Subscribe to Gizbot

ಜಿಯೋ ಅಬ್ಬರಕ್ಕೆ ಸಿಲುಕಿ ಅತೀ ದೊಡ್ಡ ನಷ್ಟದಲ್ಲಿ ಐಡಿಯಾ, ಗ್ರಾಹಕರ ಕಥೆ ಏನು..?

Written By:

ಜಿಯೋ ಆರಂಭದ ನಂತರದಲ್ಲಿ ಸಾಕಷ್ಟು ಮೊಬೈಲ್ ಕಂಪನಿಗಳು ನಷ್ಟದ ಹಾದಿಯನ್ನು ಹಿಡಿದಿದೆ. ಈಗಾಗಲೇ ಹಲವು ಕಂಪನಿಗಳು ಮುಚ್ಚುವ ಹಂತವನ್ನು ತಲುಪಿದ್ದರೇ ಇನ್ನು ಕೆಲವು ಅಸ್ತಿತ್ವಕ್ಕೆ ಒಡ್ಡಾಡುತ್ತಿವೆ. ಇದೇ ಮಾದರಿಯಲ್ಲಿ ಐಡಿಯಾ ಕಂಪನಿಯೂ ನಷ್ಟದ ಹಾದಿಯಲ್ಲಿದ್ದು, ಶೀಘ್ರವೇ ಬಾಗಿಲು ಹಾಕುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಶೀಘ್ರವೇ ಐಡಿಯಾ ಸಹ ಮುಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಿಯೋ ಅಬ್ಬರಕ್ಕೆ ಸಿಲುಕಿ ಅತೀ ದೊಡ್ಡ ನಷ್ಟದಲ್ಲಿ ಐಡಿಯಾ, ಗ್ರಾಹಕರ ಕಥೆ ಏನು..?

ಐಡಿಯಾ ಸೆಲ್ಯೂಲರ್‌ ಈ ಬಾರಿ ಅಂದಾಜಿಸಿದ್ದ ನಿವ್ವಳ ನಷ್ಟವು ಹೆಚ್ಚಿನದಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಐಡಿಯಾ ನಷ್ಟ ಪ್ರಮಾಣ ಹೆಚ್ಚಳವಾಗಿದ್ದು 1,285 ಕೋಟಿ ರೂ. ಮುಟ್ಟಿದೆ ಎನ್ನಲಾಗಿದ್ದು, ಇದರಿಂದಾಗಿ ಟೆಲಿಕಾಂ ಮಾರುಕಟ್ಟೆಯಲ್ಲಿ ಮತ್ತೊಂದು ವಿಕೆಟ್ ಪತನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಮೂಲಗಳ ಪ್ರಕಾರ ಐಡಿಯಾ-ವೊಡಾಫೋನ್ ಒಂದಾಗುವ ಲಕ್ಷಣಗಳು ಕಾಣಿಸುತ್ತಿವೆ.

ಓದಿರಿ: ಎದೆ ಝಲ್ ಎನ್ನಿಸುವವ ವೈರಲ್ ವಿಡಿಯೋ.! ರೈಲಿನ ಮುಂದೆ ಸೆಲ್ಫಿ: ಸಾವಿನ ದವಡೆಯಲ್ಲಿ ಯುವಕ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5 ತ್ರೈಮಾಸಿಕದಿಂದ ನಷ್ಟದಲ್ಲಿ ಐಡಿಯಾ:

5 ತ್ರೈಮಾಸಿಕದಿಂದ ನಷ್ಟದಲ್ಲಿ ಐಡಿಯಾ:

ಸತತ 5 ತ್ರೈಮಾಸಿಕದಿಂದ ಐಡಿಯಾ ನಷ್ಟದಲ್ಲಿದ್ದು, ಆದರೆ ಈ ಬಾರಿ ಅತಿ ದೊಡ್ಡ ನಷ್ಟದಲ್ಲಿದೆ ಸಿಲುಕಿದೆ ಎನ್ನಲಾಗಿದೆ. ಇದಲ್ಲದೆ ನಷ್ಟವು ಸಹ ಅಂದಾಜಿಗಿಂತಲೂ ಅಧಿಕವಾಗಿದ್ದು, ದೇಶದಲ್ಲಿ ಜಿಯೋ ಅಬ್ಬರ ಜೋರಾಗಿರುವ ಹಿನ್ನಲೆಯಲ್ಲಿ ಐಡಿಯಾ-ವೊಡೊಫೋನ್‌ನೊಂದಿಗೆ ವಿಲೀನವಾಗಲಿದೆ ಎನ್ನುವ ಮಾತು ಕೇಳಿಬಂದಿದೆ.

How to Activate UAN Number? KANNADA
ಜಿಯೋ ಪ್ರಭಾವ:

ಜಿಯೋ ಪ್ರಭಾವ:

ರಿಲಯನ್ಸ್‌ ಮಾಲೀಕತ್ವದ ಜಿಯೋದಿಂದಾಗಿ ದರ ಸಮರ ತೊಡಗಿಕೊಂಡ ಕಾರಣದಿಂದ ಐಡಿಯಾ ನಷ್ಟ ಪ್ರಮಾಣ ಏರಿಕೆಯಾಗಿದೆ ಎನ್ನಲಾಗಿದೆ. ಭಾರತದ ಮೂರನೇ ಅತೀ ದೊಡ್ಡ ದೂರ ಸಂಪರ್ಕ ಕಂಪನಿಯಾದ ಐಡಿಯಾ ಕಳೆದ ವರ್ಷದ ಇದೇ ಅವಧಿಯಲ್ಲಿ 1,107 ಕೋಟಿ ರೂ. ನಷ್ಟ ಅನುಭವಿಸಿದೆ ಎನ್ನುವ ಮಾಹಿತಿ ಲೀಕ್ ಆಗಿದೆ.

ಜಿಯೋ ಆದಾಯ ಹೆಚ್ಚು:

ಜಿಯೋ ಆದಾಯ ಹೆಚ್ಚು:

ಎಲ್ಲಾ ಕಂಪನಿಗಳು ದೇಶದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದರೆ ಮತ್ತೊಂದು ಕಡೆ, ರಿಲಯನ್ಸ್‌ ಮಾಲೀಕತ್ವದ ಜಿಯೋ ಆದಾಯ ರೂ. 6,879 ಕೋಟಿಗೆ ಏರಿಕೆಯಾಗಿದ್ದು, ನಿವ್ವಳ ಲಾಭವು ರೂ. 504 ಕೋಟಿ ಮುಟ್ಟಿದೆ.

ನಷ್ಟದಲ್ಲಿ ಏರ್‌ಟೆಲ್‌:

ನಷ್ಟದಲ್ಲಿ ಏರ್‌ಟೆಲ್‌:

ಏರ್‌ಟೆಲ್‌ ನಿವ್ವಳ ಲಾಭವೂ ಶೇ.39ರಷ್ಟು ಕುಸಿದಿದ್ದು ರೂ.306 ಕೋಟಿ ತಲುಪಿದೆ. ಆದರೆ ಇದಿದ್ದರಲ್ಲಿ ಏರ್‌ಟೆಲ್ ಮಾತ್ರವೇ ಕೊಂಚ ಕಣ್ಣುಬಿಡುವ ಮಟ್ಟದಲ್ಲಿದೆ ಎನ್ನಲಾಗಿದೆ. ಉಳಿದ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ನಷ್ಟದಲ್ಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Idea post biggest loss as Jio turns profitable. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot