ಐಡಿಯಾ, ಏರ್‌ಟೆಲ್, ಜಿಯೋದ 299 ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್‌..!

By GizBot Bureau
|

ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಎಲ್ಲಾ ಟೆಲಿಕಾಂ ಆಪರೇಟರ್ ಗಳೂ ಕೂಡ ವಿಭಿನ್ನ ಆಫರ್ ಗಳನ್ನು ನೀಡುವುದು ದಶಕಗಳಿಂದಲೂ ನಡೆದುಬಂದಿದೆ. ಈಗ ಐಡಿಯಾ ಕೂಡ ಸ್ಪರ್ದೆಯೊಡ್ಡುವ ನಿಟ್ಟಿನಲ್ಲಿ ಹೊಸ ಪ್ರೀಪೇಡ್ ಪ್ಲಾನ್ ಒಂದನ್ನು ಪರಿಚಯಿಸಿದೆ. ಅದುವೇ 295 ರುಪಾಯಿಯ ಪ್ರೀಪೇಡ್ ಪ್ಲಾನ್. ಸದ್ಯ ಇದು ರಿಲಯನ್ಸ್ ಜಿಯೋ ಮತ್ತು ಭಾರತೀ ಏರ್ ಟೆಲ್ ಆಫರ್ ಗಳ ನಡುವಿನ ಹೋಲಿಕೆಗೆ ಕಾರಣವಾಗುತ್ತಿದೆ.

ಇದೀಗ DoT ವಡಾಫೋನ್ ಜೊತೆಗಿನ ವಿಲೀನವನ್ನು ಅನುಮೋದಿಸಿದ ನಂತರ ಟೆಲ್ಕೋ ಹೆಚ್ಚು ಆಕ್ರಮಣಕಾರಿಯಾಗಿದೆ. ಹಾಗಾದರೆ ಐಡಿಯಾ, ಏರ್ ಟೆಲ್ ಮತ್ತು ಜಿಯೋ ಆಫರ್ ಗಳ ನಡುವಿನ ಕೆಲವು ಹೋಲಿಕೆಗಳ ವಿವರವನ್ನು ಈ ಲೇಖನವು ಒಳಗೊಂಡಿದೆ.

ಐಡಿಯಾ, ಏರ್‌ಟೆಲ್, ಜಿಯೋದ 299 ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್‌..!

ಐಡಿಯಾ 295 ರುಪಾಯಿ ಪ್ಲಾನ್: ವಿವರಗಳು

ಐಡಿಯಾ 295 ಪ್ಲಾನ್ ನಲ್ಲಿ ಹಲವು ಬೆನಿಫಿಟ್ ಗಳಿದ್ದು ವಾಯ್ಸ್, ಡಾಟಾ ಮತ್ತು ಎಸ್ಎಂಎಸ್ ಬೆನಿಫಿಟ್ ಗಳಿದೆ.ಈ ಪ್ಲಾನಿನ ಚಂದಾದಾರರಿಗೆ 42 ದಿನಗಳವರೆಗಿನ ವ್ಯಾಲಿಡಿಟಿ ಪಿರೇಡ್ ನಲ್ಲಿ 100 ಉಚಿತ ಲೋಕಲ್ ಕರೆಗಳು ಮತ್ತು ಪ್ರತಿದಿನವೂ 100 ನ್ಯಾಷನಲ್ ಎಸ್ಎಂಸ್ ಗಳು ಉಚಿತವಾಗಿರುತ್ತದೆ. ಇನ್ನು ಈ 42 ದಿನಗಳ ಪ್ರೀಪೇಡ್ ರಿಚಾರ್ಜ್ ಆಫರ್ ನಲ್ಲಿ 5ಜಿಬಿ ಡಾಟಾ 2ಜಿ/3ಜಿ/4ಜಿ ಸ್ಪೀಡ್ ನಲ್ಲಿ ಲಭ್ಯವಿರುತ್ತದೆ. ಒಮ್ಮೆ 5ಜಿಬಿ ಖಾಲಿಯಾದರೆ 4p/10KB ನಂತೆ ಚಾರ್ಜ್ ಮಾಡಲಾಗುತ್ತದೆ ಅಂದರೆ ಅದು ರುಪಾಯಿ 4 per/MB ಆಗಿರುತ್ತದೆ.

ಈ ರಿಚಾರ್ಜ್ ಪ್ಲಾನ್ ನಲ್ಲಿ ವಾಯ್ಸ್ ಕಾಲಿಂಗ್ ಗೂ ಹಲವು ಬೆನಿಫಿಟ್ ಗಳಿದ್ದು, ಚಂದಾದಾರರಿಗೆ 250 ನಿಮಿಷಗಳ ಲೋಕಲ್ ಮತ್ತು ನ್ಯಾಷನಲ್ ಕಾಲಿಂಗ್ ಅವಕಾಶವು ಪ್ರತಿದಿನವೂ ಉಚಿತವಾಗಿರುತ್ತದೆ. ಈ ಲಿಮಿಟ್ ಮುಗಿದ ನಂತರ 1ಪೈಸೆ ಪರ್ ಸೆಕೆಂಡ್ ನಂತೆ ಚಾರ್ಜ್ ಮಾಡಲಾಗುತ್ತದೆ. ಈ ಪ್ಲಾನ್ ನಲ್ಲಿ ವಾರದ ಲಿಮಿಟ್ ಕೂಡ ಇದ್ದು ಅದು 1000 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ.

ವಾರದ FUP ಲಿಮಿಟ್ ಮುಗಿದ ನಂತರ ಬಳಕೆದಾರರಿಗೆ 1p/sec ನಂತೆ ಔಟ್ ಗೋಯಿಂಗ್ ಕರೆಗಳಿಗೆ ಚಾರ್ಜ್ ಮಾಡಲಾಗುತ್ತದೆ. ಅಷ್ಟೇ ಅಲ್ಲ 100 ಯೂನಿಕ್ ನಂಬರ್ ಗಳಿಗೆ ಕರೆ ಮಾಡಲು ಈ ಪ್ಲಾನ್ ನಲ್ಲಿ ಅವಕಾಶವಿದೆ.

ಏರ್ ಟೆಲ್ ರೂಪಾಯಿ 299 ಪ್ಲಾನ್: ವಾಯ್ಸ್ ಓನ್ಲಿ ಪ್ಲಾನ್

ಐಡಿಯಾದ ಈ ನೂತನ ರೀಚಾರ್ಜ್ ಪ್ಲಾನ್ ಗೆ ಏರ್ ಟೆಲ್ ನ 299 ಪ್ಲಾನ್ ನ್ನು ಹೋಲಿಸಿಕೊಳ್ಳುವಂತಿದೆ. ಇದೊಂದು ವಾಯ್ಸ್ ಪ್ಲಾನ್ ಆಗಿದೆ. ಏರ್ ಟೆಲ್ ನ 299 ಪ್ಲಾನ್ ಅನ್ ಲಿಮಿಟೆಡ್ ವಾಯ್ಸ್ ಕಾಲಿಂಗ್ ಗೆ ಅವಕಾಶ ನೀಡುತ್ತದೆ ಮತ್ತು ಇದರ ವ್ಯಾಲಿಡಿಟಿ 45 ದಿನಗಳಾಗಿರುತ್ತದೆ. ಇದರಲ್ಲಿ ಯಾವುದೇ FUP ರಿಸ್ಟ್ರಿಕ್ಷನ್ ಇರುವುದಿಲ್ಲ. ಈ ಪ್ಲಾನ್ ರಿಚೀರ್ಜ್ ಮಾಡಿಸಿಕೊಂಡವರು ಪ್ರತಿ ದಿನ ಉಚಿತವಾಗಿ 100 ಎಸ್ಎಂಎಸ್ ಗಳನ್ನು ಕಳುಹಿಸಬಹುದು. ಆದರೆ, ಈ ಪ್ಲಾನ್ ನ ಅನ್ವಯ ಡಾಟಾ ಉಚಿತವಾಗಿ ಇರುವುದಿಲ್ಲ. ಸದ್ಯ ಟೆಲಿಕಾಂ ಇಂಡಸ್ಟ್ರಿಯಲ್ಲಿ ಡಾಟಾ ಪ್ಲಾನ್ ಇಲ್ಲದೇ ಇದ್ದರೆ ಅದು ಹೆಚ್ಚು ಗ್ರಾಹಕರನ್ನು ಸೆಳೆಯುವುದಿಲ್ಲ.

ಈ ಮೊತ್ತದಲ್ಲಿ ಏರ್ ಟೆಲ್ ಒಂದು ಕೋಂಬೋ ಪ್ಲಾನ್ ನ್ನು ಕೂಡ ನೀಡುತ್ತದೆ ಅದುವೇ ರೂಪಾಯಿ 249 ಮತ್ತು ರುಪಾಯಿ 349 ಯ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಸಾಕಷ್ಟು ಡಾಟಾ ಕೂಡ ಸಿಗುತ್ತದೆ. ಆದರೆ ಈ ಕೋಂಬೋ ಪ್ಲಾನ್ ನ ಅವಧಿ 28 ದಿನಗಳಷ್ಟೇ ಆಗಿರುತ್ತದೆ. ಇನ್ನೊಂದು ಏರ್ ಟೆಲ್ ನ FUP ಲಿಮಿಟ್ ಇರುವ ವಾಯ್ಸ್ ಕಾಲಿಂಗ್ ಆಫರ್ ಕೂಡ ಇದೆ. ಅದುವೇ ಏರ್ ಟೆಲ್ ನ 199 ರುಪಾಯಿ ಪ್ಲಾನ್. ಇದರ ಅನ್ವಯ ಅನ್ ಲಿಮಿಟೆಡ್ ವಾಯ್ಸ್ ಕಾಲ್, 1.4 ಜಿಬಿ ಡಾಟಾ ಪ್ರತಿದಿನ, 100 ಎಸ್ಎಂಎಸ್ ಪ್ರತಿ ದಿನ ಲಭ್ಯವಿರುತ್ತದೆ. ಇದರ ಅವಧಿ 28 ದಿನಗಳಿಗೆ ಸೀಮಿತವಾಗಿದೆ.

ರಿಲಯನ್ಸ್ ಜಿಯೋ 299 ಪ್ಲಾನ್: ರೋಮಿಂಗ್, ಕಾಲಿಂಗ್ ವಿತ್ ಓಟ್ ಎಫ್ ಯುಪಿ

ರಿಲಯನ್ಸ್ ಜಿಯೋ ಕೂಡ ಪ್ರಿಪೇಡ್ ರಿಚಾರ್ಜ್ ಪ್ಲಾನ್ ನ್ನು ಬಿಡುಗಡೆಗೊಳಿಸಿದ್ದು ಅದುವೇ ರುಪಾಯಿ 299 ರುಪಾಯಿ ಪ್ಲಾ ನ್ ಆಗಿದೆ. ಈ ಪ್ರೀಪೇಡ್ ಪ್ಲಾನ್ ನ ಪ್ರಕಾರ ಅನಿಯಮಿತ ರೋಮಿಂಗ್ ಮತ್ತು ಕರೆಗಳ ಪ್ರಯೋಜನವಿದ್ದು ಯಾವುದೇ ಬೆನಿಫಿಟ್ ಗಳಿದ್ದು FUP ನಿರ್ಭಂಧಗಳು ಇರುವುದಿಲ್ಲ. ಇದು 28 ದಿನಗಳ ಅವಧಿಯನ್ನು ಹೊಂದಿರುತ್ತದೆ. ಇದರ ಜೊತೆಗೆ, ಈ ಪ್ಲಾನ್ ನಲ್ಲಿ 3ಜಿಬಿ, 4G ಡಾಟಾ ಪ್ರತಿದಿನ ಉಚಿತವಾಗಿ ಇರುತ್ತದೆ. ಅಂದರೆ ಒಟ್ಟಾರೆ 28 ದಿನಗಳ ಅವಧಿಯಲ್ಲಿ 84GB ಡಾಟಾವನ್ನು ಬಳಕೆ ಮಾಡಲು ಗ್ರಾಹಕರಿಗೆ ಈ ಪ್ಲಾನಿನ ಅನ್ವಯ ಅವಕಾಶವಿರುತ್ತದೆ.

ರಿಲಯನ್ಸ್ ಜಿಯೋ ಪ್ರೀಪೇಡ್ ಪ್ಲಾನ್ ಹೆಚ್ಚಾಗಿ ಡಾಟಾ ಸೆಂಟ್ರಿಕ್ ಆಗಿರುತ್ತದೆ. ರಿಲಯನ್ಸ್ ಜಿಯೋ ಯಾವಾಗಲೂ ಕೂಡ ಇತರೆ ಟೆಲಿಕಾಂ ಆಪರೇಟರ್ ಗಳಿಗೆ ಸ್ಪರ್ದೆಯೊಡ್ಡುತ್ತದೆ. ಹಾಗಾಗಿ ನೂತನ ಐಡಿಯಾ ಸೆಲ್ಯುಲರ್ ಪ್ಲಾನ್ ಕರೆ ಮತ್ತು ಡಾಟಾ ಬೆನಿಫಿಟ್ ಎರಡನ್ನೂ ಹೊಂದಿದೆ, ಆದರೆ ಏರ್ ಟೆಲ್ ಕೇವಲ ವಾಯ್ಸ್ ಕರೆಗಳಿಗೆ ಮಹತ್ವ ನೀಡಿದೆ. ಐಡಿಯಾ ವಡಾಫೋನ್ ನೊಂದಿಗೆ ಮರ್ಜ್ ಆದ ನಂತರ ಹೆಚ್ಚು ಆಕ್ಟೀವ್ ಆಗಿರುವಂತೆ ಕಾಣಿಸುತ್ತದೆ. ವಿಲೀನಗೊಂಡ ಘಟಕದ ಒಟ್ಟು 437 ದಶಲಕ್ಷ ಗ್ರಾಹಕರ ಬಳಕೆದಾರರ ಮೂಲದಿಂದ ರೂ 80,000 ಕ್ಕಿಂತ ಹೆಚ್ಚು ಆದಾಯವನ್ನು ಐಡಿಯಾ ನಿರೀಕ್ಷೆ ಮಾಡುತ್ತದೆ. ಎರಡರಿಂದ ಒಟ್ಟು ಸೇರಿಸಿದರೆ ಟೆಲಿಕಾಂನ ಒಟ್ಟು ಆದಾಯದ ಶೇಕಡಾ 39 ರಷ್ಟು ಮಾರ್ಕೆಟ್ ಶೇರ್ ಮತ್ತು ಶೇಕಡಾ 35 ರಷ್ಟು ಚಂದಾದಾರಿಕೆಯ ಮಾರ್ಕೆಟ್ ಶೇರ್ ನ್ನು ಇದು ಒಳಗೊಂಡಿದೆ.

Best Mobiles in India

English summary
Idea Rs.295 vs Airtel Rs.299 vs Jio Rs.299 Prepaid Recharge Plans Compared: Offers, Benefits. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X