2015: ಸೆಲ್ಫಿಗೆ ಪ್ರಾಣ ತೆತ್ತವರಲ್ಲಿ ಭಾರತೀಯರೇ ಅಧಿಕ

Written By:

" ಹಲೋ ಎಕ್ಸ್‌ ಕ್ಯೂಸ್‌ ಮಿ ನಿವೇನೇ ಹೇಳಿದ್ರು ಅಷ್ಟೇ ಯಾರೋ ಒಬ್ರು ಸೆಲ್ಫಿ ಫೋಟೋ ತಗಳಕ್‌ ಹೋಗಿ ಪ್ರಾಣ ಬಿಟ್ರು ಅಂತ ನಾನ್‌ ಯಾಕ್‌ ಸೆಲ್ಫಿ ಕ್ರೇಜ್‌ ಬಿಡ್ಲಿ" ಅಂತ ಭಾನುವಾರದ ಪ್ರವಾಸಕ್ಕೆ ಒಂದು ಬೆಟ್ಟದಲ್ಲಿ ನಿಂತಿದ್ದ ಯೂತ್ಸ್‌ಗಳ ಗುಂಪಿನಲ್ಲಿ ಒಬ್ಬ ಹುಡುಗ ಹಿರಿಯರೊಬ್ಬರಿಗೆ ಉತ್ತರ ಕೊಟ್ಟಿದ್ದ. ಅವನ ಉತ್ತರ ಒಂದು ರೀತಿ ಸರಿ. ಆದ್ರೆ ಸೆಲ್ಫಿ ತೆಗೆದುಕೊಳ್ಳೋ ಮೊದಲು ಅಪಾಯದ ಬಗ್ಗೆ ಎಚ್ಚರಿಕೆ ಗಂಟೆ ಆ ಹಿರಿಯರದ್ದಾಗಿತ್ತು ಅಷ್ಟೇ!! ಈ ವಿಷಯ ಯಾಕೆ ಹೀಗೆ ಹೇಳ್ತಿದ್ದೀನಿ ಅಂದ್ರೆ 2015 ನೇ ಇಸವಿಯಲ್ಲಿ ಪ್ರಪಂಚದಾದ್ಯಂತ ಸೆಲ್ಫಿ ಫೋಟೋ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಭಾರತದಲ್ಲೇ ಅತಿ ಹೆಚ್ಚು ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಓದಿರಿ : ಒಬಾಮಾ ಸೆಲ್ಫಿ ನೋಡಬನ್ನಿ ಇಲ್ಲಿ!!!

ರಜೆ ದಿನಗಳು ಬಂತೆಂದರೆ ನದಿ, ಸಮುದ್ರ, ಬೆಟ್ಟಗಳು, ಕಣಿವೆ ಪ್ರದೇಶಗಳು, ಜಲಪಾತಗಳ ಕಡೆಗೆ ಪ್ರವಾಸಕ್ಕೆಂದು ಹೊರಡುವ ಎಲ್ಲರೂ ಸಹ ಮುನ್ನೆಚ್ಚರಿಗೆ ಪಡೆಯಲು ಸೆಲ್ಫಿ ಯಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಮಾಹಿತಿ ತಿಳಿಯಲೇ ಬೇಕು. ಎಚ್ಚರಿಕೆಯ ಮಾಹಿತಿಗಾಗಿ ಈ ಲೇಖನ ಓದಿರಿ...

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಭಾರತೀಯರು ಅರ್ಧದಷ್ಟು

ಭಾರತೀಯರು ಅರ್ಧದಷ್ಟು

ಪ್ರಪಂಚದಾದ್ಯಂತ ಸೆಲ್ಫಿ ಫೋಟೋ ತೆಗೆಯಲು ಹೋಗಿ ಸಾವಿಗೀಡಾದವರ ಒಟ್ಟು ಸಂಖ್ಯೆಯಲ್ಲಿ ಅರ್ಧದಷ್ಟು ಸಂಖ್ಯೆ ಭಾರತೀಯರೇ ಇದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

27 ಜನರು

27 ಜನರು

ಕಳೆದ ವರ್ಷ ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸುಮಾರು 27 ಜನರು ಎಂದು ವಾಷಿಂಗ್ಟನ್‌ ಪೋಸ್ಟ್‌ ಹೇಳಿದೆ.

ಅಗ್ರಾದ ಮಥುರಾ

ಅಗ್ರಾದ ಮಥುರಾ

ಅಗ್ರಾದ ಮಥುರಾದಲ್ಲಿ ಕಳೆದ ವರ್ಷ 3 ಕಾಲೇಜು ವಿದ್ಯಾರ್ಥಿಗಳು ವೇಗವಾಗಿ ಚಲಿಸುತ್ತಿರುವ ರೈಲಿನ ಮುಂದೆ ಸೆಲ್ಫಿ ಫೋಟೋ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

 7 ಹುಡುಗರು

7 ಹುಡುಗರು

ಕಳೆದ ಮಾರ್ಚ್‌ ತಿಂಗಳಿನಲ್ಲಿ 7 ಹುಡುಗರ ಗುಂಪೊಂದು ತಮ್ಮ ಗೆಳೆಯನ ಹುಟ್ಟುಹಬ್ಬದ ಆಚರಣೆಗೆಂದು ಹೊರ ಪ್ರದೇಶಕ್ಕೆ ಹೋಗಿ ನದಿಯ ಮಧ್ಯದಲ್ಲಿ ದೋಣಿಯಲ್ಲಿ ಕುಳಿತು ಸೆಲ್ಫಿ ತೆಗೆಯಲು ಹೋಗಿ ದೋಣಿ ಮಗುಚಿಕೊಂಡು ಏಳು ಹುಡುಗರು ಸಹ ಪ್ರಾಣ ಕಳೆದುಕೊಂಡಿದ್ದಾರೆ.

ಜಪಾನ್‌ ಪ್ರವಾಸಿ

ಜಪಾನ್‌ ಪ್ರವಾಸಿ

2015ರ ಸೆಪ್ಟೆಂಬರ್‌ ತಿಂಗಳಿನಲ್ಲಿ ತಾಜ್‌ಮಹಲ್‌ನ ಅತ್ಯಂತ ಎತ್ತರದ ಮೆಟ್ಟಿಲುಗಳ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಬಿದ್ದು ಜಪಾನ್‌ ಪ್ರವಾಸಿಗನೊಬ್ಬ ಮೃತಪಟ್ಟಿದ್ದನು.

ಇಂಜಿನಿಯರಿಂಗ್‌ ವಿದ್ಯಾರ್ಥಿ

ಇಂಜಿನಿಯರಿಂಗ್‌ ವಿದ್ಯಾರ್ಥಿ

ತಮಿಳುನಾಡಿನ ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ನಮಕ್ಕಲ್‌ ಪ್ರದೇಶದಲ್ಲಿ ಬಂಡೆಯ ಮೇಲೆ ನಿಂತು ಫೋಟೋ ತೆಗೆಯಲು ಹೋಗಿ 60 ಅಡಿ ಆಳದ ಕೊರಕಲು ಒಳಗೆ ಬಿದ್ದು ಮೃತಪಟ್ಟಿದ್ದನು.

ಸಾವುಗಳು 2016ರಲ್ಲೂ ಸಹ ಹೆಚ್ಚಿವೆ

ಸಾವುಗಳು 2016ರಲ್ಲೂ ಸಹ ಹೆಚ್ಚಿವೆ

ಸೆಲ್ಫಿಗೆ ಸಂಬಂಧ ಪಟ್ಟ ಸಾವುಗಳು 2016ರಲ್ಲೂ ಸಹ ಹೆಚ್ಚಿದ್ದು, ಮುಂಬೈ ಪೊಲೀಸರು 16 ಸೆಲ್ಫಿ ರಹಿತ ವಲಯಗಳನ್ನಾಗಿ ಗುರುತಿಸಿ ಪ್ರಕಟಗೊಳಿಸಿದ್ದಾರೆ.

 ರಜೆ ದಿನಗಳು

ರಜೆ ದಿನಗಳು

ರಜೆ ದಿನಗಳು ಬಂತೆಂದರೆ ಪ್ರವಾಸಕ್ಕೆ, ಟ್ರಕ್ಕಿಂಗ್‌ ಎಂದು ಹೊರಡುವ ಎಲ್ಲರೂ ಸಹ ಇನ್ನು ಮುಂದಾದರು ಸೆಲ್ಫಿ ಫೋಟೋ ತೆಗೆದುಕೊಳ್ಳುವ ಮುನ್ನ ಜಾಗರೂಕತೆ ವಹಿಸಬೇಕಾಗಿದೆ.

ಓದಿರಿ ಸೆಲ್ಫಿ ಕುರಿತ ಲೇಖನಗಳು

ಗಿಜ್‌ಬಾಟ್‌

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು
ಪ್ರಾಣಿಗಳೊಂದಿಗೆ ವಿಶೇಷ ಸೆಲ್ಫಿ
ಸೆಲ್ಫಿ ತೆಗೆದು ಯಮಪುರಿಗೆ ಪ್ರಯಾಣಿಸಿದರು ಏನಿದು ಘಟನೆ?
ಒಬಾಮಾ ಸೆಲ್ಫಿ ನೋಡಬನ್ನಿ ಇಲ್ಲಿ!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
India had the most selfie-related deaths in 2015:Report. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot