ಆತ್ಮನಿರ್ಭರ ಭಾರತದಡಿ ಐಐಟಿ ಮದ್ರಾಸ್‌ನಿಂದ ಹೊಸ ಓಎಸ್‌; ಫೀಚರ್ಸ್‌ ತಿಳಿಯಿರಿ!

|

ಸ್ಮಾರ್ಟ್‌ಫೋನ್‌ಗಳು ಹಾಗೂ ಇತರೆ ಸ್ಮಾರ್ಟ್‌ ಡಿವೈಸ್‌ಗಳು ಕಾರ್ಯನಿರ್ವಹಿಸಲು ಓಎಸ್‌ ಅವಶ್ಯಕ. ಆದರೆ, ಈ ಓಎಸ್‌ ವಿಷಯಕ್ಕೆ ಬಂದರೆ ಗೂಗಲ್‌ ಎಲ್ಲಾ ಕಡೆ ತನ್ನದೇ ಆದ ಪ್ರಭಾವ ಬೀರಿದೆ. ಇದರ ನಡುವೆ ಸ್ವಲ್ಪ ಮಟ್ಟಿಗೆ ಆಪಲ್‌ ಕಾರ್ಯನಿರ್ವಹಿಸುತ್ತಿದ್ದು, ಈವರೆಗೂ ಇವರೆಡರ ನಡುವೆ ಮೂರನೇ ಓಎಸ್‌ ಇರಲಿಲ್ಲ. ಆದರೆ, ಇನ್ಮುಂದೆ ಗೂಗಲ್‌ಗೆ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಹೊಸ ಓಎಸ್‌ ನಿರ್ಮಾಣ ಮಾಡಲಾಗುತ್ತಿದೆ.

ಆತ್ಮನಿರ್ಭರ ಭಾರತದಡಿ ಐಐಟಿ ಮದ್ರಾಸ್‌ನಿಂದ ಹೊಸ ಓಎಸ್‌; ಫೀಚರ್ಸ್‌ ತಿಳಿಯಿರಿ!

ಹೌದು, ಭಾರತ ಸರ್ಕಾರ ಕೆಲವು ದಿನಗಳ ಹಿಂದಷ್ಟೇ ಸ್ವತಃ ಓಎಸ್‌ ಪರಿಚಯಿಸುವುದಾಗಿ ಘೋಷಣೆ ಮಾಡಿತ್ತು. ಇದರ ನಡುವೆ ಈಗ ಐಐಟಿ ಮದ್ರಾಸ್‌ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಓಎಸ್‌ನ ಫೀಚರ್ಸ್‌ ಏನು?, ಗೂಗಲ್‌ಗೆ ಪ್ರತಿಸ್ಪರ್ಧಿಯಾಗಿ ಇದು ನಿಲ್ಲಲಿದೆಯಾ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಆಂಡ್ರಾಯ್ಡ್ ಓಎಸ್‌ಗಿಂತ ಭಿನ್ನ
ಹೊಸ ಓಎಸ್‌ ಆಂಡ್ರಾಯ್ಡ್ ಓಎಸ್‌ಗಿಂತ ಭಿನ್ನವಾಗಿರಲಿದ್ದು, ಯಾವುದೇ ಡೀಫಾಲ್ಟ್ ಆಪ್‌ಗಳೊಂದಿಗೆ (ಎನ್‌ಡಿಎ) ಬರುತ್ತದೆ. ಹೆಚ್ಚು ಸುರಕ್ಷಿತ ಅನುಭವವನ್ನು ಒದಗಿಸಲು ಈ ಓಎಸ್‌ ಅನ್ನು ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಡೆವಲಪರ್‌ಗಳು ಹೇಳಿಕೊಳ್ಳುತ್ತಿದ್ದಾರೆ.

ಆತ್ಮನಿರ್ಭರ ಭಾರತದ ಭಾಗ...
ಭಾರತವನ್ನು ಆತ್ಮನಿರ್ಭರ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗೆ ಬೆಂಬಲ ನೀಡುವ ಭಾಗವಾಗಿ ಜಾಂಡ್‌ಕೆ ಆಪರೇಷನ್ ಪ್ರೈವೇಟ್ ಲಿಮಿಟೆಡ್‌ನ ಸಹಾಯದಿಂದ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ಐಐಟಿ ಮದ್ರಾಸ್ ಇನ್‌ಕ್ಯುಬೇಟೆಡ್ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಡೆವಲಪರ್‌ಗಳು ಇದಕ್ಕೆ 'BharOS' ಎಂದು ಹೆಸರು ನೀಡಿದ್ದು, ಈ ಓಎಸ್‌ ದೇಶದ 100 ಕೋಟಿ ಮೊಬೈಲ್ ಫೋನ್ ಬಳಕೆದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಡೆವಲಪರ್‌ ತಿಳಿಸಿದ್ದಾರೆ.

ಆತ್ಮನಿರ್ಭರ ಭಾರತದಡಿ ಐಐಟಿ ಮದ್ರಾಸ್‌ನಿಂದ ಹೊಸ ಓಎಸ್‌; ಫೀಚರ್ಸ್‌ ತಿಳಿಯಿರಿ!

ಹೆಚ್ಚು ಸುರಕ್ಷಿತ ಅನುಭವ
ಈ ಸಾಫ್ಟ್‌ವೇರ್ ಅನ್ನು ವಾಣಿಜ್ಯ ಆಫ್-ದಿ-ಶೆಲ್ಫ್ ಹ್ಯಾಂಡ್‌ಸೆಟ್‌ಗಳಲ್ಲಿ ಸ್ಥಾಪಿಸಬಹುದು ಎನ್ನಲಾಗಿದ್ದು, ಈ ಮೂಲಕ ಬಳಕೆದಾರರಿಗೆ ಹೆಚ್ಚು ಸುರಕ್ಷಿತ ಅನುಭವ ಲಭ್ಯವಾಗಲಿದೆ. ಈ ಕಾರಣಕ್ಕಾಗಿಯೇ ಈ ಓಎಸ್‌ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಡೆವಲಪರ್‌ಗಳು ಹೇಳಿಕೊಳ್ಳುತ್ತಿದ್ದಾರೆ.

ಸುರಕ್ಷತೆ ಹಾಗೂ ಹೆಚ್ಚು ಗೌಪ್ಯತೆ
ಈ ಹೊಸ ಓಎಸ್‌ ಬಳಕೆದಾರರಿಗೆ ಹೆಚ್ಚಿನ ಸ್ವಾತಂತ್ರ್ಯ, ನಿಯಂತ್ರಣ ಮತ್ತು ನಮ್ಯತೆಯನ್ನು ಒದಗಿಸುವ ಮತ್ತು ಅವರ ಅಗತ್ಯಗಳಿಗೆ ಸರಿಹೊಂದುವ ಆಪ್‌ಗಳನ್ನು ಮಾತ್ರ ಆಯ್ಕೆ ಮಾಡಲು ಮತ್ತು ಬಳಸಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಈ ನವೀನ ವ್ಯವಸ್ಥೆಯು ಬಳಕೆದಾರರು ತಮ್ಮ ಮೊಬೈಲ್ ಡಿವೈಸ್‌ಗಳಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಹೆಚ್ಚಿನದಾಗಿ ಫೋಕಸ್‌ ಮಾಡಬಹುದಾಗಿದೆ.

ಆತ್ಮನಿರ್ಭರ ಭಾರತದಡಿ ಐಐಟಿ ಮದ್ರಾಸ್‌ನಿಂದ ಹೊಸ ಓಎಸ್‌; ಫೀಚರ್ಸ್‌ ತಿಳಿಯಿರಿ!

ಡೀಫಾಲ್ಟ್ ಆಪ್‌ ಆಯ್ಕೆ

ಈ ಮೊಬೈಲ್ ಆಪರೇಟಿಂಗ್ ಸಿಸ್ಟಂನ ಉತ್ತಮ ಸೌಲಭ್ಯ ಎಂದರೆ ಯಾವುದೇ ಡೀಫಾಲ್ಟ್ ಆಪ್‌ಗಳೊಂದಿಗೆ ಬೆಂಬಲ ನೀಡಲಿದ್ದು, ಬಳಕೆದಾರರು ಆಂಡ್ರಾಯ್ಡ್‌ಗಿಂತ ಭಿನ್ನವಾಗಿ ಹೆಚ್ಚಿನ ಸ್ಟೋರೇಜ್‌ ಸಾಮರ್ಥ್ಯ ಪಡೆಯಬಹುದಾಗಿದೆ. ಹಾಗೆಯೇ BharOS ನೊಂದಿಗೆ ಪರಿಚಯವಿಲ್ಲದ ಅಥವಾ ಅವರು ನಂಬದಿರುವ ಆಪ್‌ಗಳನ್ನು ಬಳಸಲು ಇದರಲ್ಲಿ ಬಲವಂತಪಡಿಸಲಾಗುವುದಿಲ್ಲ.

ನೇಟಿವ್ ಓವರ್ ದಿ ಏರ್
ಆಂಡ್ರಾಯ್ಡ್ ಫೋನ್‌ಗಳಂತೆಯೇ 'ನೇಟಿವ್ ಓವರ್ ದಿ ಏರ್' (NOTA) ನವೀಕರಣಗಳನ್ನು ಸ್ವೀಕರಿಸಲು ಅನುವು ಮಾಡಿಕೊಡಲಿದ್ದು, NOTA ನವೀಕರಣಗಳನ್ನು ಆಟೋಮ್ಯಾಟಿಕ್‌ ಆಗಿ ಡೌನ್‌ಲೋಡ್ ಮಾಡಲಾಗುತ್ತದೆ. ಹೀಗಾಗಿ ಬಳಕೆದಾರರು ಕೆಲಸವನ್ನು ಕೈಯಾರೆ ಪ್ರಾರಂಭಿಸುವ ಅಗತ್ಯವಿರುವುದಿಲ್ಲ.

ವಿಶ್ವಾಸಾರ್ಹ ಆಪ್‌ಗಳಿಗಷ್ಟೇ ಅನುಮತಿ
ನಿರ್ದಿಷ್ಟ ಖಾಸಗಿ ಆಪ್ ಸ್ಟೋರ್ ಸೇವೆಗಳಿಂದ ವಿಶ್ವಾಸಾರ್ಹ ಆಪ್‌ಗಳಿಗೆ ಈ ಓಎಸ್‌ ಬೆಂಬಲ ನೀಡುತ್ತದೆ. ಅದರಲ್ಲೂ ಸಂಪೂರ್ಣವಾಗಿ ಪರಿಶೀಲಿಸಲಾದ ಮತ್ತು ಸಂಸ್ಥೆಗಳ ಕೆಲವು ಭದ್ರತೆ ಮತ್ತು ಗೌಪ್ಯತೆ ಮಾನದಂಡಗಳನ್ನು ಪೂರೈಸಿದ ಆಪ್‌ಗಳ ಕ್ಯುರೇಟೆಡ್ ಪಟ್ಟಿಗೆ ಪ್ರವೇಶವನ್ನು ಮಾತ್ರ ನೀಡಲಾಗುತ್ತದೆ. ಇದರಿಂದಾಗಿ ಯಾವುದೇ ಆಪ್‌ಗಳು ನಿಮ್ಮ ಡೇಟಾ ಅಥವಾ ಇನ್ನಿತರೆ ಮಾಹಿತಿಯನ್ನು ಕದಿಯಲು ಸಾಧ್ಯವಾಗುವುದಿಲ್ಲ.

ಆತ್ಮನಿರ್ಭರ ಭಾರತದಡಿ ಐಐಟಿ ಮದ್ರಾಸ್‌ನಿಂದ ಹೊಸ ಓಎಸ್‌; ಫೀಚರ್ಸ್‌ ತಿಳಿಯಿರಿ!

ಈ ವಿಷಯಗಳ ಬಗ್ಗೆ ಸ್ಪಷ್ಟತೆ ಇಲ್ಲ
ಹೊಸ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಉತ್ತಮವಾಗಿ ಕಂಡುಬಂದರೂ ಸಹ ಬಳಕೆದಾರರಿಗೆ ತಮ್ಮ ದಿನನಿತ್ಯದ ಜೀವನದಲ್ಲಿ ಡಿವೈಸ್‌ ಅನ್ನು ಬಳಸಲು ಸುಲಭವಾಗುವಂತೆ ಇರುವ ಕೆಲವು ವಿಷಯಗಳ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಉದಾಹರಣೆಗೆ ಹೇಳುವುದಾದರೆ ವೈಯಕ್ತೀಕರಣ ಆಯ್ಕೆಗಳು, ಗೌಪ್ಯತೆ ಫೀಚರ್ಸ್‌ಗಳು, ಬ್ಯಾಟರಿ ವಿಶ್ಲೇಷಣೆ, ಹೋಮ್ ಸ್ಕ್ರೀನ್ ವಿಜೆಟ್‌ಗಳು, ನೋಟಿಫಿಕೇಶನ್‌ ಸೆಟ್ಟಿಂಗ್‌ಗಳು ಮತ್ತು ಇನ್ನೂ ಹೆಚ್ಚಿನದನ್ನು ಆಂಡ್ರಾಯ್ಡ್‌ ಓಎಸ್‌ ನೀಡುತ್ತದೆ. ಆದರೆ ಈ ಓಎಸ್‌ ಇದರ ಬಗ್ಗೆ ಯಾವುದೇ ವಿವರ ನೀಡಿಲ್ಲ. ಅದರಲ್ಲೂ ಪ್ರಮುಖವಾಗಿ ಓಎಸ್ ನಿರ್ದಿಷ್ಟ ಸಂಸ್ಥೆಗಳಿಗೆ ಸೀಮಿತವಾಗಿರುತ್ತದೆ ಎಂದು ಡೆವಲಪರ್‌ಗಳು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Best Mobiles in India

English summary
Atmanirbhar Indias IIT Madras has announced a new OS, the details of which are in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X