ಸುಳ್ಳು ಸುದ್ದಿ ಹರಡುತ್ತಿದ್ದ 16 ಯೂಟ್ಯೂಬ್ ಚಾನೆಲ್‌ಗಳು ನಿ‍ಷೇಧ!..ಲಿಸ್ಟ್‌ ಇಲ್ಲಿದೆ!

|

ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ, ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ 16 ಯೂಟ್ಯೂಬ್ ಚಾನೆಲ್‌ಗಳನ್ನು ಇದೀಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿಷೇಧಿಸಿದೆ. 2021ರ ಐಟಿ ನಿಯಮ ಅಡಿಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ತಪ್ಪು ಮಾಹಿತಿ ಹರಡುತ್ತಿದ್ದ ಪಾಕಿಸ್ತಾನದ ಮೂಲಕ 6 ಹಾಗೂ ಭಾರತದ 10 ಯೂಟ್ಯೂಬ್ ಚಾನೆಲ್ ಪ್ರಸಾರವನ್ನು ಕೇಂದ್ರ ನಿರ್ಬಂಧಿಸಿದೆ.

ಸುಳ್ಳು ಸುದ್ದಿ ಹರಡುತ್ತಿದ್ದ 16 ಯೂಟ್ಯೂಬ್ ಚಾನೆಲ್‌ಗಳು ನಿ‍ಷೇಧ!

ಭಾರತದ ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಾಂಗ ನೀತಿ, ಕೋಮು ಸಂಘರ್ಷಕ್ಕೆ ಪ್ರಚೋದನೆ, ಸಾರ್ವಜನಿಕ ಸುವ್ಯವಸ್ಥೆ ಕುರಿತು ವಿಚಾರಗಳನ್ನು ಮುಖ್ಯವಾಗಿಸಿ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದವು. ಈ ಚಾನೆಲ್‌ಗಳ ಮೇಲೆ ನಿಗಾ ವಹಿಸಿದ್ದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಈ ಕ್ರಮ ಕೈಗೊಂಡಿದೆ. ಸುಳ್ಳು ಮಾಹಿತಿ ಹರಡುವುದರ ಜೊತೆಗೆ ಈ ಯೂಟ್ಯೂಬ್ ಚಾನೆಲ್ ಗಳು ಅದಕ್ಕೆ ಸಂಬಂಧಿಸಿದ ನಿಖರ ಮಾಹಿತಿಗಳನ್ನು ಒದಗಿಸಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ (I and B) ತಿಳಿಸಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದ ಯೂಟ್ಯೂಬ್ ಚಾನೆಲ್ ಸೇರಿದಂತೆ ಡಿಜಿಟಲ್ ಮೀಡಿಯಾಗಳ ಮೇಲೆ ನಿಗಾ ಇರಿಸಿದೆ. ಈ ತಿಂಗಳ ಆರಂಭದಲ್ಲೂ ಕೇಂದ್ರ ಸರ್ಕಾರ ಪಾಕಿಸ್ತಾನ ಹಾಗೂ ಭಾರತದ ಸುಮಾರು 22 ಯೂಟ್ಯೂಬ್ ಚಾನೆಲ್ ನಿಷೇಧಿಸಿತ್ತು.

ಸುಳ್ಳು ಸುದ್ದಿ ಪ್ರಸಾರ ಹಾಗೂ ದೇಶ ವಿರೋಧಿ ಪೋಸ್ಟ್‌ಗಳನ್ನು ಮಾಡಿದ್ದಕ್ಕಾಗಿ ಭಾರತದ 18 ಹಾಗೂ ಪಾಕಿಸ್ತಾನದ 4 ಯೂಟ್ಯೂಬ್‌ ಚಾನೆಲ್‌ಗಳ ಮೇಲೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿರ್ಬಂಧ ಹೇರಿದೆ. ಈ ಯೂಟ್ಯೂಬ್‌ ಚಾನೆಲ್‌ಗಳು ಜನಪ್ರಿಯ ಟಿವಿ ಚ್ಯಾನೆಲ್‌ಗಳ ಲೋಗೊ ಬಳಸಿ ಭಾರತದ ಸೇನೆ, ಜಮ್ಮು ಮತ್ತು ಕಾಶ್ಮೀರ ಸಂಬಂಧಿತ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದವು.

ಸುಳ್ಳು ಸುದ್ದಿ ಹರಡುತ್ತಿದ್ದ 16 ಯೂಟ್ಯೂಬ್ ಚಾನೆಲ್‌ಗಳು ನಿ‍ಷೇಧ!

ಅಲ್ಲದೇ ಉಕ್ರೇನಿನ ಬಿಕ್ಕಟ್ಟಿನ ವಿಚಾರವಾಗಿ ಸುಳ್ಳುಸುದ್ದಿಯನ್ನು ಹಬ್ಬಿ ವಿದೇಶಗಳ ಜೊತೆಗೆ ದೇಶದ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದ್ದವು. ಪಾಕಿಸ್ತಾನದಿಂದ ನಿರ್ವಹಿಸಲ್ಪಡುವ ಚ್ಯಾನೆಲ್‌ಗಳು ಹಲವಾರು ಬಾರಿ ಭಾರತ ವಿರೋಧಿ ವಿಚಾರಗಳನ್ನು ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳುತ್ತಿದ್ದವು. ಈ ಹಿನ್ನೆಲೆ ಯಲ್ಲಿ ಇವಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಬ್ಯಾನ್‌ ಆದ ಭಾರತ ಮೂಲದ ಯೂಟ್ಯೂಬ್‌ ಚಾನೆಲ್‌ ಲಿಸ್ಟ್‌:

Saini Education Research
Hindi Mein Dekho
Technical Yogendra
Aaj te news
SBB News
Defence News24x7
The study time
Latest Update
MRF TV LIVE
Tahaffuz-E-Deen India

ಬ್ಯಾನ್‌ ಆದ ಪಾಕಿಸ್ತಾನ ಮೂಲದ ಯೂಟ್ಯೂಬ್‌ ಚಾನೆಲ್‌ ಲಿಸ್ಟ್‌:

AjTak Pakistan
Discover Point
Reality Checks
Kaiser Khan
The Voice of Asia
Bol Media Bol

Best Mobiles in India

English summary
India Bans 16 YouTube Channels for Spreading Fake News.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X