ಇನ್ಫಿನಿಕ್ಸ್‌ ನಿಂದ ಹೊಸ ಲ್ಯಾಪ್‌ಟಾಪ್‌ ಮತ್ತು ಸ್ಮಾರ್ಟ್‌ಟಿವಿ ಬಿಡುಗಡೆ! ಬೆಲೆ ಎಷ್ಟಿದೆ?

|

ಇನ್ಫಿನಿಕ್ಸ್‌ ಕಂಪೆನಿ ಭಾರತದಲ್ಲಿ ಬಜೆಟ್‌ ಬೆಲೆಯ ಡಿವೈಸ್‌ಗಳಿಂದ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌ಗಳನ್ನು ಕೂಡ ಬಜೆಟ್‌ ಬೆಲೆಯಲ್ಲಿ ಪರಿಚಯಿಸುತ್ತಾ ಬಂದಿದೆ. ಇದೀಗ ಭಾರತದಲ್ಲಿ ಹೊಸದಾಗಿ ಒಂದು ಲ್ಯಾಪ್‌ಟಾಪ್‌ ಹಾಗೂ ಹೊಸ ಸ್ಮಾರ್ಟ್‌ಟಿವಿಯನ್ನು ಲಾಂಚ್‌ ಮಾಡಿದೆ. ಇದರಲ್ಲಿ ಲ್ಯಾಪ್‌ಟಾಪ್‌ ಅನ್ನು ಇನ್ಫಿನಿಕ್ಸ್‌ ಇನ್‌ಬುಕ್‌ Z2 ಪ್ಲಸ್‌ ಎಂದು ಹೆಸರಿಸಲಾಗಿದೆ. ಸ್ಮಾರ್ಟ್‌ಟಿವಿಯನ್ನು ಇನ್ಫಿನಿಕ್ಸ್‌ 43 Y1 ಎಂದು ಗುರುತಿಸಲಾಗಿದೆ.

ಇನ್ಫಿನಿಕ್ಸ್‌

ಹೌದು, ಇನ್ಫಿನಿಕ್ಸ್‌ ಕಂಪೆನಿ ಭಾರತದಲ್ಲಿ ಇನ್ಫಿನಿಕ್ಸ್‌ ಇನ್‌ಬುಕ್‌ Z2 ಪ್ಲಸ್‌ ಲ್ಯಾಪ್‌ಟಾಪ್‌ ಮತ್ತು ಇನ್ಫಿನಿಕ್ಸ್‌ 43 Y1 ಸ್ಮಾರ್ಟ್ ಟಿವಿ ಪರಿಚಯಿಸಿದೆ. ಇನ್ನು ಇನ್ಫಿನಿಕ್ಸ್‌ನ ಹೊಸ ಲ್ಯಾಪ್‌ಟಾಪ್‌ 11ನೇ ತಲೆಮಾರಿನ ಇಂಟೆಲ್‌ ಕೋರ್‌ CPU ಚಿಪ್‌ಸೆಟ್‌ ಪ್ರೊಸೆಸರ್‌ ವೇಗವನ್ನು ಪಡೆದಿದೆ. ಹಾಗೆಯೇ ಇನ್ಫಿನಿಕ್ಸ್‌ 43 Y1 ಸ್ಮಾರ್ಟ್ ಟಿವಿಯು 43 ಇಂಚಿನ ಸ್ಕ್ರೀನ್ ಮತ್ತು 20W ಬಾಕ್ಸ್ ಸ್ಪೀಕರ್‌ಗಳನ್ನು ಹೊಂದಿದೆ. ಇದು ಡಾಲ್ಬಿ ಅಟ್ಮಾಸ್ ಅನ್ನು ಬೆಂಬಲಿಸಲಿದೆ. ಹಾಗಾದರೆ ಇನ್ಫಿನಿಕ್ಸ್‌ ಕಂಪೆನಿ ಪರಿಚಯಿಸಿರುವ ಹೊಸ ಡಿವೈಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್ಫಿನಿಕ್ಸ್‌ ಇನ್‌ಬುಕ್‌ Z2 ಪ್ಲಸ್‌ ಲ್ಯಾಪ್‌ಟಾಪ್‌

ಇನ್ಫಿನಿಕ್ಸ್‌ ಇನ್‌ಬುಕ್‌ Z2 ಪ್ಲಸ್‌ ಲ್ಯಾಪ್‌ಟಾಪ್‌

ಇನ್ಫಿನಿಕ್ಸ್‌ ಇನ್‌ಬುಕ್‌ Z2 ಪ್ಲಸ್‌ ಲ್ಯಾಪ್‌ಟಾಪ್‌ 15.6 ಇಂಚಿನ ಫುಲ್‌ ಹೆಚ್‌ಡಿ ಸ್ಕ್ರೀನ್‌ ಹೊಂದಿದೆ. ಈ ಡಿಸ್‌ಪ್ಲೇ 300ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇನ್ನು ಈ ಲ್ಯಾಪ್‌ಟಾಪ್‌ 11 ನೇ ತಲೆಮಾರಿನ ಇಂಟೆಲ್‌ ಕೋರ್‌ i3 ಪ್ರೊಸೆಸರ್‌ ಹೊಂದಿದೆ. ಇದು ವಿಂಡೋಸ್ 11 ಹೋಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB SSD ಸ್ಟೋರೇಜ್‌ ಸಾಮರ್ಥ್ಯವನ್ನು ನೀಡಲಿದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ 65W ವೇಗದ ಚಾರ್ಜಿಂಗ್‌ ಬೆಬಲವನ್ನು ಹೊಂದಿದ್ದು, ಚಾರ್ಜ್ ಮಾಡಲು ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಕನೆಕ್ಟಿವಿಟಿಗಾಗಿ ಎರಡು USB-C ಪೋರ್ಟ್‌ಗಳು, ಎರಡು USB 3.0 ಪೋರ್ಟ್‌ಗಳು, ಒಂದು HDMI ಪೋರ್ಟ್ ಮತ್ತು ಒಂದು SD ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ ಭಾರತದಲ್ಲಿ 32,990ರೂ.ಆರಂಭಿಕ ಬೆಲೆಯಲ್ಲಿ ಬರಲಿದೆ. ಇದು ಅಕ್ಟೋಬರ್ 18 ರಂದು ಭಾರತದಲ್ಲಿ ಬೆಳ್ಳಿ, ನೀಲಿ ಮತ್ತು ಕೆಂಪು ಬಣ್ಣದ ಆಯ್ಕೆಯಲ್ಲಿ ಮಾರಾಟವಾಗಲಿದೆ.

ಇನ್ಫಿನಿಕ್ಸ್‌ 43 Y1 ಸ್ಮಾರ್ಟ್ ಟಿವಿ

ಇನ್ಫಿನಿಕ್ಸ್‌ 43 Y1 ಸ್ಮಾರ್ಟ್ ಟಿವಿ

ಇನ್ಫಿನಿಕ್ಸ್‌ 43 Y1 ಸ್ಮಾರ್ಟ್ ಟಿವಿ 43 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 300ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದು 60Hz ರಿಫ್ರೆಶ್ ರೇಟ್‌ ನೀಡಲಿದ್ದು, 16 ಮಿಲಿಯನ್ ಕಲರ್‌ ಮತ್ತು HLG ಬೆಂಬಲವನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್ ಟಿವಿಯು ಡಾಲ್ಬಿ ಆಡಿಯೊದಿಂದ ಬೆಂಬಲಿತವಾಗಿರುವ 20W ಬಾಕ್ಸ್ ಸ್ಪೀಕರ್‌ಗಳನ್ನು ಹೊಂದಿದೆ. ಇದು ಮಾಲಿ-G31 ಚಿಪ್‌ಸೆಟ್‌ ಸಪೋರ್ಟ್‌ ಪಡೆದಿರುವ ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ 512MB RAM ಮತ್ತು 4GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಸ್ಮಾರ್ಟ್ ಟಿವಿಯು ಯೂಟ್ಯೂಬ್, ಅಮೆಜಾನ್‌ ಪ್ರೈಮ್ ವಿಡಿಯೋ, ZEE5, ಸೋನಿಲೈವ್‌ ಸೇರಿದಂತೆ ಹಲವು ಅಪ್ಲಿಕೇಶನ್‌ಗಳ ಪ್ರೀ ಲೋಡ್‌ ಅನ್ನು ಒಳಗೊಂಡಿರಲಿದೆ. ಇನ್ನು ಕನೆಕ್ಟವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಎರಡು HDMI ಪೋರ್ಟ್‌ಗಳು, ಎರಡು USB ಪೋರ್ಟ್‌ಗಳು, ಎತರ್ನೆಟ್ ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿರಲಿದೆ. ಈ ಸ್ಮಾರ್ಟ್‌ಟಿವಿ ಭಾರತದಲ್ಲಿ 13,999ರೂ. ವೆಚ್ಚವಾಗಲಿದೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

Best Mobiles in India

English summary
Infinix 43 Y1 smart TV, Infinix INBook Z2 Plus Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X