ಭಾರತದಲ್ಲಿ ಮೊಬೈಲ್‌ ಡೌನ್‌ಲೋಡ್‌ ವೇಗದಲ್ಲಿ ಭಾರಿ ಬದಲಾವಣೆ!..ಓಕ್ಲಾ ವರದಿ!

|

ಕಳೆದ ಕೆಲವು ದಿನಗಳಿಂದ ದೇಶದ ಇಂಟರ್‌ನೆಟ್‌ ವೇಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದಕ್ಕೆ ಪೂರಕವೆಂಬಂತೆ ಓಕ್ಲಾ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತದಲ್ಲಿ ಮೀಡಿಯಾ ಮೊಬೈಲ್‌ ಸ್ಪೀಡ್‌ ಸಾಕಷ್ಟು ವೇಗವನ್ನು ಪಡೆದುಕೊಂಡಿದೆ ಎಂದು ವರದಿ ಮಾಡಿದೆ. ಈ ಮೂಲಕ ಜಾಗತಿಕವಾಗಿ ಭಾರತವು ವೇಗದ ಡೌನ್‌ಲೋಡ್‌ನಲ್ಲಿ 79 ನೇ ಸ್ಥಾನಕ್ಕೆ ಏರಿದೆ ಎಂದು ಹೇಳಿದೆ. ಈ ಸ್ಥಾನ ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಜಿಗಿತವಾಗಿದ್ದು, ಡೌನ್‌ಲೋಡ್‌ ವೇಗದಲ್ಲಿ ಬಹಳಷ್ಟು ಸುದಾರಣೆಯಾಗಿದೆ ಎಂದು ಹೇಳಿದೆ.

ಭಾರತದಲ್ಲಿ ಮೊಬೈಲ್‌ ಡೌನ್‌ಲೋಡ್‌ ವೇಗದಲ್ಲಿ ಭಾರಿ ಬದಲಾವಣೆ!..ಓಕ್ಲಾ ವರದಿ!

ಹೌದು, ಭಾರತದಲ್ಲಿ ಓಕ್ಲಾ ಭಾರತದಲ್ಲಿ ಮೀಡಿಯಾ ಮೊಬೈಲ್‌ ಡೌನ್‌ಲೋಡ್‌ ವೇಗವು ಸಾಕಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದೆ. ಅದರಂತೆ ಮೊಬೈಲ್‌ ಡೌನ್‌ಲೋಡ್‌ ವೇಗವು 18.26 Mbps ನಿಂದ 25.29 Mbps ಗೆ ಏರಿಕೆಯಾಗಿದೆ ಎಂದು ಹೇಳಿದೆ. ಇದಕ್ಕೆ ಭಾರತದಲ್ಲಿ 5G ನೆಟ್‌ವರ್ಕ್‌ ರೋಲ್‌ಔಟ್ ಆಗಿರುವುದು ಮುಖ್ಯ ಕಾರಣ ಎನ್ನಲಾಗಿದೆ. ಆದರಿಂದ ಭಾರತದಲ್ಲಿ 5G ನೆಟ್‌ವರ್ಕ್‌ ಪರಿಫೂರ್ಣವಾಗಿ ಲಭ್ಯವಾದ ನಂತರ ಡೌನ್‌ಲೋಡ್‌ ವೇಗವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾದ್ರೆ ಓಕ್ಲಾ ನೀಡಿದ ವರದಿಯಲ್ಲಿ ಏನೆಲ್ಲಾ ಉಲ್ಲೇಖಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂಟರ್‌ನೆಟ್‌ ವೇಗದ ಮಾಹಿತಿಯನ್ನು ನೀಡುವ ಓಕ್ಲಾ ಭಾರತೀಯರಿಗೆ ಸಮಧಾನ ತರುವಂತಹ ಸುದ್ದಿಯನ್ನು ನೀಡಿದೆ. ಕಳೆದ ಕೆಲವು ವರ್ಷಗಳಿಂದ ಡೌನ್‌ಲೋಡ್‌ ವೇಗದಲ್ಲಿ ಭಾರಿ ಹಿನ್ನಡೆಯನ್ನು ಹೊಂದಿದ್ದ ಭಾರತ ಇದೀಗ ಡೌನ್‌ಲೋಡ್‌ ವೇಗದಲ್ಲಿ 79ನೇ ಸ್ಥಾನಕ್ಕೇರಿದೆ. ಈ ಮೂಲಕ ಜಾಗತಿಕವಾಗಿ ಡೌನ್‌ಲೋಡ್‌ ವೇಗದಲ್ಲಿ ಉತ್ತಮವಾದ ಬೆಳವಣಿಗೆ ಸಾಧಿಸಿದೆ ಎನ್ನಲಾಗಿದೆ. ಸದ್ಯ ಭಾರತದಲ್ಲಿ 5G ನೆಟ್‌ವರ್ಕ್‌ ರೂಲ್‌ಔಟ್‌ ಆಗಿರುವುದರಿಂದ ಇದು ಸಾದ್ಯವಾಗಿದೆ ಎನ್ನಲಾಗಿದೆ.

ಭಾರತದಲ್ಲಿ ಮೊಬೈಲ್‌ ಡೌನ್‌ಲೋಡ್‌ ವೇಗದಲ್ಲಿ ಭಾರಿ ಬದಲಾವಣೆ!..ಓಕ್ಲಾ ವರದಿ!

ಇನ್ನು ಭಾರತದಲ್ಲಿ 5G ರೆಡಿ ಡಿವೈಸ್‌ಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ಮೀಡಿಯಾ ಮೊಬೈಲ್‌ ಡೌನ್‌ಲೋಡ್‌ ವೇಗದಲ್ಲಿ ಬದಲಾವಣೆ ಕಾಣಬಹುದಾಗಿದೆ. ಇದೇ ಕಾರಣಕ್ಕೆ ನವೆಂಬರ್‌ನಲ್ಲಿ 49.11 Mbps ಸರಾಸರಿ ಡೌನ್‌ಲೋಡ್ ವೇಗ ಹೊಂದಿದ್ದ ಭಾರತ ನಿಂದ ಡಿಸೆಂಬರ್‌ನಲ್ಲಿ 49.14 Mbps ಗೆ ಹೆಚ್ಚಳವನ್ನು ಕಂಡಿದೆ ಎಂದು ವರದಿಯಾಗಿದೆ. ಆದರೆ ಇದರ ನಡುವೆಯೂ ಅಪ್‌ಲೋಡ್ ವೇಗದಲ್ಲಿ ಭಾರತ ಇನ್ನು ಕೂಡ ಹಿಂದೆ ಉಳಿದಿದೆ ಎಂದು ಹೇಳಲಾಗಿದೆ.

ಇದೆಲ್ಲದರ ನಡುವೆ ಜಾಗತಿಕವಾಗಿ ಡೌನ್‌ಲೋಡ್‌ ವೇಗಕ್ಕೆ ಹೋಲಿಸಿದರೆ ಭಾರತ ಸಾಕಷ್ಟು ಹಿಂದೆ ಉಳಿದಿದೆ. ಇದರಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಸ್ಥಿರ ಬ್ರಾಡ್‌ಬ್ಯಾಂಡ್ ವೇಗದ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿದೆ. ಸ್ಪೀಡ್‌ಟೆಸ್ಟ್ ಗ್ಲೋಬಲ್ ಇಂಡೆಕ್ಸ್‌ನ ನೀಡಿರುವ ಮಾಹಿತಿಯಂತೆ ಡಿಸೆಂಬರ್‌ ತಿಂಗಳಲ್ಲಿ ಮೊಬೈಲ್ ವೇಗದ ಡೌನ್‌ಲೋಡ್‌ ನೀಡುವಲ್ಲಿ ಕತಾರ್ ಅಗ್ರಸ್ಥಾನದಲ್ಲಿದೆ. ಸ್ಥಿರ ಬ್ರಾಡ್‌ಬ್ಯಾಂಡ್‌ ವಿಚಾರದಲ್ಲಿ ಸಿಂಗಾಪುರ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಭಾರತದಲ್ಲಿ ಮೊಬೈಲ್‌ ಡೌನ್‌ಲೋಡ್‌ ವೇಗದಲ್ಲಿ ಭಾರಿ ಬದಲಾವಣೆ!..ಓಕ್ಲಾ ವರದಿ!

ಇನ್ನು ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ TRAI ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜಿಯೋದ ಸರಾಸರಿ 4G ಡೌನ್‌ಲೋಡ್ ವೇಗದಲ್ಲಿ 1.2 ಎಂಬಿಪಿಎಸ್ (mbps)​ ಜಿಗಿತ ಕಂಡು ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ 19.1 ಎಂಬಿಪಿಎಸ್ (mbps)​ ಇದ್ದ ವೇಗ ಅಕ್ಟೋಬರ್ ತಿಂಗಳಲ್ಲಿ 20.3 ಎಂಬಿಪಿಎಸ್ (mbps)​ ತಲುಪಿದೆ. ಅಂಕಿ ಅಂಶಗಳ ಅನ್ವಯ ಸರಾಸರಿ ಡೌನ್‌ಲೋಡ್ ವೇಗದ ವಿಚಾರದಲ್ಲಿ ಏರ್‌ಟೆಲ್ ಮತ್ತು ವಿ (ವೊಡಾಫೋನ್-ಐಡಿಯಾ) ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಅಕ್ಟೋಬರ್‌ನಲ್ಲಿ ಏರ್‌ಟೆಲ್‌ನ ಸರಾಸರಿ 4G ಡೌನ್‌ಲೋಡ್ ವೇಗ 15 ಎಂಬಿಪಿಎಸ್​ ಆಗಿದ್ದರೆ ವಿ 14.5 ಎಂಬಿಪಿಎಸ್​ ವೇಗ ಹೊಂದಿತ್ತು. ಕಳೆದ ತಿಂಗಳಿನಿಂದ ಎರಡೂ ಕಂಪನಿಗಳು ತಮ್ಮ ವೇಗದಲ್ಲಿ ಸುಧಾರಣೆ ಮಾಡಿಕೊಂಡಿವೆ. ಆದರೆ ಏರ್ಟೆಲ್ ಮತ್ತು Vi ಗೆ ಹೋಲಿಸಿದರೆ ರಿಲಯನ್ಸ್​ ಜಿಯೋದ ಸರಾಸರಿ 4G ಡೌನ್‌ಲೋಡ್ ವೇಗವು 5 ಎಂಬಿಪಿಎಸ್​ಗಿಂತ (mbps) ಹೆಚ್ಚು ಇದೆ.

ರಿಲಯನ್ಸ್ ಜಿಯೋ ಕಳೆದ ವರ್ಷ ಆಕ್ಟೋಬರ್‌ ತಿಂಗಳಲ್ಲಿ ಸರಾಸರಿ 4G ಅಪ್​ಲೋಡ್​ ವೇಗದಲ್ಲಿ ಮೊದಲ ಬಾರಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿತ್ತು. ಅಂದರೆ ಅಕ್ಟೋಬರ್‌ನಲ್ಲಿ 6.2 ಎಂಬಿಪಿಎಸ್​ ವೇಗದ ಮೂಲಕ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಇದೇ ಸಮಯದಲ್ಲಿ ವಿ (VI) ಟೆಲಿಕಾಂ 4.5 ಎಂಬಿಪಿಎಸ್​ (mbps) ವೇಗದೊಂದಿಗೆ ಎರಡನೇ ಸ್ಥಾನದಲ್ಲಿದೆ.

Best Mobiles in India

English summary
India’s media mobile speeds jumped in December 2022 Ookla Report ! Details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X