TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಭಾರತದಲ್ಲಿ ದಿನೇ ದಿನೇ ಅಂತರ್ಜಾಲ ಬಳಕೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಮುಂದಿನ 4 ವರ್ಷದಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ಸರ್ಚ್ ಇಂಜಿನ್ ದೈತ್ಯ ಗೂಗಲ್ ಹೇಳಿದೆ. ಅದರಲ್ಲೂ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್‌ನೆಟ್ ಬಳಸುವವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದ್ದು, ಇಂಗ್ಲಿಷ್‌ನ್ನು ಸಹ ಮೀರಿವೆ.
ಅದಕ್ಕಾಗಿ ಗೂಗಲ್ ತನ್ನ ಜಾಹೀರಾತು ಸಂಬಂಧೀತ ಸೇವೆಗಳಾದ ಆಡ್‌ವರ್ಡ್ಸ್ ಮತ್ತು ಆಡ್‌ಸೆನ್ಸ್ ಸೇವೆಗಳನ್ನು ಭಾರತೀಯ ಭಾಷೆಗಳಿಗೂ ವಿಸ್ತರಿಸುತ್ತಿದೆ. ಇಂಗ್ಲಿಷ್ ನಂತರ ಹಿಂದಿ, ಬೆಂಗಾಳಿ ಮತ್ತು ತಮಿಳು ಭಾಷೆಗಳಿಗೆ ಮಾತ್ರ ಜಾಹೀರಾತು ಸೇವೆ ನೀಡುತ್ತಿದ್ದ ಗೂಗಲ್ ಭಾರತದ ಮತ್ತೊಂದು ಭಾಷೆಯಾದ ತೆಲುಗನ್ನು ಸೇರಿಸಿದೆ.
ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್‌ನೆಟ್ ಭಾರೀ ಹೆಚ್ಚಳ
ಸದ್ಯ 234 ಮಿಲಿಯನ್ ಬಳಕೆದಾರರು ಪ್ರಾದೇಶಿಕ ಭಾಷೆಗಳಲ್ಲಿ ಇಂಟರ್‌ನೆಟ್ ಸರ್ಚ್ ಮಾಡುತ್ತಿದ್ದಾರೆ. ಈ ಪ್ರಮಾಣ ಮುಂದಿನ ನಾಲ್ಕು ವರ್ಷದಲ್ಲಿ 536 ಮಿಲಿಯನ್ ಮುಟ್ಟುವ ಸಾಧ್ಯತೆ ಇದೆ ಎಂದು ಗೂಗಲ್ ಹೇಳಿಕೊಂಡಿದ್ದು, ತಾನೂ ಸಹ ಈ ಬದಲಾವಣೆಗೆ ಸಿದ್ಧತೆ ನಡೆಸಿದ್ದೇನೆ ಎಂಬುದನ್ನು ತೋರಿಸಿದೆ.
ಇಂಗ್ಲಿಷ್‌ನ್ನು ಮೀರಿಸಿದ ಪ್ರಾದೇಶಿಕ ಭಾಷೆಗಳು
ಗೂಗಲ್ ವರದಿ ಪ್ರಕಾರ ಹೀಗಾಗಲೇ ಭಾರತೀಯ ಪ್ರಾದೇಶಿಕ ಪಕ್ಷಗಳು ಇಂಟರ್‌ನೆಟ್ ಜಗತ್ತಿನಲ್ಲಿ ಇಂಗ್ಲಿಷ್‌ನ್ನು ಮೀರಿಸಿವೆ. ಸದ್ಯ 175 ಮಿಲಿಯನ್ ಇಂಟರ್‌ನೆಟ್ ಬಳಕೆದಾರರು ಇಂಗ್ಲಿಷ್‌ನ್ನು ಅವಲಂಭಿಸಿದ್ದಾರೆ. ಆದರೆ, ಈ ಪ್ರಮಾಣ ಭಾರತೀಯ ಭಾಷೆಗಳಲ್ಲಿ 234 ಮಿಲಿಯನ್ ಇರುವುದನ್ನು ಕಾಣುತ್ತೇವೆ. ತೆಲುಗು, ತಮಿಳು, ಮರಾಠಿ ಮತ್ತು ಬಂಗಾಳಿ ಭಾಷೆಗಳು ಶೇ.30ರಷ್ಟು ಇಂಗ್ಲಿಷೇತರ ಬಳಕೆದಾರರನ್ನು ಹೊಂದಿವೆ. ಮುಂದಿನ ನಾಲ್ಕು ವರ್ಷದಲ್ಲಿ ಈ ಪ್ರಮಾಣ ಇಂಗ್ಲಿಷ್‌ನಲ್ಲಿ ಕೇವಲ 199 ಮಿಲಿಯನ್‌ಗೆ ಏರಿಕೆಯಾಗಿದೆ ಎಂದು ಹೇಳಿದೆ.
ಡಿಜಿಟಲ್ ಜಾಹೀರಾತಿನಲ್ಲೂ ಹೆಚ್ಚಳ
ಗೂಗಲ್ ವರದಿಯಂತೆ ಸದ್ಯ ಪ್ರಾದೇಶಿಕ ಭಾಷೆಗಳು 2 ಬಿಲಿಯನ್ ಡಾಲರ್ ಶೇರ್‌ನ್ನು ಡಿಜಿಟಲ್ ಜಾಹೀರಾತಿನಲ್ಲಿ ಹೊಂದಿವೆ. ಈ ಪ್ರಮಾಣ ಮುಂದಿನ 4 ವರ್ಷಗಳಲ್ಲಿ ಶೇ.35ರಷ್ಟು ಏರಿಕೆಯಾಗಲಿದ್ದು, ಅಂದಾಜಿನ ಪ್ರಕಾರ 4.4 ಬಿಲಿಯನ್ ಡಾಲರ್ ಮುಟ್ಟುವ ನಿರೀಕ್ಷೆ ಇದೆ.
ಪ್ರಾದೇಶಿಕ ಭಾಷೆಗಳ ಕಡೆ ಕಣ್ಣಿಟ್ಟ ಗೂಗಲ್
ಇಂಟರ್‌ನೆಟ್ ಸರ್ಚ್‌ನಲ್ಲಿ ಭಾರೀ ಬದಲಾವಣೆಯಾಗಿದ್ದರಿಂದ ಗೂಗಲ್ ಪ್ರಾದೇಶಿಕ ಭಾಷೆಗಳತ್ತ ತನ್ನ ಗಮನವನ್ನು ಕೇಂದ್ರಿಕರಿಸಿದೆ. ಆದ್ದರಿಂದ ತನ್ನ ಸೇವೆಗಳನ್ನು ಭಾರತದ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ನೀಡುವತ್ತ ಸಾಗಿದೆ. ಹೀಗಾಗಲೇ ಗೂಗಲ್ ಯುಟ್ಯೂಬ್ ಸೇರಿದಂತೆ ತನ್ನ ಅನೇಕ ಉತ್ಪನ್ನಗಳನ್ನು ಭಾರತೀಯ ಭಾಷೆಗಳಲ್ಲಿ ನೀಡಿ ಸೈ ಎನಿಸಿಕೊಂಡಿದೆ.
ತೆಲುಗಿಗೂ ಆಡ್‌ಸೆನ್ಸ್
ಗೂಗಲ್‌ನ ಆಡ್‌ಸೆನ್ಸ್ ಭಾರತೀಯ ಭಾಷೆಗಳಲ್ಲಿ ಕೇವಲ ಹಿಂದಿ, ತಮಿಳು, ಬಂಗಾಳಿ ಭಾಷೆಗಳಿಗೆ ಮಾತ್ರ ಲಭ್ಯವಿತ್ತು. ಈಗ ಗೂಗಲ್ ತನ್ನ ಆಡ್‌ಸೆನ್ಸ್ ಸೇವೆಯನ್ನು ವಿಸ್ತರಿಸಿದ್ದು, ತೆಲುಗಿಗೂ ಕೂಡ ನೀಡಿದೆ. ಮುಂದಿನ 4 ವರ್ಷಗಳಲ್ಲಿ ತೆಲುಗಿನಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 91 ಮಿಲಿಯನ್‌ಗೆ ತಲುಪಲಿದೆಯಂತೆ. ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ತೆಲುಗು ಅತಿ ಹೆಚ್ಚು ಇಂಟರ್‌ನೆಟ್ ಒಲವು ಹೊಂದಿದ ಭಾಷೆಗಳಲ್ಲಿ ಎರಡನೇ ಸ್ಥಾನ ಹೊಂದಿದೆ ಎಂದು ಗೂಗಲ್ ಹೇಳಿಕೊಂಡಿದೆ.
ಇಂಟರ್‌ನೆಟ್ ಹೆಚ್ಚು ಉಪಯುಕ್ತ
ಗೂಗಲ್‌ನ ಪಶ್ಚಿಮ ಏಷ್ಯಾ ಮತ್ತು ಭಾರತದ ಉಪಾಧ್ಯಕ್ಷರಾಗಿರುವ ರಾಜನ್ ಆನಂದನ್ ಹೇಳುವಂತೆ ಗೂಗಲ್ ಆಡ್ ಪ್ಲಾಟ್‌ಫಾರ್ಮ್‌ನಿಂದ ಪ್ರಾದೇಶಿಕ ಭಾಷೆಗಳಿಗೆ ಬೆಂಬಲ ನೀಡಿ ಭಾರತಕ್ಕೆ ಇಂಟರ್‌ನೆಟ್‌ನ್ನು ಹೆಚ್ಚು ಉಪಯುಕ್ತವನ್ನಾಗಿ ಮಾಡುತ್ತೇವೆ ಎಂದಿದ್ದಾರೆ.
ಇಂಟರ್‌ನೆಟ್ ಬಳಕೆಯಲ್ಲಿ ಭಾರತ ದ್ವಿತೀಯ
400 ಮಿಲಿಯನ್ ಬಳಕೆದಾರರೊಂದಿಗೆ ಭಾರತ ಇಂಟರ್‌ನೆಟ್ ಬಳಕೆಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಅತಿ ವೇಗವಾಗಿ ಬೆಲೆಯುತ್ತಿರುವ ಇಂಟರ್‌ನೆಟ್ ಮಾರುಕಟ್ಟೆಯಲ್ಲಿ ಭಾರತವೂ ಕೂಡ ಒಂದಾಗಿದೆ. ತಿಂಗಳಿಗೆ 8 ರಿಂದ 10 ಮಿಲಿಯನ್ ಬಳಕೆದಾರರು ಹೊಸದಾಗಿ ಸೇರುತ್ತಿದ್ದಾರೆ.
ಆಡ್‌ಸೆನ್ಸ್ 11 ಭಾಷೆಗಳಿಗೂ ವಿಸ್ತರಣೆ
ಗೂಗಲ್ ತನ್ನ ಜಾಹೀರಾತು ಸಂಬಂಧಿತ ಸೇವೆಗಳನ್ನು ಭಾರತದ ಪ್ರಮುಖ 11 ಭಾಷೆಗಳಿಗೂ ವಿಸ್ತರಿಸುವ ಆಸಕ್ತಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಭಾರತದ ಎಲ್ಲಾ ಭಾಷೆಗಳಿಗೂ ಆಡ್‌ವರ್ಡ್ಸ್ ಮತ್ತು ಆಡ್‌ಸೆನ್ಸ್ ಸೇವೆ ಸಿಗಲಿದೆ ಎಂದು ಭಾರತದ ಗೂಗಲ್ ಮಾರ್ಕೆಟಿಂಗ್ ಸಲ್ಯೂಷನ್ಸ್ ನಿರ್ದೇಶಕಿ ಶಾಲಿನಿ ಗಿರೀಶ್ ಹೇಳಿದ್ದಾರೆ.
ಹೊಸ ಬಳಕೆದಾರರ ವೈಶಿಷ್ಟ್ಯ
ಮೊದಲ 100 ಮಿಲಿಯನ್ ಇಂಟರ್‌ನೆಟ್ ಬಳಕೆದಾರರಿಗೂ ಮತ್ತು ಈಗ ಬರುವ ಹೊಸ ಇಂಟರ್‌ನೆಟ್ ಬಳಕೆದಾರರಿಗೂ ಭಾರೀ ವ್ಯತ್ಯಾಸವಿದೆ. ಹೊಸ 10 ಬಳಕೆದಾರರಲ್ಲಿ 9 ಜನ ಬಳಕೆದಾರರು ಭಾರತೀಯ ಭಾಷೆಗಳಲ್ಲಿ ಇಂಟರ್‌ನೆಟ್ ಬಳಸುತ್ತಾರೆ. ಹೊಸ ಬಳಕೆದಾರರು ಇಂಟರ್‌ನೆಟ್ ಆನ್ ವಾಯ್ಸ್ ಸೇವೆಯನ್ನು ಬಳಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಭಾರತ ಮೊದಲ ವಾಯ್ಸ್ ಡ್ರೈವನ್ ಇಂಟರ್‌ನೆಟ್ ಮಾರುಕಟ್ಟೆಯಾಗುವತ್ತ ದಾಪುಗಾಲು ಇಟ್ಟಿದೆ.