ಸೊಶೀಯಲ್‌ ಮೀಡಿಯಾಗೆ ಕಡಿವಾಣ ಹಾಕಲು ಹೊಸ ನಿಯಮ ಜಾರಿ ಮಾಡಿದ ಕೇಂದ್ರ ಸರ್ಕಾರ!

|

ಸಾಮಾಜಿಕ ಜಾಲತಾಣಗಳ ದುರುಪಯೋಗ, ನಕಲಿ ಸುದ್ದಿಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರ ಹೊಸ ಮಾಹಿತಿ ತಂತ್ರಜ್ಞಾನ ನಿಯಮವನ್ನು ಪ್ರಕಟಿಸಿದೆ. ಈ ಮೂಲಕ ಒಟಿಟಿ ಪ್ಲಾಟ್‌ಫಾರ್ಮ್ ಮತ್ತು ಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅಷ್ಟೇ ಅಲ್ಲ ಸೊಶೀಯಲ್‌ ಮೀಡಿಯಾ ಸಂಸ್ಥೆಗಳಿಗೆ ಕುಂದುಕೊರತೆ ಅಧಿಕಾರಿಯನ್ನು ನೇಮಿಸುವುದು, ನಕಲಿ ಮಾಹಿತಿ ನೀಡುವ ಮಾಹಿತಿಯ ಮೊದಲ ಮೂಲವನ್ನು ಬಹಿರಂಗಪಡಿಸುವುದು. ಜೊತೆಗೆ 24 ಗಂಟೆಗಳ ಒಳಗೆ ಮಹಿಳೆಯರ ನಗ್ನತೆ ಅಥವಾ ಮಾರ್ಫಡ್ ಚಿತ್ರಗಳನ್ನು ತೆಗೆದುಹಾಕಬೇಕೆಂದು ಎಲ್ಲಾ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ತಿಳಿಸಿದೆ.

ಮಾಹಿತಿ

ಹೌದು, ಭಾರತದಲ್ಲಿ ಇಂದಿನಿಂದ ಹೊಸ ಮಾಹಿತಿ ತಂತ್ರಜ್ಞಾನ ನಿಯಮ ಜಾರಿಯಾಗಿದೆ. ಫೇಸ್‌ಬುಕ್‌, ನೆಟ್‌ಫ್ಲಿಕ್ಸ್‌, ವಾಟ್ಸಾಪ್‌, ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಏನೆಲ್ಲಾ ಮಾಡಬಹುದು, ಯಾವುದನ್ನು ಮಾಡಬಾರದು ಎಂದೆಲ್ಲಾ ಕೇಂದ್ರ ಸರ್ಕಾರ ಹೊಸದಾಗಿ ಮಾರ್ಗದರ್ಶಿ ಸೂತ್ರವನ್ನು ಜಾರಿ ಮಾಡಿದೆ. ಸಾಮಾಜಿಕ ಜಾಲತಾಣಗಳ ದುರುಪಯೋಗವನ್ನು ತಡೆಯುವುದಕ್ಕಾಗಿ ಸರ್ಕಾರವು "ಸಾಫ್ಟ್ ಟಚ್" ನಿಯಂತ್ರಣವನ್ನು ತರುತ್ತಿದೆ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸುವಾಗ ಹೇಳಿದ್ದಾರೆ. ಹಾಗಾದ್ರೆ ಈ ಹೊಸ ನಿಯಮದಲ್ಲಿ ಏನೆಲ್ಲಾ ತಿಳಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮಾಹಿತಿ

ಸದ್ಯ ಕೇಂದ್ರ ಸರ್ಕಾರ ಪ್ರಕಟಿಸಿರುವ ಮಾಹಿತಿ ತಂತ್ರಜ್ಞಾನ ಹೊಸ ನಿಯಮಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ. ಅವರು 24 ಗಂಟೆಗಳಲ್ಲಿ ದೂರುಗಳನ್ನು ದಾಖಲಿಸುತ್ತಾರೆ. ಕುಂದುಕೊರತೆ ಪರಿಹಾರ ಅಧಿಕಾರಿ ಭಾರತದಲ್ಲಿ ವಾಸಿಸುತ್ತಿರಬೇಕು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಮಾಸಿಕ ಅನುಸರಣೆ ವರದಿಗಳನ್ನು ಸಲ್ಲಿಸಬೇಕಾಗುತ್ತದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಟ್ವಿಟರ್, ಫೇಸ್‌ಬುಕ್ ಮತ್ತು ಇತರರು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿನ ನಕಲಿ ಸುದ್ದಿ ಹಾಗೂ ಮಹಿಳೆಯರ ನಗ್ನತೆ, ಅಶ್ಲಿಲ ವಿಷಯವನ್ನು ಸರ್ಕಾರವು ನೋಟಿಸ್ ನೀಡಿದ 24 ಗಂಟೆಗಳ ಒಳಗೆ ತೆಗೆದುಹಾಕಬೇಕು.

ಮೀಡಿಯಾ

ಇನ್ನು ಸೊಶೀಯಲ್‌ ಮೀಡಿಯಾ ಕಂಪೆನಿಗಳಿಗೆ ಆಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಡುಬರುವ ಉಲ್ಲಂಘನೆಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಮತ್ತು ಅಧಿಕಾರಿಗಳು ಕೋರಿದ 72 ಗಂಟೆಗಳ ಒಳಗೆ ತನಿಖೆಗೆ ಸಹಕರಿಸಬೇಕಾಗುತ್ತದೆ. ಹೊಸ ನಿಯಮಗಳ ಪ್ರಕಾರ, ತೆಗೆದುಹಾಕುವಿಕೆಗೆ ಸಂಬಂಧಿಸಿದ ತನಿಖೆಯನ್ನು ವಿಷಯವನ್ನು ತೆಗೆದುಹಾಕಿದ 6 ತಿಂಗಳೊಳಗೆ ತೀರ್ಮಾನಿಸಬೇಕು. ಈ ಪ್ಲಾಟ್‌ಫಾರ್ಮ್‌ಗಳು ಯಾವುದೇ ಹೊಸ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಖಾತೆ, ಟ್ವೀಟ್, ಪೋಸ್ಟ್‌ನ ಮೂಲದ ಬಗ್ಗೆ ಭಾರತ ಸರ್ಕಾರಕ್ಕೆ ತಿಳಿಸಬೇಕಾಗಿದೆ.

ಹೊಸ ನಿಯಮಗಳು ಏನು ಹೇಳುತ್ತವೆ?

ಹೊಸ ನಿಯಮಗಳು ಏನು ಹೇಳುತ್ತವೆ?

ಲೈಂಗಿಕ ಆಸಕ್ತಿ ಕೆರಳಿಸುವ ವಿಷಯವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ತೆಗೆದುಹಾಕಬೇಕು. ಅಲ್ಲದೆ ನಗ್ನತೆಯನ್ನು ಒಳಗೊಂಡ ವಿಡಿಯೋಗಳನ್ನು 24 ಗಂಟೆಗಳ ಒಳಗೆ ರಿಮೋವ್‌ ಮಾಡಬೇಕು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಈ ಹೊಸ ನಿಯಮಗಳೊಂದಿಗೆ, ಈ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡಲಾಗುತ್ತಿರುವ ಕೆಲವು ಪ್ರಶ್ನಾರ್ಹ ವಿಷಯವನ್ನು ನಿಯಂತ್ರಿಸಲು ಭಾರತ ಮುಂದಾಗಿದೆ. ಇನ್ನು ಹೊಸ ನಿಯಮದ ಅನ್ವಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರ ಸ್ವಯಂಪ್ರೇರಿತ ಪರಿಶೀಲನೆಗೆ ಅವಕಾಶ ನೀಡಬೇಕು.

ಪ್ಲಾಟ್‌ಫಾರ್ಮ್

ಇದಲ್ಲದೆ ಪ್ಲಾಟ್‌ಫಾರ್ಮ್ ನಿಯಮಗಳನ್ನು ಉಲ್ಲಂಘಿಸಿದ ಖಾತೆಗಳ ಮೂಲವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಸರ್ಕಾರ ಹೇಳಿದೆ. ಈ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಅವರ ಮಧ್ಯವರ್ತಿಗಳು ತಮ್ಮ ನಿಯಮಗಳು, ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ತಮ್ಮ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಪ್ರಕಟಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಅವರು ತಮ್ಮ ವೇದಿಕೆಯಲ್ಲಿ ಸ್ವಯಂಪ್ರೇರಿತ ಪರಿಶೀಲನಾ ಕಾರ್ಯವಿಧಾನವನ್ನು ಸಹ ಹೊಂದಿರಬೇಕು. ಸುಳ್ಳು, ದಾರಿತಪ್ಪಿಸುವ ಮತ್ತು ಮಾನಹಾನಿಕರವಾದ ಯಾವುದೇ ಮಾಹಿತಿಯನ್ನು ಹೋಸ್ಟ್ ಮಾಡಬಾರದು, ಪ್ರದರ್ಶಿಸಬಾರದು, ಅಪ್‌ಲೋಡ್ ಮಾಡಬಾರದು, ಮಾರ್ಪಡಿಸಬಾರದು, ಪ್ರಕಟಿಸಬಾರದು, ರವಾನಿಸಬಾರದು, ಸಂಗ್ರಹಿಸಬಾರದು, ನವೀಕರಿಸಬಾರದು ಅಥವಾ ಹಂಚಿಕೊಳ್ಳಬಾರದು ಎಂದು ಮಧ್ಯವರ್ತಿ ಬಳಕೆದಾರರಿಗೆ ತಿಳಿಸಬೇಕು ಎಂದು ಆದೇಶ ನೀಡಲಾಗಿದೆ.

Best Mobiles in India

English summary
indian government announced new rules to curb misuse of social media platforms.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X