಟೆಲಿಕಾಂ ಆಪರೇಟರ್ ಪ್ರಿಪೇಯ್ಡ್ ಐಡಿಯಾ ಸೆಲೆಕ್ಟ್ ಪ್ರಿವಿಲೇಜ್ ಪ್ರೊಗ್ರಾಮ್ ನ್ನು ಆಯೋಜಿಸಿದೆ. ಟೆಲಿಕಾಂ ಟಾಕ್ ನ ವರದಿಯ ಪ್ರಕಾರ ಈ ಹೊಸ ಐಡಿಯಾದ ಕಾರ್ಯಕ್ರಮವು ಮೂರು ಟಯರ್ ಗಳಲ್ಲಿ ಲಭ್ಯವಿದೆ-ಗೋಲ್ಡ್, ಪ್ಲಾಟಿಮಂ ಮತ್ತು ಟೈಟಾನಿಯಂ.

ಗೋಲ್ಡ್ ಪ್ಲಾನ್:

ಗೋಲ್ಡ್ ಪ್ಲಾನ್:

ಗೋಲ್ಡ್ ಬಹಳ ಬೇಸಿಕ್ ಪ್ಲಾನ್ ಆಗಿದ್ದು ಪ್ರಿಪೇಯ್ಡ್ ಬಳಕೆದಾರರಿಗೆ ಲಭ್ಯವಿದೆ. ಈ ಪ್ಲಾನ್ ನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಬಳಕೆದಾರರ ಬಳಿ ಕನಿಷ್ಟ ಮೂರು ತಿಂಗಳ ಹಳೆಯ ಐಡಿಯಾ ಸೆಲ್ಯುಲರ್ ಕನೆಕ್ಷನ್ ಇರಬೇಕು ಮತ್ತು ಕನಿಷ್ಟ್ 375 ರುಪಾಯಿ ಮಾಸಿಕ ಬಳಕೆ ಮಾಡಬೇಕು. ಬೆನಿಫಿಟ್ ಗಳ ಬಗ್ಗೆ ಮಾತನಾಡುವುದಾದರೆ ಐಡಿಯಾ ಸೆಲ್ಯೂಲರ್ ವೇಗದ ಕನೆಕ್ಷನ್ ನ್ನು ಕಸ್ಟಮರ್ ಕೇರ್ ಅವರ ಜೊತೆಗೆ ಲಭ್ಯಗೊಳಿಸುತ್ತದೆ. ಪ್ಲಾನ್ ನ ಅಡಿಯಲ್ಲಿ ಗ್ರಾಹಕರು ತಮ್ಮ ಸಿಟಿಯನ್ನು ಬದಲಾಯಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಇದರ ಜೊತೆಗೆ ಮೂವಿ ಟಿಕೆಟ್ ಗಳಿಗೆ 20% ರಿಯಾಯಿತಿಯನ್ನು ನೀಡಲಾಗುತ್ತದೆ. ಗ್ರಾಹಕರು ಮೈ ಐಡಿಯಾ ಆಪ್ ನ ಮೂಲಕ ಇದನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಆಯ್ದ ಅರ್ಹ ಬಳಕೆದಾರರಿಗೆ ಐಡಿಯಾದಿಂದ ಸುಮಾರು 100 ಕ್ಕೂ ಅಧಿಕ ಬ್ರ್ಯಾಂಡ್ಸ್ ಗಳಿಗೆ ಉತ್ತಮ ಡೀಲ್ ಗಳು ಲಭ್ಯವಾಗುತ್ತದೆ.

ಪ್ಲಾಟಿನಂ ಪ್ಲಾನ್:

ಪ್ಲಾಟಿನಂ ಪ್ಲಾನ್:

ಪ್ಲಾಟಿನಂ ಪ್ಲಾನಿನ ಅಡಿಯಲ್ಲಿ ಗ್ರಾಹಕರು ಕನಿಷ್ಟ 3 ತಿಂಗಳ ಐಡಿಯಾ ಕನೆಕ್ಷನ್ ನ್ನು ಹೊಂದಿರಬೇಕು ಮತ್ತು ಮಾಸಿಕ 725 ರುಪಾಯಿ ಬಳಕೆ ಮಾಡಬೇಕು. ಈ ಪ್ಲಾನಿನ ಅಡಿಯಲ್ಲಿ ಕಸ್ಟಮರ್ ಕೇರ್ ಗೆ ವೇಗದ ಆಕ್ಸಿಸ್ ಇರುತ್ತದೆ. ಒಂದು ಉಚಿತ ಕಾಂಪ್ಲಿಮೆಂಟರಿ ಮ್ಯಾಟನಿ ಮೂವಿ ಟಿಕೆಟ್ ಪ್ರತಿ ತಿಂಗಳು ಬುಕ್ ಮೈ ಶೋ ನಲ್ಲಿ ಸಿಗುತ್ತದೆ. ಇದರ ಜೊತೆಗೆ ಉಳಿದ ಎಲ್ಲಾ ಗೋಲ್ಡ್ ಪ್ಲಾನಿನ ಬೆನಿಫಿಟ್ ಗಳು ಕೂಡ ಅನ್ವಯಿಸುತ್ತದೆ.

ಟೈಟಾನಿಯಂ ಪ್ಲಾನ್:

ಟೈಟಾನಿಯಂ ಪ್ಲಾನ್:

ಕೊನೆಯದಾಗಿ, ಟೈಟಾನಿಯಂ ಪ್ಲಾನಿನ ಅಡಿಯಲ್ಲಿ 3 ತಿಂಗಳ ಐಡಿಯಾ ಕನೆಕ್ಷನ್ ಇರಬೇಕು ಮತ್ತು ಮಾಸಿಕ 3,000 ರುಪಾಯಿ ಬಳಕೆ ಮಾಡಬೇಕು. ಗೋಲ್ಡ್ ಮತ್ತು ಪ್ಲಾಟಿನಂ ಪ್ಲಾನಿನ ಅಡಿಯಲ್ಲಿ ಸಿಗುವ ಎಲ್ಲಾ ಬೆನಿಫಿಟ್ ಗಳು ಇದರಲ್ಲಿ ಸಿಗುತ್ತದೆ ಜೊತೆಗೆ ಎರಡು ಮೂವಿ ಟಿಕೆಟ್ ಗಳು ಪ್ರತಿ ತಿಂಗಳು ಬುಕ್ ಮೈ ಶೋನಲ್ಲಿ ಲಭ್ಯವಾಗುತ್ತದೆ.

Best Mobiles in India

English summary
Idea Cellular introduces ‘Prepaid Idea Select Privilege Program’: Here’s all you need to know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X