ಇನ್ಫಿನಿಕ್ಸ್‌ನಿಂದ ಭಾರತದಲ್ಲಿ ಹೊಸ ಪ್ರೀಮಿಯಂ ಸ್ಮಾರ್ಟ್‌ಟಿವಿ ಅನಾವರಣ!

|

ಜನಪ್ರಿಯ ಸ್ಮಾರ್ಟ್‌ಟಿವಿ ಬ್ರ್ಯಾಂಡ್‌ಗಳಲ್ಲಿ ಇನ್ಫಿನಿಕ್ಸ್‌ ಕಂಪೆನಿ ಕೂಡ ಸೇರಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಪ್ರೀಮಿಯಂ ಆಂಡ್ರಾಯ್ಡ್‌ ಟಿವಿ ವಿಭಾಗಕ್ಕೆ ಎಂಟ್ರಿ ನೀಡಿದೆ. ಪ್ರೀಮಿಯಂ ಸ್ಮಾರ್ಟ್‌ಟಿವಿಗಳ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಸದ್ಯ ಇನ್ಫಿನಿಕ್ಸ್‌ ಪ್ರೀಮಿಯಂ ಸ್ಮಾರ್ಟ್‌ಟಿವಿಯನ್ನು ಜಿರೋ ಸ್ಮಾರ್ಟ್‌ಟಿವಿ ಸರಣಿ ಎಂದು ಹೆಸರಿಸಲಾಗಿದೆ.

ಇನ್ಫಿನಿಕ್ಸ್‌

ಹೌದು, ಇನ್ಫಿನಿಕ್ಸ್‌ ಕಂಪೆನಿ ಭಾರತದಲ್ಲಿ ಪ್ರೀಮಿಯಂ ಆಂಡ್ರಾಯ್ಡ್‌ ಟಿವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಸರಣಿಯಲ್ಲಿ ಇನ್ಫಿನಿಕ್ಸ್ 50-ಇಂಚಿನ ಮತ್ತು 55-ಇಂಚಿನ QLED ಟಿವಿ ಮಾದರಿಗಳನ್ನು ಪರಿಚಯಿಸಲಿದೆ. ಇನ್ನು ಈ ಸ್ಮಾರ್ಟ್ ಟಿವಿ ಕ್ವಾಂಟಮ್ ಡಾಟ್ ತಂತ್ರಜ್ಞಾನವನ್ನು ಹೊಂದಿದೆ. ಇದು ಗೇಮಿಂಗ್‌ಗಳಿಗೆ ಪೂರಕವಾದ ಫೀಚರ್ಸ್‌ಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಪವರ್‌ಫುಲ್‌ ಪ್ರೊಸೆಸರ್‌ ಹೊಂದಿದ್ದು, ಅತ್ಯುತ್ತಮ ಅನುಭವವನ್ನು ನೀಡಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಇನ್ಫಿನಿಕ್ಸ್‌ ಕಂಪೆನಿಯ ಈ ಸ್ಮಾರ್ಟ್‌ಟಿವಿ ಸರಣಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್ಫಿನಿಕ್ಸ್‌

ಇನ್ಫಿನಿಕ್ಸ್‌ ಕಂಪೆನಿ ಹೊಸದಾಗಿ ಪರಿಚಯಿಸಿರುವ ಜಿರೋ 55 ಇಂಚಿನ QLED 4K TV ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಸ್ಪೋರ್ಟ್ಸ್‌ ಮತ್ತು ಸಿನಿಮಾಗಳನ್ನು ನೋಡುವಾಗ ಫ್ರೇಮ್ ರೇಟ್‌ ಅನ್ನು ಹೆಚ್ಚಿಸಲು ಡಾಲ್ಬಿ ವಿಷನ್ ಅನ್ನು ಹೊಂದಿದೆ. ಇದು HDR 10+ ಬೆಂಬಲವನ್ನು ಪಡೆದಿದ್ದು, 60 FPS MEMC ಬೆಂಬಲಿಸುವ ಮಿನಿಮಲಿಸ್ಟಿಕ್ ಬೆಜ್ಲ್ ಲೆಸ್ ಡಿಸೈನ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌, 85% NTSC ಮತ್ತು 122% ಶೇಕಡಾ sRGB ಬಣ್ಣದ ಹರವು ನೀಡಲಿದೆ.

QLED 4K TV

ಇನ್ನು ಜಿರೋ 55 ಇಂಚಿನ QLED 4K TV ಎರಡು ವಪರ್‌ಫುಲ್‌ ಇಂಟರ್‌ಬಿಲ್ಟ್‌ 36Watt ಬಾಕ್ಸ್ ಸ್ಪೀಕರ್‌ಗಳನ್ನು ಹೊಂದಿದೆ. ಈ ಟಿವಿ ಡಾಲ್ಬಿ ಡಿಜಿಟಲ್ ಆಡಿಯೊ ಮತ್ತು 2 ಟ್ವೀಟರ್‌ಗಳನ್ನು ಹೊಂದಿದ್ದು, ಇದು 8K ನಿಂದ 20K Hz ವರೆಗಿನ ವ್ಯಾಪ್ತಿಯನ್ನು ಒಳಗೊಂಡಿದೆ. ಇದು ಮೀಡಿಯಾಟೆಕ್‌ ಕ್ವಾಡ್‌-ಕೋರ್‌ CA55 ಪ್ರೊಸೆಸರ್‌ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ 2GB RAM ಮತ್ತು 16GB ROM ಸ್ಟೋರೇಜ್‌ ಪಡೆದಿದೆ.

ಸ್ಮಾರ್ಟ್ ಟಿವಿ

ಈ ಸ್ಮಾರ್ಟ್ ಟಿವಿ 3x HDMI (1 ARC ಬೆಂಬಲ), 2x USB ಪೋರ್ಟ್‌ಗಳು, 5.0 ಬ್ಲೂಟೂತ್, WiFi b/g/n, 1 AV ಇನ್‌ಪುಟ್, 1 LAN, 1 ಹೆಡ್‌ಫೋನ್ ಪೋರ್ಟ್ ಮತ್ತು ಡ್ಯುಯಲ್ ಬ್ಯಾಂಡ್ ವೈಫೈ ಪೋರ್ಟ್‌ಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸರಣಿ ಮೂಲಕ ನಾವು ಪ್ರೀಮಿಯಂ QLED ಸ್ಮಾರ್ಟ್ ಟಿವಿ ವಿಭಾಗದಲ್ಲಿ ಅಸಾಧಾರಣ ಪ್ರತಿಸ್ಪರ್ಧಿಯಾಗುತ್ತೇವೆ. ಏಕೆಂದರೆ ಈ ಸ್ಮಾರ್ಟ್‌ಟಿವಿಗಳು ಹೆಚ್ಚು ಪ್ರಖರವಾದ ಮತ್ತು ಮೃದುವಾದ ಡಿಸ್‌ಪ್ಲೇ, ಸುರಕ್ಷಿತ ವೀಕ್ಷಣೆಯ ಅನುಭವ, ವರ್ಧಿತ ಧ್ವನಿ ಗುಣಮಟ್ಟ ನೀಡಲಿವೆ ಎಂದು ಇನ್ಫಿನಿಕ್ಸ್‌ ಕಂಪೆನಿ ಹೇಳಿಕೊಂಡಿದೆ. ಇದು ಪವರ್‌ಫುಲ್‌ ಪ್ರೊಸೆಸರ್‌ನ ಪರಿಪೂರ್ಣ ಮಿಶ್ರಣವನ್ನು ಹೊಂದಿರುವ ಪ್ರಮಾಣೀಕೃತ Google TV ಆಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ಫಿನಿಕ್ಸ್‌ ಜಿರೋ 55 ಇಂಚಿನ QLED 4K TV ಜಿರೋ ಸರಣಿಯಲ್ಲಿ 34,990ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 50 ಇಂಚಿನ 4K ಟಿವಿ ಕೇವಲ 24,990ರೂ. ಬೆಲೆಯಲ್ಲಿ ದೊರೆಯಲಿದೆ. ಇನ್ನು ಈ ಎರಡೂ ಆಂಡ್ರಾಯ್ಡ್ ಟಿವಿಗಳು ಸೆಪ್ಟೆಂಬರ್ 24 ರಿಂದ ಮಾರಾಟವಾಗಲಿದೆ.

Best Mobiles in India

English summary
Infinix launches its first premium Android TV

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X