ನೀವು 'ಎಸ್‌ಬಿಐ' ಬ್ಯಾಂಕ್ ಖಾತೆ ಹೊಂದಿದ್ದರೆ ತಿಳಿಯಲೇಬೇಕಾದ ಸುದ್ದಿ ಇದು!!

|

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯ. ಏಕೆಂದರೆ, ಬ್ಯಾಂಕಿನ ಅಧಿಸೂಚನೆಯ ಅನುಸಾರ, ಬ್ಯಾಂಕಿನೊಂದಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಇನ್ನೂ ನೋಂದಾಯಿಸದ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಶೀಘ್ರದಲ್ಲೇ ಬಂದ್ ಮಾಡಲಾಗುವುದು ಎಂದು ಎಸ್‌ಬಿಐ ತಿಳಿಸಿದೆ.

ಗ್ರಾಹಕರು ತಮ್ಮ ಬ್ಯಾಂಕಿನ ಖಾತೆಯನ್ನು ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವಂತೆ ಬ್ಯಾಂಕ್ ಇತ್ತೀಚೆಗೆ ಪ್ರಕಟಣೆ ನೀಡಿದೆ. ನವೆಂಬರ್ 30 ರವರೆಗೆ ಗಡುವು ನಿಗದಿಪಡಿಸಲಾಗಿದ್ದು, ಡಿಸೆಂಬರ್ 1ರ ಒಳಗಾಗಿ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆಯನ್ನು ನವೀಕರಿಸದಿರುವ ಬಳಕೆದಾರರ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಮುಚ್ಚಲಾಗುವುದು ಎಂದು ಎಸ್‌ಬಿಐ ಎಚ್ಚರಿಸಿದೆ.

ನೀವು 'ಎಸ್‌ಬಿಐ' ಬ್ಯಾಂಕ್ ಖಾತೆ ಹೊಂದಿದ್ದರೆ ತಿಳಿಯಲೇಬೇಕಾದ ಸುದ್ದಿ ಇದು!!

ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಎಸ್‌ಬಿಐ ಹೇಳಿದ್ದು, ಮೊಬೈಲ್ ಸಂಖ್ಯೆ ನವೀಕರಣ ಏಕೆ ಮಾಡಬೇಕು ಎಂಬುದಕ್ಕೆ ಕಾರಣವನ್ನು ಸಹ ನೀಡಿದೆ. ಹಾಗಾದರೆ, ಬ್ಯಾಂಕಿನ ಖಾತೆಯನ್ನು ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಹೇಗೆ?,ಅದಕ್ಕೆ ಕಾರಣ ಏನು ಎಂಬುದನ್ನು ಮುಂದೆ ಓದಿರಿ.

ಬ್ಯಾಂಕಿನ ಈ ತೀರ್ಮಾನಕ್ಕೆ ಕಾರಣವೇನು?

ಬ್ಯಾಂಕಿನ ಈ ತೀರ್ಮಾನಕ್ಕೆ ಕಾರಣವೇನು?

ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮೊಬೈಲ್ ಸಂಖ್ಯೆ ನವೀಕರಣಗಳ ಕಾರಣದಿಂದಾಗಿ, ಪ್ರತಿ ವಹಿವಾಟಿನ ಬಗ್ಗೆ ನೀವು SMS ನಿಂದ ಮಾಹಿತಿಯನ್ನು ಪಡೆಯುತ್ತೀರಿ. ಇದರಿಂದ ಸಂಭವನೀಯ ವಂಚನೆಯನ್ನು ತಪ್ಪಿಸಲು ಸಹ ಇದು ಸಹಾಯ ಮಾಡುತ್ತದೆ ಎಂದು ಎಸ್‌ಬಿಐ ಹೇಳಿದೆ.

ಇದು ಗ್ರಾಹಕರಿಗೆ ಲಾಭದಾಯಕ!

ಇದು ಗ್ರಾಹಕರಿಗೆ ಲಾಭದಾಯಕ!

ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದು ಕಡ್ಡಾಯ ಮಾತ್ರವಲ್ಲ, ಇದು ಗ್ರಾಹಕರು ಸಹ ಲಾಭದಾಯಕವಾಗಿದೆ ಎಂದು ಬ್ಯಾಂಕ್ ಹೇಳಿದೆ. ಭದ್ರತಾ ಸಾಫ್ಟ್ವೇರ್ ಕಂಪನಿ ಸಿಮ್ಯಾಂಟೆಕ್ ವರದಿಯನ್ನು ಉಲ್ಲೇಖಿಸಿರುವ ಎಸ್‌ಬಿಐ ಬ್ಯಾಂಕ್, ವಿದೇಶಗಳಿಂದ ಬ್ಯಾಂಕ್ ಎಟಿಎಂಗಳಲ್ಲಿ ಮೋಸದಿಂದ ವಜಾ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಗ್ರಾಹಕರನ್ನು ಎಚ್ಚರಿಸಿದೆ.

ಡಿಸೆಂಬರ್ 1ರ ಒಳಗೆ ನೋಂದಾಯಿಸಿ!

ಡಿಸೆಂಬರ್ 1ರ ಒಳಗೆ ನೋಂದಾಯಿಸಿ!

ಎಸ್‌ಬಿಐ ಬ್ಯಾಂಕಿಂಗ್ ಬಳಕೆದಾರರು ಮೊಬೈಲ್ ಸಂಖ್ಯೆಯನ್ನು ಡಿಸೆಂಬರ್ 1 ರವರೆಗೆ ನೋಂದಾಯಿಸಲು ಬ್ಯಾಂಕ್ ತಿಳಿಸಿದೆ. 2018 ರ ಡಿಸೆಂಬರ್ 1 ರವರೆಗೆ ಈ ಕೆಲಸ ನಿರ್ವಹಿಸದಿದ್ದರೆ, ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ನಿರ್ಬಂಧಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ. ನಂತರ, ಇಂಟರ್ನೆಟ್ ಬ್ಯಾಂಕಿಂಗ್ ವ್ಯವಹಾರವನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

ನವೀಕರಿಸುವುದು ಹೇಗೆ?

ನವೀಕರಿಸುವುದು ಹೇಗೆ?

2018 ರ ಡಿಸೆಂಬರ್ 1 ರ ಒಳಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಳಕೆದಾರರ ತಮ್ಮ ಸಂಖ್ಯೆಯನ್ನು ನವೀಕರಿಸಬೇಕಿದೆ. ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಎಸ್‌ಬಿಐ ಬಳಕೆದಾರರ ನೇರವಾಗಿ ಹತ್ತಿರದ ಶಾಖೆಗೆ ಹೋಗಬೇಕಾಗುತ್ತದೆ. ಸಾಧ್ಯವಾದಷ್ಟು ಬೇಗಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ. ನೆಟ್ ಬ್ಯಾಂಕಿಂಗ್ ಸೇವೆಯನ್ನು ಸ್ಥಗಿತವಾಗದಂತೆ ಮಾಡಬಹುದಾಗಿದೆ.

ಹೆಲ್ಪ್‌ಲೈನ್ ​​ಸಂಖ್ಯೆಗಳು!

ಹೆಲ್ಪ್‌ಲೈನ್ ​​ಸಂಖ್ಯೆಗಳು!

ಇದಲ್ಲದೆ, ಅನಧಿಕೃತ ಎಲೆಕ್ಟ್ರಾನಿಕ್ ವಹಿವಾಟಿನ ಬಗ್ಗೆ ತಕ್ಷಣದ ಅಧಿಸೂಚನೆಗೆ ಬ್ಯಾಂಕ್ ಎರಡು ಹೆಲ್ಪ್‌ಲೈನ್ ​​ಸಂಖ್ಯೆಗಳನ್ನು (18004253800/1800112211) ಬಿಡುಗಡೆ ಮಾಡಿದೆ.ಇನ್ನು ಬ್ಯಾಂಕ್ ವಂಚನೆ ಸಂಭವಿಸುವುದನ್ನು ತಪ್ಪಿಸಲು ಇತ್ತೀಚೆಗೆ ಹಿಂತೆಗೆದುಕೊಳ್ಳುವ(ವಿತ್ ಡ್ರಾ) ಮಿತಿಯನ್ನು 20,000 ರೂಪಾಯಿಗಳಿಗೆ ಕಡಿಮೆ ಮಾಡಿರುವುದನ್ನು ಸಹ ನೀವು ನೋಡಬಹುದು.

Best Mobiles in India

English summary
SBI account holders Latest Breaking News, Pictures, Videos, and Special Reports from The ...Here's what Dalal Street veterans said on the road ahead. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X