3 ತಿಂಗಳ ವ್ಯಾಲಿಡಿಟಿಗೆ ಬ್ರೇಕ್ ಹಾಕುವ ಸಾಧ್ಯತೆ!?..ಬೆಚ್ಚಿಬಿದ್ದ ಗ್ರಾಹಕ!

|

2016ರಲ್ಲಿ ಮುಖೇಶ್ ಅಂಬಾನಿ ತಮ್ಮ ಟೆಲಿಕಾಂ ಉದ್ಯಮ ರಿಲಯನ್ಸ್ ಜಿಯೋವನ್ನು ಪ್ರಾರಂಭಿಸುವ ಮೂಲಕ ದೇಶದ ಟೆಲಿಕಾಂ ಉದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿದರು. ಪ್ರತಿ ತಿಂಗಳು ಇದ್ದ ರೀಚಾರ್ಜ್ ಫ್ಲ್ಯಾನ್‌ಗಳನ್ನು ಮೂರು ತಿಂಗಳಿಗೆ ಏರಿಸಿ ಗ್ರಾಹಕರಿಗೆ ಭರ್ಜರಿ ಕೊಡುಗೆಗಳನ್ನು ನೀಡಿದರು. ಆದರೆ, ಈ ಸಂತಸ ಹೆಚ್ಚು ದಿನ ಇರುವುದಿಲ್ಲ. ಏಕೆಂದರೆ, ಇದೀಗ ಸಂಕಷ್ಟದ ಹಾದಿಯಲ್ಲಿರುವ ಟೆಲಿಕಾಂ ಅನ್ನು ಉಳಿಸಲು 3 ತಿಂಗಳ ವ್ಯಾಲಿಡಿಟಿಗೆ ಬ್ರೇಕ್ ಹಾಕಲು ಯೋಜಿಸಲಾಗಿದೆ. ಇದರಿಂದ ದೇಶದ ಗ್ರಾಹಕರು ಬೆಚ್ಚುಬೀಳುವುದು ಗ್ಯಾರಂಟಿ ಎನ್ನುತ್ತಿವೆ ವರದಿಗಳು.!

ಪ್ರಸ್ತುತ ಟೆಲಿಕಾಂ

ಹೌದು, ದೇಶದಲ್ಲಿ ಪ್ರಸ್ತುತ ಟೆಲಿಕಾಂನಲ್ಲಿ ಡೇಟಾ ಮತ್ತು ಕರೆಗಳ ಕಡಿಮೆ ಬೆಲೆಗಳು ಗ್ರಾಹಕರಿಗೆ ವರದಾನವಾಗಿವೆ. ಆದರೆ, ಅಸ್ತಿತ್ವದಲ್ಲಿರುವ ಟೆಲಿಕಾಂ ಕಂಪೆನಿಗಳಿಗೆ ಭಾರೀ ಸಂಕಷ್ಟವನ್ನು ತಂದೊಡ್ಡಿದೆ. ಕ್ಷೀಣಿಸುತ್ತಿರುವ ಸ್ಪರ್ಧೆಯ ಹಿನ್ನೆಲೆಯಲ್ಲಿ ಕೆಲವು ಟೆಲಿಕಾಂ ಕಂಪೆನಿಗಳು ಮುಚ್ಚಿವೆ ಅಥವಾ ವಿಲೀನಗೊಂಡಿವೆ. ಹಾಗಾಗಿ, ಟೆಲಿಕಾಂ ಕಂಪೆನಿಗಳನ್ನು ಉಳಿಸುವ ಸಲುವಾಗಿ ಬೆಲೆ ಹೆಚ್ಚಳಕ್ಕಿಂತ ಪ್ರಸ್ತುತ ಇರುವ ವ್ಯಾಲಿಡಿಟಿಯನ್ನು ಒಂದು ತಿಂಗಳಿಗೆ ಇಳಿಸಬಹುದು. ಪ್ರಸ್ತುತದ 3 ತಿಂಗಳ ವ್ಯಾಲಿಡಿಟಿಗೆ ಬ್ರೇಕ್ ಹಾಕಬಹುದು ಎಂದು ಟೆಲಿಕಾಂ ತಜ್ಞರು ಅಂದಾಜಿಸಿದ್ದಾರೆ.

 ಏರ್‌ಟೆಲ್, ವೊಡಾಫೋನ್

ಈ ವರ್ಷದ ಹೊತ್ತಿಗೆ, ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಎಂಬ ಮೂರು ಪ್ರಮುಖ ಖಾಸಗಿ ಕಂಪೆನಿಗಳು ಮಾತ್ರ ಉಳಿದಿವೆ. ಜೊತೆಗೆ ಟೆಲಿಕಾಂ ಸ್ಪೆಕ್ಟ್ರಮ್ ಅನ್ನು ಹರಾಜು ಹಾಕಿದಾಗ ಸರ್ಕಾರಕ್ಕೆ ಹೆಚ್ಚಿನ ಬೆಲೆಗಳನ್ನು ಪಾವತಿಸಿದ ನಂತರ ಏರ್ಟೆಲ್ ಮತ್ತು ವೊಡಾಫೋನ್ ತಮ್ಮ ಸಾಲದ ಹೊರೆಗಳನ್ನು ನಿರ್ವಹಿಸಲು ಪ್ರಯಾಸಪಡುತ್ತಿವೆ. ಇದು ಭವಿಷ್ಯದಲ್ಲಿ ದೇಶದ ಟೆಲಿಕಾಂ ಕ್ಷೇತ್ರಕ್ಕೆ ಹಾನಿಕಾರಕ. ಹಾಗಾಗಿ, ಜನರಿಂದಲೇ ಹೆಚ್ಚು ಹಣ ಟೆಲಿಕಾಂ ಕಂಪೆನಿಗಳಿಗೆ ಹರಿಯುವಂತೆ ಮಾಡಲು ಸರ್ಕಾರವೇ ಈ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗುತ್ತಿದೆ.

ಈಗಾಗಲೇ

ನಮಗೆ ಈಗಾಗಲೇ ತಿಳಿದಿರುವಂತೆ ಡಿಸೆಂಬರ್ 1 ರಿಂದ ಏರ್‌ಟೆಲ್, ವೊಡಾಫೋನ್ ಮತ್ತು ರಿಲಯನ್ಸ್ ಜಿಯೋ ಸೆಂಬರ್‌ನಲ್ಲಿ ಸುಂಕವನ್ನು ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಇದಾದ ನಂತರ ಈ ಬಗ್ಗೆ ಮಾತನಾಡಿದ್ದ ಟೆಲಿಕಾಂ ತಜ್ಞ ರೋಹನ್ ಧಮಿಜಾ ಅವರು, ಈ ಬೆಲೆ ಹೆಚ್ಚಳವು ಸಣ್ಣದಾಗಿರುವುದಿಲ್ಲ. ಅವುಗಳು ಬೆಲೆಗಳನ್ನು 20 ರಿಂದ 30 ಪ್ರತಿಶತದಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಇದೀಗ 3 ತಿಂಗಳ ವ್ಯಾಲಿಡಿಟಿಗೆ ಬ್ರೇಕ್ ಹಾಕಲು ಯೋಜಿಸಲಾಗಿದೆ ಎಂಬ ವದಂತಿಯೊಂದು ಎದ್ದಿರುವುದರಿಂದ ಮೊಬೈಲ್ ಗ್ರಾಹಕರು ಭಯಪಡುವಂತಾಗಿದೆ.

ಶತಕೋಟಿ

1.3 ಶತಕೋಟಿಗಿಂತಲೂ ಹೆಚ್ಚು ಜನರಿರುವ ಭಾರತದಲ್ಲಿ ವ್ಯಾಪಕವಾದ ಸ್ಮಾರ್ಟ್‌ಫೋನ್ ಅಳವಡಿಕೆಗೆ ಬಾಗಿಲು ತೆರೆಯುವ ಮೂಲಕ ಜಿಯೋ ಕಟ್-ರೇಟ್ ಯೋಜನೆಗಳು ಯಶಸ್ವಿಯಾದವು. ಗ್ರಾಹಕ ಸಂಶೋಧನಾ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ $ 12 ಬೆಲೆಗೆ ಹೋಲಿಸಿದರೆ, ಭಾರತದ ಒಂದು ಗಿಗಾಬೈಟ್ ಬೆಲೆ ಕೇವಲ 26 ಸೆಂಟ್ಸ್ ಆಗಿದೆ. ವಾಟ್ಸಾಪ್, ಯೂಟ್ಯೂಬ್ ಮತ್ತು ಟಿಕ್‌ಟಾಕ್ ಸೇರಿದಂತೆ ಇಂಟರ್ನೆಟ್ ಆಧಾರಿತ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವ ಭಾರತೀಯರು ವಿಶ್ವದಲ್ಲೇ ಅತಿದೊಡ್ಡ ಬಳಕೆದಾರರಾಗಿದ್ದಾರೆ.

Best Mobiles in India

English summary
According to press reports, the Federation of Indian Chambers of Commerce & Industry (Ficci) is now getting involved in the ongoing debt crisis affecting at least two of the country’s big three operators.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X