ವಾಟ್ಸಪ್‌ನಲ್ಲಿ ದೋಷ ಪತ್ತೆಹಚ್ಚಿದ ಭಾರತೀಯ ಇಂಜನಿಯರ್‌!

|

ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಆಪ್‌ ವಾಟ್ಸಪ್‌ನಲ್ಲಿ ವಾಯಿಸ್‌ ಕರೆ ಮತ್ತು ವಿಡಿಯೊ ಕರೆ ಮಾಡುವ ಸೌಲಭ್ಯಗಳು ಲಭ್ಯ ಇವೆ. ವಾಟ್ಸಪ್‌ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿದರೂ, ಇಲ್ಲಿಯವರೆಗೂ ಹಲವು ದೋಷಗಳು ಕಂಡುಬಂದಿರುವ ಸುದ್ದಿಗಳನ್ನು ನೋಡಿದ್ದೆವೆ. ಇತ್ತೀಚಿಗೆ ಭಾರತೀಯ ಚಿಕ್ಕ ವಯಸ್ಸಿನ ಇಂಜನಿಯರ್‌ ವಾಟ್ಸಪ್‌ನ ವಾಯಿಸ್‌ ಕರೆಯಲ್ಲಿ ದೋಷವನ್ನು ಪತ್ತೆ ಹಚ್ಚಿದ್ದಾನೆ.

ವಾಟ್ಸಪ್‌ನಲ್ಲಿ ದೋಷ ಪತ್ತೆಹಚ್ಚಿದ ಭಾರತೀಯ ಇಂಜನಿಯರ್‌!

ಹೌದು, ಮಣಿಪುರದ 22 ವರ್ಷದ 'ಝೋನೆಲ್ ಸೌಜಿಜಮ್' ಹೆಸರಿನ ಸಿವಿಲ್ ಇಂಜನಿಯರ್, ವಾಟ್ಸಪ್‌ ವಾಯಿಸ್‌ ಕರೆಯಲ್ಲಿ ದೋಷ ಇರುವುದನ್ನು ಪತ್ತೆಹಚ್ಚಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ 3.4 ಲಕ್ಷ ಅವಾರ್ಡ್‌ ನೀಡಿದೆ. ಫೇಸ್‌ಬುಕ್ ತನ್ನ 'ಹಾಲ್‌ ಆಫ್‌ ಫೇಮ್'‌ ಲಿಸ್ಟ್‌ನಲ್ಲಿ ಝೋನೆಲ್ ಹೆಸರು ಸೇರಿಸಿದೆ. ಈ ವರ್ಷ ಒಟ್ಟು 94 ಮಂದಿಯ ಹಾಲ್‌ ಆಫ್‌ ಫೇಮ್'‌ ಲಿಸ್ಟ್‌ನಲ್ಲಿದ್ದಾರೆ.

ವಾಟ್ಸಪ್‌ನಲ್ಲಿ ದೋಷ ಪತ್ತೆಹಚ್ಚಿದ ಭಾರತೀಯ ಇಂಜನಿಯರ್‌!

ಇಬ್ಬರೂ ಬಳಕೆದಾರರು ವಾಟ್ಸಪ್‌ ವಾಯಿಸ್ ಕರೆಯಲ್ಲಿದ್ದಾಗ, ಆ ಕರೆಯನ್ನು ವಿಡಿಯೊ ಕಾಲ್‌ಗೆ ಬದಲಾಯಿಸಬಹುದಾಗಿದೆ. ಇದು ಕರೆಯನ್ನು ಸ್ವೀಕರಿಸಿದ ಬಳಕೆದಾರರ ಗಮನಕ್ಕೆ ಬರುವುದೇ ಇಲ್ಲ. ಎಂಬುದನ್ನು ಝೋನೆಲ್ PTIಗೆ ತಿಳಿಸಿದ್ದಾನೆ. ಹೀಗಾಗಿ ಕರೆ ಸ್ವೀಕರಿಸಿದ ಬಳಕೆದಾರ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಬಹುದಾದೆ. ವಾಟ್ಸಪ್‌ನಲ್ಲಿ ಕಂಡುಬಂದ ಈ ದೋಷ ಬಳಕೆದಾರರ ಖಾಸಗಿತನಕ್ಕೆ ದಕ್ಕೆ ಎನಿಸಲಿದೆ.

ವಾಟ್ಸಪ್‌ನಲ್ಲಿ ದೋಷ ಪತ್ತೆಹಚ್ಚಿದ ಭಾರತೀಯ ಇಂಜನಿಯರ್‌!

ಕಳೆದ ಮಾರ್ಚ ತಿಂಗಳಿನಲ್ಲಿ ಝೋನೆಲ್ ಸೌಜಿಜಮ್ ವಾಟ್ಸಪ್‌ ವಾಯಿಸ್‌ ಕರೆಯಲ್ಲಿ ಕಂಡುಬಂದ ಈ ದೋಷದ ಕುರಿತು ಫೇಸ್‌ಬುಕ್‌ನ ಬಗ್‌ ಬೌಂಟಿ (Bug Bounty) ಕಾರ್ಯಕ್ರಮದಲ್ಲಿ ತಿಳಿಸಿದ್ದಾನೆ. ಇದನ್ನು 10 ಅಥವಾ 15 ದಿನಗಳ ಒಳಗಾಗಿ ಈ ದೋಷವನ್ನು ಸರಿಪಡಿಸಲಾಗುವುದು ಎಂಬ ಮಾಹಿತಿಯ (acknowledged) ಸ್ವೀಕೃತಿಯನ್ನು ಫೇಸ್‌ಬುಕ್‌ ಭದ್ರತೆಯ ತಂಡವು ಝೋನೆಲ್ ಸೌಜಿಜಮ್ ನೀಡಿತ್ತು.

ವಾಟ್ಸಪ್‌ನ ವಾಯಿಸ್‌ ಕರೆಯಲ್ಲಿ ಉಂಟಾಗಿದ್ದ ದೋಷವನ್ನು ಗಮನಿಸದ ನಂತರ ಫೇಸ್‌ಬುಕ್, 3.4 ಲಕ್ಷ ಅವಾರ್ಡ್‌ ನೀಡುವುದಾಗಿ ಮೇಲ್ ಮಾಡಿತ್ತು ಎಂಬುದನ್ನು ಮಣಿಪೂರದ ಸಿವಿಲ್ ಇಂಜನಿಯರ್‌ 'ಝೋನೆಲ್ ಸೌಜಿಜಮ್' ಪಿಟಿಐಗೆ ತಿಳಿಸಿದ್ದಾನೆ. ಫೇಸ್‌ಬುಕ್ ಮಾಲೀಕ ಮಾರ್ಕ್ ಜುಕರ್ಬರ್ಗ್ ಫೆಬ್ರವರಿ 2014ರಲ್ಲಿ ಜನಪ್ರಿಯ ಮೆಸೆಜಿಂಗ್ ಆಪ್‌ ವಾಟ್ಸಪ್‌ ಅನ್ನು ಖರೀದಿಸಿದ್ದರು.

ಓದಿರಿ : ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'! ಓದಿರಿ : ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'!

ಶಿಯೋಮಿಯ ಹೊಸ ಸೇವೆ!..ಮರು ದಿನವೇ ನಿಮ್ಮ ಕೈ ಸೇರಲಿವೆ ಉತ್ಪನ್ನಗಳು!

ಶಿಯೋಮಿಯ ಹೊಸ ಸೇವೆ!..ಮರು ದಿನವೇ ನಿಮ್ಮ ಕೈ ಸೇರಲಿವೆ ಉತ್ಪನ್ನಗಳು!

ಶಿಯೋಮಿ ತನ್ನ ಅಧಿಕೃತ ವೆಬ್‌ತಾಣದಿಂದ (Mi.com e-commerce ) ಗ್ರಾಹಕರು ಉತ್ಪನ್ನಗಳನ್ನು ಆನ್‌ಲೈನ್‌ ಆರ್ಡರ್‌ ಮಾಡಿದರೇ ಮರುದಿನವೇ ಡೆಲಿವರಿ ನೀಡುವ ತನ್ನ 'ಗ್ಯಾರೆಂಟೆಡ್‌ ನೆಕ್ಸ್ಟ್‌ ಡೇ ಡೆಲಿವರಿ' (guaranteed next-day delivery) ಎಕ್ಸ್‌ಪ್ರೆಸ್‌ ಸೇವೆಯನ್ನು, ಇದೀಗ ಭಾರತದ ಸುಮಾರು 150 ನಗರಗಳಿಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ಶಿಯೋಮಿ ಮುಖ್ಯಸ್ಥ ಮನು ಕುಮಾರ ಜೈನ್‌ ತಿಳಿಸಿದ್ದಾರೆ.

ಹೌದು, ಇನ್ಮುಂದೆ ಶಿಯೋಮಿಯ ಉತ್ಪನ್ನಗಳಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದರೇ ಹೆಚ್ಚಿನ ದಿನ ಕಾಯಬೇಕಿಲ್ಲ. ಏಕೆಂದರೇ ಮರುದಿನವೇ ಆರ್ಡರ್‌ ಮಾಡಿದ ವಸ್ತುವು ಕೈ ಸೇರಲಿದೆ. ಆದರೆ ಕಂಪನಿಯ ಅಧಿಕೃತ ತಾಣದಲ್ಲಿ ಆನ್‌ಲೈನ್‌ ಆರ್ಡರ್‌ ಮಾಡುವಾಗ ಎಕ್ಸ್‌ಪ್ರೆಸ್‌ ಡೆಲಿವರಿ ಆಯ್ಕೆಯನ್ನು ಸೆಲೆಕ್ಟ್‌ ಮಾಡಿಕೊಳ್ಳಬೇಕು. ಮತ್ತು ಅದಕ್ಕಾಗಿ ಗ್ರಾಹಕರು ಹೆಚ್ಚುವರಿ 49ರೂ.ಗಳನ್ನು ನೀಡಬೇಕಿದೆ.

ಗ್ರಾಹಕರಿಗೆ ವೇಗವಾಗಿ ಅವರು ಆರ್ಡರ್ ಮಾಡಿರುವ ಉತ್ಪನ್ನಗಳನ್ನು ತಲುಪಿಸಲು ಕಂಪನಿಯು ಎಕ್ಸ್‌ಪ್ರೆಸ್‌ ಡೆಲಿವರಿ ಸೇವೆಯನ್ನು ಆರಂಭಿಸಿತ್ತು ಅದನ್ನಿಗ ವಿಸ್ರಿಸಿದ್ದು, ಈ ಮೂಲಕ ಇ ಕಾಮರ್ಸ್‌ ಮಾರುಕಟ್ಟೆಯಲ್ಲಿ ಮುನ್ನೆಲೆಗೆ ಬರುವ ಸೂಚನೆಗಳನ್ನು ಹೊರಹಾಕಿದೆ. ಹಾಗಾದರೇ ಶಿಯೋಮಿಯು ವಿಸ್ತರಿಸಿರುವ ತನ್ನ ಎಕ್ಸ್‌ಪ್ರೆಸ್‌ ಡೆಲಿವರಿ ಸೇವೆಯ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ಬೆಂಗಳೂರಿನಲ್ಲಿ ಕಳೆದ ವರ್ಷವೇ ಆರಂಭ

ಬೆಂಗಳೂರಿನಲ್ಲಿ ಕಳೆದ ವರ್ಷವೇ ಆರಂಭ

ಶಿಯೋಮಿಯು ಕಂಪನಿಯು ಕಳೆದ ವರ್ಷ ಬೆಂಗಳೂರಿನಲ್ಲಿ 'ಎಕ್ಸ್‌ಪ್ರೆಸ್‌ ಡೆಲಿವರಿ ಸೇವೆ'ಯನ್ನು ಮೊದಲ ಬಾರಿಗೆ ಆರಂಭಿಸಿದ್ದು, ಆನ್‌ಲೈನ್‌ನಲ್ಲಿ ಕಂಪನಿಯ ಆಯ್ದ ಉತ್ಪನ್ನವನ್ನು ಆರ್ಡರ್‌ ಮಾಡಿದರೇ, ಮರು ದಿನವೇ ಡೆಲಿವರಿ ಪಡೆಯಬಹುದಾಗಿದೆ. ಇದೀಗ ಈ ಸೇವೆಯನ್ನು ಕಂಪನಿಯು ದೇಶದ ಇತರೆ 150 ಪ್ರಮುಖ ನಗರಗಳಿಗೆ ವಿಸ್ತರಿಸಿದ್ದು, ಮುಂದೆ ಇನ್ನಷ್ಟು ನಗರಗಳಿಗೆ ಈ ಸೇವೆಯನ್ನು ತಲುಪಿಸುವ ಯೋಜನೆಗಳಿವೆ ಎನ್ನಲಾಗಿದೆ.

90 ಉತ್ಪನ್ನಗಳು ಲಭ್ಯ

90 ಉತ್ಪನ್ನಗಳು ಲಭ್ಯ

ಭಾರತೀಯ ಮಾರುಕಟ್ಟೆಯಲ್ಲಿ ಮಿಂಚಿನ ಓಟದಲ್ಲಿ ಬೆಳೆಯುತ್ತಿರುವ ಶಿಯೋಮಿ ಇ ಕಾಮರ್ಸ್‌ ತಾಣವು ತನ್ನದೇ ಹಲವು ಉತ್ಪನ್ನಗಳನ್ನು ಹೊಂದಿದ್ದು, ಅವುಗಳಲ್ಲಿ ಆಯ್ದ 90 ಉತ್ಪನ್ನಗಳಿಗೆ 'ಗ್ಯಾರೆಂಟೆಡ್ ನೆಕ್ಸ್ಟ್ ಡೇ ಡೆಲಿವರಿ' ಸೇವೆಯು ಲಭ್ಯವಿರಲಿದೆ. ಈ 90 ಉತ್ಪನ್ನಗಳು ಗ್ರಾಹಕರಿಗೆ ಅಗತ್ಯವಾಗಿರುವ ವಸ್ತುಗಳಾಗಿದ್ದು, ಆನ್‌ಲೈನ್‌ ಆರ್ಡರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಇದೆ.

ನೇರ ಸ್ಪರ್ಧೆಗೆ ಇಳಿದ ಶಿಯೋಮಿ

ನೇರ ಸ್ಪರ್ಧೆಗೆ ಇಳಿದ ಶಿಯೋಮಿ

ಇ ಕಾಮರ್ಸ್ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಇದ್ದು, ಈಗಾಗಲೇ ಇ ಕಾಮರ್ಸ್ ದೈತ್ಯ ಎನಿಸಿಕೊಂಡಿರುವ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಎಕ್ಸ್‌ಪ್ರೆಸ್‌ ಡೆಲಿವರಿಯನ್ನು ಆರಂಭಿಸಿವೆ. ಇದೀಗ ಶಿಯೋಮಿ ಈ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದು, ಅದಕ್ಕಾಗಿ ಹೆಚ್ಚಿನ ನಗರಗಳಿಗೆ 'ಗ್ಯಾರೆಂಟೆಡ್‌ ನೆಕ್ಸ್ಟ್‌ ಡೇ ಡೆಲಿವರಿ' ಸೇವೆಯನ್ನು ವಿಸ್ತಿರಿಸಿದೆ.

ಎಕ್ಸ್‌ಪ್ರೆಸ್‌ ಸೇವೆಗೆ ಹೆಚ್ಚುವರಿ ಶುಲ್ಕ

ಎಕ್ಸ್‌ಪ್ರೆಸ್‌ ಸೇವೆಗೆ ಹೆಚ್ಚುವರಿ ಶುಲ್ಕ

ನೀವು ಶಿಯೋಮಿ ಕಂಪನಿಯ ಇ ಕಾಮರ್ಸ್‌ ತಾಣದಲ್ಲಿ ಆರ್ಡರ್‌ ಮಾಡಿರುವ ಉತ್ಪನ್ನವು ಮರು ದಿನವೇ ನಿಮ್ಮ ಕೈ ಸೇರಬೇಕಿದ್ದರೇ ನೀವು ಹೆಚ್ಚುವರಿಯಾಗಿ 49ರೂ.ಗಳನ್ನು ನೀಡಬೇಕು. ಆರ್ಡರ್‌ ಮಾಡುವ ಸಮಯದಲ್ಲಿ ಎಕ್ಸ್‌ಪ್ರೆಸ್‌ ಡೆಲಿವರಿ ಆಯ್ಕೆಯು ನಿಮ್ಮ ನಗರದಲ್ಲಿ ಲಭ್ಯವಿದೆಯೇ ಚೆಕ್‌ ಮಾಡಿ, ಲಭ್ಯವಿದ್ದರೇ ಆರ್ಡರ್‌ ಮಾಡಬಹುದು.

ಯಾವ ಟೈಮ್‌ನಲ್ಲಿ ಬುಕ್‌ ಮಾಡಬೇಕು

ಯಾವ ಟೈಮ್‌ನಲ್ಲಿ ಬುಕ್‌ ಮಾಡಬೇಕು

ಶಿಯೋಮಿಯು ಜಾರಿ ಮಾಡಿರುವ ಹೊಸ ಎಕ್ಸ್‌ಪ್ರೆಸ್‌ ಡೆಲಿವರಿ ಸೇವೆಯನ್ನು ಪಡೆಯಲು ಬೆಂಗಳೂರು ಮೂಲದ ಗ್ರಾಹಕರು ಬೆಳಿಗ್ಗೆ 9 ರಿಂದ ಸಂಜೆ 4.30ಗಂಟೆಯ ಒಳಗೆ ಉತ್ಪನ್ನಗಳನ್ನು ಆರ್ಡರ್ ಮಾಡಬೇಕಿದೆ. ಕಂಪನಿಯು ನಿಗದಿ ಮಾಡಿರುವ ಈ ಸಮಯದಲ್ಲಿ ಆನ್‌ಲೈನ್‌ ಆರ್ಡರ್‌ ಮಾಡಿದರೇ ಮರುದಿನವೇ ನೀವು ಆರ್ಡರ್‌ ಮಾಡಿರುವ ಉತ್ಪನ್ನ ನಿಮ್ಮ ಕೈ ಸೇರಲಿದೆ.

ಓದಿರಿ : ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!ಓದಿರಿ : ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

Best Mobiles in India

English summary
Manipur engineer detects WhatsApp bug that breaches privacy, enters Facebook ‘Hall of Fame’. to know more vist to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X