ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಸೇಲ್‌ ಹೆಚ್ಚಳ!.ಈ ಫೋನ್‌ಗಳು ಮುಂದಿವೆ!

|

ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮಾರುಕಟ್ಟೆ ಇದ್ದು, ಈ ಕಾರಣದಿಂದಲೇ ಹಲವು ಕಂಪನಿಗಳು ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಪ್ರಸ್ತುತ ಈ ವರ್ಷದ ಆರಂಭಕ್ಕೆ ಹೋಲಿಸಿದರೇ, ದ್ವೀತಿಯಾರ್ಧದಲ್ಲಿ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದ್ದು, ಶಿಯೋಮಿ, ಸ್ಯಾಮ್‌ಸಂಗ್, ವಿವೋ, ಒಪ್ಪೊ ಮತ್ತು ರಿಯಲ್ ಮಿ ಸ್ಮಾರ್ಟ್‌ಫೋನ್‌ಗಳೆ ಹೆಚ್ಚಿನ ಸೇಲ್ ಆಗಿವೆ.

ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಸೇಲ್‌ ಹೆಚ್ಚಳ!.ಈ ಫೋನ್‌ಗಳು ಮುಂದಿವೆ!

ಹೌದು, ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ (Q2-2019) ಶೇ 5% ಮಾರಟ ಹೆಚ್ಚಾಗಿದ್ದು, ಖರೀದಿಯಾಗುವ ಪ್ರತಿ 7 ಸ್ಮಾರ್ಟ್‌ಫೋನ್‌ಗಳಲ್ಲಿ 6 ಸ್ಮಾರ್ಟ್‌ಫೋನ್‌ಗಳು ಶಿಯೋಮಿ, ಸ್ಯಾಮ್‌ಸಂಗ್, ವಿವೋ, ಒಪ್ಪೊ ಮತ್ತು ರಿಯಲ್ ಮಿ ಕಂಪನಿಗಳಿಗೆನೇ ಸೇರಿರುತ್ತವೆ ಎಂದು 'ಸೈಬರ್ ಮೀಡಿಯಾ ಸಂಶೋಧನಾ ಸಂಸ್ಥೆಯು' (CyberMedia Research -CMR) ವರದಿ ನೀಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಸೇಲ್‌ ಹೆಚ್ಚಳ!.ಈ ಫೋನ್‌ಗಳು ಮುಂದಿವೆ!

ಈ ಪ್ರಮುಖ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಬಜೆಟ್‌ ಬೆಲೆಯಲ್ಲಿ ವಿವಿಧ ಶ್ರೇಣಿಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ದೇಶಿಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್‌ ಸಂಸ್ಥೆಯು ಇತ್ತೀಚಿಗೆ ಗ್ಯಾಲ್ಯಾಕ್ಸಿ A ಮತ್ತು M ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಶಿಯೋಮಿಗೆ ಓಟಕ್ಕೆ ಲಗಾಮು ಹಾಕುವಲ್ಲಿ ಯಶಸ್ವಿ ಎನಿಸಿಕೊಂಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಸೇಲ್‌ ಹೆಚ್ಚಳ!.ಈ ಫೋನ್‌ಗಳು ಮುಂದಿವೆ!

ಸದ್ಯ ಮಾರುಕಟ್ಟೆಯಲ್ಲಿ ಮುಖ್ಯವಾಗಿ 7000ರೂ.ಗಳಿಂದ ಸುಮಾರು 25000ರೂ.ಗಳ ವರೆಗಿನ ಬಜೆಟ್‌ ಪ್ರೈಸ್‌ ಸೆಗ್ಮೆಂಟ್‌ನಲ್ಲಿನ ಸ್ಮಾರ್ಟ್‌ಫೋನ್‌ಗಳೆ ಅಧಿಕವಾಗಿ ಮಾರಾಟ ಕಾಣುತ್ತಿರುವ ಲಿಸ್ಟ್‌ನಲ್ಲಿ ಮುನ್ನೆಲೆಯಲ್ಲಿವೆ. ಹಾಗೆಯೇ ಮಿಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿಯೇ ಕಂಪನಿಗಳು ಪ್ರಸ್ತುತ ಚಾಲ್ತಿ ಇರುವ ಅಗತ್ಯ ಫೀಚರ್ಸ್‌ಗಳನ್ನು ಮತ್ತು ನೂತನ ತಂತ್ರಜ್ಞಾನಗಳನ್ನು ಅಳವಡಿಸುತ್ತ ಗ್ರಾಹಕರನ್ನು ಸೆಳೆಯುತ್ತಿವೆ.

ಓದಿರಿ : 'ಟಿಕ್‌ಟಾಕ್' ಆಪ್‌ ಬಗ್ಗೆ ನೀವು ತಿಳಿಯಬೇಕಾದ ಕುತೂಹಲಕಾರಿ ಸಂಗತಿಗಳು!ಓದಿರಿ : 'ಟಿಕ್‌ಟಾಕ್' ಆಪ್‌ ಬಗ್ಗೆ ನೀವು ತಿಳಿಯಬೇಕಾದ ಕುತೂಹಲಕಾರಿ ಸಂಗತಿಗಳು!

ಈ ಐದು ಸ್ಮಾರ್ಟ್‌ಫೋನ್‌ ಕಂಪನಿಗಳು ಶಿಪ್‌ಮೆಂಟ್‌ನಲ್ಲಿ ಶೇ.78 %ರಷ್ಟು ಕೊಡುಗೆ ನೀಡಿವೆ. ಹಾಗೆಯೇ ವಿಶೇಷವಾಗಿ ಹಬ್ಬದ ಸಂದರ್ಭಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಅಧಿಕವಾಗಿ ಮಾರಾಟ ಕಾಣುತ್ತವೆ. ಈ ಸಮಯದಲ್ಲಿ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳ ನಡುವೆ ಪೈಫೋಟಿ ಹೆಚ್ಚಾಗಲಿದೆ. ಆದ್ರೆ ಚೀನಾದ ರಿಯಲ್ ಮಿ ಕಂಪನಿಯು ಕಡಿಮೆ ಅವಧಿಯಲ್ಲಿಯೇ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿ, ಪ್ರಮುಖ ಸ್ಥಾನ ಪಡೆದುಕೊಂಡಿದೆ.

ಓದಿರಿ : ಆಂಡ್ರಾಯ್ಡ್‌ v/s ಸ್ಮಾರ್ಟ್‌ಟಿವಿ ಯಾವುದು ಬೆಸ್ಟ್‌?.ಖರೀದಿಸುವ ಮುನ್ನ ತಿಳಿಯಿರಿ!ಓದಿರಿ : ಆಂಡ್ರಾಯ್ಡ್‌ v/s ಸ್ಮಾರ್ಟ್‌ಟಿವಿ ಯಾವುದು ಬೆಸ್ಟ್‌?.ಖರೀದಿಸುವ ಮುನ್ನ ತಿಳಿಯಿರಿ!

Best Mobiles in India

English summary
smartphone market grew five percent in the second quarter (Q2) of 2019, a new report by CyberMedia Research. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X