ಮೊಬೈಲ್‌ಗಳ ನಡುವೆ ಟಾಕ್‌ಟೈಮ್‌ ಹಂಚಿಕೆ ಹೇಗೆ

By Suneel
|

ಟಾಕ್‌ಟೈಮ್‌ ಎಂಬುದು ಮೊಬೈಲ್‌ಗೆ ಅತ್ಯಾವಶ್ಯಕ. ನಾವು ಇತರರಿಗೆ ಕಾಲ್‌ ಹೆಚ್ಚು ಮಾಡುವುದಿಲ್ಲ ಎಂದರೂ ಪರವಾಗಿಲ್ಲ, ಯಾರಾದರೂ ಆಕಸ್ಮಿಕವಾಗಿ ಒಂದು ಕರೆ ಮಾಡಿಕೊಡಪ್ಪ ಎಂದು ಕೇಳಿದಾಗ ಬ್ಯಾಲೆನ್ಸ್‌ ಇಲ್ಲಾ ಎಂದರೆ ಅಷ್ಟು ದೊಡ್ಡ ಆಂಡ್ರಾಯ್ಡ್‌ ಫೋನ್‌ಗಳಿದ್ದು ನಾವು ಅವರ ಮುಂದೆ ಟೀಕೆಗೆ ಗುರಿಯಾಗುವುದುಂಟು. ಆದರೆ ಇದನ್ನು ಪಕ್ಕಕ್ಕೆ ಸರಿಸಿ ನಾವೇ ಟಾಕ್‌ಟೈಮ್‌ ಬಗ್ಗೆ ಯೋಚಿಸಿದರೆ ಖಂಡಿತ ಅದು ಅತ್ಯಗತ್ಯವಾಗಿದೆ.

ಓದಿರಿ: ಟೆಕ್‌ ಕ್ಷೇತ್ರದಲ್ಲಿ ಇವರೇ ಪವರ್‌ಫುಲ್‌ ವ್ಯಕ್ತಿಗಳು
ಯಾವುದೋ ದೂರದ ಪ್ರದೇಶದಲ್ಲಿದ್ದೀರಿ ಎಂದುಕೊಳ್ಳಿ. ಅಲ್ಲಿ ಆಕಸ್ಮಿಕವಾಗಿ ನಿಮ್ಮ ಮೊಬೈಲ್‌ ಬ್ಯಾಲೆನ್ಸ್‌ ಕಾಲಿಯಾಗಿ ರಿಚಾರ್ಜ್‌ ಮಾಡಿಸೋಣವೆಂದರೂ ಆ ಪ್ರದೇಶದಲ್ಲಿ ಯಾವುದೇ ರಿಚಾರ್ಜ್‌ ಸೇವೆ ಇಲ್ಲವಾದ್ದಲ್ಲಿ, ನೀವು ನಿಮ್ಮ ಗೆಳೆಯರ ಅಥವಾ ಸಂಬಂಧಿಗಳ ಮೊಬೈಲ್‌ನಿಂದ ಟಾಕ್‌ಟೈಮ್‌ ಬ್ಯಾಲೆನ್ಸ್‌ ಶೇರ್ ಮಾಡಿಕೊಳ್ಳಬಹುದಾಗಿದೆ. ಆದರೆ ನೀವು ನಿಮ್ಮ ಮಿನಿಮಮ್‌ ಬ್ಯಾಲೆನ್ಸ್‌ ಇದ್ದಾಗಲೇ ನಿಮ್ಮ ಗೆಳೆಯರಿಗೆ ಅಥವಾ ಸಂಬಂಧಿಗಳಿಗೆ ಈ ಮಾಹಿತಿಯನ್ನು ತಿಳಿಸಬೇಕಷ್ಟೇ. ಅಥವಾ ಮೇಸೇಜ್‌ ಮೂಲಕ ಮಾಹಿತಿ ತಿಳಿಸಬೇಕಾಗುತ್ತದೆ.

ಓದಿರಿ: ಸ್ಮಾರ್ಟ್‌ಫೋನ್ ಫೋಟೋಗ್ರಫಿಗಾಗಿ ಟಾಪ್ ಆಪ್ಸ್
ಪ್ರೀಪೇಡ್‌ ಮೊಬೈಲ್ ನಂಬರ್ ಹೊಂದಿರುವವರು ತುರ್ತು ಸಮಯದಲ್ಲಿ ಇಂತಹ ಸೇವೆ ಬಳಸಿಕೊಳ್ಳಬಹುದಾಗಿದ್ದು, ಟಾಕ್‌ಟೈಮ್‌ ಬ್ಯಾಲೆನ್ಸ್ ವರ್ಗಾವಣೆ ಮಾಡಲು ನೆಟ್‌ವರ್ಕ್‌ ಒಂದೇ ಆಗಿರಬೇಕು. ಅಂದರೆ ನೀವು ಏರ್‌ಟೆಲ್‌ ನಿಂದ ಏರ್‌ಟೆಲ್‌ಗೆ ಮಾತ್ರ ಬ್ಯಾಲೆನ್ಸ್‌ ವರ್ಗಾವಣೆ ಮಾಡಬಹುದಾಗಿದೆ. ಹಾಗಾದರೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಏರ್‌ಟೆಲ್‌, ಐಡಿಯಾ, ರಿಲಾಯನ್ಸ್‌, ಟಾಟಾ ಡೊಕೊಮೊ, ಏರ್‌ಸೆಲ್‌, ಬಿಎಸ್‌ಎನ್‌ಎಲ್‌, ವೊಡಾಫೋನ್‌, ಮೊಬೈಲ್‌ ನಂಬರ್‌ ಬಳಸುವವರು ಟಾಕ್‌ಟೈಮ್‌ ವರ್ಗಾವಣೆ ಹೇಗೆ ಎಂಬುದನ್ನು ತಿಳಿದುಕೊಳ್ಳಿ.

 ಏರ್‌ಟೆಲ್‌

ಏರ್‌ಟೆಲ್‌

#141# ಗೆ ಡಯಲ್‌ ಮಾಡಿ>> 1-share Talktime ಸೆಲೆಕ್ಟ್‌ ಮಾಡಿ>>ನಂತರದಲ್ಲಿ ಟಾಕ್‌ಟೈಮ್‌ ವರ್ಗಾವಣೆ ಮಾಡಬೇಕಾಗಿರುವ ಮೊಬೈಲ್‌ ನಂಬರ್‌ ಟೈಪ್‌ ಮಾಡಿ>> ನಂತರ ವರ್ಗಾವಣೆ ಅಮೌಂಟ್ ಕೇಳುತ್ತದೆ, ಅದು ಎಷ್ಟು ಎಂಬುದನ್ನು ಟೈಪ್‌ ಮಾಡಿ ಒಕೆ ಪ್ರೆಸ್‌ ಮಾಡಿ. ಟಾಕ್‌ ಟೈಮ್‌ ಶೇರ್‌ ಆಗುತ್ತದೆ.

 ಏರ್‌ಟೆಲ್‌

ಏರ್‌ಟೆಲ್‌

ಏರ್‌ಟೆಲ್‌ನಲ್ಲಿ ಕನಿಷ್ಟ 5 ರೂಪಾಯಿ, ಗರಿಷ್ಟ 30 ರೂಪಾಯಿ ಟಾಕ್‌ಟೈಮ್‌ ಶೇರ್‌ ಮಾಡಬಹುದಾಗಿದೆ. ಸೇವಾ ಶುಲ್ಕ 10 ರೂಪಾಯಿ ಚಾರ್ಜ್ ಆಗಲಿದೆ. ಪ್ರತಿದಿನ ಕನಿಷ್ಟ 5 ಬಾರಿ ಮತ್ತು ತಿಂಗಳಿಗೆ 30 ಬಾರಿ ಮಾತ್ರ ಈ ರೀತಿ ಟಾಕ್‌ಟೈಮ್‌ ವರ್ಗಾವಣೆ ಮಾಡಬಹುದಾಗಿದೆ.

ಟಾಟಾ ಡೊಕೊಮೊ

ಟಾಟಾ ಡೊಕೊಮೊ

ಹಂತ -1
ಟಾಟಾ ಡೊಕೊಮೊ ಬಳಕೆದಾರರು ಈ ರೀತಿ ಸೇವೆಗಾಗಿ BUDDYNET ಸೇವೆಗೆ ಸಬ್‌ಸ್ಕ್ರೈಬ್‌ ಆಗಬೇಕಿದೆ. ಸಬ್‌ ಸ್ಕ್ರೈಬ್‌ ಆಗಲು "BT Mobile Number amount" ಎಂದು ಟೈಪ್‌ ಮಾಡಿ 54321 ಗೆ ಸಂದೇಶ ಕಳುಹಿಸಿ. ನಂತರ ಬಂದ ಮೇಸೇಜ್‌ಗೆ "RBTTransaction ID" ಎಂದು ಟೈಪ್‌ ಮಾಡಿ ಪುನಃ 54321 ಗೆ ಸಂದೇಶ ಕಳುಹಿಸಿ.

ಟಾಟಾ ಡೊಕೊಮೊ

ಟಾಟಾ ಡೊಕೊಮೊ

ಹಂತ- 2
- ನಿಮ್ಮ ಮೊಬೈಲ್‌ನಿಂದ ಇತರ ಮೊಬೈಲ್‌ ನಂಬರ್‌ಗೆ ಟಾಕ್‌ಟೈಮ್‌ ವರ್ಗಾವಣೆ ಮಾಡಲು ವರ್ಗಾವಣೆ ಮಾಡುವವರು ಯಾವ ಮೊಬೈಲ್‌ ನಂಬರ್‌ಗೆ ಕಳುಹಿಸಬೇಕೋ ಅವರು ಈ ರೀತಿ ಮಾಡಿ. 25 ರೂಪಾಯಿ ವರ್ಗಾವಣೆ ಮಾಡಬೇಕಾದಲ್ಲಿ ಉದಾಹರಣೆ: :BT 9731628ABC 25" ಎಂದು ಟೈಪ್‌ ಮಾಡಿ 54321 ಗೆ ಸಂದೇಶ ಕಳುಹಿಸಿ.
- ಕೇವಲ 1 ರೂಪಾಯಿ ಸೇವಾ ಶುಲ್ಕ ವಾಗುತ್ತದೆ.

 ಐಡಿಯಾ

ಐಡಿಯಾ

-ಟಾಕ್‌ಟೈಮ್‌ ಬೇಕಾದವರು ಯಾರಿಂದ ಟಾಕ್‌ಟೈಮ್‌ ಬೇಕೋ ಅವರು 'ASK' ಅವರ ಮೊಬೈಲ್‌ ನಂಬರ್ ಮತ್ತು ಅಮೌಂಟ್ ಟೈಪ್‌ ಮಾಡಿ 55567 ಗೆ ಸಂದೇಶ ಕಳುಹಿಸಬೇಕು.
-ಟಾಕ್‌ಟೈಮ್‌ ಬ್ಯಾಲೆನ್ಸ್‌ ನೀಡುವವರು 'GIVE' ಮತ್ತು ಯಾರಿಗೆ ಟಾಕ್‌ಟೈಮ್‌ ಕಳುಹಿಸಬೇಕೋ ಅವರ ನಂಬರ್ ಮತ್ತು ಅಮೌಂಟ್‌ ಟೈಪ್‌ ಮಾಡಿ 55567ಗೆ ಸಂದೇಶ ಕಳುಹಿಸಿದರೆ ಟಾಕ್‌ಟೈಮ್‌ ವರ್ಗಾವಣೆಯಾಗುತ್ತದೆ.

 ಐಡಿಯಾ

ಐಡಿಯಾ

* ಐಡಿಯಾದಲ್ಲಿ ಈ ವಿಧಾನಕ್ಕೆ 2 ರೂಪಾಯಿ ಸೇವಾ ಶುಲ್ಕವಾಗುತ್ತದೆ.
* 11 ರೂಪಾಯಿಗಿಂತ ಹೆಚ್ಚು ವರ್ಗಾವಣೆ ಮಾಡಲೇಬೇಕು.
*ಟಾಕ್‌ಟೈಮ್‌ ವರ್ಗಾವಣೆಗೆ *567*mobile number*amount# ಬಳಸಬಹುದು.

ವೊಡಾಫೋನ್‌

ವೊಡಾಫೋನ್‌

ಟಾಕ್‌ಟೈಮ್‌ ವರ್ಗಾವಣೆ ಮಾಡುವವರು *131*ಅಮೌಂಟ್‌*ಮೊಬೈಲ್‌ ನಂಬರ್# ಡಯಲ್‌ ಮಾಡಬೇಕು.
- ವರ್ಗಾವಣೆ ಸೇವೆ ನೀಡಲು ನಿಮ್ಮ ಮೊಬೈಲ್‌ ನಂಬರ್ 3 ತಿಂಗಳು ಹಳೆಯದಾಗಿರಲೇ ಬೇಕು.

ಏರ್‌ಸೆಲ್‌

ಏರ್‌ಸೆಲ್‌

-ಟಾಕ್‌ಟೈಮ್‌ ವರ್ಗಾವಣೆ ಮಾಡುವವರು *122*666# ಗೆ ಡಯಲ್ ಮಾಡಿ ಇನ್‌ಸ್ಟ್ರಕ್ಷನ್‌ ಫಾಲೋ ಮಾಡಬೇಕು.

ಏರ್‌ಸೆಲ್‌

ಏರ್‌ಸೆಲ್‌

-ಕನಿಷ್ಟ 5 ರೂಪಾಯಿಯಿಂದ ಗರಿಷ್ಟ 100 ರೂಪಾಯಿ ಟಾಕ್‌ಟೈಮ್‌ ವರ್ಗಾವಣೆ ಮಾಡಬಹುದು. ಸೇವಾ ಶುಲ್ಕ ಕೇವಲ 1 ರೂಪಾಯಿ ಮಾತ್ರ. ಕೇವಲ ಪ್ರಿಪೇಡ್‌ ಗ್ರಾಹಕರು ಮಾತ್ರ ಈ ಸೇವೆ ಪಡೆಯಬಹುದಾಗಿದೆ.

ಬಿಎಸ್‌ಎನ್‌ಎಲ್‌ (BSNL)

ಬಿಎಸ್‌ಎನ್‌ಎಲ್‌ (BSNL)

-ಟಾಕ್‌ಟೈಮ್‌ ವರ್ಗಾವಣೆ ಮಾಡಲು ಮೊಬೈಲ್‌ ನಂಬರ್ ಮತ್ತು ಅಮೌಂಟ್‌ ಟೈಪ್‌ ಮಾಡಿ 53733 ಗೆ ಸಂದೇಶ ಕಳುಹಿಸಬೇಕು.

ರಿಲಾಯನ್ಸ್‌

ರಿಲಾಯನ್ಸ್‌

-ಟಾಲ್‌ಟೈಮ್‌ ವರ್ಗಾವಣೆ ಮಾಡಲು ಮೊದಲು *367# ಗೆ ಡಯಲ್‌ ಮಾಡಬೇಕು. ನಂತರ ಮೊಬೈಲ್‌ ನಂಬರ್ ಮತ್ತು ಅಮೌಂಟ್‌ ಟೈಪ್‌ ಮಾಡಿ ಡಿಫಾಲ್ಟ್ ಪಿನ್‌ 1 ಪ್ರೆಸ್‌ ಮಾಡಬೇಕು.

Best Mobiles in India

English summary
Some times when you are in dire need of talktime and you can’t get your mobile phone recharged then you remember your friend or family member who can transfer some talktime in your mobile number.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X