ಇಂಟರ್‌ನೆಟ್‌ ಬಳಕೆದಾರರಲ್ಲಿ ಭಾರತ ಅ'ದ್ವೀತಿಯ'..! 451 ಮಿಲಿಯನ್‌ ಸಕ್ರಿಯ ಯೂಸರ್ಸ್‌..!

By Gizbot Bureau
|

2019ರ ಹಣಕಾಸು ವರ್ಷಾಂತ್ಯಕ್ಕೆ ಮಾಸಿಕ 451 ಮಿಲಿಯನ್ ಸಕ್ರಿಯ ಇಂಟರ್‌ನೆಟ್ ಬಳಕೆದಾರರನ್ನು ಹೊಂದುವ ಮೂಲಕ ಭಾರತ, ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆಯಲ್ಲಿ ಚೀನಾ ನಂತರ ಎರಡನೇ ಸ್ಥಾನದಲ್ಲಿದೆ ಎಂದು ಇಂಟರ್‌ನೆಟ್‌ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಐಎಎಂಐಐ) ವರದಿ ತಿಳಿಸಿದೆ. ಈಗಿದ್ದರೂ, ಕೇವಲ ಶೇ.36ರಷ್ಟು ಇಂಟರ್‌ನೆಟ್‌ ಪೆನಟ್ರೆಶನ್‌ ಹೊಂದಿದ್ದು, ಬೆಳವಣಿಗೆಗೆ ಇನ್ನೂ ಹೆಚ್ಚಿನ ಹೆಡ್ ರೂಂ ಇದೆ ಎಂದು ಐಎಎಂಐಐ ಹೇಳಿದೆ.

ಇಂಟರ್‌ನೆಟ್

451 ಮಿಲಿಯನ್ ಸಕ್ರಿಯ ಇಂಟರ್‌ನೆಟ್ ಬಳಕೆದಾರರಲ್ಲಿ, 12 ವರ್ಷಕ್ಕಿಂತ ಮೇಲ್ಪಟ್ಟವರು 385 ಮಿಲಿಯನ್ ಜನರಿದ್ದರೆ, 5 ರಿಂದ 11 ವರ್ಷ ವಯಸ್ಸಿನವರು 66 ಮಿಲಿಯನ್ ಜನರಾಗಿದ್ದಾರೆ. ಈ 66 ಮಿಲಿಯನ್‌ ಇಂಟರ್‌ನೆಟ್‌ ಬಳಕೆದಾರರು ಅವರು ಕುಟುಂಬ ಸದಸ್ಯರ ಸಾಧನಗಳಲ್ಲಿ ಅಂತರ್‌ಜಾಲ ಬಳಸುತ್ತಾರೆ ಎಂದು ವರದಿ ಹೇಳಿದೆ.

ನಗರ, ಗ್ರಾಮೀಣ ವ್ಯತ್ಯಾಸವಿಲ್ಲ

ನಗರ, ಗ್ರಾಮೀಣ ವ್ಯತ್ಯಾಸವಿಲ್ಲ

ವರದಿಯಂತೆ, 192 ಮಿಲಿಯನ್ ಬಳಕೆದಾರರನ್ನು ನಗರ ಭಾಗ ಹೊಂದಿದೆ. ಅದರಂತೆ ಗ್ರಾಮೀಣ ಭಾರತವು ಕೂಡ ಅಷ್ಟೇ ಬಳಕೆದಾರರನ್ನು ಹೊಂದಿದೆ. ಈಗಿದ್ದರೂ, ನಗರ ಮತ್ತು ಗ್ರಾಮೀಣ ಭಾರತದಲ್ಲಿನ ಜನಸಂಖ್ಯೆಯ ವಿತರಣೆಯ ಅಸಮಾನತೆಯನ್ನು ಗಮನಿಸಿದರೆ, ಶೇಕಡಾವಾರು ಹಾಗೂ ಪೆನಟ್ರಷನ್‌ ವಿಷಯದಲ್ಲಿ ನಗರ ಭಾರತ ಗಣನೀಯವಾಗಿ ಮುಂದಿದೆ.

ಗ್ರಾಮೀಣ ಭಾರತದಲ್ಲಿ ಅವಕಾಶ

ಗ್ರಾಮೀಣ ಭಾರತದಲ್ಲಿ ಅವಕಾಶ

ಗ್ರಾಮೀಣ ಭಾರತದ ಗಣನೀಯ ಭಾಗ ಇಂಟರ್‌ನೆಟ್ ಪ್ರವೇಶ ಹೊಂದಿಲ್ಲ. ಮತ್ತು ಮುಂದಿನ ಬೆಳವಣಿಗೆಗೆ ಒಂದು ದೊಡ್ಡ ಅವಕಾಶವನ್ನು ಗ್ರಾಮೀಣ ಒದಗಿಸುತ್ತದೆ. ಇದರಿಂದ ಕೆಲವು ವರ್ಷಗಳಲ್ಲಿ ಒಟ್ಟಾರೆ ಇಂಟರ್‌ನೆಟ್ ಬಳಕೆದಾರರ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ವರದಿ ಹೇಳಿದೆ.

2/3 ರಷ್ಟು ದೈನಂದಿನ ಬಳಕೆದಾರರು

2/3 ರಷ್ಟು ದೈನಂದಿನ ಬಳಕೆದಾರರು

ವರದಿಯಂತೆ, ಭಾರತದಲ್ಲಿ ಇಂಟರ್‌ನೆಟ್‌ ಬಳಕೆದಾರರಲ್ಲಿ ಸುಮಾರು 2/3 ರಷ್ಟು ಜನರು ದೈನಂದಿನ ಬಳಕೆದಾರರಾಗಿದ್ದಾರೆ. ನಗರದಲ್ಲಿರುವ 10 ಬಳಕೆದಾರರಲ್ಲಿ 9 ಮಂದಿ ವಾರಕ್ಕೆ ಒಮ್ಮೆಯಾದರೂ ಯುವ ಬಳಕೆದಾರರೊಂದಿಗೆ ಇಂಟರ್‌ನೆಟ್ ಪ್ರವೇಶಿಸುತ್ತಾರೆ. 16 ರಿಂದ 29 ವರ್ಷ ವಯಸ್ಸಿನವರು ಹೆಚ್ಚಾಗಿ ಇಂಟರ್‌ನೆಟ್‌ ಬಳಕೆದಾರರಾಗಿದ್ದಾರೆ. ಆದರೂ, ಇಂಟರ್‌ನೆಟ್ ಅನ್ನು ವಾರಕ್ಕೊಮ್ಮೆಗಿಂತ ಕಡಿಮೆ ಬಳಸುವ ಬಳಕೆದಾರರ ಒಂದು ವಿಭಾಗ ಇದೆ. 5 ರಲ್ಲಿ 1 ಭಾಗ ಗ್ರಾಮೀಣ ಇಂಟರ್‌ನೆಟ್ ಬಳಕೆದಾರರು ಈ ವರ್ಗಕ್ಕೆ ಸೇರಿದವರು.

ಉತ್ತಮ ಸೇವೆಯಿಂದ ಹೆಚ್ಚಿನ ಬಳಕೆ

ಉತ್ತಮ ಸೇವೆಯಿಂದ ಹೆಚ್ಚಿನ ಬಳಕೆ

ಸುಮಾರು 1/3 ನೇ ಬಳಕೆದಾರರು ನಗರ ಭಾರತದಲ್ಲಿ ಒಂದು ಗಂಟೆಗಿಂತ ಹೆಚ್ಚು ಸಮಯ ಇಂಟರ್‌ನೆಟ್ ಪ್ರವೇಶಿಸುತ್ತಾರೆ. ಗ್ರಾಮೀಣ ಭಾರತದಲ್ಲಿ, ಇದೇ ರೀತಿಯಲ್ಲಿ 15-30 ನಿಮಿಷಗಳ ಕಾಲ ಇಂಟರ್‌ನೆಟ್‌ನ್ನು ಬಳಸುತ್ತಿದ್ದಾರೆ. ಉತ್ತಮ ಸಂಪರ್ಕ, ಸೇವೆಯ ಗುಣಮಟ್ಟ ಮತ್ತು ಮೊಬೈಲ್ ಇಂಟರ್‌ನೆಟ್‌ನ ಕೈಗೆಟುಕುವಿಕೆಯೊಂದಿಗೆ, ಗ್ರಾಮೀಣ ಗ್ರಾಹಕರು ಭವಿಷ್ಯದಲ್ಲಿ ಅಂತರ್ಜಾಲದಲ್ಲಿ ಹೆಚ್ಚಿನ ಸಮಯ ಕಳೆಯುವುದರಲ್ಲಿ ಹೆಚ್ಚಳವಾಗಬಹುದು ಎಂದು ವರದಿ ಹೇಳಿದೆ.

ಪುರುಷರಿಗಿಂತ ಸ್ತ್ರೀಯರೇ ಕಡಿಮೆ

ಪುರುಷರಿಗಿಂತ ಸ್ತ್ರೀಯರೇ ಕಡಿಮೆ

ಪುರುಷ ಇಂಟರ್‌ನೆಟ್‌ ಬಳಕೆದಾರರಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಸಂಖ್ಯೆಯ ಮಹಿಳಾ ಇಂಟರ್‌ನೆಟ್ ಬಳಕೆದಾರರು ಇದ್ದಾರೆ. ಇದರಿಂದ ಭಾರತದಲ್ಲಿ ಇಂಟರ್‌ನೆಟ್‌ ಬಳಕೆಯ ವಿಷಯದಲ್ಲಿ ಲಿಂಗ ಅಸಮಾನತೆಯಿದೆ ಎಂಬುದನ್ನು ವರದಿ ಸ್ಪಷ್ಟಗೊಳಿಸುತ್ತದೆ. 258 ಮಿಲಿಯನ್ ಪುರುಷ ಇಂಟರ್‌ನೆಟ್ ಬಳಕೆದಾರರಲ್ಲಿ ಅರ್ಧದಷ್ಟು ಮಹಿಳಾ ಇಂಟರ್‌ನೆಟ್ ಬಳಕೆದಾರರಿದ್ದಾರೆ. ಈ ಲಿಂಗ ಅಸಮಾನತೆ ಗ್ರಾಮೀಣ ಭಾರತದಲ್ಲಿ ಹೆಚ್ಚಾಗಿರುವುದು ಸ್ಪಷ್ಟವಾಗಿದೆ.

ಕೇರಳ, ತಮಿಳುನಾಡಿನಲ್ಲಿ ಹೆಚ್ಚು ಮಹಿಳಾ ಬಳಕೆದಾರರು

ಕೇರಳ, ತಮಿಳುನಾಡಿನಲ್ಲಿ ಹೆಚ್ಚು ಮಹಿಳಾ ಬಳಕೆದಾರರು

ಕೇರಳ, ತಮಿಳುನಾಡು ಮತ್ತು ದೆಹಲಿಗಳಲ್ಲಿ ಮಹಿಳಾ ಇಂಟರ್‌ನೆಟ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತದಲ್ಲಿ 2/3 ನೇ ಇಂಟರ್ನೆಟ್ ಬಳಕೆದಾರರು 12 ರಿಂದ 29 ವರ್ಷ ವಯಸ್ಸಿನವರಾಗಿದ್ದಾರೆ ಎಂದು ವರದಿ ಹೇಳಿದೆ. ಕುತೂಹಲಕಾರಿಯಾಗಿ, ಈ ವಯಸ್ಸಿನ ಹೆಚ್ಚಿನ ಪ್ರಮಾಣ ಗ್ರಾಮೀಣ ಭಾರತದಲ್ಲಿ ಕಂಡುಬರುತ್ತದೆ. ಈ ವಿಭಾಗದಲ್ಲಿ ಬೆಳವಣಿಗೆಯ ಸಾಧ್ಯತೆಯಿದೆ ಎಂಬ ಅಂಶವನ್ನು ಇದು ಸೂಚಿಸುತ್ತದೆ.

Best Mobiles in India

Read more about:
English summary
India Is In Second Place On The Highest Number Of Internet Users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X