ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್‌ವಾಚ್‌; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?

|

ಫಿಟ್‌ಬಿಟ್‌, ನಾಯ್ಸ್‌, ಹಾನರ್‌, ಗಾರ್ಮಿನ್‌ ಹಾಗೂ ಸ್ಯಾಮ್‌ಸಂಗ್‌ ಸೇರಿದಂತೆ ಇನ್ನಿತರೆ ಪ್ರಮುಖ ಕಂಪೆನಿಗಳು ವಿವಿಧ ಸೌಲಭ್ಯ ಕಲ್ಪಿಸುವ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿವೆ. ಈ ವಾಚ್‌ಗಳು ಬಳಕೆದಾರರಿಗೆ ಸಮಯವನ್ನು ತೋರಿಸುವುದರ ಜೊತೆಗೆ ಅವರ ಆರೋಗ್ಯದ ಮೇಲೆ ಸದಾ ಕಣ್ಣಿಟ್ಟಿರುತ್ತವೆ. ಅದರಲ್ಲೂ ವಿಶೇಷ ಚೇತನರಿಗೂ ಈ ವಾಚ್‌ಗಳು ಸಹಕಾರಿಯಾಗಿವೆ. ಆದರೆ, ಕೆಲವು ದೋಷಗಳು ಇದ್ದುದ್ದರಿಂದ ಐಐಟಿ ಮದ್ರಾಸ್‌ನಿಂದ ಹೊಸ ಹಾಗೂ ಹೆಚ್ಚು ಭದ್ರತಾ ಫೀಚರ್ಸ್‌ ಇರುವ ಸ್ಮಾರ್ಟ್‌ವಾಚ್‌ ಅನ್ನು ದೃಷ್ಟಿಹೀನರಿಗಾಗಿ ಅಭಿವೃದ್ಧಿಪಡಿಸಲಾಗಿದೆ.

ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್‌ವಾಚ್‌; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?

ಹೌದು, ಐಐಟಿ ಕಾನ್ಪುರದಿಂದ ದೃಷ್ಟಿಹೀನರಿಗಾಗಿ ಹ್ಯಾಪ್ಟಿಕ್ ಸ್ಮಾರ್ಟ್‌ವಾಚ್ ಪರಿಚಯಿಸಲಾಗುತ್ತಿದೆ. ಈ ಸ್ಮಾರ್ಟ್‌‌ವಾಚ್‌ ಅನ್ನು ಪ್ರಮುಖ ಸ್ಮಾರ್ಟ್‌‌ವಾಚ್‌ ತಯಾರಿಕಾ ಕಂಪೆನಿಯಾದ ಆಂಬ್ರೇನ್ ಜೊತೆ ಸೇರಿ ತಯಾರಿಸಲಾಗಿದ್ದು, ಈ ವಾಚ್‌ ಎರಡು ವೇರಿಯಂಟ್‌ನಲ್ಲಿ ಲಭ್ಯವಿರಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ ದೃಷ್ಟಿಹೀನರಿಗೆ ಯಾವ ರೀತಿ ಸಹಕಾರ ಮಾಡಲಿದೆ. ಇದರಿಂದ ಆಗುವ ಇತರೆ ಅನುಕೂಲ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಹ್ಯಾಪ್ಟಿಕ್ ಸ್ಮಾರ್ಟ್‌ವಾಚ್ ಪ್ರಮುಖ ಫೀಚರ್ಸ್‌

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರ್ ಈ ಹ್ಯಾಪ್ಟಿಕ್ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಆಂಬ್ರೇನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಸಾಮೂಹಿಕ ಉತ್ಪಾದನೆ ಮತ್ತು ಮಾರಾಟಕ್ಕೆ ಕೈ ಜೋಡಿಸಿದೆ. ಹಾಗೆಯೇ ಈ ಸ್ಮಾರ್ಟ್‌ವಾಚ್‌ ಎರಡು ವೇರಿಯಂಟ್‌ನಲ್ಲಿ ಲಭ್ಯವಿದ್ದು, ಇದರಲ್ಲಿ ಡಯಲ್ ಫೇಸ್‌ ಮೇಲೆ 12 ಟಚ್-ಸೆನ್ಸಿಟಿವ್ ಸಂಖ್ಯೆಯ ಮಾರ್ಕರ್‌ ಆಯ್ಕೆಯನ್ನು ನೀಡಲಾಗಿದೆ.

ಹ್ಯಾಪ್ಟಿಕ್ ಸ್ಮಾರ್ಟ್‌ವಾಚ್‌ನಲ್ಲಿ ಭದ್ರತೆಗೆ ಒತ್ತು

ಇನ್ನು ದೃಷ್ಟಿಹೀನರಿಗೆ ಅನುಕೂಲ ಆಗುವ ಹಾಗೆ ಟಚ್‌ ಕಂಟ್ರೋಲ್‌ ಆಯ್ಕೆ, ಮಾತನಾಡುವ ಮೂಲಕ ಕಂಟ್ರೋಲ್‌ ಮಾಡುವ ಆಯ್ಕೆ ಹಾಗೂ ಕಂಪನ ಮತ್ತು ಬ್ರೈಲ್ ಆಧಾರಿತ ತಂತ್ರಜ್ಞಾನವನ್ನು ಈ ವಾಚ್‌ ನಲ್ಲಿ ನೀಡಲಾಗಿದೆ. ಇನ್ನು ಗಮನಿಸಬೇಕಾದ ವಿಷಯ ಎಂದರೆ ಟಚ್‌ ಕಂಟ್ರೋಲ್‌ ಫೀಚರ್ಸ್‌ ಇದ್ದರೂ ಸಹ ವಾಚ್‌ನ ಮುಳ್ಳುಗಳು ಮುರಿಯುವುದಿಲ್ಲ, ಹಾಗೆಯೇ ಮಾತನಾಡುವ ಮೂಲಕ ಕಂಟ್ರೋಲ್‌ ಮಾಡಬಹುದಾದ ಆಯ್ಕೆ ನೀಡಲಾಗಿದೆಯಾದರೂ ಇದರಲ್ಲಿ ಯಾವುದೇ ಗೌಪ್ಯತೆ ಉಲ್ಲಂಘನೆ ಸಹ ಇರುವುದಿಲ್ಲ. ಅದರಲ್ಲೂ ಕಂಪಿಸುವ ವಾಚ್‌ಗಳು ಸಂಕೀರ್ಣವಾಗಿದ್ದು, ಬ್ರೈಲ್ ಆಯ್ಕೆಯ ವಾಚ್‌ಗಳು ದುಬಾರಿಯಾಗಿವೆ. ಇವೆಲ್ಲವನ್ನು ಕೇಂದ್ರೀಕರಿಸಿಕೊಂಡು ಈ ಹ್ಯಾಪ್ಟಿಕ್ ವಾಚ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಎಲ್ಲಾ ರೀತಿಯ ಸಾಂಪ್ರದಾಯಿಕ ತಂತ್ರಜ್ಞಾನಗಳ ನ್ಯೂನತೆಗಳನ್ನು ನಿವಾರಿಸಲಾಗಿದೆ.

ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್‌ವಾಚ್‌; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?

ಹ್ಯಾಪ್ಟಿಕ್ ವಾಚ್‌ ಮೂಲಕ ಆರೋಗ್ಯ ಮೇಲ್ವಿಚಾರಣೆ

ಇನ್ನು ಈ ಸ್ಮಾರ್ಟ್ ವಾಚ್‌ನ ಇನ್ನೊಂದು ವೇರಿಯಂಟ್‌ನಲ್ಲಿ ಹೃದಯ ಬಡಿತ, ಜ್ಞಾಪನೆ ಮತ್ತು ಶಾರ್ಟ್ ಟೈಮರ್‌ಗಳನ್ನು ಹೊಂದಿಸುವ ಆಯ್ಕೆ ಹಾಗೂ ಆರೋಗ್ಯ ಮೇಲ್ವಿಚಾರಣೆಯನ್ನು ಸೂಚಿಸುವ ಸ್ಮಾರ್ಟ್ ಫೀಚರ್ಸ್‌ಗಳನ್ನು ಈ ವಾಚ್‌ ಹೊಂದಿದೆ. ಸಾಮಾನ್ಯವಾಗಿ ದೃಷ್ಟಿಹೀನರಿಗೆ ಈಗ ಲಭ್ಯ ಇರುವ ಸ್ಮಾರ್ಟ್‌ವಾಚ್‌ಗಳು ಆಡಿಯೊ ಆಧಾರಿತ ಔಟ್‌ಪುಟ್ ಅನ್ನು ಬಳಕೆ ಮಾಡುತ್ತಿದ್ದು, ಇವು ಗೌಪ್ಯತೆಯ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿವೆಯಂತೆ. ಆದರೆ, ಈ ವಾಚ್‌ಮಾತ್ರ ಬಹಳ ವಿಭಿನ್ನ.

ಈ ಸ್ಮಾರ್ಟ್ ವಾಚ್, ಸಮಯ ಮತ್ತು ಆರೋಗ್ಯ ನಿಯತಾಂಕಗಳ ಪ್ರದರ್ಶನಕ್ಕಾಗಿ ಟಚ್‌ ಹ್ಯಾಪ್ಟಿಕ್ ಇಂಟರ್ಫೇಸ್ ಅನ್ನು ನೀಡಲಿದ್ದು, ಸಾಮಾನ್ಯ ವಾಚ್‌ಗಳಲ್ಲಿ ಕಂಡುಬರುವ ಈ ರೀತಿಯ ನ್ಯೂನತೆಗಳು ಇದರಲ್ಲಿ ಇರುವುದಿಲ್ಲ. ಜೊತೆಗೆ ಹೊಸ ರೀತಿಯ ಹ್ಯಾಪ್ಟಿಕ್ ಐಕಾನ್‌ಗಳ ಬಳಕೆಯು ಮೆನುಗಳನ್ನು ನ್ಯಾವಿಗೇಟ್ ಮಾಡಲು ಸುಲಭಗೊಳಿಸುತ್ತದೆ ಹಾಗೂ ಡಬಲ್ ಟ್ಯಾಪ್‌ನಂತಹ ಸರಳ ಗೆಸ್ಚರ್ ವಿಶೇಷತೆ ಆರೋಗ್ಯ ಮೇಲ್ವಿಚಾರಣಾ ಆಪ್‌ಗಳನ್ನು ಓಪನ್‌ ಮಾಡಲು ಅನುವು ಮಾಡಿಕೊಡುತ್ತದೆ.

ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್‌ವಾಚ್‌; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?

ಹ್ಯಾಪ್ಟಿಕ್ ಸ್ಮಾರ್ಟ್‌ವಾಚ್ ನಿರ್ಮಾತೃ ಯಾರು?

ಇದನ್ನು ಐಐಟಿ ಕಾನ್ಪುರ್‌ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಫ್ಲೆಕ್ಸಿಬಲ್ ಎಲೆಕ್ಟ್ರಾನಿಕ್ಸ್‌ ವಿಭಾಗದ ಪ್ರೊ. ಸಿದ್ಧಾರ್ಥ ಪಾಂಡಾ ಮತ್ತು ವಿಶ್ವರಾಜ್ ಶ್ರೀವಾಸ್ತವ ಅವರು ಅಭಿವೃದ್ಧಿಪಡಿಸಿದ್ದಾರೆ. ಈ ಸಂಬಂಧ ಅಂಬ್ರೇನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜೊತೆಗೆ 2 ಫೆಬ್ರವರಿ 2023 ರಂದು ತಂತ್ರಜ್ಞಾನ ಪರವಾನಗಿ ಒಪ್ಪಂದಕ್ಕೆ ಔಪಚಾರಿಕವಾಗಿ ಸಹಿ ಮಾಡಲಾಗಿದೆ.

ಈ ಸ್ಮಾರ್ಟ್‌ವಾಚ್‌ ವಿಕಲಚೇತನರು ಮತ್ತು ದೃಷ್ಟಿಹೀನರಿಗೆ ಅನುವು ಮಾಡಿಕೊಡುವ ತಂತ್ರಜ್ಞಾನವನ್ನು ಬಳಕೆ ಮಾಡಿ ನಿರ್ಮಾಣ ಮಾಡಲಾಗಿದ್ದು, ದಿನವೂ ಯಾವುದೇ ಸಮಸ್ಯೆ ಇಲ್ಲದೆ ಬಳಕೆ ಮಾಡಬಹುದಾಗಿದೆ. ಈ ಮೂಲಕ ಉತ್ತಮ ಸಾಮಾಜಿಕ ಪರಿಣಾಮ ಬೀರುತ್ತದೆ ಎಂದು ನಾವು ನಂಬುತ್ತೇವೆ. ಹಾಗೆಯೇ ಈ ಸ್ಮಾರ್ಟ್‌ವಾಚ್‌ ಅನ್ನು ಶೀಘ್ರದಲ್ಲೇ ಆಂಬ್ರೇನ್ ಇಂಡಿಯಾ ವಾಣಿಜ್ಯೀಕರಣಗೊಳಿಸಲಿದ್ದು, ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಲಭ್ಯವಿರುತ್ತದೆ ಎಂದು ಐಐಟಿ ಕಾನ್ಪುರದ ನಿರ್ದೇಶಕ ಪ್ರೊ. ಅಭಯ್ ಕರಂಡಿಕರ್ ಮಾಹಿತಿ ನೀಡಿದ್ದಾರೆ.

Best Mobiles in India

English summary
IIT Kanpur introduces haptic smartwatch for the visually impaired. This smart watch has got haptic touch control features, which is convenient for the visually impaired. Its details are in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X