ಏಷ್ಯಾ ಖಂಡದಲ್ಲೇ ಅತಿ ಕಡಿಮೆ ಇಂಟರ್ನೆಟ್‌ ವೇಗ ಭಾರತದಲ್ಲಿ: ಏಕೆ ಗೊತ್ತೇ?

Written By:

ಏರ್‌ಟೆಲ್‌ 5G ಇಂಟರ್ನೆಟ್‌ ಸೇವೆ ಕೊಟ್ರು, ಬಿಎಸ್‌ಎನ್‌ಎಲ್‌ 4G ಇಂಟರ್ನೆಟ್ ಸಂಪರ್ಕ ಕೊಟ್ರು ಸಹ ಇಂಟರ್ನೆಟ್‌ ಸಂಪರ್ಕದ ವೇಗದ ವಿಷಯದಲ್ಲಿ ಇಡಿ ಏಷ್ಯಾ ಖಂಡದಲ್ಲೇ ಅತಿ ಕಡಿಮೆ ವೇಗದ ಇಂಟರ್ನೆಟ್‌ ಸಂಪರ್ಕ ಇರುವುದು ಭಾರತದಲ್ಲಿ ಎಂಬುದನ್ನು ಮರೆಯೋಹಾಗಿಲ್ಲ. ಬಹುಶಃ ಈ ಮಾಹಿತಿ ಇಂಟರ್ನೆಟ್‌ ಬಳಕೆದಾರರಿಗೆ ಸ್ವಲ್ಪ ಬೇಸರ ಏನಿಸಬಹುದು. ಜಾಗತಿಕ ಇಂಟರ್ನೆಟ್‌ ವೇಗವನ್ನು 2014 ಕ್ಕೆ ಹೋಲಿಸಿದರೆ 2015 ರ ಡಿಸೆಂಬರ್‌ ವೇಳೆಗೆ ಇಂಟರ್ನೆಟ್‌ ವೇಗ 23 ಶೇಕಡ ಅಂದರೆ 5.6 Mbps ಹೆಚ್ಚಾಗಿದೆ.

ಸಂತೋಷದ ವಿಷಯ ಅಂದ್ರೆ ದಕ್ಷಿಣ ಕೊರಿಯಾ ಜಾಗತಿಕವಾಗಿ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ 26.7 Mbps ಇಂಟರ್ನೆಟ್‌ ವೇಗ ಹೊಂದಿದೆ. ಆದರೆ ಭಾರತ ಅತಿ ಕಡಿಮೆ ಇಂಟರ್ನೆಟ್‌ ವೇಗ ಕೇವಲ 2.8 Mbps ಹೊಂದಿದೆ. "Fourth Quarter, 2015, State of the Internet Report" ವರದಿಯನ್ನು ಕಂಟೆಂಟ್ ಡಿಲಿವರಿ ನೆಟ್‌ ವರ್ಕ್‌ ಸರ್ವೀಸ್‌ 'ಅಕಮೈ ಟೆಕ್ನಾಲಜೀಸ್‌ ಕಂಪನಿ' ಬಿಡುಗಡೆ ಮಾಡಿದೆ.

ಜಾಗತಿಕವಾಗಿ ಶೇಕಡ 8.6 ಇಂಟರ್ನೆಟ್‌ ವೇಗ ಒಂದು ತ್ರೈಮಾಸಿಕದಿಂದ ಇನ್ನೊಂದು ತ್ರೈಮಾಸಿಕಕ್ಕೆ ಹೆಚ್ಚಾಗುತ್ತಿದೆ. ಅಲ್ಲದೇ ಕಳೆದ ವರ್ಷಕ್ಕೆ ಹೋಲಿಸಿದರೆ 23 ಶೇಕಡ (5.6 Mbps) ಜಾಗತಿಕ ಇಂಟರ್ನೆಟ್‌ ವೇಗ ಹೆಚ್ಚಾಗಿದೆ ಎಂದು ಇಂಟರ್ನೆಟ್‌ ವರದಿ ಹೇಳಿದೆ. ಕುತೂಹಲಕಾರಿ ವಿಷಯವೆಂದರೆ ದಕ್ಷಿಣ ಕೊರಿಯಾ (95.3 Mbps), ಮಕಾವು (83.1 Mbps) ಪ್ರದೇಶಗಳು ಮಾತ್ರ ಪ್ರತಿ ತ್ರೈಮಾಸಿಕದಲ್ಲಿ ಇಂಟರ್ನೆಟ್‌ ಟ್ರಾಫಿಕ್‌ನಲ್ಲಿ ಶೇಕಡ 10 ಮತ್ತು ಶೇಕಡ 13 ವೇಗವನ್ನು ಪಡೆಯುತ್ತಿವೆ.

ಭಾರತದಲ್ಲಿ ಕೇವಲ 2.8 Mbps ಇಂಟರ್ನೆಟ್‌ ವೇಗವನ್ನು ಹೊಂದಿದೆ ಎನ್ನುವುದಾದರೆ ಇತರ ಅಭಿವೃದ್ದಿ ರಾಷ್ಟ್ರಗಳ ಇಂಟರ್ನೆಟ್‌ ವೇಗ ಎಷ್ಟಿರಬಹುದು. ಹಾಗಾದ್ರೆ ಅತಿ ವೇಗದ ಇಂಟರ್ನೆಟ್‌ ಹೊಂದಿರುವ ಟಾಪ್‌ ದೇಶಗಳು ಯಾವುವು ಎಂಬುದು ಹಲವರ ಪ್ರಶ್ನೆ ಯಾರಿಗಬಹುದು. ಅದಕ್ಕೆ ಉತ್ತರ ಇಲ್ಲಿದೆ. ಲೇಖನದ ಸ್ಲೈಡರ್‌ನಲ್ಲಿ ಪ್ರಪಂಚದಲ್ಲಿಯೇ ಅತ್ಯಧಿಕ ಇಂಟರ್ನೆಟ್‌ ವೇಗ ಹೊಂದಿರುವ ಟಾಪ್‌ ದೇಶಗಳು ಹಾಗೂ ಅವುಗಳ ಇಂಟರ್ನೆಟ್‌ ವೇಗ ಎಷ್ಟು ಎಂದು ತಿಳಿಸಲಾಗಿದೆ. ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಿನ್‌ಲ್ಯಾಂಡ್‌

ಫಿನ್‌ಲ್ಯಾಂಡ್‌

#10

ಸರಾಸರಿ Mbps : 12.1 ಇಂಟರ್ನೆಟ್‌ ವೇಗ. ಶೇಕಡ 33 ಇಂಟರ್ನೆಟ್‌ ಸಂಪರ್ಕ ವೇಗ ಅಧಿಕವಾಗಿದೆ.

 ಜೆಕ್ ರಿಪಬ್ಲಿಕ್

ಜೆಕ್ ರಿಪಬ್ಲಿಕ್

#9

ಸರಾಸರಿ Mbps : 12.3 ಇಂಟರ್ನೆಟ್‌ ವೇಗ. ಶೇಕಡ 8.4 ಇಂಟರ್ನೆಟ್‌ ಸಂಪರ್ಕ ವೇಗ ಅಧಿಕವಾಗಿದೆ.

 ಐರ್‌ಲ್ಯಾಂಡ್‌

ಐರ್‌ಲ್ಯಾಂಡ್‌

#8

ಸರಾಸರಿ Mbps : 12.3 ಇಂಟರ್ನೆಟ್‌ ವೇಗ. ಶೇಕಡ 8.4 ಇಂಟರ್ನೆಟ್‌ ಸಂಪರ್ಕ ವೇಗ ಅಧಿಕವಾಗಿದೆ.

ಲಾಟ್ವಿಯಾ

ಲಾಟ್ವಿಯಾ

#7

ಸರಾಸರಿ Mbps : 13. ಇಂಟರ್ನೆಟ್‌ ವೇಗ. ಶೇಕಡ 25 ಇಂಟರ್ನೆಟ್‌ ಸಂಪರ್ಕ ವೇಗ ಅಧಿಕವಾಗಿದೆ.

 ದಿ ನೆದರ್‌ಲ್ಯಾಂಡ್ಸ್‌

ದಿ ನೆದರ್‌ಲ್ಯಾಂಡ್ಸ್‌

#6

ಸರಾಸರಿ Mbps : 14.2 ಇಂಟರ್ನೆಟ್‌ ವೇಗ. ಶೇಕಡ 15 ಇಂಟರ್ನೆಟ್‌ ಸಂಪರ್ಕ ವೇಗ ಅಧಿಕವಾಗಿದೆ.

 ಸ್ವಿಜರ್ಲ್ಯಾಂಡ್

ಸ್ವಿಜರ್ಲ್ಯಾಂಡ್

#5

ಸರಾಸರಿ Mbps : 14.5 ಇಂಟರ್ನೆಟ್‌ ವೇಗ. ಶೇಕಡ 21 ಇಂಟರ್ನೆಟ್‌ ಸಂಪರ್ಕ ವೇಗ ಅಧಿಕವಾಗಿದೆ.

ಸ್ವೀಡನ್

ಸ್ವೀಡನ್

#4

ಸರಾಸರಿ Mbps : 14.6 ಇಂಟರ್ನೆಟ್‌ ವೇಗ. ಶೇಕಡ 34 ಇಂಟರ್ನೆಟ್‌ ಸಂಪರ್ಕ ವೇಗ ಅಧಿಕವಾಗಿದೆ.

ಜಪಾನ್‌

ಜಪಾನ್‌

#3

ಸರಾಸರಿ Mbps : 15.2 ಇಂಟರ್ನೆಟ್‌ ವೇಗ. ಶೇಕಡ 16 ಇಂಟರ್ನೆಟ್‌ ಸಂಪರ್ಕ ವೇಗ ಅಧಿಕವಾಗಿದೆ.

ಹಾಂಗ್‌ ಕಾಂಗ್‌

ಹಾಂಗ್‌ ಕಾಂಗ್‌

#2

ಸರಾಸರಿ Mbps : 16.8 ಇಂಟರ್ನೆಟ್‌ ವೇಗ. ಶೇಕಡ 37 ಇಂಟರ್ನೆಟ್‌ ಸಂಪರ್ಕ ವೇಗ ಅಧಿಕವಾಗಿದೆ.

ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾ

#1

ಸರಾಸರಿ Mbps : 22.2 ಇಂಟರ್ನೆಟ್‌ ವೇಗ. ಶೇಕಡ 1.6 ಇಂಟರ್ನೆಟ್‌ ಸಂಪರ್ಕ ವೇಗ ಅಧಿಕವಾಗಿದೆ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
India’s Internet Speeds Are the Slowest in Asia at 2.8 Mbps.The 10 countries with the world's fastest internet speeds You can know here.Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot