ಸೊಶೀಯಲ್‌ ಮೀಡಿಯಾ ನಿಯಮಗಳನ್ನು ಪರಿಷ್ಕರಿಸಲು ಮುಂದಾದ ಭಾರತ ಸರ್ಕಾರ!

|

ಭಾರತ ಸರ್ಕಾರ ಸೊಶೀಯಲ್‌ ಮೀಡಿಯಾ ಕಂಪೆನಿಗಳ ಮೇಲೆ ಹೊಸ ನಿಯಮಗಳನ್ನು ಪರಿಷ್ಕರಣೆ ಮಾಡಲು ಮುಂದಾಗಿದೆ. ಭಾರತೀಯರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಈ ನಿಯಮಗಳ ಪರಿಷ್ಕರಣೆ ಅವಶ್ಯಕವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಳೆದ ವರ್ಷ ಹೊಸ ಐಟಿ ನಿಯಮಗಳು ಜಾರಿಗೆ ಬಂದ ನಂತರ ಸೊಶೀಯಲ್‌ ಮೀಡಿಯಾ ಕಂಪೆನಿಗಳು ಹಾಗೂ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಇದರ ನಡುವೆ ನಿಯಮಗಳಿಗೆ ಹೊಸ ಪರಿಷ್ಕರಣೆಗೆ ಸರ್ಕಾರ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸರ್ಕಾರ

ಹೌದು, ಭಾರತ ಸರ್ಕಾರ ಸಾಮಾಜಿಕ ಮಾಧ್ಯಮ ಕಂಪನಿಗಳ ಮೇಲೆ ಹೊಸ ನಿಯಮಗಳನ್ನು ರಿಲೀಸ್‌ ಮಾಡಿತ್ತು. ಆದರೆ ಹೊಸ ನಿಯಮಗಳನ್ನು ಪ್ರಸ್ತಾಪಿಸಿದ ನಂತರ ಹಠಾತ್ತನೆ ಕಳೆದ ವಾರ ಹಿಂತೆಗೆದುಕೊಂಡಿದೆ. ಇದೀಗ ಯಾವುದೇ ಬದಲಾವಣೆಗಳನ್ನು ಮಾಡದೆ, ಕಂಪನಿಗಳು ಭಾರತೀಯರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿರುವುದರಿಂದ ಕಾನೂನಿನ ಅಗತ್ಯವಿದೆ ಎಂದು ವಿವರಿಸಿದೆ.ಹಾಗಾದ್ರೆ ಸರ್ಕಾರ ಸೊಶೀಯಲ್‌ ಮೀಡಿಯಾ ಕಂಪೆನಿಗಳ ನಿಯಮದಲ್ಲಿ ಏನೆಲ್ಲಾ ಪರಿಷ್ಕರಣೆ ಮಾಡಲು ಮುಂದಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸರ್ಕಾರ

ಕಳೆದ ವಾರ ಕೇಂದ್ರ ಸರ್ಕಾರ ತನ್ನ ಐಟಿ ಕಾನೂನಿಗೆ ಬದಲಾವಣೆಗಳ ಕರಡನ್ನು ಬಿಡುಗಡೆ ಮಾಡಿತು. ಇದರಲ್ಲಿ ಸೊಶೀಯಲ್‌ ಮೀಡಿಯಾ ಕಂಪನಿಗಳು "ಭಾರತದ ಸಂವಿಧಾನದ ಅಡಿಯಲ್ಲಿ ನಾಗರಿಕರಿಗೆ ನೀಡಿರುವ ಹಕ್ಕುಗಳನ್ನು ಗೌರವಿಸಬೇಕು" ಮತ್ತು ಕಂಪನಿಗಳ ವಿಷಯ ಮಾಡರೇಶನ್ ನಿರ್ಧಾರಗಳ ಮೇಲ್ಮನವಿಗಳನ್ನು ಕೇಳಲು ಸರ್ಕಾರಿ ಸಮಿತಿಯನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿತ್ತು. ಇದೀಗ ಸರ್ಕಾರವು ಯಾವುದೇ ಬದಲಾವಣೆಗಳಿಲ್ಲದೆ ಹೊಸ ಕರಡನ್ನು ಮತ್ತೊಮ್ಮೆ ಬಿಡುಗಡೆ ಮಾಡಿದೆ. ಇದರ ಬಗ್ಗೆ 30 ದಿನಗಳಲ್ಲಿ ಸಾರ್ವಜನಿಕ ಅಭಿಪ್ರಾಯಗಳನ್ನು ಕೋರಿದೆ.

ಐಟಿ

ಇನ್ನು ಹೊಸ ಐಟಿ ನಿಯಮ ಜಾರಿಗೆ ಬಂದ ನಂತರ ಅನೇಕ (ತಂತ್ರಜ್ಞಾನ) ಮಧ್ಯವರ್ತಿಗಳು ಭಾರತೀಯ ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿ ವರ್ತಿಸಿದ್ದಾರೆ" ಎಂದು ಸರ್ಕಾರ ಹೇಳಿದೆ. ಇದರಲ್ಲಿ ಯಾವುದೇ ನಿರ್ಧಿಷ್ಟ ಕಂಪನಿ ಅಥವಾ ನಿರ್ದಿಷ್ಟ ಹಕ್ಕುಗಳ ಹೆಸರನ್ನು ಹೇಳದೆ ಕೇವಲ ಮಾಹಿತಿಯನ್ನು ಉಲ್ಲೇಖಿಸಿದೆ. ಇನ್ನು ಈಗಾಗಲೇ ಟ್ವಿಟರ್‌ ಮತ್ತು ಕೇಂದ್ರ ಸರ್ಕಾರದ ನಡುವೆ ಕಳೆದ ವರ್ಷದಿಂದ ತಿಕ್ಕಾಟ ನಡೆಯುತ್ತಲೇ ಇರುವುದರಿಂದ ಸರ್ಕಾರ ಹೊಸ ನಿಯಂತ್ರಣಕ್ಕೆ ಮುಂದಾಗಿದೆ.

ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರದ ಹೊಸ ಐಟಿ ನಿಯಮದ ಕಾರಣದಿಂದಾಗಿ ಸರ್ಕಾರ ಹಾಗೂ ಫೇಸ್‌ಬುಕ್, ಯೂಟ್ಯೂಬ್ ಮತ್ತು ಟ್ವಿಟರ್‌ನಂತಹ ಸಂಸ್ಥೆಗಳ ನಡುವೆ ಆಗಾಗ ತಿಕ್ಕಾಟ ನಡೆಯುತ್ತಿದೆ. ಈ ಸಂಸ್ಥೆಗಳ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸುವುದಕ್ಕೆ ಸರ್ಕಾರ ಮುಂದಾಗಿದೆ. ಈ ಹಿಂದೆ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಗಳ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತೊರುವ ಖಾತೆಗಳ ಮೇಲೆ ಕ್ರಮಕೈಗೊಳ್ಳುವಂತೆ ಸರ್ಕಾರ ಟ್ವಿಟರ್‌ಗೆ ಹೇಳಿತ್ತು. ಆದರೆ ಟ್ವಿಟರ್‌ ಸರ್ಕಾರ ಹೇಳಿದ ಆದೇಶಗಳನ್ನು ಸಂಪೂರ್ಣವಾಗಿ ಅನುಸರಿಸಲು ನಿರಾಕರಿಸಿರೋದು ಕೂಡ ಇಲ್ಲಿ ಗಮರ್ನಾಹ. ಇದರಿಂದ ಟ್ವಿಟರ್‌ ಭಾರತದಲ್ಲಿ ಹಿನ್ನಡೆಯನ್ನು ಕೂಡ ಅನುಭವಿಸುತ್ತಿದೆ.

ಸೊಶೀಯಲ್‌

ಕೇಂದ್ರ ಸರ್ಕಾರದ ಪ್ರಸ್ತಾವನೆಯಲ್ಲಿ ಸೊಶೀಯಲ್‌ ಮೀಡಿಯಾ ಕಂಪನಿಗಳು "ಸೂಕ್ತ ಶ್ರದ್ಧೆ, ಗೌಪ್ಯತೆ ಮತ್ತು ಪಾರದರ್ಶಕತೆಯ ಸಮಂಜಸವಾದ ನಿರೀಕ್ಷೆಯೊಂದಿಗೆ ಬಳಕೆದಾರರಿಗೆ ತನ್ನ ಸೇವೆಗಳ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ" ಒತ್ತಾಯಿಸಲಾಗಿದೆ. ಈ ಹೊಸ ಮೇಲ್ಮನವಿ ಸಂಸ್ಥೆಯನ್ನು ಸಮರ್ಥಿಸುತ್ತಾ, ಸರ್ಕಾರವು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಅಂತಹ ಯಾವುದೇ ಕಾರ್ಯವಿಧಾನವಿಲ್ಲ ಎಂದು ಹೇಳಲಾಗಿದೆ. ಸದ್ಯ ಸರ್ಕಾರದ ಹೊಸ ಪರಿಷ್ಕರಣೆಯ ನಿಯಮಗಳ ಬಗ್ಗೆ ಗೂಗಲ್‌ನ ಯುಟ್ಯೂಬ್‌, ಫೇಸ್‌ಬುಕ್‌ ಮತ್ತು ಟ್ವಿಟರ್‌ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

Best Mobiles in India

Read more about:
English summary
India's revised social media rules are here to protect users' rights

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X