ಐಓಎಸ್ ,ಆಂಡ್ರಾಯ್ಡ್‌ಗೆ ಸ್ಪರ್ಧೆ ನೀಡಲು ಮುಂದಾದ ಭಾರತ; ಸ್ವಂತ ಓಎಸ್ ನಿರ್ಮಾಣಕ್ಕೆ ಸಿದ್ಧತೆ!

|

ಟೆಕ್ನಾಲಜಿ ವಿಷಯದಲ್ಲಿ ಹಲವಾರು ಕಂಪೆನಿಗಳು ಸುಧಾರಿತ ತಂತ್ರಜ್ಞಾನ ಇರುವ ಡಿವೈಸ್‌ಗಳನ್ನು ಲಾಂಚ್‌ ಮಾಡುತ್ತಿರುವಂತೆಯೇ ಗ್ರಾಹಕರೂ ಸಹ ಈ ಹೊಸ ಡಿವೈಸ್‌ಗಳಿಗೆ ಮಾರುಹೋಗುತ್ತಿದ್ದಾರೆ. ಇದರ ನಡುವೆ ಐಓಎಸ್‌ ಹಾಗೂ ಆಡ್ರಾಯ್ಡ್‌ ಓಎಸ್‌ಗಳು ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆದಿದ್ದು, ಈವರೆಗೂ ಇವೆರಡರ ನಡುವೆ ಯಾವುದೇ ಸಂಸ್ಥೆಗಳೂ ಸಹ ಸ್ಪರ್ಧೆ ನೀಡುತ್ತಿಲ್ಲ. ಆದರೆ, ಭಾರತ ಸರ್ಕಾರ ಇನ್ಮುಂದೆ ಇವುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಐಓಎಸ್ ,ಆಂಡ್ರಾಯ್ಡ್‌ಗೆ ಸ್ಪರ್ಧೆ ನೀಡಲು ಮುಂದಾದ ಭಾರತ; ಸ್ವಂತ  ಓಎಸ್ ನಿರ್ಮಾಣ

ಹೌದು, ಸ್ಥಳೀಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸುವ ಮತ್ತು ಬಳಕೆದಾರರಿಗೆ ಹೆಚ್ಚು ಸುರಕ್ಷಿತ ಅನುಭವವನ್ನು ಒದಗಿಸಲು ಭಾರತ ಸರ್ಕಾರ ಮುಂದಾಗಿದೆ. ಅದರಂತೆ ಈ ವಿಷಯದಲ್ಲಿ ಕೆಲಸ ಕೂಡ ಮಾಡುತ್ತಿದೆ. ಇನ್ನುಳಿದಂತೆ ಹೊಸ ಭಾರತೀಯ ಓಎಸ್ ಗೂಗಲ್ ಮತ್ತು ಆಪಲ್‌ಗೆ ಹೆಚ್ಚುವರಿ ಆಯ್ಕೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಬಳಕೆದಾರರಿಗೆ ಈ ಮೂಲಕ ಹಲವು ಆಯ್ಕೆ ನೀಡಲಾಗುತ್ತದೆ.

ಹೆಚ್ಚು ಸುರಕ್ಷಿತ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ ಅಭಿವೃದ್ಧಿ
ಪ್ರಸ್ತುತ ಆಪಲ್‌ನ ಐಒಎಸ್ ಗೂಗಲ್‌ನ ಆಂಡ್ರಾಯ್ಡ್‌ಗೆ ಹೋಲಿಕೆ ಮಾಡಿದರೆ ಅತ್ಯಂತ ಸಾಧಾರಣ ಮಾರುಕಟ್ಟೆಯನ್ನು ಹೊಂದಿರುವುದು ಬಹುಪಾಲು ಜನರಿಗೆ ತಿಳಿದಿರುವ ವಿಷಯ. ಈ ಮೂಲಕ ಇದು ಶೇಕಡಾ 97 ರಷ್ಟು ಪಾಲನ್ನು ಹೊಂದಿದ್ದು, ಹೊಸದಾಗಿ ಭಾರತ ಸರ್ಕಾರ ಪರಿಚಯಿಸಲು ಮುಂದಾಗಿರುವ ಓಎಸ್‌ಗೆ IndOS ಎಂದು ಹೆಸರಿಡಲಾಗಿದೆ.

ಪ್ರಸ್ತುತ, ಗೂಗಲ್‌ನ ಆಂಡ್ರಾಯ್ಡ್ ಶೇಕಡಾ 97 ರಷ್ಟು ಪಾಲನ್ನು ಹೊಂದಿದೆ ಮತ್ತು ಆಪಲ್‌ನ ಐಒಎಸ್ ಸಣ್ಣ ಪಾಲನ್ನು ಹೊಂದಿದೆ ಎಂದು ವರದಿಯಾಗಿದೆ. ಹಾಗೆಯೇ ಆಪ್‌ಗಳ ಸೈಡ್ ಲೋಡಿಂಗ್ ಬಳಕೆದಾರರಿಗೆ ಸುರಕ್ಷಿತವಾಗಿರಬೇಕೆಂದು ಅಧಿಕಾರಿಗಳು ಬಯಸಿದ್ದಾರೆ.

ಐಓಎಸ್ ,ಆಂಡ್ರಾಯ್ಡ್‌ಗೆ ಸ್ಪರ್ಧೆ ನೀಡಲು ಮುಂದಾದ ಭಾರತ; ಸ್ವಂತ  ಓಎಸ್ ನಿರ್ಮಾಣ

ವಿಶ್ವದ ಅತಿದೊಡ್ಡ ಮೊಬೈಲ್‌ ಮಾರುಕಟ್ಟೆ ಭಾರತ
ಭಾರತವು ಮೊಬೈಲ್ ಡಿವೈಸ್‌ಗಳಿಗೆ ವಿಶ್ವದ ಅತಿದೊಡ್ಡ ಮಾರುಕಟ್ಟೆ ಸ್ಥಳಗಳಲ್ಲಿ ಒಂದಾಗಿದೆ ಎಂದು ಭಾರತೀಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಐಒಎಸ್‌ನ ಮಾರುಕಟ್ಟೆ ಪಾಲು ಮತ್ತು ಭಾರತದಲ್ಲಿ ಆಂಡ್ರಾಯ್ಡ್‌ನ ಪ್ರಾಬಲ್ಯವನ್ನು ಮುರಿಯಲು ಯಾವುದೇ ಓಎಸ್‌ ಇರಲಿಲ್ಲ. ಈ ಮೂಲಕ ಆರೋಗ್ಯಕರ ಸ್ಪರ್ಧೆಯನ್ನು ನೀಡುವ ಮೂಲಕ ಸುರಕ್ಷಿತ ಭಾರತೀಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಗುರಿಯಾಗಿದೆ.

ಯಾವುದೇ ಡಿವೈಸ್‌ಗಳನ್ನು ಖರೀದಿಸಿದ ನಂತರ ಅವರು ಹೊಂದಿರಬೇಕಾದ ಭದ್ರತೆಯನ್ನು ಆಂಡ್ರಾಯ್ಡ್‌ ಬಳಕೆದಾರರಿಗೆ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿದ ಎಲ್ಲಾ ಆಪ್‌ಗಳು ಬಳಕೆದಾರರನ್ನು ಅಸುರಕ್ಷಿತ ಪ್ಲಾಟ್‌ಫಾರ್ಮ್‌ಗಳಿಗೆ ಒಡ್ಡುವುದಿಲ್ಲ ಎಂದು ಸಹ ಗೂಗಲ್ ಒಪ್ಪಿಕೊಳ್ಳುತ್ತದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಭಾರತವು ತನ್ನ ಸ್ಥಳೀಯ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಆಂಡ್ರಾಯ್ಡ್‌ನ ಪ್ರಾಬಲ್ಯವನ್ನು ಮುರಿಯಲು ಮತ್ತು ಸುರಕ್ಷಿತ ಪ್ಲಾಟ್‌ಫಾರ್ಮ್‌ಗಳನ್ನು ಒದಗಿಸಲು ತನ್ನದೇ ಆದ ಪ್ಲ್ಯಾನ್‌ ಅನ್ನು ರೂಪಿಸಿದೆ.

ಆಂಡ್ರಾಯ್ಡ್ ಫೋನ್ ತಯಾರಕರು ಬಳಕೆದಾರರಿಗೆ ಭದ್ರತೆಯನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಕಂಪನಿಗಳು ಇವುಗಳಿಗೆ ವಾರಂಟಿ ಜೊತೆಗೆ ಮಾರಾಟದ ನಂತರದ ಸೇವೆಗಳನ್ನು ನೀಡಲಾಗುತ್ತದೆ ಎಂದು ಹೇಳುತ್ತಿವೆ. ಆಂಡ್ರಾಯ್ಡ್ ಗೂಗಲ್‌ನ ಉತ್ಪನ್ನವಾಗಿರುವುದರಿಂದ ಬಳಕೆದಾರರ ಸುರಕ್ಷತೆಯನ್ನು ನೋಡಿಕೊಳ್ಳುವುದು ಗೂಗಲ್‌ ಜವಾಬ್ದಾರಿಯಾಗಿದೆ ಎಂದು ಓಎಮ್‌ಇ ಗಳು ಪ್ರತಿಪಾದಿಸುತ್ತಿವೆ.

ಐಓಎಸ್ ,ಆಂಡ್ರಾಯ್ಡ್‌ಗೆ ಸ್ಪರ್ಧೆ ನೀಡಲು ಮುಂದಾದ ಭಾರತ; ಸ್ವಂತ  ಓಎಸ್ ನಿರ್ಮಾಣ

ಗೂಗಲ್‌ ತನ್ನದೇ ಆದ ಕೆಲವು ತಪ್ಪು ಕಾರ್ಯಗಳಿಗಾಗಿ ಈಗ ಕೋರ್ಟ್‌ ಮೆಟ್ಟಿಲೇರಿದೆ. ಅದರಲ್ಲೂ ಗೂಗಲ್ ಇಂಡಿಯಾವು ಆಂಡ್ರಾಯ್ಡ್ ಫೋನ್‌ಗಳಿಗೆ ಸಂಬಂಧಿಸಿದಂತೆ ತನ್ನ ಅನ್ಯಾಯದ ಮತ್ತು ಸ್ಪರ್ಧಾತ್ಮಕ-ವಿರೋಧಿ ಕ್ರಮಗಳಿಗಾಗಿ 1,338 ಕೋಟಿ ರೂ.ಗಳ ದಂಡ ಪ್ರಕರಣವನ್ನು ಎದುರಿಸುತ್ತಿರುವ ಬೆನ್ನಲ್ಲೇ ಈ ಎಲ್ಲಾ ಬೆಳವಣಿಗೆ ಕಂಡುಬರುತ್ತಿವೆ.

ಇದು ಭಾರತದಲ್ಲಿನ 97 ಪ್ರತಿಶತದಷ್ಟು ಸ್ಮಾರ್ಟ್‌ಫೋನ್‌ಗಳಿಗೆ ಅಧಿಕಾರ ನೀಡುವ ಆಂಡ್ರಾಯ್ಡ್‌ನಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಗಂಭೀರ ಆರೋಪವನ್ನು ಎದುರಿಸುತ್ತಿದೆ. ಹಾಗೆಯೇ ಸ್ಮಾರ್ಟ್‌ಫೋನ್ ತಯಾರಕರ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ಬದಲಾಯಿಸುವಂತೆ ಗೂಗಲ್‌ಗೆ ತಿಳಿಸಲಾಗಿದೆ. ಇನ್ನು ಈ ಹೊಸ ಓಎಸ್‌ ಯಾವಾಗ ಬಳಕೆಗೆ ಬರಲಿದೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.

Best Mobiles in India

English summary
India is preparing to build its own OS to compete with iOS and Android. This will provide more security. detail is in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X