ಯೂಟ್ಯೂಬ್‌ನಿಂದಲೇ ರೈತರಿಗೆ ಮಾರ್ಗ'ದರ್ಶನ್'‌..!

By Gizbot Bureau
|

ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್‌ ವಿಡಿಯೋ ಪ್ಲಾಟ್‌ಫಾರ್ಮ್‌ ಬಹಳಷ್ಟು ಬೆಳೆದಿದೆ. ಆನ್‌ಲೈನ್ ವಿಡಿಯೋ ವೀಕ್ಷಣೆ ಮತ್ತು ಅಪ್‌ಲೋಡ್ ಮಾಡುವ ವೇದಿಕೆ ಯೂಟ್ಯೂಬ್ ಎಲ್ಲಾ ವಿಭಾಗಗಳನ್ನು ಆವರಿಸಿಕೊಂಡಿದೆ. ಮನರಂಜನೆಯಿಂದಿಡಿದು ಶಿಕ್ಷಣದವರೆಗೆ ಎಲ್ಲಾ ವಿಷಯಗಳು ಒಂದೇ ವೇದಿಕೆಯಲ್ಲಿ ಸಿಗುತ್ತಿದ್ದು, ವಿಡಿಯೋ ಸೃಷ್ಟಿಕರ್ತರು ಮತ್ತು ವೀಕ್ಷಕರಿಗೆ ಯೂಟ್ಯೂಬ್ ಉಪಯುಕ್ತವಾಗಿದೆ. ಅನೇಕರು ಯೂಟ್ಯೂಬ್‌ನಿಂದಲೇ ಜಗತ್ಪ್ರಸಿದ್ಧಿಯಾಗಿದ್ದಾರೆ. ಅದರಂತೆ, ಪಂಜಾಬ್‌ನ ದರ್ಶನ್‌ ಸಿಂಗ್‌ ತಮ್ಮ ಫಾರ್ಮಿಂಗ್‌ ಲೀಡರ್ಸ್‌ ಚಾನಲ್‌ ಮೂಲಕ ಜನಪ್ರಿಯರಾಗಿದ್ದಾರೆ. ವಿವಿಧ ಕೃಷಿ ಪದ್ಧತಿಗಳ ಬಗ್ಗೆ ವಿವರಣಾತ್ಮಕ ವಿಡಿಯೋಗಳ ಮೂಲಕ ರೈತರಿಗೆ ಅರಿವನ್ನು ಮೂಡಿಸುತ್ತಿದ್ದಾರೆ.

2.3 ಮಿಲಿಯನ್‌ ಸಬ್‌ಸ್ಕ್ರೈಬರ್ಸ್‌

2.3 ಮಿಲಿಯನ್‌ ಸಬ್‌ಸ್ಕ್ರೈಬರ್ಸ್‌

ದರ್ಶನ್‌ ಸಿಂಗ್‌ ಅವರ ಫಾರ್ಮಿಂಗ್‌ ಲೀಡರ್ಸ್‌ ಬರೋಬ್ಬರಿ 2.3 ಮಿಲಿಯನ್‌ ಚಂದಾದಾರರನ್ನು ಹೊಂದಿದ್ದು, ಸಬ್‌ಸ್ಕ್ರೈಬರ್‌ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೆ ಇದೆ. ಇದಷ್ಟೇ ಅಲ್ಲದೇ ಒಟ್ಟು 17,05,99,145 ವಿಡಿಯೋ ವೀಕ್ಷಣೆಯನ್ನು ಫಾರ್ಮಿಂಗ್‌ ಲೀಡರ್ಸ್‌ ಕಂಡಿದೆ.

ಕೃಷಿ ಪದ್ಧತಿಗಳ ವಿವರಣೆ

ಕೃಷಿ ಪದ್ಧತಿಗಳ ವಿವರಣೆ

ಫಾರ್ಮಿಂಗ್‌ ಲೀಡರ್ಸ್‌ ಚಾನೆಲ್‌ನಲ್ಲಿ ಮೇಕೆ ಸಾಕಣೆ, ಭತ್ತದ ಕೃಷಿ ಮತ್ತಿತರ ಕೃಷಿ ಚಟುವಟಿಕೆ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡುತ್ತಾರೆ. ಟ್ರಾಕ್ಟರ್‌ಗಳಂತಹ ಕೃಷಿ ಯಂತ್ರೋಪಕರಣಗಳ ಬಗ್ಗೆ ವಿಮರ್ಷೆ ವಿಡಿಯೋಗಳನ್ನು ಸಹ ದರ್ಶನ್‌ ಸಿಂಗ್‌ ಮಾಡುತ್ತಿದ್ದಾರೆ.

ಪರಿಹಾರ ಹುಡುಕುವಾಗ ಸಿಕ್ಕ ಐಡಿಯಾ

ಪರಿಹಾರ ಹುಡುಕುವಾಗ ಸಿಕ್ಕ ಐಡಿಯಾ

2017ರಲ್ಲಿ ದರ್ಶನ್‌ ಸಿಂಗ್‌ ಹೈನುಗಾರಿಕೆ ಪ್ರಾರಂಭಿಸಿದರು. ಆದರೆ, ಹೈನುಗಾರಿಕೆ ಬಗ್ಗೆ ಅಷ್ಟೊಂದು ಜ್ಞಾನವೊಂದಿಲ್ಲದ ಸಿಂಗ್‌, ಇಂಟರ್‌ನೆಟ್‌ನಲ್ಲಿ ಮಾಹಿತಿಯನ್ನು ಹೆಕ್ಕುತ್ತಿದ್ದರು. ಅಂತರ್‌ಜಾಲದಲ್ಲಿ ಸಂಕೀರ್ಣ ಉತ್ತರಗಳು ದೊರೆಯುತ್ತಿದ್ದರಿಂದ ದರ್ಶನ್‌ ಸಿಂಗ್‌ ಅವರೇ ರೈತರಿಗೆ ಮಾರ್ಗದರ್ಶನ ನೀಡಲು ಕ್ಯಾಮೆರಾ ಹಿಡಿದು ನಿಂತರು.

ಮೊಬೈಲ್‌ ಫೋನ್‌ನಲ್ಲಿ ಪ್ರಾರಂಭ

ಮೊಬೈಲ್‌ ಫೋನ್‌ನಲ್ಲಿ ಪ್ರಾರಂಭ

ಆರಂಭದಲ್ಲಿ, ದರ್ಶನ್‌ ಸಿಂಗ್‌ ಮೊಬೈಲ್ ಫೋನ್‌ನಲ್ಲಿ ವಿಡಿಯೋಗಳನ್ನು ಶೂಟ್ ಮಾಡುತ್ತಿದ್ದರು. ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವ ವಿಡಿಯೋಗಳ ಸಂಖ್ಯೆಯೂ ಕಡಿಮೆಯಿತ್ತು. ಹೀಗಿದ್ದರೂ, ಆರು ತಿಂಗಳಲ್ಲಿ ವಿಡಿಯೋಗಳನ್ನು ನೋಡಿದವರ ಸಂಖ್ಯೆ ಹಾಗೂ ಇಷ್ಟಪಟ್ಟವರ ಸಂಖ್ಯೆಗಳನ್ನು ನೋಡಿದರೆ ರೈತರಿಗೆ ಫಾರ್ಮಿಂಗ್‌ ಲೀಡರ್ಸ್‌ ಚಾನಲ್‌ ಉಪಯುಕ್ತವಾಗಿದೆ ಎಂಬುದು ದರ್ಶನ್‌ ಸಿಂಗ್‌ಗೆ ಗೊತ್ತಾಗಿದೆ.

ಆಧುನಿಕ ಉಪಕರಣ

ಆಧುನಿಕ ಉಪಕರಣ

ಮೊದಲ ಆರು ತಿಂಗಳಲ್ಲಿ ಫಾರ್ಮಿಂಗ್‌ ಲೀಡರ್ಸ್‌ಗೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡ ದರ್ಶನ್‌ ಸಿಂಗ್‌ ವಿಡಿಯೋಗಳನ್ನು ತಯಾರಿಸಲು ಉತ್ತಮ ಸಾಧನಗಳನ್ನು ಸಿದ್ಧಗೊಳಿಸುತ್ತಾರೆ. ಆಧುನಿಕ ಕ್ಯಾಮೆರಾ, ಮೈಕ್‌, ಲ್ಯಾಪ್‌ಟಾಪ್‌ ಮತ್ತಿತರ ಅಗತ್ಯ ಪರಿಕರಗಳು ಫಾರ್ಮಿಂಗ್‌ ಲೀಡರ್ಸ್‌ ತಂಡಕ್ಕೆ ಸೇರಿದವು.

12 ಎಕರೆಯಲ್ಲಿ ಕೃಷಿ

12 ಎಕರೆಯಲ್ಲಿ ಕೃಷಿ

ಮೂಲತಃ ಕೃಷಿಕರ ಕುಟುಂಬಕ್ಕೆ ಸೇರಿದ ಸಿಂಗ್ ರಾಜ್ಯಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ಆದರೆ, ಪದವಿಯ ನಂತರ ಬದುಕು ಕಟ್ಟಿಕೊಳ್ಳಲು ಕೃಷಿಯನ್ನು ವೃತ್ತಿಯನ್ನಾಗಿ ಆಯ್ದುಕೊಂಡರು. ತಮ್ಮ 12 ಎಕರೆ ಕೃಷಿಭೂಮಿಯಲ್ಲಿ ಬೇಸಾಯ ಪ್ರಾರಂಭಿಸಿದ ದರ್ಶನ್‌ ಸಿಂಗ್‌, ಸಾಂಪ್ರದಾಯಿಕ ವಿಧಾನಗಳಿಂದ ಸಾವಯವಕ್ಕೆ ಕೃಷಿಯನ್ನು ಬದಲಾಯಿಸಿದರು. ರಾಸಾಯನಿಕ ಗೊಬ್ಬರಕ್ಕೆ ವಿದಾಯ ಹೇಳಿದ ಸಿಂಗ್‌ ಹೈನುಗಾರಿಕೆಯಲ್ಲಿ ಯಶಸ್ಸುಗಳಿಸಿದ್ದಾರೆ.

ಜನಪ್ರಿಯತೆ ಮತ್ತು ಆದಾಯ

ಜನಪ್ರಿಯತೆ ಮತ್ತು ಆದಾಯ

ಫಾರ್ಮಿಂಗ್‌ ಲೀಡರ್ಸ್‌ ಯೂಟ್ಯೂಬ್‌ ಚಾನಲ್‌ನಿಂದ ಜನಪ್ರಿಯವಾಗಿರುವ ದರ್ಶನ್‌ ಸಿಂಗ್‌ ಹರಿಯಾಣ ಮತ್ತಿ ಪಂಜಾಬ್‌ನಲ್ಲಿ ರೈತರ ಕಣ್ಮಣಿಯಾಗಿದ್ದಾರೆ. ಎಲ್ಲಿ ಹೋದರೂ ಅಲ್ಲಿನ ರೈತರು ದರ್ಶನ್‌ ಅವರನ್ನು ಗುರುತಿಸುತ್ತಾರೆ. ಜನಪ್ರಿಯತೆ ಜೊತೆಗೆ ದರ್ಶನ್‌ ಅವರಿಗೆ ಭರಪೂರ ಆದಾಯವೂ ಹರಿದು ಬರುತ್ತಿದೆ. ಕೃಷಿ ಮೂಲದ ಕಂಪನಿಗಳು ತಮ್ಮ ಉತ್ಪನಗಳನ್ನು ಪ್ರಚಾರ ಮಾಡಲು ಫಾರ್ಮಿಂಗ್‌ ಲೀಡರ್ಸ್‌ ಚಾನಲ್‌ನ್ನು ಬಳಸಿಕೊಳ್ಳುತ್ತಿವೆ. ವಿಡಿಯೋಗಳಿಂದಲೇ ತಿಂಗಳಿಗೆ 4000 ಡಾಲರ್‌ ಆದಾಯವನ್ನು ದರ್ಶನ್‌ ಸಿಂಗ್‌ ಗಳಿಸುತ್ತಿದ್ದಾರೆ.

Best Mobiles in India

Read more about:
English summary
Indian Farmer Has Over Two Million YouTube subscribers: Shares Farming Techniques

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X