ಭಾರತ ಈ ವರ್ಷ ಅತಿ ಹೆಚ್ಚು ಸೈಬರ್ ದಾಳಿ ಎದುರಿಸಿದೆ; ವರದಿ

|

ತಂತ್ರಜ್ಞಾನ ಹೆಚ್ಚು ಹೆಚ್ಚಾಗಿ ಅಭಿವೃದ್ಧಿಯಾದಂತೆ, ಹೊಸ ರೀತಿಯ ಗ್ಯಾಜೆಟ್‌ಗಳನ್ನೂ ಸಹ ಪರಿಚಯಿಸಲಾಗಿದೆ. ಅದರಂತೆ ಹಲವಾರು ರೀತಿಯ ಸೈಬರ್‌ದಾಳಿಗಳು ಸಹ ಮುನ್ನೆಲೆಗೆ ಬಂದಿವೆ. ಹೊಸ ವರ್ಷಕ್ಕೆ ಇನ್ನೇನು ಒಂದು ದಿನ ಬಾಕಿ ಇದ್ದು, ಇದರ ನಡುವೆ ಈ ವರ್ಷ ಭಾರತ ಸರ್ಕಾರ ಎದುರಿಸಿದ ಸೈಬರ್‌ ದಾಳಿಯ ಬಗ್ಗೆ ಮಾಹಿತಿ ನೀಡಿದೆ. ಹಾಗೆಯೇ 2023 ರಲ್ಲಿ ಸರ್ಕಾರ ಮತ್ತು ಸಂಸ್ಥೆಗಳು ಈ ಸಂಬಂಧ ರಕ್ಷಣೆಯನ್ನು ಹೆಚ್ಚಿಗೆ ಮಾಡುವ ನಿರ್ಧಾರಕ್ಕೆ ಬಂದಿವೆ.

ತಂತ್ರಜ್ಞಾನ

ಹೌದು, ತಂತ್ರಜ್ಞಾನದ ಅಭಿವೃದ್ಧಿಯ ಜೊತೆಗೆ ಸೈಬರ್‌ ದಾಳಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಾ ಬರುತ್ತಿದೆ. 2022 ರಲ್ಲಿ ಭಾರತವು ಸೈಬರ್‌ ಅಟ್ಯಾಕ್‌ಗಳಿಗೆ ಪ್ರಮುಖ ಗುರಿಯಾಗಿದೆ ಎಂದು ವೆಬ್ ಭದ್ರತಾ ಸಂಸ್ಥೆ ಇಂಡಸ್‌ಫೇಸ್ ಅಧ್ಯಯನದಿಂದ ತಿಳಿದುಬಂದಿದೆ. ಹಾಗಿದ್ರೆ, ಭಾರತ ಈ ವರ್ಷ ಏನೆಲ್ಲಾ ಸಂಘರ್ಷ ಎದುರಿಸಿದೆ?, ಮುಂದೆ ಯಾವ ರೀತಿ ಹೆಜ್ಜೆ ಇಡಲಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ದೆಹಲಿ

ಕಳೆದ ತಿಂಗಳು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಮೇಲೆ ನಡೆದ ಹೈ-ಪ್ರೊಫೈಲ್ ರಾನ್ಸಮ್‌ವೇರ್ ದಾಳಿಯು ದೇಶದ ಸೈಬರ್ ಭದ್ರತೆಯ ಮೂಲ ಸೌಕರ್ಯದಲ್ಲಿನ ಸಮಸ್ಯೆಗಳನ್ನು ಎಲ್ಲರಿಗೂ ತಿಳಿಯುವಂತೆ ಮಾಡಿದೆ. ಅಂತೆಯೇ ಇತ್ತೀಚೆಗೆ ಬಿಡುಗಡೆ ಮಾಡಲಾದ ಮಾಹಿತಿ ಪ್ರಕಾರ, ಭಾರತವು ವಿಶ್ವದ ಅತಿ ಹೆಚ್ಚು ಸೈಬರ್‌ದಾಳಿಗೆ ಒಳಗಾದ ದೇಶಗಳಲ್ಲಿ ಒಂದಾಗಿದೆ. 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಪತ್ತೆ ಹಚ್ಚಿದ ಮತ್ತು ನಿರ್ಬಂಧಿಸಿದ 829 ಮಿಲಿಯನ್ ಸೈಬರ್ ದಾಳಿಗಳಲ್ಲಿ, 59 ಪ್ರತಿಶತದಷ್ಟು ಭಾರತದಲ್ಲೇ ಜರುಗಿದ ಘಟನೆಗಳು ಎಂದು ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಹೆಚ್ಚಿದ ರಾನ್ಸಮ್‌ವೇರ್ ದಾಳಿ

ಭಾರತದಲ್ಲಿ ಹೆಚ್ಚಿದ ರಾನ್ಸಮ್‌ವೇರ್ ದಾಳಿ

2022 ರ ದ್ವಿತೀಯಾರ್ಧದಲ್ಲಿ ಭಾರತದ ಸರ್ಕಾರಿ ವಲಯವನ್ನು ಗುರಿಯಾಗಿಸಿಕೊಂಡು ದಾಳಿಗಳ ಸಂಖ್ಯೆಯ ಹೆಚ್ಚಾಗಿದೆ ಎಂದು ಕ್ಲೌಡ್‌ಸೆಕ್ ಎಕ್ಸ್‌ವಿಜಿಲ್ ವರದಿ ಹೇಳಿದೆ. ಅಂತೆಯೇ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ನ ಹಿರಿಯ ಅಧಿಕಾರಿ ಸಮೀರ್ ಪಾಟೀಲ್ ಪ್ರತಿಕ್ರಿಯಿಸಿ ಭಾರತದಲ್ಲಿ ಇತ್ತೀಚೆಗೆ ರಾನ್ಸಮ್‌ವೇರ್ ಗಣನೀಯವಾಗಿ ಹೆಚ್ಚಿಗೆಯಾಗಿದೆ. ಅದರಲ್ಲೂ ನಮ್ಮವರೇ ಇದರಲ್ಲಿ ಭಾಗಿಯಾಗಿರುವುದು ಅತ್ಯಂತ ಕೆಟ್ಟ ಘಟನೆಯಾಗಿದೆ ಎಂದಿದ್ದಾರೆ.

ಯುಎಸ್ಎ

ಭಾರತ, ಯುಎಸ್ಎ, ಇಂಡೋನೇಷ್ಯಾ ಮತ್ತು ಚೀನಾ ಕಳೆದ ಎರಡು ವರ್ಷಗಳಲ್ಲಿ ಹೆಚ್ಚು ಸೈಬರ್‌ ದಾಳಿಗೆ ಗುರಿಯಾದ ಪ್ರಮುಖ ದೇಶಗಳಾಗಿದ್ದು, ನಾಲ್ಕು ದೇಶಗಳಲ್ಲಿ ಒಟ್ಟಾಗಿ 40 ಕ್ಕೂ ಹೆಚ್ಚಿನ ಪ್ರತಿಶತ ಘಟನೆ ವರದಿ ಮಾಡಿವೆ. ಹಾಗೆಯೇ ಈ ಸೈಬರ್ ದಾಳಿಗಳ ಪ್ರಾಥಮಿಕ ಉದ್ದೇಶವು ಹಣಕಾಸಿನ ಲಾಭಗಳಿಗಷ್ಟೇ ಅಲ್ಲದೆ ಒಂದು ನಿರ್ದಿಷ್ಟ ರಾಜಕೀಯ, ಧಾರ್ಮಿಕ ಅಥವಾ ಆರ್ಥಿಕ ಗುರಿಗಾಗಿ ಬೆಂಬಲ ಅಥವಾ ವಿರೋಧವನ್ನು ವ್ಯಕ್ತಪಡಿಸುವ ಮಾರ್ಗವಾಗಿ ಬಳಕೆ ಮಾಡಿಕೊಳ್ಳಲಾಗಿದೆ.

ಈವರಗೆ ವರದಿಯಾದ ಪ್ರಕರಣಗಳೆಷ್ಟು ?

ಈವರಗೆ ವರದಿಯಾದ ಪ್ರಕರಣಗಳೆಷ್ಟು ?

2019 ರಲ್ಲಿ 3,94,499 ಘಟನೆಗಳನ್ನು ಭಾರತ ಸರ್ಕಾರ ಎದುರಿಸಿದೆಯಂತೆ, ಅದೇ ವರ್ಷದಲ್ಲಿ 204 ಭದ್ರತಾ ಎಚ್ಚರಿಕೆಗಳು ಮತ್ತು 38 ಸಲಹೆಗಳನ್ನು ನೀಡಿದೆ. ಹಾಗೆಯೇ 2020 ರಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಅಂತೆಯೇ 11,58,208 ಪ್ರಕರಣ ವರದಿಯಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಈ ಉಲ್ಬಣವು 2021 ರಲ್ಲಿ ಮತ್ತೆ ಮುಂದುವರೆದಿದೆ. ಈ ಮೂಲಕ 14,02,809 ಘಟನೆಗಳನ್ನು ವರದಿ ಮಾಡಲಾಗಿದೆ.

ಮುಂದಿನ ನಿರ್ಧಾರ ಏನು?

ಮುಂದಿನ ನಿರ್ಧಾರ ಏನು?

ಸೈಬರ್‌ ಸುರಕ್ಷತೆಯ ಕುರಿತು ಭಾರತ ತನ್ನದೇ ಆದ ಕಾನೂನುಗಳನ್ನು ಸಿದ್ಧಪಡಿಸುತ್ತಿದೆ. ಇದರಿಂದ ಮುಂದಿನ ವರ್ಷದಿಂದ ಹಲವಾರು ಸಂಸ್ಥೆಗಳು ಹೆಚ್ಚಿನ ಎಚ್ಚರಿಕೆ ವಹಿಸಿಕೊಳ್ಳುವಲ್ಲಿ ದಾಪುಗಾಲು ಇರಿಸಿವೆ. ಹಾಗೆಯೇ ಸಿಇಆರ್‌ಟಿ-ಇನ್ ಡೇಟಾ ಉಲ್ಲಂಘನೆಗಳಿಗೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯ ವಿಧಾನವನ್ನು ನೀಡಿದ್ದು, ಕಂಪನಿಗಳು ಮತ್ತು ಇತರ ಸಂಸ್ಥೆಗಳು ಯಾವುದೇ ಉಲ್ಲಂಘನೆಯ ಬಗ್ಗೆ ಆರು ಗಂಟೆಗಳ ಒಳಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

Best Mobiles in India

English summary
India faces the highest number of cyberattacks on govt agencies in 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X