ಭಾರತದ ಹ್ಯಾಕರ್‌ಗಳಿಂದ ಪಾಕಿಸ್ತಾನದ ಮೇಲೆ ದಾಳಿ

By Suneel
|

ಟೆಕ್ನಾಲಜಿ ಬೆಳವಣಿಗೆ ಹೊಂದಿದಂತೆ ಟೆಕ್ ಕ್ಷೇತ್ರದ ಉಪಯೋಗದಿಂದ ಇಂದು ಹ್ಯಾಕರ್‌ಗಳು ಹುಟ್ಟಿಕೊಂಡಿದ್ದಾರೆ. ಹ್ಯಾಕಿಂಗ್‌ ಸಮಸ್ಯೆ ಬ್ಯಾಂಕಿಂಗ್ ವ್ಯವಹಾರದಿಂದ ಪ್ರಾರಂಭವಾಗಿ ದೇಶದ ರಕ್ಷಣೆವರೆಗೂ ಮಾಹಿತಿಗಳನ್ನು ಹ್ಯಾಕ್‌ಮಾಡಿ ದುರ್ಬಳಕೆ ಮಾಡಲು ಹಲವು ಗುಂಪುಗಳು ಮುಂದಾಗಿವೆ. ಅಂತೆಯೇ ಈಗ ಅಚ್ಚರಿಯಾಗಿ 2010 ರಲ್ಲಿ ಮುಚ್ಚಿಹೋಗಿದ್ದ ಭಾರತೀಯ ಮೂಲದ ಹ್ಯಾಕಿಂಗ್‌ ಗುಂಪೊಂದು ಈಗ ಪುನಃ ಕಾರ್ಯಾರಂಭ ಮಾಡಿ ಪಾಕಿಸ್ತಾನಿ ಸರ್ಕಾರಿ ಸಂಸ್ಥೆ ಮೇಲೆ ದಾಳಿ ಮಾಡಿದೆ.

ಓದಿರಿ: ಮೆಮೊರಿ ಕಾರ್ಡ್‌ನಲ್ಲಿ ಡಿಲೀಟ್‌ ಫೋಟೋ ರಿಕವರಿ ಹೇಗೆ

ಇದರ ಜೊತೆಗೆ ವಿವಿವಿ ಎಂಬ ಹ್ಯಾಕಿಂಗ್‌ ಗುಂಪು ಸಹ ಪಾಕಿಸ್ತಾನಿ ವೆಬ್‌ಸೈಟ್‌ಗಳ ಮೇಲೆ ದಾಳಿಮಾಡಿದೆ. ಭಾರತದ ಮರ್ಯಾದೆಗೆ ದಕ್ಕೆ ತರುವಂತಹ ಘಟನೆ ಇದಾಗಿದ್ದು, ಈ ಘಟನೆ ಹಲವು ಅಚ್ಚರಿಗಳಿಂದ ಕೂಡಿದೆ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಘಟನೆಯ ವಿಶೇಷ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ.

 ಪಾಕಿಸ್ತಾನಿ ವೆಬ್‌ಸೈಟ್‌ಗಳ ಮೇಲೆ ಭಾರತದ ಹ್ಯಾಕರ್‌ಗಳ ದಾಳಿ.

ಪಾಕಿಸ್ತಾನಿ ವೆಬ್‌ಸೈಟ್‌ಗಳ ಮೇಲೆ ಭಾರತದ ಹ್ಯಾಕರ್‌ಗಳ ದಾಳಿ.

ಭಾರತೀಯ ಮೂಲದ ಎರಡು ಸೈಬರ್‌ಹ್ಯಾಕಿಂಗ್‌ ಗುಂಪುಗಳು ಪಾಕಿಸ್ತಾನದ ರಕ್ಷಣೆ ಮತ್ತು ಸರ್ಕಾರಿ ಸಂಸ್ಥೆ, ಹಾಗೂ ಪಶ್ಚಿಮ ಏಷ್ಯಾದ ದೇಶಗಳ ಮೇಲೆ ಕಳೆದ ತಿಂಗಳು ದಾಳಿಮಾಡಿವೆ ಎಂದು ಹ್ಯಾಕಿಂಗ್ ಎಕ್ಸ್‌ಪರ್ಟ್ ವ್ಯಕ್ತಿಯೊಬ್ಬರು ET ಗೆ ಹೇಳಿದ್ದಾರೆ.

ಹ್ಯಾಕಿಂಗ್‌ ದಾಳಿ ನಡೆಸಿದ ಗುಂಪುಗಳು

ಹ್ಯಾಕಿಂಗ್‌ ದಾಳಿ ನಡೆಸಿದ ಗುಂಪುಗಳು

* ಶಕ್ತಿ ಕ್ಯಾಂಪೇನ್

* ವಿವಿವಿ

ಭಾರತ ಸರ್ಕಾರದ ಅನುಗ್ರಹ

ಭಾರತ ಸರ್ಕಾರದ ಅನುಗ್ರಹ

ಎರಡು ದೇಶಗಳ ತನಿಖೆದಾರರು ಈ ಹ್ಯಾಕರ್‌ಗಳು ಭಾರತ ಸರ್ಕಾರದ ಅನುಗ್ರಹ ಹೊಂದಿದ್ದಾರೆ ಎಂದು ಸಂಶಯ ವ್ಯಕ್ತ ಪಡಿಸಿರುವುದಾಗಿ ಹ್ಯಾಕರ್‌ ಎಕ್ಸ್‌ಪರ್ಟ್ ವ್ಯಕ್ತಿ ET ಗೆ ಹೇಳಿದ್ದಾರೆ.

ಶಕ್ತಿ ಹ್ಯಾಕರ್ ಗುಂಪು.

ಶಕ್ತಿ ಹ್ಯಾಕರ್ ಗುಂಪು.

ಶಕ್ತಿ ಕ್ಯಾಂಪೇನ್ ಹ್ಯಾಕರ್ ಗುಂಪನ್ನು 2010 ರಲ್ಲಿ ಮುಚ್ಚಲಾಗಿತ್ತು, ಆದರೆ ಕಳೆದ ವರ್ಷ ಮತ್ತೆ ಕಾರ್ಯನಿರ್ವಹಣೆ ಪ್ರಾರಂಭ ಮಾಡಿದೆ.

ಸ್ಪಿಯರ್ ಫಿಶಿಂಗ್‌

ಸ್ಪಿಯರ್ ಫಿಶಿಂಗ್‌

ಹ್ಯಾಕರ್‌ಗಳ ಆನ್‌ಲೈನ್‌ ದಾಳಿ ಒಂದು ರೀತಿಯ ಆನ್‌ಲೈನ್‌ ವಂಚನೆ ಮಾದರಿಯಾಗಿದ್ದು, ಇಮೇಲ್‌ ಅಟಾಚ್‌ಮೆಂಟ್‌ ಕಳುಹಿಸಿ ಅನಧಿಕೃತ ಪ್ರವೇಶ ಪಡೆದು ವಯಕ್ತಿಕ ಗೌಪ್ಯ ಮಾಹಿತಿ ಪಡೆಯಲು ಯತ್ನಿಸಲಾಗಿದೆ ಎನ್ನಲಾಗಿದೆ.

ಹ್ಯಾಕರ್‌ಗಳ ತನಿಖೆ ಮಾಹಿತಿ

ಹ್ಯಾಕರ್‌ಗಳ ತನಿಖೆ ಮಾಹಿತಿ

ಕ್ಯಾಸ್ಪರ್ಸ್ಕಿ ಲ್ಯಾಬ್‌ನ ಪ್ರಮುಖ ಭದ್ರತಾ ಸಂಶೋಧಕ ಕರ್ಟ್‌ ಬಮ್ಗಾರ್ಟನರ್, ''ನಾವು ಈ ಎರಡು ಹ್ಯಾಕರ್‌ಗಳ ಮೇಲೆ ತನಿಖೆ ನಡೆಸಿದ್ದು, ಕೆಲವು ನ್ಯೂಸ ಏಜೆನ್ಸಿ ವೆಬ್‌ಸೈಟ್‌ಗಳು ಕ್ಲಿಕ್‌ ಆಕರ್ಷಿಸುವ ವಂಚನೆ ದಾಳಿ ನಡೆಸಿವೆ'' ಎಂದಿದ್ದಾರೆ.

 ಚಾನೆಲ್‌ಗಳ ಮೂಲಕ ದೂರು.

ಚಾನೆಲ್‌ಗಳ ಮೂಲಕ ದೂರು.

ಅಮೇರಿಕ ಹೊರಗಿನ ಮೂಲದ ಬಮ್ಗಾರ್ಟನರ್, ''ಹ್ಯಾಕರ್‌ಗಳ ದಾಳಿಗೆ ಒಳಗಾದ ದೇಶಗಳು ಈ ಘಟನೆ ಬಗ್ಗೆ ತಮ್ಮ ಅಧಿಕೃತ ಅಫೀಸಿಯಲ್‌ ಚಾನೆಲ್‌ಗಳ ಮೂಲಕ ಭಾರತಕ್ಕೆ ದೂರು ನೀಡಿವೆ'' ಎಂದು ET ನ್ಯೂಸ್‌ಗೆ ಹೇಳಿದ್ದಾರೆ.

ಕ್ಯಾಸ್ಪರ್ಸ್ಕಿ ಲ್ಯಾಬ್‌

ಕ್ಯಾಸ್ಪರ್ಸ್ಕಿ ಲ್ಯಾಬ್‌

ಇದು ಬ್ರಿಟನ್‌ನ ಮಾಸ್ಕೋದಲ್ಲಿ ಮೂಲ ಕಛೇರಿ ಹೊಂದಿದ್ದು, ಇದು ಸೈಬರ್‌ ಸಾಫ್ಟ್‌ವೇರ್‌ ಸೆಕ್ಯುರಿಟಿಯ ಲಾರ್ಜೆಸ್ಟ್‌ ಪ್ಲೆಯರ್ಸ್‌ಹೊಂದಿದೆ.

 ಭಾರತೀಯ ಹ್ಯಾಕಿಂಕ್‌ಗುಂಪು

ಭಾರತೀಯ ಹ್ಯಾಕಿಂಕ್‌ಗುಂಪು

APT(advanced personalized threats), ಇದು ಕೇವಲ ಸರ್ಕಾರಿ ಸಂಸ್ಥೆ ಮತ್ತು ಇತರ ಸಂಸ್ಥೆಗಳ ಮೇಲೆ ಮಾಹಿತಿ ಕಲೆಹಾಕುವ ಮುಖ್ಯ ಉದ್ದೇಶ ಹೊಂದಿದೆ.

ಭಾರತೀಯ ಮೂಲದ ಇಂಡಸ್ಟ್ರಿ ಟ್ರ್ಯಾಕರ್‌ಗಳು ಹೇಳಿದ್ದೇನು ?

ಭಾರತೀಯ ಮೂಲದ ಇಂಡಸ್ಟ್ರಿ ಟ್ರ್ಯಾಕರ್‌ಗಳು ಹೇಳಿದ್ದೇನು ?

ಕಳೆದ ವರ್ಷದಿಂದ ದೇಶದ ಸೈಬರ್‌ಸ್ಪೇಸ್ ಹೆಚ್ಚು ಆಕ್ರಮಣಕಾರಿಯಾಗಿದೆ ಎಂದು ಭಾರತೀಯ ಇಂಡಸ್ಟ್ರಿಟ್ರ್ಯಾಕರ್‌ಗಳು ಹೇಳಿದ್ದಾರೆ.

ರಕ್ಷಣೆ ವಿಷಯಕ್ಕೆ ಮಾತ್ರ ಸೀಮಿತ

ರಕ್ಷಣೆ ವಿಷಯಕ್ಕೆ ಮಾತ್ರ ಸೀಮಿತ

ಪ್ರಸ್ತುತ ದಿನಗಳಲ್ಲಿ ಇಂಡಿಯಾ ಸೈಬರ್‌ಪ್ರೆಸೆನ್ಸ್‌ ಕೇವಲ ರಕ್ಷಣೆ ವಿಷಯಕ್ಕೆ ಮಾತ್ರ ಸೀಮಿತವಾಗಿದೆ.

ಪಾಕಿಸ್ತಾನ ಹ್ಯಾಕಿಂಗ್‌ ದಾಳಿ

ಪಾಕಿಸ್ತಾನ ಹ್ಯಾಕಿಂಗ್‌ ದಾಳಿ

ಪಾಕಿಸ್ತಾನದ ಆನ್‌ಲೈನ್‌ ಹ್ಯಾಕಿಂಗ್‌ ದಾಳಿ ಭಾರತೀಯ ಸರ್ಕಾರಿ ವೆಬ್‌ಸೈಟ್‌ಗಳನ್ನು ಡಿಫೇಸ್ ಮಾಡುವುದಕ್ಕೆ ಮಾತ್ರ ಪ್ರಮುಖವಾಗಿ ಸೀಮಿತವಾಗಿದೆ ಎಂದು ಹ್ಯಾಕರ್‌ ಎಕ್ಸ್‌ಪರ್ಟ್‌ ವ್ಯಕ್ತಿ ಹೇಳಿದ್ದಾನೆ.

ಛತ್ತೀಸ್ಗಢ ಸರ್ಕಾರಿ ವೆಬ್‌ಸೈಟ್‌ ಡಿಪೇಸ್ ಮಾಡಿದ ಪಾಕಿಸ್ತಾನ

ಛತ್ತೀಸ್ಗಢ ಸರ್ಕಾರಿ ವೆಬ್‌ಸೈಟ್‌ ಡಿಪೇಸ್ ಮಾಡಿದ ಪಾಕಿಸ್ತಾನ

ಪಾಕಿಸ್ತಾನ ಇತ್ತೀಚೆಗೆ ಛತ್ತೀಸ್ಗಡ ಸರ್ಕಾರದ ಸರ್ಕಾರಿ ವೆಬ್‌ಸೈಟ್‌ ಅನ್ನು ಡಿಫೇಸ್ ಮಾಡಿತು. ಇದು ಕೇವಲ ಪಾಕಿಸ್ತಾನದ ನಾಲ್ಕು ವೆಬ್‌ಸೈಟ್‌ಗಳು ಭಾರತೀ ಧ್ವಜವನ್ನು ಹಾರಿಸಿರುವ ಬಗ್ಗೆ ತೋರಿಸಲು.

ಪಾಕಿಸ್ತಾನ ಮತ್ತು ಭಾರತದ ಹ್ಯಾಕರ್‌ಗಳು

ಪಾಕಿಸ್ತಾನ ಮತ್ತು ಭಾರತದ ಹ್ಯಾಕರ್‌ಗಳು

ಪಾಕಿಸ್ತಾನ ಮತ್ತು ಭಾರತದ ಹ್ಯಾಕರ್‌ಗಳು ನಿರಂತರವಾಗಿ ಕಳೆದ ಕೆಲವು ತಿಂಗಳುಗಳ ಹಿಂದೆ ಪರಸ್ಪರ ಸೈಬರ್ ಅಟಾಕ್‌ ಮಾಡುತ್ತಲೇ ಇದ್ದರೂ.

ಶಕ್ತಿ ಕ್ಯಾಂಪೇನ್‌

ಶಕ್ತಿ ಕ್ಯಾಂಪೇನ್‌

ಶಕ್ತಿ ಕ್ಯಾಂಪೇನ್ ಕುಖ್ಯಾತ ಗುಂಪಾಗಿದ್ದು, ಭಾರತದಿಂದ ಆಪರೇಟ್‌ ಆಗುತ್ತಿತ್ತು. 2009 ರಲ್ಲಿ ಯುರೋಪಿಯನ್‌ ಟೆಲಿಕಾಮ್‌ ಕಂಪನಿಗಳ ಮೇಲೆ ಅಟಾಕ್‌ ಮಾಡಿತ್ತು. ಪ್ರಸ್ತುತದಲ್ಲಿ ಮತ್ತೆ ಕಾರ್ಯ ಆರಂಭಿಸಿದ್ದು ಈಗ ಸರ್ಕಾರಿ ಸಂಸ್ಥೆಗಳ ಮೇಲೆ ಅಟಾಕ್‌ ಮಾಡುತ್ತಿದೆ.

ಶಕ್ತಿ ಮತ್ತು ವಿವಿವಿ

ಶಕ್ತಿ ಮತ್ತು ವಿವಿವಿ

ಶಕ್ತಿ ಸಾಮಾನ್ಯವಾಗಿ ಆಕರ್ಷಕ ಹೆಡ್‌ಲೈನ್‌ ಮೂಲಕ ವಯಕ್ತಿಕ ಟಾರ್ಗೆಟ್‌ ಆಧಾರದಲ್ಲಿ ನ್ಯೂಸ್‌ ಲೇಖನಗಳನ್ನು ಕಳುಹಿಸುತ್ತದೆ. ವಿವಿವಿ ಆಸಕ್ತಿಕರ ಮೊಬೈಲ್‌ ಆಪ್‌ಗಳಿಗೆ ಲಿಂಕ್‌ ಕಳುಹಿಸುತ್ತದೆ.

Most Read Articles
Best Mobiles in India

English summary
Two India-based cyberhacking groups have attacked defence and government establishments of Pakistan and some West Asian countries last month, a person with a direct knowledge of the matter told ET.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more