ಟೆಲಿಕಾಂಗೆ ಆದ ನಷ್ಟಕ್ಕೆ ಜನರಿಗೂ, ಜಿಯೋಗೂ ಚುಚ್ಚಿದ ಸರ್ಕಾರ!!..ಮೊಬೈಲ್ ಬಿಲ್ ಏರಿಕೆ?

ಇಂದು ಟೆಲಿಕಾಂ ಆಯೋಗದ ಮುಂದೆ ಟೆಲಿಕಾಂನಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಪರಿಣಾಮದ ಬಗ್ಗೆ ವರದಿ ಸಲ್ಲಿಸಲಾಗುತ್ತದೆ.!!

|

ಟೆಲಿಕಾಂ ಸೆಕ್ಟರ್‌ನಲ್ಲಿ ಆರ್ಥಿಕ ಆರೋಗ್ಯ ಸುಧಾರಣೆ ತರುವ ನಿಟ್ಟಿನಲ್ಲಿ "ಇಂಟರ್ ಮಿನಿಸ್ಟ್ರಿಯಲ್ ಗ್ರೂಪ್" (ಐಎಂಜಿ) ಟೆಲಿಕಾಂ ಸಚಿವಾಲಯಕ್ಕೆ ವರದಿ ಸಲ್ಲಿಸಲು ಮುಂದಾಗಿದೆ.! ಇಂದು ಟೆಲಿಕಾಂ ಆಯೋಗದ ಮುಂದೆ ಟೆಲಿಕಾಂನಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಪರಿಣಾಮದ ಬಗ್ಗೆ ವರದಿ ಸಲ್ಲಿಸಲಾಗುತ್ತದೆ.!!

ಟೆಲಿಕಾಂ ವಲಯದ ಸುಧಾರಣೆಗಾಗಿ ಇಂಟರ್ ಮಿನಿಸ್ಟ್ರಿಯಲ್ ಗ್ರೂಪ್ ರಚನೆಯಾಗಿದ್ದು, ಐಎಂಜಿ ಸಲ್ಲಿಸುತ್ತಿರುವ ವರದಿ ನೇರವಾಗಿ ಜಿಯೋ ಮೇಲೆಯೇ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.! ವರದಿಯಿಂದಾಗಿ ಜಿಯೋವಿನ ಮುಂದಿನ ಪ್ಲಾನ್‌ಗಳಲ್ಲಿ ಭಾರಿ ಬದಲಾವಣೆಗೆ ಕಾರಣವಾಗಬಹುದಾಗಿದೆ.!!

ಹಾಗಾದರೆ, ಐಎಂಜಿ ವರದಿ ಸಲ್ಲಿಸುತ್ತಿರುವುದೇಕೆ.? ಐಎಂಜಿ ವರದಿಯಲ್ಲಿ ಏನೆಲ್ಲಾ ಅಂಶಗಳು ಇರಲಿವೆ.? ಜಿಯೋ ನೀಡುತ್ತಿರುವ ಸೇವೆಗಳ ಬೆಲೆ ಹೆಚ್ಚಾಗುತ್ತದೆಯೇ? ಹಾಗೆಯೇ ಮೊಬೈಲ್‌ ಬಿಲ್‌ಗಳು ಮತ್ತೆ ಹೆಚ್ಚಾಗಲಿವೆಯೇ? ಎಂಬೆಲ್ಲಾ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಐಎಂಜಿ ವರದಿ ಸಲ್ಲಿಸುತ್ತಿರುವುದೇಕೆ.?

ಐಎಂಜಿ ವರದಿ ಸಲ್ಲಿಸುತ್ತಿರುವುದೇಕೆ.?

ಭವಿಷ್ಯದ ಟೆಲಿಕಾಂ ಪ್ರಪಂಚದ ದೃಷ್ಟಿಯಿಂದ, ಟೆಲಿಕಾಂನಲ್ಲಿ ನಡೆಯುತ್ತಿರುವ ಪೈಪೋಟಿಯನ್ನು ನಿಗ್ರಹಿಸಬೇಕಾದ ಮತ್ತು ಸುಧಾರಣೆ ತರಬೇಕಾದ ಅವಶ್ಯಕತೆ ಇದೆ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರಾರಾಜನ್ ಹೇಳಿದ್ದಾರೆ. ಹಾಗಾಗಿ, ಟೆಲಿಕಾಂನಲ್ಲಿ ನಡೆಯುತ್ತಿರುವ ದರಸಮರಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ!!

ಐಎಂಜಿ ವರದಿಯಲ್ಲಿ ಏನೆಲ್ಲಾ ಅಂಶಗಳು ಇರಲಿವೆ.?

ಐಎಂಜಿ ವರದಿಯಲ್ಲಿ ಏನೆಲ್ಲಾ ಅಂಶಗಳು ಇರಲಿವೆ.?

ಮೊದಲು ಬಂಡವಾಳ ಹೂಡಿರುವ ಟೆಲಿಕಾಂ ಕಂಪೆನಿಗಳು ಹೊಸದಾಗಿ ಬಂದಿರುವ ಜಿಯೋ ವಿರುದ್ದ ಫೈಟ್ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನವ ಅಂಶ ವರದಿಯಲ್ಲಿ ಇರಬಹುದಾಗಿದೆ.!! ಹಾಗಾಗಿ, ಜಿಯೋ ನೀಡುತ್ತಿರುವ ಕಡಿಮೆ ಬೆಲೆಯ ಸೇವೆಗಳನ್ನು ರದ್ದು ಮಾಡುವ ಸಾಧ್ಯತೆ ಕೂಡ ಹೆಚ್ಚಿದೆ.!!

ಐಎಂಜಿ ವರದಿ ಉದ್ದೇಶ ಏನು?

ಐಎಂಜಿ ವರದಿ ಉದ್ದೇಶ ಏನು?

ಜಿಯೋ ಅಥವಾ ಇನ್ನಾವುದೇ ಟೆಲಿಕಾಂ ಮಾರುಕಟ್ಟೆಯನ್ನು ಏಕಸ್ವಾಮ್ಯ ಮಾಡಿಕೊಳ್ಳಲು ಮಾಡಬಾರದು ಎಂಬುದೇ ಐಎಂಜಿ ವರದಿಯ ಉದ್ದೇಶವಾಗಿದೆ ಎಂದು ಹೇಳಬಹುದು. ಒಂದು ಟೆಲಿಕಾಂ ಎದುರಿಸಲು ಆಗದೆ ಸೋತುಹೋದ ಟೆಲಿಕಾಂ ಮುಚ್ಚಿಹೋದರೆ ಟೆಲಿಕಾಂ ಮಾರುಕಟ್ಟೆ ಏಕಸ್ವಾಮ್ಯ ಆಗುವ ಲಕ್ಷಣ ಇರುತ್ತದೆ.

ಟೆಲಿಕಾಂಗೆ 4.6 ಲಕ್ಷ ಕೋಟಿ ನಷ್ಟ

ಟೆಲಿಕಾಂಗೆ 4.6 ಲಕ್ಷ ಕೋಟಿ ನಷ್ಟ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಟೆಲಿಕಾಂಗೆ ಎಂಟ್ರಿ ನೀಡಿದ ನಂತರ, ಉಚಿತ ಕಾಲ್ ಸೇವೆ ಮತ್ತು ಕಡಿಮೆ ಬೆಲೆಗೆ ಡೇಟಾ ಟೆಲಿಕಾಂ ಸೆಕ್ಟರ್‌ನ ಆದಾಯಕ್ಕೆ ಬೃಹತ್ ಪ್ರಮಾಣದಲ್ಲಿ ಕುಸಿತಕ್ಕೆ ಕಾರಣವಾಗಿದೆ. ಸರಿಸುಮಾರು 4.6 ಲಕ್ಷ ಕೋಟಿ ರೂ. ಹಣ ಟೆಲಿಕಾಂಗೆ ನಷ್ಟವಾಗಿದೆ ಎನ್ನಲಾಗಿದೆ.!!

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಮೊಬೈಲ್‌ ಬಿಲ್‌ಗಳು ಮತ್ತೆ ಹೆಚ್ಚಾಗಲಿವೆಯೇ?

ಮೊಬೈಲ್‌ ಬಿಲ್‌ಗಳು ಮತ್ತೆ ಹೆಚ್ಚಾಗಲಿವೆಯೇ?

ಐಎಂಜಿ ಸಲ್ಲಿಸುತ್ತಿರುವ ವರದಿಯನ್ನು ಟೆಲಿಕಾಂ ಸಚಿವಾಲಯ ಏನಾದರೂ ಪೂರ್ಣವಾಗಿ ಅಳವಡಿಸಿಕೊಂಡರೆ ಟೆಲಿಕಾಂನಲ್ಲಿ ಮತ್ತೊಂದು ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ.!! ವರದಿಯ ಅಂಶಗಳು ಮೊಬೈಲ್‌ ಬಿಲ್‌ಗಳು ಮತ್ತೆ ಹೆಚ್ಚಾಗಲಿವೆ ಎಂಬುದಕ್ಕೆ ಪುಷ್ಟಿ ನೀಡಿವೆ.!!

ಒಲಾ,ಉಬರ್‌ಗೆ ಸೆಡ್ಡುಹೊಡೆಯಲು ಬರುತ್ತಿದೆ ‘ಕ್ಯಾಬ್-10'!..ಟೈಗರ್‌ಗೂ ಮೊದಲು!!ಒಲಾ,ಉಬರ್‌ಗೆ ಸೆಡ್ಡುಹೊಡೆಯಲು ಬರುತ್ತಿದೆ ‘ಕ್ಯಾಬ್-10'!..ಟೈಗರ್‌ಗೂ ಮೊದಲು!!

Best Mobiles in India

English summary
Telecomry Secreta Aruna Sundararajan has said that the inter ministerial group report on improving the financial health of the sector will place before Telecom Commission on September 8. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X