ಭಾರತದಲ್ಲಿ ಹೊಸ ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ?

|

ಇನ್ಫಿನಿಕ್ಸ್‌ ಕಂಪೆನಿ ಟೆಕ್‌ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ತನ್ನ ವೈವಿಧ್ಯಮಯ ಗ್ಯಾಜೆಟ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌ ವಲಯದಲ್ಲಿಯೂ ಕೂಡ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಇನ್ಫಿನಿಕ್ಸ್ ಕಂಪೆನಿ ಹೊಸ ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್‌ ಅನ್ನು ಲಾಂಚ್‌ ಮಾಡಿದೆ. ಇದು ಮೂರು ರೀತಿಯ ಪ್ರೊಸೆಸರ್‌ ರೂಪಾಂತರಗಳಲ್ಲಿ ಲಭ್ಯವಾಗಲಿದೆ.

ಇನ್ಫಿನಿಕ್ಸ್‌

ಹೌದು, ಇನ್ಫಿನಿಕ್ಸ್‌ ಭಾರತದಲ್ಲಿ ತನ್ನ ಹೊಸ ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್‌ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದು ಅಲ್ಯೂಮಿನಿಯಂ ಮಿಶ್ರಲೋಹದ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ. ಇದರ ಬೆಲೆ ಹೇಗಿದೆ? ಲಭ್ಯತೆ ಯಾವಾಗ ಅನ್ನೊದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್

ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್

ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1920x1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಕೋರ್‌ i3, ಕೋರ್‌ i5 ಮತ್ತು ಕೋರ್‌ i7 10 ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್‌ಗಳ ಆಯ್ಕೆಯಲ್ಲಿ ಬರಲಿದೆ. ಇದು ವಿಂಡೋಸ್ 11 ಹೋಮ್ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಇದರಿಂದ ನಿಮಗೆ ಯಾವ ಪ್ರೊಸೆಸರ್‌ನ ಆಯ್ಕೆಯ ಲ್ಯಾಪ್‌ಟಾಪ್‌ ಬೇಕೋ ಅದನ್ನು ಆಯ್ಕೆ ಮಾಡಬಹುದು.

ಡಿವೈಸ್‌

ಇನ್ನು ಈ ಡಿವೈಸ್‌ 16GB RAM ಮತ್ತು 512GB SSD ಸ್ಟೋರೇಜ್‌ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್ HD ವೆಬ್‌ಕ್ಯಾಮ್ ಮತ್ತು ಡ್ಯುಯಲ್ ಸ್ಟಾರ್ ಲೈಟ್‌ ಅನ್ನು ಕೂಡ ಒಳಗೊಂಡಿದೆ. ಈ ಡ್ಯುಯಲ್ ಸ್ಟಾರ್ ಲೈಟ್ ಕ್ಯಾಮೆರಾ ಫೀಚರ್ಸ್‌ ವೀಡಿಯೊ ಕರೆಗಳನ್ನು ಮಾಡುವಾಗ ಅಥವಾ ಲೋ ಲೈಟ್‌ ಸಂದರ್ಭಗಳಲ್ಲಿ ಗೋಚರತೆಯನ್ನು ಹೆಚ್ಚಿಸಲಿದೆ. ಇದರಿಂದ ನೀವು ಲೋ ಲೈಟ್‌ ಇದ್ದಾಗಲೂ ವೀಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ಭಾಗವಹಿಸಬಹುದು. ಇದಲ್ಲದೆ ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್‌ 50Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 65W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್, USB-C, USB 3.0, HDMI ಪೋರ್ಟ್‌ಗಳು ಮತ್ತು SD ಕಾರ್ಡ್ ಸ್ಲಾಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ.

ಬೆಲೆ ಮತ್ತು ಲಭ್ಯತೆ.

ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್ ಲ್ಯಾಪ್‌ಟಾಪ್‌ ಹಲವು ಆಯ್ಕೆಗಳಲ್ಲಿ ಬರುವುದರಿಂದ ಇದರ ಬೆಲೆ ಈ ಕೆಳಗಿನಂತಿದೆ.
ಕೋರ್ i3 (8GB+256GB): 29,990ರೂ
ಕೋರ್ i3 (8GB+512GB): 32,990ರೂ
ಕೋರ್ i5 (8GB+512GB): 39,990ರೂ
ಕೋರ್ i5 (16GB+512GB): 44,990 ರೂ
ಕೋರ್ i7 (16GB+512GB): 49,990ರೂ
ಇನ್ನು ಈ ಲ್ಯಾಪ್‌ಟಾಪ್‌ಗಳು ಸ್ಟಾರ್‌ಫಾಲ್ ಗ್ರೇ, ಕಾಸ್ಮಿಕ್ ಬ್ಲೂ, ನೋಬಲ್ ರೆಡ್ ಮತ್ತು ಅರೋರಾ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇನ್ಫಿನಿಕ್ಸ್‌ ಇನ್‌ಬುಕ್‌ X1 ಸ್ಲಿಮ್‌ ಲ್ಯಾಪ್‌ಟಾಪ್‌ ಇದೇ ಜೂನ್ 21 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಇದು ಲಾಂಚ್‌ ಆಫರ್‌ನಲ್ಲಿ ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು 3,000ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು.

ಲ್ಯಾಪ್‌ಟಾಪ್‌

ಇನ್ಫಿನಿಕ್ಸ್‌ ಕಂಪೆನಿ ಮಾತ್ರವಲ್ಲದೆ ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಇತರೆ ಕಂಪೆನಿಗಳು ಕೂಡ 50,000ರೂ.ಒಳಗೆ ಹಲವು ಲ್ಯಾಪ್‌ಟಾಪ್‌ಗಳು ಲಭ್ಯವಿದೆ. ಇವುಗಳಲ್ಲಿ ಪ್ರಮುಖ ಬ್ರ್ಯಾಂಡ್‌ಗಳಾದ ಡೆಲ್‌, ಹೆಚ್‌ಪಿ, ಆಸುಸ್‌, ವಿವೋ ಕಂಪೆನಿಯ ಲ್ಯಾಪ್‌ಟಾಪ್‌ಗಳು ಕೂಡ ಲಭ್ಯವಿದೆ. 50,000ರೂ. ಒಳಗೆ ನಿಮಗೆ ಅತ್ಯಾಕರ್ಷಕ ಫೀಚರ್ಸ್‌ ಒಳಗೊಂಡ ಜನಪ್ರಿಯ ಲ್ಯಾಪ್‌ಟಾಪ್‌ಗಳ ವಿವರವನ್ನು ಈ ಕೆಳಗಿನ ಹಂತಗಳಲ್ಲಿ ತಿಳಿಯೋಣ.

ಡೆಲ್‌ 15 (2021) ಲ್ಯಾಪ್‌ಟಾಪ್ i3-1115G4

ಡೆಲ್‌ 15 (2021) ಲ್ಯಾಪ್‌ಟಾಪ್ i3-1115G4

ಈ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 8GB RAM ಮತ್ತು 256GB SSD ಸ್ಟೋರೇಜ್‌ ಹೊಂದಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್‌ ಯುಎಚ್‌ಡಿ ಗ್ರಾಪಿಕ್ಸ್‌ ಅನ್ನು ಹೊಂದಿದೆ. ಪ್ರಸ್ತುತ ಇದರ ಬೆಲೆ 41,250ರೂ.ಆಗಿದೆ.

HP 15s ಲ್ಯಾಪ್‌ಟಾಪ್

HP 15s ಲ್ಯಾಪ್‌ಟಾಪ್

ಬ್ಯುಸಿನೆಸ್‌ ಲ್ಯಾಪ್‌ಟಾಪ್‌ ಅನ್ನು ಖರೀದಿಸಲು ಬಯಸಿದರೆ ಈ ಲ್ಯಾಪ್‌ಟಾಪ್‌ ನಿಮಗೆ ಸೂಕ್ತ ಎನಿಸಲಿದೆ. ಇದು 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಮಲ್ಟಿಮೀಡಿಯಾ ಮತ್ತು ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ ಆಂಟಿ-ಗ್ಲೇರ್‌ ಸ್ಕ್ರೀನ್‌ ಹೊಂದಿರುವುದರಿಂದ, ಹೆಚ್ಚು ಕಾಲ ಬಳಸಿದರೂ ನಿಮ್ಮ ಕಣ್ಣುಗಳ ಮೇಲೆ ಯಾವುದೇ ರೀತಿಯ ಒತ್ತಡ ಬೀಳುವುದಿಲ್ಲ. ಪ್ರಸ್ತುತ ಈ ಲ್ಯಾಪ್‌ಟಾಪ್‌ 45,800ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಲೆನೊವೊ V15 ಲ್ಯಾಪ್‌ಟಾಪ್‌

ಲೆನೊವೊ V15 ಲ್ಯಾಪ್‌ಟಾಪ್‌

ಲೆನೊವೊ V15 ಲ್ಯಾಪ್‌ಟಾಪ್‌ 50,000ರೂ ಒಳಗೆ ಲಭ್ಯವಾಗುವ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಇಂಟೆಲ್‌ ಕೋರ್‌ i5 ಪ್ರೊಸೆಸರ್‌ ಹೊಂದಿದೆ. ಜೊತೆಗೆ 4GB RAM ಮತ್ತು 256GB SSD ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಹೆಚ್ಚು ಪೋರ್ಟಬಲ್ ಆಗಿದ್ದು, ಕೆಲಸವನ್ನು ಸುಲಭವಾಗಿ ಪೂರೈಸುತ್ತದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ ಅನ್ನು ನೀವು 33,990ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಆಸುಸ್‌ ವಿವೋಬುಕ್‌ 14 (2020) ಫುಲ್‌ ಹೆಚ್‌ಡಿ ಲ್ಯಾಪ್‌ಟಾಪ್

ಆಸುಸ್‌ ವಿವೋಬುಕ್‌ 14 (2020) ಫುಲ್‌ ಹೆಚ್‌ಡಿ ಲ್ಯಾಪ್‌ಟಾಪ್

ಆಸುಸ್‌ ಕಂಪೆನಿ ಜನಪ್ರಿಯ ಲ್ಯಾಪ್‌ಟಾಪ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಇದರ ಆಸುಸ್‌ ವಿವೋಬುಕ್‌ 14 (2020) ಫುಲ್‌ ಹೆಚ್‌ಡಿ ಲ್ಯಾಪ್‌ಟಾಪ್ 50,000ರೂ ಒಳಗೆ ದೊರೆಯುವ ಲ್ಯಾಪ್‌ಟಾಪ್‌ ಎನಿಸಿಕೊಂಡಿದೆ. ಈ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಇದನ್ನು ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಇದು 4GB RAM ಮತ್ತು 1TB HDD ಸ್ಟೋರೇಜ್‌ ಅನ್ನು ಹೊಂದಿದ್ದು, 6 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ 30,990ರೂ.ಬೆಲೆಯಲ್ಲಿ ದೊರೆಯಲಿದೆ.

Best Mobiles in India

Read more about:
English summary
Infinix InBook X1 Slim Launches In India For Rs. 29,990

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X