Subscribe to Gizbot

4ಜಿ ಡೌನ್​ಲೋಡ್​ ಸ್ಪೀಡ್‌ನಲ್ಲಿ ಭಾರತಕ್ಕೆ ಕೊನೆ ಸ್ಥಾನ!..ಪಾಕಿಸ್ತಾನದಲ್ಲಿಯೇ ಹೆಚ್ಚು ಸ್ಪೀಡ್!!

Written By:

ಜಿಯೋವಿನಿಂದ ಭಾರತದಲ್ಲಿ ಡೇಟಾ ಬಳಕೆ ಮತ್ತು ವೇಗ ಹೆಚ್ಚಾಗಿದೆ ಗ್ರಾಹಕರ ಭರವಸೆಗೆ ತಣ್ಣೀರು ಬಿದ್ದಿದೆ.! ಹೌದು, ಭಾರತ 4ಜಿ ಯಿಂದ 5ಜಿ ಗೆ ಜಿಗಿಯುವ ಯತ್ನದಲ್ಲಿದೆ ಎನ್ನುವ ವರದಿಗಳು ಪ್ರಕಟವಾಗುತ್ತಿದ್ದರೆ, ಇತ್ತ 4ಜಿ ಡೌನ್​ಲೋಡ್​ ಸ್ಪೀಡ್​ ಕುರಿತು ನಡೆಸಿದ ಸಮೀಕ್ಷೆಯೊಂದರಲ್ಲಿ ಭಾರತ ಕೊನೆ ಸ್ಥಾನ ಪಡೆದುಕೊಂಡಿದೆ.!!

ವೈರ್‌ಲೆಸ್ ಕವರೇಜ್ ಮ್ಯಾಪಿಂಗ್ ಮಾಡುವ ಜಾಗತಿಕ ಕಂಪನಿ "ಓಪನ್​ ಸಿಗ್ನಲ್"​ ಜಗತ್ತಿನ 77 ರಾಷ್ಟ್ರಗಳಲ್ಲಿ 4ಜಿ ಡೌನ್​ಲೋಡ್​ ಸ್ಪೀಡ್​ ಎಷ್ಟಿದೆ ಎಂದು ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿದ್ದ 77 ರಾಷ್ಟ್ರಗಳಲ್ಲಿ ಭಾರತ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.!!

ಇನ್ನು ಓಪನ್​ ಸಿಗ್ನಲ್ ಸಮೀಕ್ಷೆಯ ಈ ಪಟ್ಟಿಯಲ್ಲಿ ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನವೇ ಭಾರತಕ್ಕಿಂತ ಹೆಚ್ಚಿನ ಸ್ಥಾನ (69ನೇ ಸ್ಥಾನ) ಪಡೆದಿದ್ದು, ಹಾಗಾದರೆ ಭಾರತದಲ್ಲಿ 4G ಡೌನ್​ಲೋಡ್​ ಸ್ಪೀಡ್ ಎಷ್ಟು? ಹೆಚ್ಚು ಸ್ಪೀಡ್ ಡೇಟಾ ನೀಡುತ್ತಿರುವ ದೇಶಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಮೀಕ್ಷೆ ನಡೆದದ್ದು ಹೇಗೆ?

ಸಮೀಕ್ಷೆ ನಡೆದದ್ದು ಹೇಗೆ?

ಪ್ರಪಂಚದಾದ್ಯಂತ 77 ದೇಶಗಳಲ್ಲಿ 4G ಲಭ್ಯತೆ ಮತ್ತು 4G ವೇಗವನ್ನು ಹೋಲಿಸಲು 3.8 ದಶಲಕ್ಷ ಸ್ಮಾರ್ಟ್ಫೋನ್ ಮತ್ತು ಇತರ ಮೊಬೈಲ್ ಸಾಧನ ಬಳಕೆದಾರರಿಂದ ಮಾಹಿತಿ ಸಂಗ್ರಹಿಸಲಾಗಿದೆ. 50 ಬಿಲಿಯನ್‌ಗಿಂತಲೂ ಹೆಚ್ಚಿನ ಮಾಪನಗಳನ್ನು ಲೆಕ್ಕಹಾಕಿ ಈ ಸಮೀಕ್ಷೆ ನಡೆಸಲಾಗಿದೆ ಎಂದು ಓಪನ್ ಸಿಗ್ನಲ್ ಹೇಳಿದೆ

ಭಾರತದಲ್ಲಿ 4G ಡೌನ್​ಲೋಡ್​ ಸ್ಪೀಡ್!!

ಭಾರತದಲ್ಲಿ 4G ಡೌನ್​ಲೋಡ್​ ಸ್ಪೀಡ್!!

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಭಾರತದಲ್ಲಿನ ಸರಾಸರಿ 4ಜಿ ಡೌನ್​ಲೋಡ್​ ಸ್ಪೀಡ್​ 6.1 ಎಂಬಿಪಿಎಸ್ ಮಾತ್ರ.!! ಇದು ಜಾಗತಿಕ ಸರಾಸರಿಯಾದ 16.6 ಎಂಬಿಪಿಎಸ್​ಗಿಂತಲೂ 10 ಎಂಬಿಪಿಎಸ್​ ಕಡಿಮೆ ಇರುವುದರಿಂದ 77 ರಾಷ್ಟ್ರಗಳಲ್ಲಿ ಭಾರತ ಕೊನೆಯ ಸ್ಥಾನವನ್ನು ಪಡೆಯಲು ಕಾರಣವಾಗಿದೆ.!!

ಭಾರತದಲ್ಲಿ ಜಿಯೋ ಬೆಸ್ಟ್!!

ಭಾರತದಲ್ಲಿ ಜಿಯೋ ಬೆಸ್ಟ್!!

ಭಾರತದಲ್ಲಿ ಶೇ. 84 ಬಾರಿ 4ಜಿ ನೆಟ್​ವರ್ಕ್​ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ. ದೇಶದಲ್ಲಿ 4 ಜಿ ಸೇವೆ ನೀಡುತ್ತಿರುವ ಕಂಪನಿಗಳಲ್ಲಿ ರಿಲಯನ್ಸ್​ ಜಿಯೋ ಅತ್ಯಂತ ವೇಗದ ಇಂಟರ್​ನೆಟ್ ಸೇವೆ ಒದಗಿಸುತ್ತಿದೆ. ಉಳಿದ ಕಂಪನಿಗಳ ಇಂಟರ್​ನೆಟ್​ ಸ್ಪೀಡ್​ ಹೆಚ್ಚಿಲ್ಲ ಎಂದು ವರದಿ ತಿಳಿಸಿದೆ.

ಹೆಚ್ಚು ಸ್ಪೀಡ್ ಡೇಟಾ ನೀಡುತ್ತಿರುವ ದೇಶಗಳು!!

ಹೆಚ್ಚು ಸ್ಪೀಡ್ ಡೇಟಾ ನೀಡುತ್ತಿರುವ ದೇಶಗಳು!!

ವಿಶ್ವದಲ್ಲೇ ಅತ್ಯಂತ ಹೆಚ್ಚು ಡೌನ್​ಲೋಡ್​ ಸ್ಪೀಡ್​ ಕಲ್ಪಿಸುತ್ತಿರುವ ದೇಶ ಎಂಬ ಖ್ಯಾತಿಗೆ ಸಿಂಗಾಪುರ ಪಾತ್ರವಾಗಿದೆ. ಇಲ್ಲಿ 4ಜಿ ಡೌನ್​ಲೋಡ್​ ಸ್ಪೀಡ್​ 46.64 ಎಂಬಿಪಿಎಸ್​ ಇದೆ.! ಇನ್ನು ಸ್ಥಿರತೆಯಲ್ಲಿ ದಕ್ಷಿಣ ಕೊರಿಯಾ ಮೊದಲಿದ್ದರೆ, ನಾರ್ವೆ, ಹಂಗೇರಿ ಮತ್ತು ನೆದರ್​ಲೆಂಡ್ ದೇಶಗಳು ನಂತರದ ಸ್ಥಾನ ಪಡೆದಿವೆ.!!

ಟೆಲಿಕಾಂ ಕಂಪೆನಿಗಳ ಸುಳ್ಳು!!

ಟೆಲಿಕಾಂ ಕಂಪೆನಿಗಳ ಸುಳ್ಳು!!

ದೇಶದ ಪ್ರತಿಯೊಬ್ಬರಿಗೂ ಅತ್ಯಂತ ವೇಗದ 4 ಜಿ ಸೇವೆ ಒದಗಿಸುತ್ತಿರುವುದಾಗಿ ಭಾರತದ ಟೆಲಿಕಾಂ ಸೇವಾ ಕಂಪನಿಗಳು ಹೇಳಿಕೊಳ್ಳುತ್ತಿವೆ. ಆದರೆ, ಜಿಯೋ ಬಿಟ್ಟರೆ ಇನ್ನಾವ ಟೆಲಿಕಾಂ ಕಂಪೆನಿಗಳು ಕೂಡ ಸರಿಯಾದ 4G ವೇಗದ ಡೇಟಾವನ್ನು ಒದಗಿಸಲು ವಿಫಲವಾಗಿವೆ.!!

ಓದಿರಿ:ಡಿಸೆಂಬರ್ 15, 16ನೇ ತಾರೀಖು ಆನ್‌ಲೈನ್ ಶಾಪಿಂಗ್ ಮಾಡುವುದನ್ನು ಮರೆಯದಿರಿ!!..ಯಾಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Average download speeds in India come at 6.1 Mbps.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot