2019ಕ್ಕೆ ನಿಮಗೆ ಸಿಗಲಿದೆ ರಾಕೆಟ್‌ ವೇಗದ ಇಂಟರ್‌ನೆಟ್‌..!

  ಮೊದಲೆಲ್ಲಾ ಏರ್‌ಟೆಲ್‌ ಇಂಟರ್‌ನೆಟ್‌ ವೇಗ ಚೆನ್ನಾಗಿದೆ ಎನ್ನುತ್ತಿದ್ದೇವು. ಈಗ ಜಿಯೋ ಇಂಟರ್‌ನೆಟ್‌ ಲೋಕದಲ್ಲಿ ವೇಗದ ಸೇವೆ ತಂದು ಕ್ರಾಂತಿ ಎಬ್ಬಿಸಿದೆ. ನೀವು ಜಿಯೋ ಬಳಕೆದಾರರಾಗಿದ್ದರೆ, ನಮ್ಮದೇ ಸ್ಪೀಡ್‌ ಇಂಟರ್‌ನೆಟ್‌ ಎಂದು ಬೀಗುತ್ತಿರಿ. ಯೋಚನೆ ಮಾಡಿ ನೀವು ಸದ್ಯ ಬಳಸುತ್ತಿರುವ ಇಂಟರ್‌ನೆಟ್‌ ವೇಗ 24.56 Mbps. ಈ ವೇಗ ನೂರು ಪಟ್ಟು ಹೆಚ್ಚಾದರೆ ಹೇಗಿರುತ್ತೆ ಯೋಚಿಸಿ. ಯೋಚಿಸಿದ್ರಾ, ಅದ್ಭುತ ಕಣ್ಮುಂದೆ ಹಾದು ಹೋಗಿರುತ್ತೆ ಅಲ್ವಾ..?

  2019ಕ್ಕೆ ನಿಮಗೆ ಸಿಗಲಿದೆ ರಾಕೆಟ್‌ ವೇಗದ ಇಂಟರ್‌ನೆಟ್‌..!

  ಹೌದು, ಈ ನಿಮ್ಮ ಯೋಚನೆ ಮುಂದಿನ ವರ್ಷದಲ್ಲಿ ಸಾಕಾರಗೊಳ್ಳಲಿದ್ದು, ಭಾರತ ಇಡೀ ಜಗತ್ತಿನಲ್ಲಿಯೇ ಅತಿ ವೇಗದ ಇಂಟರ್‌ನೆಟ್‌ ಹೊಂದಲಿದೆ. ಇದಕ್ಕೆಲ್ಲಾ ಇಸ್ರೋ ವೇದಿಕೆಯನ್ನು ರೂಪಿಸಿದ್ದು, ಮುಂದಿನ ವರ್ಷ ನಿಮಗೆ 100GBps ವೇಗದಲ್ಲಿ ಇಂಟರ್‌ನೆಟ್‌ ದೊರೆಯಲಿದೆ. ಈ ಬಗ್ಗೆ ISRO ಅಧ್ಯಕ್ಷ ಡಾ.ಕೆ.ಶಿವನ್‌ ಹೇಳಿಕೆಯೊಂದನ್ನು ನೀಡಿದ್ದು, 2019ರ ಆರಂಭದಲ್ಲಿ ಪ್ರಮುಖ 3 ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದ್ದು, ಅವುಗಳಿಂದ ಭಾರತದಲ್ಲಿನ ಇಂಟರ್‌ನೆಟ್‌ ವೇಗದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ ಎಂದಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಭಾರತಕ್ಕೆ 76ನೇ ಸ್ಥಾನ

  ಇಂಟರ್‌ನೆಟ್‌ ವೇಗದಲ್ಲಿ ಸದ್ಯ ಭಾರತ ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡಿಲ್ಲ. ಪ್ರಸ್ತುತ ಭಾರತ 76ನೇ ಸ್ಥಾನವನ್ನು ಹೊಂದಿದೆ. 24.56 Mbps ಡೌನ್‌ಲೋಡಿಂಗ್‌ ಬ್ರಾಡ್‌ಬ್ಯಾಂಡ್‌ ಸ್ಪೀಡ್‌ ಹೊಂದಿದೆ. ಅಮೇರಿಕಾ 70.75 Mbps ಡೌನ್‌ಲೋಡ್‌ ಸ್ಪೀಡ್‌ ಹೊಂದಿದ್ದು, ಅಪ್‌ಲೋಡಿಂಗ್‌ ಸ್ಪೀಡ್‌ 27.64 Mbps ಇದೆ.

  ನಾಲ್ಕು ಉಪಗ್ರಹಗಳಿಂದ ಬದಲಾವಣೆ

  ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿರುವಂತೆ 2019ರಲ್ಲಿ GSAT-19, GSAT-29, GSAT-11 ಮತ್ತು GSAT-20 ಉಪಗ್ರಹಗಳು ಭಾರತದ ಇಂಟರ್‌ನೆಟ್‌ ಲೋಕ ಮಹತ್ತರ ಬದಲಾವಣೆಯನ್ನು ಕಾಣುತ್ತದೆ. ಈ ಮೂಲಕ ಭಾರತ ಇಂಟರ್‌ನೆಟ್‌ ವೇಗದಲ್ಲಿ ಜಗತ್ತಿನಲ್ಲಿಯೇ ನಂ.1ಆಗಲಿದೆ.

  ಎರಡನೇ ಸ್ಥಾನದಲ್ಲಿ ಭಾರತ

  ಇಂಟರ್‌ನೆಟ್‌ ಬಳಕೆದಾರರ ಆಧಾರದಲ್ಲಿ ಭಾರತ ವಿಶ್ವದಲ್ಲಿಯೇ ಎರಡನೇ ಸ್ಥಾನವನ್ನು ಹೊಂದಿದೆ. ಆದರೆ, ಇಂಟರ್‌ನೆಟ್‌ ಬ್ರಾಡ್‌ಬ್ಯಾಂಡ್‌ ವೇಗದಲ್ಲಿ ವಿಶ್ವದಲ್ಲಿ 76ನೇ ಸ್ಥಾನವನ್ನು ಹೊಂದಿದೆ. ಹೀಗಾಗಲೇ 2017ರಲ್ಲಿ GSAT-19 ಉಪಗ್ರಹವನ್ನು ಉಡಾಯಿಸಲಾಗಿದೆ ಎಂದು ಡಾ.ಕೆ.ಶಿವನ್‌ ಹೇಳಿದ್ದಾರೆ.

  ಸ್ಪೀಡ್‌ ಇಂಡಿಯಾ

  ಇಸ್ರೋದ GSAT-19, GSAT-29, GSAT-11 ಮತ್ತು GSAT-20 ಉಪಗ್ರಹಗಳು ಭಾರತದ ಬ್ರಾಡ್‌ಬ್ಯಾಂಡ್‌ ಸಂಪರ್ಕದ ವೇಗವನ್ನು 100GBpsಗೆ ಏರಿಸಲಿದ್ದು, ಭಾರತದಾದ್ಯಂತ ಇರುವ ಡಿಜಿಟಲ್‌ ಅಂತರವನ್ನು ಕಡಿಮೆಗೊಳಿಸುತ್ತದೆ ಎಂದು ಇಸ್ರೋ ಮುಖ್ಯಸ್ಥ ಹೇಳಿದ್ದಾರೆ.

  30 ಸಾವಿರ ಕೋಟಿ ವ್ಯಯ

  ಕೇಂದ್ರ ಸರ್ಕಾರ 30 PSLV (Polar Satellite Launch Vehicle)ಗಳನ್ನು ಲಾಂಚ್‌ ಮಾಡಲು 10,900 ಕೋಟಿ ರೂ. ನ್ನು ಮೀಸಲಿಡಲಾಗಿದೆ. ಅದಲ್ಲದೇ GSLV Mk-3 ಉಡಾವಣಾ ವಾಹನಗಳನ್ನು 2022ರೊಳಗೆ ಲಾಂಚ್‌ ಮಾಡಲು ಇಸ್ರೋ ನಿರ್ಧರಿಸಿದೆ ಎಂದು ಶಿವನ್ ಹೇಳಿದ್ದಾರೆ.

  2022ರ ಹೊತ್ತಿಗೆ ಸಂಪೂರ್ಣ 5G

  ಭಾರತದಲ್ಲಿ 2022ರ ಹೊತ್ತಿಗೆ ಸಂಪೂರ್ಣವಾಗಿ 5G ಸೇವೆಯನ್ನು ಅಳವಡಿಸಿಕೊಳ್ಳಲಿದೆ ಎಂಬ ವರದಿಯನ್ನು ವರದಿಗಳು ಹೇಳಿವೆ. ಅಮೇರಿಕಾದಲ್ಲಿ ಮೊದಲು 5G ಸೇವೆಯನ್ನು ಲಾಂಚ್ ಮಾಡಲು ಆಪರೇಟರ್‌ಗಳು ನಿರ್ಧರಿಸಿದ್ದು, ಇದೇ ವರ್ಷ 5G ಲಾಂಚ್‌ ಆಗುವ ಸಾಧ್ಯತೆ ಬಹಳಷ್ಟಿದೆ. ಹೀಗಾಗಲೇ ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳು 2018 ಮತ್ತು 2019ರ ನಡುವೆಯೇ ಭಾರತದಲ್ಲಿ 5G ಸೇವೆಯನ್ನು ನೀಡುವುದಾಗಿ ಘೋಷಿಸಿವೆ.

  2016ರ ನಂತರ ವೇಗದ ಬದಲಾವಣೆ

  2016ರಲ್ಲಿ ಜಿಯೋ ಲಾಂಚ್‌ ಆದ ನಂತರ ಭಾರತೀಯ ಟೆಲಿಕಾಂ ಲೋಕ ವೇಗದ ಬದಲಾವಣೆ ಕಾಣುತ್ತಿದೆ. 4G ಸೇವೆ ಭಾರತದಾದ್ಯಂತ ತಲುಪವುವ ಹಂತಕ್ಕೆ ಹೋಗಿದೆ. ಈಗ ಭಾರತ 4G ಯಿಂದ 5Gಯತ್ತ ಮುಖ ಮಾಡಿದ್ದು, ಮುಂದಿನ ವರ್ಷ ಭಾರತದಲ್ಲಿ 5G ಸೇವೆ ವಾಣಿಜ್ಯಿಕವಾಗಿ ಆರಂಭವಾಗಲಿದ್ದು, ಭಾರತದ ಇಂಟರ್‌ನೆಟ್‌ ಜಗತ್ತಿನಲ್ಲಿ ಮತ್ತೊಂದು ಸ್ಥರದ ಬದಲಾವಣೆಯನ್ನು ಕಾಣುತ್ತದೆ.

  ಬಿಗ್‌ ಬದಲಾವಣೆ

  5G ನೆಟ್‌ವರ್ಕ್‌ ಭಾರತದಲ್ಲಿ ಆರಂಭವಾದರೆ, ವರ್ಚುವಲ್ ರಿಯಾಲಿಟಿ, ಆಗ್ಮೆಂಟೆಡ್‌ ರಿಯಾಲಿಟಿ ಮತ್ತು 4K ವಿಡಿಯೋಗಳಂತಹ ಮೊಬೈಲ್‌ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ. 5G ನೆಟ್‌ವರ್ಕ್‌ ಆರಂಭವಾದರೆ ಬಳಕೆದಾರರಿಗೆ ಕೇವಲ ಲಕ್ಸುರಿ ಇಂಟರ್‌ನೆಟ್‌ ಸೇವೆ ಮಾತ್ರ ಸಿಗದೆ ಟೆಲಿಕಾಂ ಆಪರೇಟರ್‌ಗಳಿಗೆ ದೊಡ್ಡ ಆದಾಯವನ್ನು ಸೃಷ್ಟಿಸಲಿದೆ.

  ಹೈದರಾಬಾದ್‌ನಲ್ಲಿ ಹೇಳಿಕೆ

  ಇಂಟರ್‌ನೆಟ್‌ ವೇಗದ ಬಗ್ಗೆ ಇಸ್ರೋ ಮುಖ್ಯಸ್ಥ ಡಾ.ಕೆ.ಶಿವನ್‌ ಹೈದರಾಬಾದ್‌ನ ಗೀತಂ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಹೇಳಿದ್ದಾರೆ. ಅದಲ್ಲದೇ ಘಟಿಕೋತ್ಸವದಲ್ಲಿ ಡಾ.ಕೆ.ಶಿವನ್‌ಗೆ ಗೌರವ ಡಾಕ್ಟರೇಟ್‌ನ್ನು ಪ್ರಧಾನ ಮಾಡಲಾಯಿತು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  India to have 100 Gbps internet speed by next year, says ISRO chief. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more